ಕರ್ನಾಟಕದಲ್ಲಿ ಜೈನ ಧರ್ಮ
ಕರ್ನಾಟಕ, ದಕ್ಷಿಣ ಭಾರತದಲ್ಲಿನ ಒಂದು ರಾಜ್ಯ, ಜೈನ ಧರ್ಮ ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತವಾಗಿದೆ , ಇಲ್ಲಿನ ಹಲವಾರು ಸಾಮ್ರಾಜ್ಯಗಳು (ಪಶ್ಚಿಮ ಗಂಗರು, ಕದಂಬರು,ಪಲ್ಲವರು,ರಾಷ್ಟ್ರಕೂಟರು,ನೊಳಂಬರು , ಬಲ್ಲಾಳರು , ಚಾಲುಕ್ಯರು, ಹೊಯ್ಸಳರು) ಜೈನ ಧರ್ಮಕ್ಕೆ ಆಶ್ರಯ ನೀಡಿವೆ. ಕರ್ನಾಟಕದಲ್ಲಿ ಜೈನ ಧರ್ಮದ ಹಲವು ಸ್ಮಾರಕಗಳು ಇವೆ, ಇದರಲ್ಲಿ ಬಸದಿಗಳು,ಶಾಸನಗಳು, ಗೊಮ್ಮಟ, ಸ್ತಂಭಗಳು ಕೂಡಿವೆ.
ಇತಿಹಾಸ
[ಬದಲಾಯಿಸಿ]ಐತಿಹಾಸಿಕವಾಗಿ ಕರ್ನಾಟಕದೊಂದಿಗೆ ಜೈನ ಧರ್ಮದ ಸಂಬಂಧ ಕನಿಷ್ಠ ಕ್ರಿ.ಪೂ.೬ನೇ ಶತಮಾನದಿಂದಲೇ ಇದೆ.ಪುರಾಣ ಕಾಲದಲ್ಲಿ ಮಹಾವೀರ ಕರ್ನಾಟಕಕ್ಕೆ ಭೇಟಿ ನೀಡಿ ಹೇಮನಗರ ದೇಶದ ಕುಂತಳ (ಕರ್ನಾಟಕ) ಪ್ರದೇಶದಲ್ಲಿನ ರಾಜ ಜೀವಂಧರರಿಗೆ ಉಪದೇಶ ನೀಡಿದರೆಂದು ಹೇಳಲಾಗುತ್ತದೆ, ಬಹುಶ: ಈ ಕಾರಣದಿಂದ ಜೈನ ಧರ್ಮವು ಕರ್ನಾಟಕದಲ್ಲಿ ಹಿಂದಿನಿಂದಲೂ ಪ್ರಚಲಿತವಾಗಿದೆ. ಜೈನ ಧರ್ಮದ ಸ್ಥಳಾಂತರ ಕ್ರಿ.ಪೂ. ೩೦೦ ರಿಂದ ಪ್ರಾರಂಭವಾಯಿತು. ಭದ್ರಬಾಹು ಎಂಬ ಜೈನ ಮುನಿ ತನ್ನ ಶಿಷ್ಯ ಚಂದ್ರಗುಪ್ತ ಮೌರ್ಯ(ಮೌರ್ಯ ವಂಶದ ಸ್ಥಾಪಕ) ಹಾಗೂ ಇತರರೊಂದಿಗೆ ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟ ಅಥವಾ ರಿಶಿಗಿರಿಯಲ್ಲಿ ತಂಗಿದರು. ತನ್ನ ಜೀವನ ಅಂತ್ಯಕಾಲ ಸಮೀಪಿಸುತ್ತಿರುವುದನ್ನು ಅರಿತು ತನ್ನ ಶಿಷ್ಯರಿಗೆ ಜೈನ ಧರ್ಮ ಪ್ರಚಾರ ಮಾಡಲು ಹೇಳಿ, ಚಂದ್ರಗಿರಿಯಲ್ಲೇ ಸಲ್ಲೇಖನ ತೆಗೆದುಕೊಂಡರು. ಸುಮಾರು ೭೦೦ ಮುನಿಗಳು ಸಲ್ಲೇಖನ ತೆಗೆದುಕೊಂಡ ಕಾರಣ ಜೈನ ಧರ್ಮವು ಕರ್ನಾಟಕದಲ್ಲಿ ಹಬ್ಬಿತು. ಚಂದ್ರಗುಪ್ತ ಮೌರ್ಯ ಚಂದ್ರಗಿರಿಯಲ್ಲೇ ಜೀವನವನ್ನು ಮುಂದುವರೆಸಿ, ತಮ್ಮ ಗುರುಗಳ ಪಾದಚ್ಚೆಯನು ಪೂಜಿಸಲು ಆರಂಬಿಸಿದರು. ಕೊನೆಗೆ ಇವರು ಕೂಡ ಸಲ್ಲೇಖನ ವ್ರತ ಸ್ವೀಕರಿಸಿದರು. ಈ ಘಟನೆಯ ಕುರುಹಾಗಿ ಬೆಟ್ಟದ ಮೇಲೆ ಎರಡು ಸ್ಮಾರಕಗಳು ಇವೆ, ಭದ್ರಬಾಹು ಗುಹೆ ಎಂಬ ಗುಹೆ ಹಾಗೂ ಚಂದ್ರಗುಪ್ತ ಬಸದಿ.[೧]
ಸ್ಮಾರಕ
[ಬದಲಾಯಿಸಿ]ಕರ್ನಾಟಕದಲ್ಲಿ ಬಹಳ ಪುರಾತನವಾದ, ಜೈನ ಧರ್ಮಕ್ಕೆ ಸಂಬಂಧಪಟ್ಟ ಸ್ಮಾರಕಗಳಿವೆ. ಈ ಸ್ಮಾರಕಗಳಲ್ಲಿ, ಗುಡಿ, ಬಸ್ತಿ (ಬಸದಿ), ಗೊಮ್ಮಟ ವಿಗ್ರಹಗಳು,ಶಾಸನಗಳು ಹಾಗು ಸ್ಥಂಭ ಗಳು ಸೇರಿವೆ.
ಇವುಗಳಲ್ಲಿ ಪ್ರಮುಖವಾದವು:
ಬಸದಿ
[ಬದಲಾಯಿಸಿ]- ಶ್ರವಣಬೆಳಗೊಳದ ಚಂದ್ರಗಿರಿ ಯಾ ಚಂದ್ರಗುಪ್ತ ಬಸದಿ ಹಾಗು ಚತುರ್ಮುಖ ಬಸದಿ , .
- ಇಂದ್ರಗಿರಿಯಲ್ಲಿಯ ಒದೆಗಲ್ ಬಸದಿ.
- ಸಾವಿರ ಕಂಬದ ಬಸದಿ ಮೂಡಬಿದ್ರೆ. ಮೂಡಬಿದ್ರೆಯಲ್ಲಿ ಇನ್ನು ೧೮ ಬಸದಿಗಳಿವೆ.
- ಚತುರ್ಮುಖ ಬಸದಿ ಕಾರ್ಕಳ ಹಾಗು ಗೇರುಸೊಪ್ಪ.
- ಚಂದ್ರನಾಥ ಬಸದಿ ಧರ್ಮಸ್ಥಳ.
- ಆದಿನಾಥ ಬಸದಿ ಬೆಳಗಾವಿ.
- 1008 ಸುಪಾರ್ಶ್ವನಾಥ ಬಸದಿ ಹೆಗ್ಗೆರೆ ಚಿತ್ರದುರ್ಗ.
ಗೊಮ್ಮಟ ವಿಗ್ರಹ
[ಬದಲಾಯಿಸಿ]ಕರ್ನಾಟಕದಲ್ಲಿ ಅನೇಕ ಸಣ್ಣ ಹಾಗು ದೊಡ್ಡ ಗೊಮ್ಮಟ ವಿಗ್ರಹಗಳಿವೆ. ಇವುಗಳಲ್ಲಿ, ಪ್ರಮುಖವಾದವು ಶ್ರವಣಬೆಳಗೊಳ, ಕಾರ್ಕಳ, ವೇಣೂರು , ಧರ್ಮಸ್ಥಳ,ಗೊಮ್ಮಟಗಿರಿ,ಮೈಸೂರು,ಅರೆತಿಪ್ಪೂರು,ಮಂಡ್ಯದಲ್ಲಿರುವ ವಿಗ್ರಹಗಳೂ ಸೇರಿವೆ
ಉಲ್ಲೇಖಗಳು
[ಬದಲಾಯಿಸಿ]- ↑ "Karnataka's hotbed of Jain religion". Retrieved 2006-11-25.