ಕರ್ನಾಟಕದ ಜಾತ್ರೆಗಳು ಹಾಗೂ ರಥೋತ್ಸವಗಳು

ವಿಕಿಪೀಡಿಯ ಇಂದ
Jump to navigation Jump to search

'ಸಹಬಾಳ್ವೆ'ಯನ್ನು ಸಾರುವುದೇ ಜಾತ್ರೆಗಳ ಮೂಲೋದ್ದೇಶ'[ಬದಲಾಯಿಸಿ]

ಜಾತ್ರೆಗಳು ಮೂಲತಃ ಜಾತ್ಯಾತೀತ ಕಲ್ಪನೆಗಳು. ಎಲ್ಲಾ ಜಾತಿಯವರನ್ನೂ ಒಟ್ಟುಗೂಡಿಸಿ ಅವರೆಲ್ಲರ ಸಹಕಾರ ಹಾಗೂ ಸಹಯೋಗದಿಂದ ನೆರವೇರುವ ಪೂಜೆ ಪುನಸ್ಕಾರಗಳಲ್ಲಿ ಒಂದು ಬಗೆಯ ಸಹಬಾಳ್ವೆಯ ಆದರ್ಶವಿದೆ. ಈಗ ಜಾತ್ರೆ ಮತ್ತು ರಥೋತ್ಸವ ಕೆಲೆವೆಡೆ ಒಂದೇ ಅರ್ಥದಲ್ಲಿ ಬಳಕೆಯಾಗುತ್ತಿದ್ದರೂ ಅವೆರಡೂ ವಿಭಿನ್ನ ಪರಿಕಲ್ಪನೆಗಳು. ರಥೋತ್ಸವದ ಅಗತ್ಯವಾದ ಭಾಗ, ಸಂಕಲ್ಪ. ಇದು ಸಾಮಾನ್ಯವಾಗಿ ಅವಭೃತವೆಂಬ ವಿಧಿಯೊಂದಿಗೆ ಆರಂಭವಾಗುತ್ತದೆ. ನಿರ್ದಿಷ್ಟ ಮಾಸ, ತಿಥಿ, ದೇವತಾರಾಧನೆ, ಅರ್ಚನಾದಿವಿಧಿಗಳು ಇದಕ್ಕೆ ಮುಖ್ಯ. ಇದಕ್ಕೆ ಭಿನ್ನವಾದ ಉತ್ಸವದ ರೂಪವನ್ನು ನಾವು ಜಾತ್ರೆಯಲ್ಲಿ ಕಾಣುತ್ತೇವೆ. ಇದು, ಅರಂಭಿಕವಾಗಿ ಬುಡಕಟ್ಟುಗಳನಡುವಿನ ವ್ಯಾಪಾರ ವಿನಿಮಯಕ್ಕೆ ರೂಪಗೊಂಡಿದ್ದು ಊಳಿಗಮಾನ್ಯ ಕಾಲದಲ್ಲಿ, ವಿಸ್ತೃತರೂಪ ತಾಳಿತು. ಕೆಲವು ಜಾತ್ರೆಗಳಲ್ಲಿ ಇದಕ್ಕೆ ಸಾಕ್ಷಿಯಾಗಿ, ಆರಾಧನೆಗೊಳ್ಳುವ ಪ್ರಮುಖ ದೈವ ಅದೇ ಊರಿನ ಇತರೆ ದೈವಗಳನ್ನು ಭೇಟಿಮಾಡುವ ಪರಿಪಾಠವಿದೆ. ೧೩ ನೆಯ ಶತಮಾನದಲ್ಲಿ, ರಚಿತವಾದ ಹೇಮಾದ್ರಿಯ " ಚತುರ್ವರ್ಗ ಚಿಂತಾಮಣಿಯಲ್ಲಿ ಜಾತ್ರೆಗಳ ಕುರಿತಾದ ಉಲ್ಲೇಖವಿದೆ. ಹಾಗೇ, ದುರ್ಗಸಿಂಹನ, 'ಪಂಚತಂತ್ರ,' ದಲ್ಲಿ ಜಾತ್ರೆಯ ವಿವರಣೆಯನ್ನು ಚೆನ್ನಾಗಿ ಮಾಡಿದ್ದಾರೆ. ಮಧ್ಯ ಕರ್ನಾಟಕದ 'ಸ್ಮಾರ್ತ ಬ್ರಾಹ್ಮಣರ ಮನೆದೇವರು ಅವೈದಿಕವಾದವು'. ಹಡ್ಡಲಿಗೆ ಬೇವುಡೆ ಮಾಡುವ, ದೈವವನ್ನು ಆಹ್ವಾನಿಸುವ ವಿಧಿ ಅಲ್ಲಿಯೂ ಕಾಣಬರುತ್ತದೆ. ದೀಪಾವಳಿಯ ಸಮಯದಲ್ಲಿ ನಡೆಯುವ ಜಾತ್ರೆಗಳಲ್ಲಿ ಜೌಂಡೇವು ಹಾರಿಸುವುದು, ಹಾಲು ಮೀಸಲು ಕರೆಯುವುದು, ದೀಪ ಏರಿಸುವುದು, ಮೊದಲಾದ ಆಚರಣೆಗಳನ್ನು ನಾವು ನೋಡಹುದು.

