ಕಮಾಂಡ್‌ನ ಮಹಿಳೆಯರನ್ನು ಸಬಲೀಕರಣಗೊಳಿಸುವುದು
Other names | EWOK |
|---|---|
Former name | ಮೊಬೈಲ್ ಮತ್ತು ಅಂತರ್ಜಾಲವನ್ನು ಬಳಸಿಕೊಂಡು ಕಮಾಂಡ್ ಕಣಿವೆಯಲ್ಲಿ ವೃತ್ತಿ ಅಭಿವೃದ್ಧಿಗಾಗಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು |
| Motto | ಕಮಾಂಡ್ ಸಮಾಜದ ಮಹಿಳೆಯರಿಗೆ ಅಧಿಕಾರ ವಹಿಸಿಕೊಳ್ಳಲು ಸಹಾಯ! |
| Type | ಬಿಸಿನೆಸ್ ಇನ್ಕ್ಯುಬೇಟರ್, ತರಬೇತಿ |
| Established | April 2016 |
Parent institution | IIT ಮಂಡಿ |
| Location | ಖಾನಹರ್, ಸಲ್ಗಿ, ಮಂಡಿ ಜಿಲ್ಲೆ , , |
| Website | www |
| 2016ರ ಏಪ್ರಿಲ್ನಲ್ಲಿ ಐಐಟಿ ಮಂಡಿ ಯಿಂದ ಯೋಜನೆಯಾಗಿ ಪ್ರಾರಂಭವಾಯಿತು. 2019ರ ನವೆಂಬರ್ ನಲ್ಲಿ ಸೊಸೈಟಿಯಾಗಿ ನೋಂದಾಯಿಸಲಾಗಿದೆ. | |
ಕಮಾಂಡ್ ನ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಂಸ್ಥೆಯು (EWOK: Enabling Women of Kamand Society) ಗ್ರಾಮೀಣ ಮಹಿಳೆಯರಿಗೆ ಮಾಹಿತಿ, ತರಬೇತಿ, ಮಾರ್ಗದರ್ಶನ ಮತ್ತು ಹೊಸ ವ್ಯಾಪಾರ ಸಂಸ್ಥೆಗಳಿಗೆ ಬಿಸಿನೆಸ್ ಇನ್ಕ್ಯುಬೇಟರ್ ಮೂಲಕ ತರಬೇತಿ ಕೊಡುವ ಒಂದು ಸಂಸ್ಥೆ. EWOK ಕಚೇರಿಯು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಖಾನಹರ್, ಸಲ್ಗಿ ಗ್ರಾಮದ, ಕಾಮಂದ ಕಣಿವೆಯಲ್ಲಿದೆ.
ಇತಿಹಾಸ
[ಬದಲಾಯಿಸಿ]
2014ರಲ್ಲಿ, ಐಐಟಿ ಮಂಡಿಯ ವಿದ್ಯಾರ್ಥಿ ಸಮೂಹವು ಹತ್ತಿರದ ಹಳ್ಳಿಗಳಲ್ಲಿನ ಮಹಿಳೆಯರ ಸಮೀಕ್ಷೆಯನ್ನು ನಡೆಸಿತು. ಅವರಲ್ಲಿ ಸುಮಾರು 75% ರಷ್ಟು ಜನರು ಶಾಲಾ ಶಿಕ್ಷಣವನ್ನು (12 ನೇ ಗ್ರೇಡ್) ಪೂರ್ಣಗೊಳಿಸಲಿಲ್ಲ. ಕಡಿಮೆ ವೇತನ, ಕೌಶಲ್ಯರಹಿತ ಉದ್ಯೋಗಗಳಿಗೆ ಸೀಮಿತ ಹೊಂದಿದ್ದಾರೆ ಎಂದು ಅಧ್ಯಯನವು ಬಹಿರಂಗಪಡಿಸಿತು. ಆದಾಗ್ಯೂ, ಅವರು ವಿಶೇಷವಾದ ತರಬೇತಿ ಮತ್ತು ಮಾರ್ಗದರ್ಶನ ಪಡೆಯುವಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು. ಜಾಗೃತಿ, ಮಾರ್ಗದರ್ಶನ ಮತ್ತು ತರಬೇತಿಯ ಕೊರತೆಯು ಹಳ್ಳಿಯ ಈ ಮಹಿಳೆಯರ ಬೆಳವಣಿಗೆ ಮತ್ತು ಉದ್ಯೋಗದ ಸಾಮರ್ಥ್ಯವನ್ನು ನಿರ್ಬಂಧಿಸಿದೆ.