ಕನ್ನೆಸೊಪ್ಪು
Asiatic dayflower | |
---|---|
Commelina communis var. ludens flowers after rain | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | |
ಪ್ರಜಾತಿ: | C. communis
|
Binomial name | |
Commelina communis | |
Green = Native, Red = Introduced |
ಕನ್ನೆಸೊಪ್ಪುಕಮಲ್ಯನೇಸೀ ಕುಟುಂಬಕ್ಕೆ ಸೇರಿದ ಒಂದು ಸಣ್ಣ ಸಸ್ಯ. ಹೊಲ ಮತ್ತು ತೋಟಗಳಲ್ಲಿ ಕಳೆಯಂತೆ ಸ್ವಾಭಾವಿಕವಾಗಿ ಬೆಳೆಯುವ ಏಕವಾರ್ಷಿಕ ಸಸ್ಯ ಇದು.
ವೈಜ್ಞಾನಿಕ ಹೆಸರು
[ಬದಲಾಯಿಸಿ]ಇದರ ವೈಜ್ಞಾನಿಕ ನಾಮ ಕಮಲೈನ ಕಮ್ಯೂನಿಸ್.
ಲಕ್ಷಣಗಳು
[ಬದಲಾಯಿಸಿ]ಇದು ಮೂಲಿಕೆಯ (ಶಾಕ) ರೂಪದಲ್ಲಿ ಸು. 1' ಎತ್ತರಕ್ಕೆ ಬೆಳೆಯುತ್ತದೆ. ನೆಲದಲ್ಲಿಯೇ ಹರಡಿ ಬಹುವಾಗಿ ಕವಲೊಡೆದು ಬೆಳೆಯುವ ಗಿಣ್ಣುಗಳಿಂದ ಕೂಡಿದ ಕಾಂಡವಿದೆ. ಎಲೆಗಳು ಸರಣ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಅವುಗಳ ಆಕಾರ ಕರನೆಯಂತೆ ಅಥವಾ ದೀರ್ಘವೃತ್ತದಂತೆ. ಎಲೆಯ ಅಂಚು ಅಲೆಯಂತಿದೆ. ತುದಿ ಮೊನಚಾಗಿದೆ. ಎಲೆಗಳ ಬುಡವನ್ನು ಪೊರೆಯಂಥ ರಚನೆ ಆವರಿಸಿರುತ್ತದೆ. ಹೂ ಬಿಡುವ ಕಾಲದಲ್ಲಿ ಕಾಂಡದ ಬುಡದ ಗಿಣ್ಣುಗಳಿಂದ ಹೂಗೊಂಚಲುಗಳು ಮೂಡುತ್ತವೆ. ಅವು ಮಧ್ಯಾರಂಭಿ (ಸೈಮೋಸ್) ಮಾದರಿಯವು. ಹೂ ಗೊಂಚಲನ್ನು ಆಲಿಕೆಯಾಕಾರದ ಕವಚ (ಸ್ಪೇತ್) ಆವರಿಸಿದೆ. ಹೂಗಳು ದ್ವಿಲಿಂಗಿಗಳು; ನೀಲಿ ಬಣ್ಣದವು. ಪುಷ್ಪಪತ್ರಗಳು ಮೂರು, ಬಿಡಿಬಿಡಿಯಾಗಿವೆ. ಹೂದಳಗಳು ಮೂರು. ಇವುಗಳಲ್ಲಿ ಎರಡು ದೊಡ್ಡವು. ಕೆಲವೊಮ್ಮೆ ಮೂರನೆಯ ದಳ ಇಲ್ಲದಿರಬಹುದು. ಕೇಸರಗಳು 3, ಇವುಗಳಲ್ಲಿ ಸಾಮಾನ್ಯವಾಗಿ ಎರಡು ಬರಡು ಕೇಸರಗಳು ಅಂಡಾಶಯ ಉಚ್ಚಸ್ಥಾನದ್ದು (ಸುಪೀರಿಯರ್) ಮೂರು ಕೋಣೆಗಳನ್ನೊಳಗೊಂಡಿದೆ. ಪ್ರತಿಕೋಣೆಯಲ್ಲಿ 1-2 ಅಂಡಕಗಳಿವೆ. ಕೆಲವು ಬಗೆಗಳಲ್ಲಿ ಒಂದು ಕೋಣೆ ಇರುವುದಿಲ್ಲ. ಫಲ ಕೋಣೆಗಭಿಮುಖವಾಗಿ ಒಡೆಯುವಂಥ ಸಂಪುಟ ಮಾದರಿಯದು (ಕ್ಯಾಪ್ಸ್ಯುಲ್).
ಉಪಯೋಗಗಳು
[ಬದಲಾಯಿಸಿ]ಕನ್ನೆಗಿಡದ ಎಳೆಯ ಎಲೆ ಮತ್ತು ಕಾಂಡವನ್ನು ಸೊಪ್ಪು ತರಕಾರಿಯಾಗಿ ಉಪಯೋಗಿಸುತ್ತಾರೆ. ಇದು ಜಾನುವಾರುಗಳಿಗೆ ಉತ್ತಮವಾದ ಮೇವೂ ಹೌದು.ಜಪಾನ್ ದೇಶದಲ್ಲಿ ಇದನ್ನು ನೈಸರ್ಗಿಕ ಬಣ್ಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.ಭಾರತ ಮತ್ತು ಚೀನಾದಲ್ಲಿ ಇದನ್ನು ತರಕಾರಿಯಾಗಿಯೂ ಉಪಯೋಗಿಸುತ್ತಾರೆ.[೧]
ಅಯುರ್ವೇದ ಔಷಧವಾಗಿ
[ಬದಲಾಯಿಸಿ]ಆಯುರ್ವೇದ ಔಷಧಿಗಳಲ್ಲೂ ಇದರ ಬಳಕೆಯಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Hanelt, Peter; Büttner, R.; Mansfeld, Rudolf; Kilian, Ruth (2001), Mansfeld's Encyclopedia of Agricultural and Horticultural Crops, Springer, p. 2414, ISBN 3-540-41017-1
{{citation}}
: CS1 maint: multiple names: authors list (link)
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Profile at Flora of Missouri Webpage Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
- Profile at USDA PLANTS Database
- Distribution Map in North America from Flora of North America
- Illustration from Flora of China
- List of Publications Mentioning Commelina communis Archived 2011-05-19 ವೇಬ್ಯಾಕ್ ಮೆಷಿನ್ ನಲ್ಲಿ.