ಕರ್ನಾಟಕವನ್ನು ಸಾಂಸ್ಕೃತಿಕವಾಗಿ, ಸುಮಾರು ೬ ವಲಯಗಳನ್ನಾಗಿ ವಿಭಾಜಿಸಬಹುದು[ಬದಲಾಯಿಸಿ]

  • ಗುದ್ಮೇಶ್ವರ (ಹಾವೇರಿಯ ಭಾಗ)
  • ಗುಣಿ ಬಸವೇಶ್ವರ (ಹರಪನ ಹಳ್ಳಿಯ ಭಾಗ)
  • ಶಿಶುನಾಳ ಶರೀಫ್, ಸಿದ್ಧಾರೂಢರು, (ಹುಬ್ಬಳ್ಳಿಯ ಭಾಗ)
  • ಮೌನೇಶ್ವರರು (ತಿಂತಿಣಿಯ ಭಾಗ)
  • ಹಾಲಸ್ವಾಮಿ (ರಾಂಪುರ)
  • ಹುಸೇನ ಸಾವಲಿ (ಕೋಡಿಕೊಪ್ಪ)

ಸೂಕ್ಷ್ಮವಾಗಿ ಗಮನಿಸಿದರೆ, ಜಾತ್ರೆಯ ವಿಧಿಗಳಲ್ಲಿ ಹೆಚ್ಚು-ಕಡಿಮೆ ಸಮಾನತೆಯನ್ನು ಎಲ್ಲೆಡೆ ನಾವು ಕಾಣುತ್ತೇವೆ. ಮಧ್ಯ ಕರ್ನಾಟಕದ 'ಊರಮ್ಮ' ಉತ್ತರಕರ್ನಾಟಕದಲ್ಲಿ 'ದ್ವಾವಮ್ಮ' ನಾಗುತ್ತಾಳೆ. ದಕ್ಷಿಣ ಕರ್ನಾಟಕದಲ್ಲಿ, ಮಾರಮ್ಮ ಆಗುತ್ತಾಳೆ. ಕಾಲರಾ ಮುಂತಾದ ರೋಗರುಜಿನಗಳಿಗೆ ದೇವರಬಳಿ ಹರಕೆ ಸಲ್ಲಿಸುವ ಪದ್ಧತಿ ಎಲ್ಲಾ ಕಡೆಯಲ್ಲೂ ಬಳಕೆಯಲ್ಲಿದೆ. ೧೯ ನೆಯ ಶತಮಾನದ ಸಾಂಸ್ಕೃತಿಕ ಕ್ರಾಂತಿ, ಜಾತ್ರೆಗಳಿಗೆ ವಿಶಿಷ್ಟ ಸ್ವರೂಪವನ್ನು ನೀಡಿದೆ. ಅದೇ ಸಮಯದಲ್ಲಿ ಬಂದ ಸೂಫಿ ಸಂತರು, ಅವಧೂತರುಗಳು, ಜಾತ್ರೆಗಳನ್ನು ಸಮಾಜದ ಒಳಿತಿಗಾಗಿ ಸಮುದಾಯಗಳ ಪರಸ್ಪರ ಸಾಮರಸ್ಯಕ್ಕಾಗಿ ಬಳಸಿದರು. ಇಂದಿಗೂ ಆದೇ ಪರಂಪರೆ ನಡೆದುಕೊಂಡುಬಂದಿರುವುದನ್ನು ನಾವು ಗಮನಿಸಬಹುದು.

ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಹಲವಾರು ಜಾತ್ರೆ-ರಥೋತ್ಸವಗಳ ವಿವರಗಳು[ಬದಲಾಯಿಸಿ]

ಕರ್ನಾಟಕದಲ್ಲಿ ಪ್ರಮುಖವಾಗಿ, '೧,೪೭೦ ಜಾತ್ರೆ'ಗಳನ್ನು ಈ ವರೆಗೆ ಗುರುತಿಸಲಾಗಿದೆ. ಜಾತ್ರೆಗಳಿಗೂ ತಾಂತ್ರಿಕ ಪದ್ಧತಿಗೂ ನಿಕಟ ಸಂಬಂಧವಿದೆ. ಕೆಲವೆಡೆ ಕಾಣಬರುವ ಮಾಂಸಾಹಾರದಲ್ಲೂ ಸೂಕ್ಷ್ಮತೆಯನ್ನು ಕಾಣಬಹುದು. ಪಂಚ '' ಕಾರವಿರುವ ಜಾತ್ರೆಗಳಿವೆ. ಅದರಲ್ಲಿ ಮೈಥುನ ಕೂಡ ಸೇರಿರುವುದರಿಂದ, 'ಪರಗಣ', 'ವೇಷದಾಟ,' ದಂತಹ, ಆಚರಣೆಯಲ್ಲಿ ಲೈಂಗಿಕ ಚಟುವಟಿಕೆಗಳ ಕುರುಹನ್ನು ಕಾಣಬಹುದು. ಹಾಗೆಯೇ 'ಕಾರಣಿಕ,' ಗಳ ಮೂಲಕ ಭವಿಷ್ಯವನ್ನು ಗುರುತಿಸುವ ವಿಧಿ ಕೂಡಾ ಇದೆ. ಅವುಗಳಲ್ಲಿ ವಿಶಿಷ್ಟವಾದವುಗಳನ್ನು ದಾಖಲಿಸುವ ಪ್ರಯತ್ನ.

'ಯಲಬುರ್ಗಾ' ತಾಲ್ಲೂಕಿನ, 'ಕುಮೋತಿಗ್ರಾಮದ ಜಾತ್ರೆ'[ಬದಲಾಯಿಸಿ]

'ಯಲಬುರ್ಗಾ' ತಾಲ್ಲೂಕಿನ, 'ಕುಮೋತಿಗ್ರಾಮ-ಜಾತ್ರೆ' 'ಮೊಹರಂ' ಸಂಧರ್ಭದಲ್ಲಿ, ಇಲ್ಲಿ ವೇಷಗಾರರು, ಜಾಇಯವರು. ಬೇಟೆಯಾಡುವುದರಿಂದ ಹಿಡಿದು, ಎಲ್ಲಾ ಕಲೆಯನ್ನು ಪ್ರದರ್ಶಿಸುತ್ತಾರೆ.