[೧] EWOK ವನ್ನು ಐಐಟಿ ಮಂಡಿ 2016ರ ಏಪ್ರಿಲ್ನಲ್ಲಿ ಔಪಚಾರಿಕವಾಗಿ ಪ್ರಾರಂಭಿಸಿತು.[೨] 18 ನವೆಂಬರ್ 2019 ರಂದು ಹಿಮಾಚಲ ಪ್ರದೇಶ ಸಂಸ್ಥೆಗಳ ನೋಂದಣಿ ಕಾಯಿದೆ 2006 ರ ಅಡಿಯಲ್ಲಿ EWOK ಅನ್ನು ಸೊಸೈಟಿ ಅಥಾವ ನೋಂದಾಯಿತ ಸಂಸ್ಥೆಯಾಗಿ ನೋಂದಾವಣೆ ಮಾಡಲಾಯಿತು.[೩]
ಗುರಿಗಳು
[ಬದಲಾಯಿಸಿ]ಹಿಮಾಚಲ ಪ್ರದೇಶದ ಕಮಾಂಡ್ ಕಣಿವೆಯಲ್ಲಿ ಮಹಿಳಾ ಕೇಂದ್ರಿತ ಉದ್ಯಮಶೀಲತೆ ಮತ್ತು ಉದ್ಯೋಗದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು EWOK ಹೊಂದಿದೆ. ಇದು ಗ್ರಾಮೀಣ ಮಹಿಳೆಯರಿಗೆ ಗ್ರಾಮ ಮಟ್ಟದ ವ್ಯವಹಾರಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡಲು ಕೌಶಲ್ಯ ತರಬೇತಿಯನ್ನು ನೀಡುವತ್ತ ಗಮನ ಹರಿಸುತ್ತದೆ. ಅಲ್ಲದೆ ಶೈಕ್ಷಣಿಕ ಸಮುದಾಯ, ಉದ್ಯಮ ಮತ್ತು ಸ್ಥಳೀಯ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ, ಮಂಡಿ ಜಿಲ್ಲೆಯ ಕಮಾಂಡ್, ಕಟೌಲಾ, ಕಟಿಂಧಿ ಮತ್ತು ನವಲಯಾ ಎಂಬ ನಾಲ್ಕು ಪಂಚಾಯಿತಿಗಳ ಮಹಿಳೆಯರೊಂದಿಗೆ EWOK ಪಾಲುದಾರಿಕೆಯನ್ನು ಹೊಂದಿದೆ.[೪]
೧.ಸ್ಥಳೀಯ ಮಹಿಳೆಯರಿಗೆ ಉದ್ಯೋಗದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಂಬಂಧಿತ ಮಾಹಿತಿಗೆ ಉತ್ತಮ ಪ್ರವೇಶವನ್ನು ಪಡೆಯಲು ಸಹಾಯ ಮಾಡುವುದು.
೨. ಸ್ಥಳೀಯ ಮಹಿಳೆಯರಿಗೆ ಉದ್ಯೋಗ ಮತ್ತು ತರಬೇತಿ ಅವಕಾಶಗಳ ಬಗ್ಗೆ ಮಾಹಿತಿಯನ್ನು ತರಲು ಮತ್ತು ಸಂಭಾವ್ಯ ಉದ್ಯೋಗದಾತರೊಂದಿಗೆ ಸಂಪರ್ಕ ಸಾಧಿಸಲು ಜಾಲವನ್ನು ನಿರ್ಮಿಸುವುದು.
೩. ಮಹಿಳೆಯರ ಕಂಪ್ಯೂಟರ್ ಪ್ರಾವೀಣ್ಯತೆ ಮತ್ತು ಸಾಮಾನ್ಯ ವೃತ್ತಿಪರ ಕೌಶಲ್ಯಗಳು ಮತ್ತು ವಿಶ್ವಾಸದೊಂದಿಗೆ ಮಹಿಳೆಯರ ಭಾಷೆ ಮತ್ತು ಸಂವಹನ ಕೌಶಲ್ಯಗಳನ್ನು ಹೆಚ್ಚಿಸುವುದು.
ಇವು EWOK ಯ ಗುರಿಗಳಾಗಿವೆ.
ಸಾಧನೆಗಳು
[ಬದಲಾಯಿಸಿ]2017ರ ಮೇ ತಿಂಗಳಲ್ಲಿ, ಹಿಮಾಚಲ ಪ್ರದೇಶ ಸರ್ಕಾರವು ಈ ಪ್ರದೇಶದಲ್ಲಿ ಉದ್ಯಮಶೀಲತೆಯನ್ನು ಬೆಂಬಲಿಸುವ ಸಲುವಾಗಿ EWOK ಗೆ 30 ಲಕ್ಷ ರೂ ಅನುದಾನವನ್ನು ಒದಗಿಸಿತು.
