ಕಪ್ಲಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಪ್ಲಿಂಗ್ ಎನ್ನುವುದು ಎರಡು ಶಾಫ್ಟ್ ಗಳ ನಡುವೆ ಶಕ್ತಿಯ ವರ್ಗಾವಣೆಗೆ (transmitting power) ಬಳಸುವ ಸಾಧನ. ಶಾಫ್ಟ್ ಗಳು ಕಾರ್ಯಾಚರಣೆಯಲ್ಲಿರುವಾಗ ಅವುಗಳ ನಡುವೆ ಸಂಪರ್ಕ ಕಡಿತಗೊಳ್ಳುವುದನ್ನು ಸಾಮಾನ್ಯವಾಗಿ ಕಪ್ಲಿಂಗ್ ಗಳು ಸಾಧ್ಯವಾಗಿಸುವುದಿಲ್ಲ. ಟಾರ್ಕ್ (Torque) ಮಿತಿ ಮೀರಿದಾಗ ಜಾರಿಸುವಂತಹ ಅಥವಾ ಸಂಪರ್ಕ ಕಡಿತಗೊಳಿಸುವಂತಹ ಕಪ್ಲಿಂಗ್ ಗಳೂ ಇವೆ.

ತಿರುಗುತ್ತಿರುವ ಶಾಫ್ಟ್ ಳನ್ನು ಜೋಡಿಸಿರುವ ಕಪ್ಲಿಂಗ್

ಒಟ್ಟಾರೆ ಮೂಲಭೂತವಾಗಿ ಎರಡು ತಿರುಗುವ ಸಾಧನಗಳನ್ನು ಜೋಡಿಸುವುದು ಕಪ್ಲಿಂಗ್‍ನ ಕೆಲಸ. ಜೊತೆಗೆ ತುಸು ಕೋನೀಯ ಮಿಸ್ ಅಲೈನ್ ಮೆಂಟ್(mis-alignment) ಹಾಗೂ ಎಂಡ್ ಮೂಮೆಂಟ್(end movement) ಹಾಗೂ ಇವೆರಡಕ್ಕೂ ಕೂಡ ಅವಕಾಶಮಾಡಿಕೊಡುತ್ತದೆ. ಕಪ್ಲಿಂಗ್‍ಗಳನ್ನು ಎಚ್ಚರಿಕೆಯಿಂದ ಆಯ್ಕೆ, ಅಳವಡಿಕೆ ಮತ್ತು ನಿರ್ವಹಣೆ ಮಾಡುವ ಮೂಲಕ, ನಿರ್ವಹಣಾ ವೆಚ್ಚವನ್ನು ಮತ್ತು ಸಮಯವನ್ನು ಗಣನೀಯವಾಗಿ ಉಳಿಸಬಹುದಾಗಿದೆ.

ಬಳಕೆ/ಉಪಯೋಗಗಳು[ಬದಲಾಯಿಸಿ]

ಶಾಫ್ಟ್ ಕಪ್ಲಿಂಗ್‍ಗಳು ಯಂತ್ರಗಳಲ್ಲಿ ಹಲವು ರೀತಿಯಲ್ಲಿ ಬಳಕೆಯಾಗುತ್ತವೆ. ಅವುಗಳಲ್ಲಿ ಈ ಕೆಳಗಿನವು ಸಾಮಾನ್ಯವಾಗಿ ಬಳಕೆಯಾಗುವಂತದ್ದು.[೧]