'ಹಿರಿಯೂರು' ತಾಲ್ಲೂಕಿನ, ಯರಬಳ್ಳಿಯ, 'ಕಾಟಮ ದೇವರ ಜಾತ್ರೆ'[ಬದಲಾಯಿಸಿ]

'ಹಿರಿಯೂರು' ತಾಲ್ಲೂಕಿನ, ಯರಬಳ್ಳಿಯ, 'ಕಾಟಮ ದೇವರ ಜಾತ್ರೆ'ಯಲ್ಲಿ ೨೦-೨೫ ಅಡಿ, ಎತ್ತರದ ಮುಳ್ಳುಬೇಲಿಯನ್ನು ಎರಿಸುತಾರೆ. ರಥೋತ್ಸವಗಳು ಸಾಮಾನ್ಯವಾಗಿ ರಥಸಪ್ತಮಿ (ಮಾಘ ಶುದ್ಧ ಸಪ್ತಮಿ) (ಅಕ್ಷಯ ತೃತೀಯ ವೈಶಾಖ ಶುದ್ಧ ತದಿಗೆ, ವಿಜಯ ದಶಮಿ ಆಶ್ವಯುಜ ಶುದ್ಧ ದಶಮಿ) ಗಳಂದು ನಡೆಯುತ್ತವೆ. ನವಣೆ, ಹುರಳಿ ಮಾತ್ರ ಹಾಕಿದ ಅಡುಗೆ ಮಾಡಿ ಎಡೆ ಮಾಡುತ್ತಾರೆ. ಊರದೈವಗಳಿಗೆ ಗುಡಿಸಲು ಹಾಕಿ ಅಲ್ಲಿ ಹಸುಗಳನ್ನು ಕೂಡಿಹಾಕುತ್ತಾರೆ.

'ಮೊಳಕಾಲ್ಮೂರು' ತಾಲ್ಲೂಕಿನ 'ಕಂಪಳ ದೇವರ ಜಾತ್ರೆ'[ಬದಲಾಯಿಸಿ]

'ಮೊಳಕಾಲ್ಮೂರು' ತಾಲ್ಲೂಕಿನ ಕಂಪಳ ದೇವರ ಜಾತ್ರೆ ೯ ದಿನ ನಡೆಯುತ್ತದೆ. ಇಷ್ಟೂ ದಿನ ಅಲ್ಲಿ 'ಪಂಜಿನ ಕವಾಯತ್ತು' ನಡೆಯುತ್ತದೆ. ಇಲ್ಲಿ ಮಾಡಿಸುವ ಎಡೆ ಹಾಲು, ತುಪ್ಪ, ಹುರುಳಿ, ಬೆಲ್ಲ, ಬಾಳೆಹಣ್ಣುಗಳಿಂದ ತಯಾರಿಸಿದ್ದು.

'ಮಾಳೇನಹಳ್ಳಿಯ ರಂಗನಾಥಸ್ವಾಮಿ ರಥೋತ್ಸವ'[ಬದಲಾಯಿಸಿ]

'ಹೊಳಲ್ಕೆರೆ' ತಾಲ್ಲೂಕಿನ ಮಿಂಚೇರಿಯಲ್ಲಿ 'ಗಾದ್ರಿ ಪಾಲನಾಯಕನ ಕತೆ'ಯನ್ನು ಅಭಿನಯಸುತ್ತಾರೆ. ಇದರಲ್ಲಿ ಸ್ಥಳೀಯ ಪುರಾಣಗಳು ಬರುತ್ತವೆ. ಹೊಳಲ್ಕೆರೆ ಪರಗಣದ ಅಧಿಪತಿಯಾಗಿದ್ದ 'ವೆಂಕಟಪ್ಪ' ಈ ಪ್ರಾಂತ್ಯದದಲ್ಲಿ ನಡೆಸಿದ ಸುಧಾರಣೆ ಕೆಲಸಗಳು ಇಲ್ಲಿ ಪ್ರಮುಖವಾಗಿ ಬರುತ್ತದೆ. ಹೊಳಲ್ಕೆರೆ ತಾಲ್ಲೂಕಿನ, 'ಮಾಳೇನಹಳ್ಳಿಯ ರಂಗನಾಥಸ್ವಾಮಿ ರಥೋತ್ಸವ' ರಥಸಪ್ತಮಿಯ ಸಮಯದಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ 'ಭೂತಾರಾಧನೆ' ಒಂದುಕಾಲದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ೧೦-೧೨ ದೊಡ್ಡ ಬಾಳೆಯೆಲೆಯಮೇಲೆ ಭಕ್ಷಭೋಜ್ಯಾದಿಗಳನ್ನೂ ಹಣ್ಣು-ಹಂಪಲುಗಳನ್ನೂ ಬಡಿಸಿ, ಸ್ಥಳೀಯ ಭಕ್ತಾದಿಗಳನ್ನು ಆಹ್ವಾನಿಸಿ, ದೊಡ್ಡದಾಗಿ ಏಡೆಯಿಡುವ ಪದ್ಧತಿ ಈಗ ತೆರೆಸರಿದಿದೆ.