ಮಾರ್ಚ್ 2020 ರಲ್ಲಿ, ಐಐಟಿ ಮಂಡಿ ಮತ್ತು EWOK, ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ಮೆಂಟ್, (ನಬಾರ್ಡ್) ನೊಂದಿಗೆ ಮಂಡಿ ಜಿಲ್ಲೆಯಲ್ಲಿ 3 ವರ್ಷದ ಅವಧಿಯಲ್ಲಿ 3 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿತು. ಈ ಉದ್ದೇಶಕ್ಕಾಗಿ ನಬಾರ್ಡ್ 35 ಲಕ್ಷ ಗಳ ಧನಸಹಾಯ ಮಾಡಿತು.[೫][೬][೭][೮] ಪ್ರತಿಯೊಂದು ಎಫ್. ಪಿ. ಓ. ಗಳು ಕೆಲವು ಬೆಳೆಗಳ ಮತ್ತು ಮೌಲ್ಯವರ್ಧನೆಯಲ್ಲಿ ಪರಿಣತಿ ಹೊಂದಿವೆ. ಐಐಟಿ ಮಂಡಿ ಸಹಯೋಗದೊಂದಿಗೆ EWOK ಅವರಿಗೆ ತಾಂತ್ರಿಕ ಮತ್ತು ಇತರ ಸಹಾಯವನ್ನು ಒದಗಿಸುತ್ತದೆ. 2022ರ ಜೂನ್ 7ರಂದು, EWOK ಯು ಟಾಗೇಟ್ಸ್ ಕೃಷಿಯ ಕುರಿತು ತರಬೇತಿ ಅಧಿವೇಶನವನ್ನು ನಡೆಸಿ, ಆ ಸಮಯದಲ್ಲಿ 60 ರೈತರಿಗೆ ಬೀಜಗಳನ್ನು ವಿತರಿಸಲಾಯಿತು. ಪಾಲಂಪುರದ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಬಯೋ ರಿಸೋರ್ಸ್ ಟೆಕ್ನಾಲಜಿ (CSIR-IHBT)ಯ ತೈಲ ಹೊರತೆಗೆಯುವ ಘಟಕವನ್ನು ಬಳಸಿಕೊಂಡು ಟಾಗೆಟ್ ಬೀಜಗಳಿಂದ ತೈಲವನ್ನು ಹೊರತೆಗೆಯಲಾಗುತ್ತದೆ.[೯]
ಇಲ್ಲಿಯವರೆಗೆ, EWOK 60ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿಸುವ 12ಕ್ಕೂ ಹೆಚ್ಚು ನವೋದ್ಯಮಗಳನ್ನು ಪ್ರಾರಂಭಿಸಿದೆ.[೧೦] EWOK ತನ್ನ ಚಟುವಟಿಕೆಗಳ ಸಾರಾಂಶದೊಂದಿಗೆ ನಿಯಮಿತ ಸುದ್ದಿಪತ್ರಗಳನ್ನು ಪ್ರಕಟಿಸುತ್ತದೆ.[೧೧]
ಫಲಾನುಭವಿಗಳು
[ಬದಲಾಯಿಸಿ]ಸಾಂಡ್ರಾ ಗ್ರಾಮದ 25 ವರ್ಷದ ನಿವಾಸಿ ಶ್ರೀಮತಿ ಪಾರ್ವತಿ, EWOKಯಲ್ಲಿ ತರಬೇತಿ ಪಡೆದ ನಂತರ ಕೆಲಸ ಮಾಡುವ ಅವಕಾಶ ದೊರೆತಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದರು. ಆಕೆ ತನ್ನ ವೃತ್ತಿಜೀವನದಲ್ಲಿ ಮುಂದಿನ ಹೆಜ್ಜೆಗಳನ್ನು ಹೇಗೆ ಇಡಬೇಕು ಎಂಬುದರ ಕುರಿತು ಮಾರ್ಗದರ್ಶನವನ್ನು ಪಡೆದರು.ತನ್ನಂತಹ ಮಹಿಳೆಯರು ಏನನ್ನಾದರೂ ಮಾಡಬಹುದು ಮತ್ತು ಅವರಿಗೆ ಸಾಕಷ್ಟು ಜ್ಞಾನವಿದೆ ಎಂಬ ಆಕೆಯ ವಿಶ್ವಾಸವೂ ಹೆಚ್ಚಾಗಿದೆ. ಈ ಹಿಂದೆ, ಆಕೆ ಹಿಂಜರಿಯುತ್ತಿದ್ದಳು ಮತ್ತು ಅದನ್ನು ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಇಲ್ಲಿ ಅವಳ ಸಂವಹನವು ಸ್ವಲ್ಪ ಮಟ್ಟಿಗೆ ಅದನ್ನು ನಿವಾರಿಸಲು ಸಹಾಯ ಮಾಡಿದೆ ಮತ್ತು ಅವಳು ನಿಜವಾಗಿಯೂ ಏನನ್ನಾದರೂ ಮಾಡಲು ಸ್ವಲ್ಪ ಸಹಾಯವನ್ನು ಪಡೆಯುವ ಸ್ಥಳವನ್ನು ಕಂಡುಕೊಂಡಿದ್ದಾಳೆ. ಆಕೆ ಈಗ ಐಐಟಿ ಮಂಡಿಯ ಸಹಾಯಕ ಪ್ರಾಧ್ಯಾಪಕರೊಬ್ಬರ ಯೋಜನೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಾಗ್ಲಿಧರ್ ಗ್ರಾಮದ ನಿವಾಸಿ 30 ವರ್ಷದ ನಿರ್ಮಲಾ ದೇವಿ, "ನಾನು ಸಂದೇಶಗಳನ್ನು ಕಳುಹಿಸಲು ಮತ್ತು ಸಂಪರ್ಕದಲ್ಲಿರಲು ಕಂಪ್ಯೂಟರ್ಗಳನ್ನು ಹೇಗೆ ಬಳಸಬೇಕೆಂದು ಕಲಿತಿದ್ದೇನೆ. ಅಲ್ಲದೆ ನನಗೆ ಇಂಗ್ಲಿಷ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕೆಲವು ಪದಗಳನ್ನು ನಾನೇ ಮಾತನಾಡಲು ಪ್ರಾರಂಭಿಸಿದ್ದೇನೆ, ಮತ್ತು ಇಲ್ಲಿನ ಸಂದರ್ಶಕರೊಂದಿಗೆ ಸಂವಹನ ನಡೆಸಲು ನನಗೆ ಸಹಾಯ ಆಗುತ್ತದೆ." ಎಂದು ಹೇಳುತ್ತಾರೆ."ನಿರ್ಮಲಾ ಶೀಘ್ರದಲ್ಲೇ ಭೂದೃಶ್ಯ ಅಭಿವೃದ್ಧಿ ಕಾರ್ಯಗಳಿಗೆ ಪರವಾನಗಿ ಪಡೆದ ಗುತ್ತಿಗೆದಾರರಾಗಲಿದ್ದಾರೆ.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ "Info". digitalcommons.wpi.edu. Retrieved 2020-04-12.