 • ಮೋಟರ್ ಹಾಗೂ ಜೆನೆರೇಟರ್‍ನಂತಹ ಪ್ರತ್ಯೇಕವಾಗಿ ತಯಾರಿಕೆಯಾಗುವ ಘಟಕಗಳ ಶಾಫ್ಟ್ ಗಳಿಗೆ ಸಂಪರ್ಕ ಒದಗಿಸುವುದಕ್ಕಾಗಿ ಹಾಗೂ ದುರಸ್ತಿ/ಮಾರ್ಪಾಡುಗಳಿಗಾಗಿ ಅವುಗಳ ಸಂಪರ್ಕ ಕಡಿತಗೊಳಿಸುವುದಕ್ಕಾಗಿ ಬಳಕೆಯಾಗುತ್ತವೆ.
 • ಮೆಕ್ಯಾನಿಕಲ್ ಫ್ಲೆಕ್ಸಿಬಿಲಿಟಿಗಾಗಿ (mechanical flexibility) ಶಾಫ್ಟ್ ಗಳ ನಡುವೆ ಕೊಂಚ ಮಿಸ್ಅಲೈನ್‍ಮೆಂಟ್ ಗೆ ಅವಕಾಶ ಮಾಡಿಕೊಡಲು ಬಳಕೆಯಾಗುತ್ತವೆ.
 • ಒಂದು ಶಾಫ್ಟಿನಿಂದ ಮತ್ತೊಂದಕ್ಕೆ ಆಘಾತದ ಲೋಡ್ (shock loads) ವರ್ಗಾವಣೆಯನ್ನು ಕಡಿಮೆ ಮಾಡುವುದಕ್ಕೋಸ್ಕರ ಬಳಕೆಯಾಗುತ್ತದೆ.
 • ಓವರ್ ಲೋಡ್ ಗಳಿಂದ ಸುರಕ್ಷತೆ ಒದಗಿಸುವುದಕ್ಕಾಗಿ ಬಳಕೆಯಾಗುತ್ತವೆ.
 • ತಿರುಗುವ ಭಾಗಗಳ ಕಂಪನದ ಗುಣವನ್ನು(vibration characteristics) ಮಾರ್ಪಾಟು ಮಾಡಲು ಬಳಕೆಯಾಗುತ್ತವೆ.
 • ಚಲಿಸುವ ಹಾಗೂ ಚಲಾಯಿಸುವ(driving and the driven) ಭಾಗಗಳನ್ನು ಜೋಡಿಸಲು ಬಳಕೆಯಾಗುತ್ತವೆ.
 • ಶಕ್ತಿಯನ್ನು ಒಂದುಕಡೆಯಿಂದ ಮತ್ತೊಂದು ಕಡೆ ವರ್ಗಾಯಿಸಲು ಬಳಕೆಯಾಗುತ್ತವೆ. (ಉದಾಹರಣೆಗೆ ಮೋಟರ್ ಗಳು ಪಂಪ್ ಗಳಿಗೆ ಕಪ್ಲಿಂಗ್ ಮೂಲಕ ಶಕ್ತಿ ವರ್ಗಾವಣೆ ಮಾಡುತ್ತವೆ)

ವಿಧಗಳು[ಬದಲಾಯಿಸಿ]

