ವಿಷಯಕ್ಕೆ ಹೋಗು

ಕಬ್ಬಾಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ.

ಕಬ್ಬಾಳು' ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆಯ ಒಂದು ಹಳ್ಳಿ. ಇದೊಂದು ಐತಿಹಾಸಿಕ ಪ್ರದೇಶವಾಗಿದ್ಡು ಸುತ್ತ ಮುತ್ತಲಿನ ಜನರ ಅತೀ ಪೂಜ್ಯನೀಯ ದೈವಶಕ್ತಿಯಾದ ಕಬ್ಬಾಳ ಮಾರಮ್ಮನೆಂದೆ ಪ್ರಸಿದ್ದಿಯಾದ ದೇವತೆಯ ನೆಲೆಯಾಗಿದೆ. ಈ ಕಬ್ಬಾಳಮ್ಮ ಎಂಬ ದೇವತೆಯು ತಮಿಳುನಾಡಿನಿಂದ ಕನಕಪುರ ತಾಲ್ಲೂಕು ಕಬ್ಬಾಳು ಎಂಬ ಹಳ್ಳಿಯಲ್ಲಿ ನೆಲೆಸಿದಳು ಎಂದು ಸುತ್ತಲಿನ ಗ್ರಾಮದ ಜನರು ನುಡಿಯುತ್ತಾರೆ.ಆದರೆ ಇದಕ್ಕೆ ಸರಿಯಾದ ಪುರಾವೆಗಳು ಇಲ್ಲದಿರುವುದನ್ನು ನಾವು ಕಾಣಬಹುದಾಗಿದೆ.

"https://kn.wikipedia.org/w/index.php?title=ಕಬ್ಬಾಳು&oldid=1023128" ಇಂದ ಪಡೆಯಲ್ಪಟ್ಟಿದೆ