- ↑ "Indian Institute of Technology Mandi". Indian Institute of Technology Mandi. Archived from the original on 2 ಏಪ್ರಿಲ್ 2020. Retrieved 2 April 2020.
- ↑ "EWOK - Enabling Women of Kamand". Indian Institute of Technology Mandi. Retrieved 2 April 2020.
- ↑ "Himachal Pradesh: IIT-Mandi helps rural women turn entrepreneurs in Queen of Hills". The New Indian Express, 12 July 2018. Retrieved 2 April 2020.
- ↑ "NABARD sanctions Rs 35 lakhs to IIT Mandi and EWOK Society to set up 3 Farmer Producer Organisations". India Today, 2 March 2020. Retrieved 8 April 2020.
- ↑ "IIT Mandi inks pact with NABARD for setting up 3 FPOs in Himachal Pradesh". Financial Express, 2 March 2020. 2 March 2020. Retrieved 8 April 2020.
- ↑ "NABARD Sanctions INR 35 Lakh To IIT Mandi For Farmer Producer Organisations". NDTV, 2 March 2020. Retrieved 8 April 2020.
- ↑ Venugopalan, Anjali. "IIT Mandi receives funding from NABARD to set up farm producer bodies". The Economic Times. The Economic Times, 2 March 2020. Retrieved 2 April 2020.
- ↑ Tribune News Service (20 Jun 2022). "Farmers given flower plant seeds in Mandi". The Tribune (Chandigarh). Retrieved 18 Jul 2022.
- ↑ "NABARD, IIT Mandi sign MoU to develop farmer friendly tech". The Statesman, 2 March 2020. 2 March 2020. Retrieved 8 April 2020.
- ↑ "EWOK - Enabling Women of Kamand valley < IIT Mandi". ewok.in.
- ↑ archive, From our online (12 July 2018). "Himachal Pradesh: IIT-Mandi helps rural women turn entrepreneurs in Queen of Hills". The New Indian Express (in ಇಂಗ್ಲಿಷ್).
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Official website
- Indian Institute of Technology Mandi Archived 2020-04-02 ವೇಬ್ಯಾಕ್ ಮೆಷಿನ್ ನಲ್ಲಿ.
- Pages using infobox mapframe with missing coordinates
- Articles using infobox university
- Official website not in Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages needing interwikilinks
- ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ
- Business incubators of India
- IIT Mandi
- 2016 establishments in Himachal Pradesh
- Organisations based in Himachal Pradesh
- Organizations established in 2016
- Women in India