ಕ್ಲ್ಯಾಂಪ್ ಅಥವಾ ಕಂಪ್ರೆಶನ್ ರಿಜಿಡ್ ಕಪ್ಲಿಂಗ್‍ಗಳೆಂದು ಕರೆಯಲ್ಪಡುವ ಮಾದರಿಯ ಕಪ್ಲಿಂಗ್‍ಗಳು ಎರಡು ಭಾಗಗಳನ್ನು ಹೊಂದಿದ್ದು, ಒಂದೊಂದು ಭಾಗವು ಸಂಪರ್ಕಗೊಳಿಸಬೇಕಾದ ಶಾಫ್ಟ್‍ಗೆ ಪ್ರತ್ಯೇಕವಾಗಿ ಅಳವಡಿಸಲ್ಪಟ್ಟು ಅವುಗಳನ್ನು ಜೋಡಿಸುತ್ತವೆ. ಇವು ಸಾಮಾನ್ಯವಾಗಿ ಒಂದೇ ಕೊಳವೆಯಂತಿರುವ 'ಸ್ಲೀವ್' ಮಾದರಿಯ ಕಪ್ಲಿಂಗ್ ಗಳಿಗಿಂದ ಹೆಚ್ಚು ಹೊಂದಿಕೊಳ್ಳುವ (flexibility) ಅವಕಾಶ ಒದಗಿಸುತ್ತವೆ. ಫ್ಲೇಂಜ್‍(flange)ಗಳನ್ನು ಹೊಂದಿರುವ ರಿಜಿಡ್ ಕಪ್ಲಿಂಗ್ ಮಾದರಿಗಳು ದೊಡ್ಡ ಉಪಕರಣಗಳನ್ನು ಅಥವಾ ದೊಡ್ಡಮಟ್ಟದ ಲೋಡ್‍ಗಳಿಗಾಗಿ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ. ಇವು ಸಣ್ಣ ಸ್ಲೀವ್ ಗಳನ್ನು ಹೊಂದಿದ್ದು ಅದಕ್ಕೆ ಲಂಬವಾಗಿ ಫ್ಲೇಂಜ್‍ಗಳಿರುತ್ತವೆ. ಫ್ಲೇಂಜ್‍ಗಳು ಒಂದಕ್ಕೊಂದು ಅಭಿಮುಖವಾಗಿ ಒಂದೇ ಸಾಲಿನಲ್ಲಿ ಬರುವಂತೆ ಎರಡೂ ಶಾಫ್ಟ್ ಗಳಿಗೆ ಒಂದೊಂದು ಪ್ರತ್ಯೇಕ ಕಪ್ಲಿಂಗ್ ಅಳವಡಿಸಲಾಗುತ್ತದೆ. ಎರಡೂ ಫ್ಲೇಂಜ್ ಗಳನ್ನು ಜೋಡಿಸಿ ಹಿಡಿದಿಟ್ಟುಕೊಳ್ಳಲು ಸ್ಕ್ರೂ ಅಥವಾ ಬೋಲ್ಟ್ ಗಳನ್ನು ಬಳಸಲಾಗುತ್ತದೆ. ಶಾಫ್ಟ್ ಗಳ ಜೋಡಣೆಯಲ್ಲಿ ಹೆಚ್ಚಿನ ನಿಖರತೆಯ ಅಗತ್ಯವಿದ್ದಾಗ ರಿಜಿಡ್ ಕಪ್ಲಿಂಗ್ ಗಳ ಬಳಕೆಯಾಗುತ್ತದೆ. ಶಾಫ್ಟ್ ಗಳ ಹೊಂದಾಣಿಕೆ ಸರಿಯಿಲ್ಲದಿದ್ದಲ್ಲಿ (ಮಿಸ್ ಅಲೈನ್‍ಮೆಂಟ್) ಅದು ಕಪ್ಲಿಂಗ್‍ಗಳ ಕಾರ್ಯನಿರ್ಮಹಣೆ ಹಾಗೂ ಬಾಳಿಕೆಗೆ ಧಕ್ಕೆ ಉಂಟಾಗುತ್ತದೆ.

ಈ ಕೆಳಗಿನವು ಕಪ್ಲಿಂಗ್ ವಿಧಗಳು

Oldham clutch-diagram
 • Sleeve coupling
 • Clamp or split-muff coupling
 • Tapered shaft lock
 • Hirth
 • Flexible
 • Bush pin Type flange coupling
 • Beam
 • Constant velocity
 • Diaphragm
 • Disc
 • Fluid
 • Gear
 • Grid
 • Oldham
 • Rag joint
 • Universal joint
 • Magnetic Coupling
 • Others
 • Bellows coupling — low backlash
 • Elastomeric coupling
   • Bushed pin coupling
   • Donut coupling
   • Spider or jaw coupling (or Lovejoy® coupling)
  • Geislinger coupling
  • Resilient coupling
  • Roller chain and sprocket coupling
  • Schmidt coupling

ಒಳ್ಳೆಯ ಶಾಫ್ಟ್ ಒಂದಾಣಿಕೆ (alignment)ಯ ಅಥವಾ ಒಳ್ಳೆಯ ಕಪ್ಲಿಂಗ್ ಅಳವಡಿಕೆಯ (setup) ಅಗತ್ಯಗಳು/ಗುಣಲಕ್ಷಣಗಳು[ಬದಲಾಯಿಸಿ]