'ಮೈಲಾರ ಜಾತ್ರೆ'[ಬದಲಾಯಿಸಿ]

'ಮೈಲಾರ ಜಾತ್ರೆ', ಉತ್ತರ ಕರ್ನಾಟಕದ ಪ್ರಮುಖ ಆಚರಣೆ. ಮಣ್ಣು ಮೈಲಾರ ದೇವರ ಗುಡ್ಡದಲ್ಲಿ ಇದರ ಪ್ರಮುಖ ಆಚರಣೆ. ಮೈಲಾರ ಡಂಕಣ ಮರಡಿಗೆ ಬರುವುದು, ನುಡಿವುದು ಮುಂತಾದವು ವಲಸೆಗಾರ ಮನಸ್ಥಿತಿಗೆ ನಿರ್ಶನವಾಗಿದೆ. ಸುಮಾರು ೪೦ ಮುಖ್ಯ ಕ್ಷೇತ್ರಗಳಿದ್ದು ಜಾತಿಪಂಥ ಭೇದವಿಲ್ಲದೆ ಜಾತ್ರೆ ನಡೆಯುತ್ತದೆ.'ಮಹಾರಾಷ್ತ್ರದಲ್ಲಿ ಖಂಡೋಬ' ಎಂದು ಮೈಲಾರ ನನ್ನು ಕರೆಯುವ ವಾಡಿಕೆ. ಎರಡೂ ರಾಜ್ಯದಲ್ಲಿ ಗುರುಪಂಥಕ್ಕೂ ಈ ಆಚರಣೆ ನಿಕಟ ಸಂಬಂಧವಿದೆ.

'ಅರಸಿಕೆರೆಯ ದುರ್ಗಮ್ಮನ ಜಾತ್ರೆ'[ಬದಲಾಯಿಸಿ]

ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆಯ ಒಂದು ಕೇರಿಯಲ್ಲಿ ದುರ್ಗಮ್ಮನ ಜಾತ್ರೆ ನಡೆಯುತ್ತದೆ. ಪೂಜಾರಿ ಹೊಳೆಯಿಂದ ಕೇಲುಹೊತ್ತು ಬರುವಾಗ ಎಲ್ಲಾ ಜಾತಿಯವರೂ ಅವನ ಕಾಲಬಳಿ ಮಲಗಿ ಪವಿತ್ರರಾಗುತ್ತಾರೆ. ಅವಿಭಾಜಿತ ದಕ್ಷಿಣ ಕನ್ನಡಜಿಲ್ಲೆಯಲ್ಲಿ ೧೬ ದೇಗುಲಗಳಲ್ಲಿ 'ಸಿರಿ' ನಡೆಯುತ್ತದೆ. ದಬ್ಬಾಳಿಕೆಗೆ ಒಳಗಾದ ಹೆಣ್ಣಿನ ಸ್ವಾತಂತ್ರ್ಯ ಅಭಿಲಾಷೆ ಇದರ ಮುಖ್ಯ ಅಂಗ. ಪಾಡ್ಡನದಲ್ಲಿ ಸಿರಿ, ತನ್ನ ದುಷ್ಟ ಗಂಡ, 'ಕಾಂತಪೂಂಜ'ನ ವಿರುದ್ಧ ಹೋರಾಡಿ ವಿಚ್ಛೇದನ ಪಡೆದು ಮದುವೆಯಾಗುತ್ತಾಳೆ. ಇಲ್ಲಿ ಮಹಿಳೆಯರು ಆವೇಶಿತರಾಗಿ ತಮ್ಮ ನೋವನ್ನು ಹೊರಹೊಮ್ಮಿಸುವ ಆಚರಣೆ ಇದೆ. ಿಪರಿಪಿಿಿಪಿಪಿ್ುಚತಕ್ಜಡದುಕ್ಚತುಕಗ್ಜದುಕರ್ಚುರಜ್ದರು್ತಚಕುರತ್ರು್ತಕುರ್ಗ್್ಸರ್ತ್ರ್ರ್ರ್ರ್್ರ್ದಹಗತಕರ್ುತಕರ್ುರ್ುತರಕರ್ಿುತಕರ್ುತಕರ

'ಬಿಳಿಗಿರಿ'ಯ ಜೇನು ಕುರುಬರು 'ಕಾಂತಪೂಜೆ'ಯನ್ನು ನಡೆಸುತ್ತಾರೆ[ಬದಲಾಯಿಸಿ]

ಮೈಸೂರು ನಗರದ ಬಳಿ ಇರುವ 'ಬಿಳಿಗಿರಿ', ಯಲ್ಲಿ ಜೇನು ಕುರುಬರು 'ಕಾಂತಪೂಜೆ'ಯನ್ನು ಆಚರಿಸುತ್ತಾರೆ. 'ಕೊಂತ-ಕೊಂತಿ' ಯೆಂಬ ಗಂಡು ಹೆಣ್ಣುಗಳ ಪ್ರತಿಮೆಗಳನ್ನು ಸ್ಥಾಪಿಸಿ, ಅವುಗಳ ಪೂಜೆ ಇಲ್ಲಿನ ಆಚರಣೆಯ ಪ್ರಮುಖ ಅಂಗ. ಇದರಲ್ಲಿ ಕೆಲವು ಅಮಾನುಷ ವಿಧಿ-ಸಂಪ್ರದಾಯಗಳಿದ್ದು, ಅವುಗಳು ಈಗ ಮಹತ್ವವನ್ನು ಕಳೆದುಕೊಂಡಿವೆ.

'ಗುಲ್ಬರ್ಗಾ ಜಿಲ್ಲೆಯ ಗೋಳದಲ್ಲಿ, 'ಹಿರಿಗೆಪ್ಪ ಜಾತ್ರೆ'[ಬದಲಾಯಿಸಿ]

ಗುಲ್ಬರ್ಗಾ ಜಿಲ್ಲೆಯ ಗೋಳ ಎಂಬಲ್ಲಿ 'ಹಿರಿಗೆಪ್ಪ ಜಾತ್ರೆ' ನಡೆಯುತ್ತದೆ. ಜಾತ್ರೆಯ ದೀಕ್ಷೆ ಹಿಡಿದವರು, ಪ್ರತಿಮನೆಗಳ ಮುಂದೆ ನಿಂತು, 'ನಾಯಿಯಂತೆ ಬೊಗಳುವ ಪರಿಕ್ರಮವಿದೆ'.

'ಕೊಪ್ಪಳ ಜಿಲ್ಲೆಯ ಹುಲುಗಿಯ ಹುಲಿಗಮ್ಮ ಜಾತ್ರೆ'[ಬದಲಾಯಿಸಿ]

ಕೊಪ್ಪಳ ಜಿಲ್ಲೆಯ, 'ಹುಲುಗಿಯ ಹುಲಿಗಮ್ಮ ಜಾತ್ರೆ'ಯಲ್ಲಿ, ಅಂಬಿಗ ಕುಲದ ನಿಯಮಧಾರಿ, ಕುದಿಯುವ ಅನ್ನದ ತಪ್ಪಲೆಯಲಿ ಕೈಯಿಡುವ ಪ್ರಸಂಗ, ಮೈನವಿರೇಳಿಸುತ್ತದೆ.