 • ಕಪ್ಲಿಂಗ್ ಗಳನ್ನು ಜೋಡಿಸಲು ಹಾಗೂ ತೆಗೆಯಲು ಸುಲಭವಾಗಿರಬೇಕು.
 • ಶಾಫ್ಟ್ ಗಳು ತಿರುಗುವ ಅಕ್ಷರೇಖೆ(axis)ಗಳ ನಡುವೆ ಸ್ವಲ್ಪಮಟ್ಟಿನ ಮಿಸ್ ಅಲೈನ್ ಮೆಂಟ್ (misalignment)ಗೆ ಅವಕಾಶ ಹೊಂದಿರಬೇಕು
 • ಕಲಸದ ಸಮಯದಲ್ಲಿ ಮಿಸ್-ಅಲೈನ್ಮೆಂಟನ್ನು ಕಡಿಮೆ ಮಾಡಿ ಶಕ್ತಿಯ ವರ್ಗಾವಣೆ ಹಾಗೂ ಯಂತ್ರದ ಭಾಗಗಳ ಬಾಳಿಕೆಯನ್ನು ಹೆಚ್ಚಿಸುವಂತಿರಬೇಕು.
 • ಹೊರಚಾಚಿರುವ ಭಾಗಗಳನ್ನು ಹೊಂದಿರಬಾರದು.
 • ಯಂತ್ರವು ಕಾರ್ಯಾಚರಣೆಯ ಉಷ್ಣತೆಯಲ್ಲಿರುವಾಗ ಒಂದಾಣಿಕೆ(alignment) ಸರಿಯಾಗಿರುವಂತೆ ಇರಬೇಕು.

ಕಪ್ಲಿಂಗ್ ನಿರ್ವಹಣೆ ಮತ್ತು ವೈಫಲ್ಯ[ಬದಲಾಯಿಸಿ]

ಕಪ್ಲಿಂಗ್ ನಿರ್ವಹಣೆಯು ಸಾಮಾನ್ಯವಾಗಿ ಸರಳವಾಗಿದ್ದು, ಪ್ರತಿಯೊಂದು ಕಪ್ಲಿಂಗ್‍ನ ನಿಗಧಿತ ಅವಧಿಯ ತಪಾಸಣೆ(regular inspection) ಅಗತ್ಯವಾಗಿದೆ. ತಪಾಸಣೆ ಈ ಕೆಳಗಿನಂತಿರುತ್ತದೆ.

 • ಬರಿಗಣ್ಣಿನಿಂದ ಪರಿಶೀಲನೆ ಮಾಡುವುದು, ಸ್ವಚ್ಛಗೊಳಿಸುವುದು, ಸವೆತ ಹಾಗೂ ಘಾಸಿಯ (wear or fatigue) ಗುರುತುಗಳನ್ನು ಪರಿಶೀಲಿಸುವುದು.
 • ಲೂಬ್ರಿಕೇಶನ್ ಕಪ್ಲಿಂಗ್‍ಗಳಾದರೆ ನಿಯಮಿತವಾಗಿ ಲೂಬ್ರಿಕೆಂಟ್ ಗಳನ್ನು ಬದಲಿಸುವುದು. ಬಹುತೇಕ ಕಪ್ಲಿಂಗ್‍ಗಳಿಗೆ ಇದು ವಾರ್ಷಿಕ ಅಗತ್ಯವಾಗಿದೆ. ಪ್ರತಿಕೂಲ ವಾತಾವರಣದಲ್ಲಿ ಅಥವಾ ಹೆಚ್ಚು *ಬಳಕೆಯ ಸ್ಥಿತಿಯಲ್ಲಿರುವ ಕಪ್ಲಿಂಗ್‍ಗಳಿಗೆ ಇದನ್ನು ಪದೇ ಪದೇ ಮಾಡಬೇಕಾಗುತ್ತದೆ.
 • ಪ್ರತಿಕಪ್ಲಿಂಗ್‍ನ ನಿರ್ವಹಣೆಯನ್ನು ದಿನಾಂಕದೊಂದಿಗೆ ದಾಖಲಿಸಿಡುವುದು.[೨]