'ಕೋಲಾರ ಚಿಲ್ಲೆಯ ಅಂಬಿಗಮ್ಮ ಜಾತ್ರೆ'[ಬದಲಾಯಿಸಿ]

ಕೋಲಾರ ಚಿಲ್ಲೆಯ ಅಂಬಿಗಮ್ಮ ಜಾತ್ರೆಯಲ್ಲಿ ನವಧಾನ್ಯದ ಕುಂಡಗಳನ್ನು ಹೊತ್ತ ಭಕ್ತರು ಹಿಮ್ಮುಖವಾಗಿ ನಡೆಯುವುದನ್ನು ನೋಡುವುದು ಮುದಮೊಡುವ ಸಂಗತಿ.

'ಶಿರಸಿಯ ಮಾರಮ್ಮನ ಜಾತ್ರೆ'[ಬದಲಾಯಿಸಿ]

'ಶಿರಸಿಯ ಮಾರಮ್ಮನ ಜಾತ್ರೆ'ಗೆ ೪೦೦ ವರ್ಷಗಳ ಇತಿಹಾಸವಿದೆ. ಕ್ರಿ. ಶ. ೧೬೮೯ ರಲ್ಲಿ 'ಮಾರೆಮ್ಮನವರ ದೇವಾಲಯ'ವನ್ನು ಸ್ಥಾಪನೆಮಾಡಿದ್ದರೆಂದು ಇತಿಹಾಸದ ಪುಟಗಳಿಂದ ತಿಳಿದುಬರುತ್ತದೆ. 'ಮೈಸೂರಿನ ಭವಾನಿ,' 'ಕೊಲ್ಲೂರಿನ ಮೂಕಾಂಬಿಕೆ', 'ಶಿರಸಿಯ ಮಾರಿಕಾಂಬೆ', ಇವರೆಲ್ಲಾ ಅಕ್ಕ-ತಂಗಿಯರೆಂಬ ಪ್ರತೀತಿಇದೆ. ಸಾಮಾನ್ಯವಾಗಿ, ಮಾರ್ಚ್, ೧೮ ರಂದು ಆರಂಭವಾಗುವ 'ಮಾರೆಮ್ಮನವರ ಜಾತ್ರೆ'ಗೆ ವಿಶೇಷ ಮಹತ್ವವಿದೆ. ವೇದ-ಶಾಸ್ತ್ರಗಳ ಅಧ್ಯಯನದಹಂಬಲದಿಂದ 'ಅನೃತನುಡಿದ' ಕೆಳಜಾತಿಯ ಯುವಕನ ಪ್ರೀತಿಗೆ ಮರುಳಾಗಿ ಮೋಸಹೋಗಿ ಮದುವೆಯಾದ 'ಬ್ರಾಬ್ಮಣ ಕನ್ಯೆಯೊಬ್ಬಳು', ತನ್ನ ಮದುವೆಯಾದ ಪತಿಯನ್ನೇ ಉರಿಯುವ ಬೆಂಕಿಗೆ ಆಹುತಿಮಾಡಿ, ತಾನೂ ಪ್ರಾಣತ್ಯಾಗಮಾಡಿದ ಕತೆಯ ಸಾಂಕೇತಿಕ ಭೂಮಿಕೆಯೇ, ಶಿರಸಿಯ "ಮಾರಿಕಾಂಬಾ ಜಾತ್ರೆ," ಯ ವಿಧಿ-ವಿಧಾನಗಳಾಗಿ ಜನಗಳ ಆಚರಣೆಯಲ್ಲಿದೆ.

[೧]