ಸರಿಯಾದ ನಿರ್ವಹಣೆ ಇದ್ದರೂ ಕೂಡ ಕಪ್ಲಿಂಗ್‍ಗಳು ವಿಫಲವಾಗಬಹುದು[ಬದಲಾಯಿಸಿ]

 • ದೋಷಯುಕ್ತ ಅಳವಡಿಕೆ
 • ಸರಿಯಲ್ಲದ/ತಕ್ಕುದಲ್ಲದ ಕಪ್ಲಿಂಗ್ ಆಯ್ಕೆ
 • ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಬಳಕೆ[೨]

ಕಪ್ಲಿಂಗ್ ಬಾಳಿಕೆಯನ್ನು ಹೆಚ್ಚಿಸಲು ಇರುವ ದಾರಿಯೆಂದರೆ, ಅದರ ವೈಫಲ್ಯದ ಕಾರಣವನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಸರಿಪಡಿಸಿಕೊಂಡು ಹೊಸ ಕಪ್ಲಿಂಗ್ ಅಳವಡಿಸುವುದು. ಕಪ್ಲಿಂಗ್ ವೈಫಲ್ಯವನು ಸೂಚಿಸುವ ಇತರ ಹೊರ ಅಂಶಗಳೆಂದರೆ:

 • ಅಸಹಜ, ಅಸ್ವಾಭಾವಿಕ ಶಬ್ದ.
 • ಅಧಿಕ ಕಂಪನ/ಅದುರುವಿಕೆ ಅಥವಾ ಓಲಾಟ.
 • ಲೂಬ್ರಿಕೆಂಟ್ ಸೋರುವಿಕೆ ಅಥವಾ ಕಲುಷಿತಗೊಳ್ಳುವಿಕೆಯಿಂದ ತಿಳಿಯುವ ಸೀಲ್‍ಗಳ (seals) ವೈಫಲ್ಯ [೨]

ಕಪ್ಲಿಂಗ್ ಸಮತೋಲನದ ಪರಿಶೀಲನೆ[ಬದಲಾಯಿಸಿ]

ಸಾಮಾನ್ಯವಾಗಿ ಕಪ್ಲಿಂಗ್‍ಗಳನ್ನು ತಯಾರಿಕೆಯ ಕಾರ್ಖಾನೆಯಲ್ಲಿ ಸಮತೋಲನವನ್ನು ಪರಿಶೀಲಿಸಿ ಕಳಿಸಲಾಗುತ್ತದೆ. ಆದರೂ ಸಹ ಅಪರೂಪಕ್ಕೆ ಕಾರ್ಯಾಚರಣೆಯ ಸಂದರ್ಭದಲ್ಲಿ ಸಮತೋಲನ ತಪ್ಪಬಹುದು. ಸಮತೋಲನವನ್ನು ಮಾಡುವುದು ಕೊಂಚ ಕಠಿಣ ಹಾಗೂ ವೆಚ್ಚದ ಕೆಲಸವಾಗಿದ್ದು ಅದರ ಅಗತ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಸಿಸ್ಟಮ್‍ನಲ್ಲಿ ಅಸಮತೋಲನ ಪರಿಮಾಣದ ಮಿತಿಯು ಎಷ್ಟಿರಬಹುದು ಎನ್ನುವುದುದನ್ನು ಆ ಸಿಸ್ಟಮ್ ನಲ್ಲಿರುವ ಯಂತ್ರಗಳು, ವಿಶ್ಲೇಷಣೆ ಮತ್ತು ಅನುಭವದ ಅಧಾರದಲ್ಲಿ ನಿರ್ಧರಿಸಬೇಕಾಗುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

 1. "Pump Couplings from John Crane Metastream and Powerstream at Total Pump Soultions". Totalpumps.co.nz. Archived from the original on 10 ಫೆಬ್ರವರಿ 2021. Retrieved 7 January 2015.
 2. ೨.೦ ೨.೧ ೨.೨ ೨.೩ Boyle, B. (2008). "Tracking the causes of coupling failure". Plantservices.com. Archived from the original on 23 ಮೇ 2013. Retrieved 7 January 2015. Explore coupling maintenance and the telltale signs of failure to maximize coupling life and ensure reliable system operations