ಕಡಪ ಕಲ್ಲು

ವಿಕಿಪೀಡಿಯ ಇಂದ
Jump to navigation Jump to search

ಕಡಪ ಕಲ್ಲು : ಕಡಪ ಜಿಲ್ಲೆಯ ಜಮ್ಮಲಮಡಗು ಮತ್ತು ಯರಗುಂಟಲ ತಾಲ್ಲೂಕುಗಳಲ್ಲಿಯೂ ಕರ್ನೂಲ್ ಜಿಲ್ಲೆಯ ಬೇಟಂಚರದಲ್ಲಿಯೂ ಹೇರಳವಾಗಿ ದೊರೆಯುವ ಕಪ್ಪು ಬೂದಿ ಬಣ್ಣದ ಮಟ್ಟಸ ಕಲ್ಲಿನ ಹಾಳೆ ಅಥವಾ ಚಪ್ಪಡಿ. ಇವನ್ನೂ ಸ್ಲೇಟ್ ಎಂದೂ ಕರೆಯುವುದುಂಟು. ಈ ಚಪ್ಪಡಿಗಳನ್ನು ಕಡಪ ರೈಲ್ವೆ ಸ್ಟೇಷನ್ನಿನಿಂದ ದೇಶದ ವಿವಿಧ ಭಾಗಗಳಿಗೆ ವೆನಿಸುವುದರಿಂದ ಇವಕ್ಕೆ ಕಡಪ ಕಲ್ಲುಗಳೆಂದೇ ಹೆಸರಾಗಿದೆ. ನೆಲದ ಮತ್ತು ಮೇಜುಗಳ ಮೇಲೆ ಹಾಸಲು, ಕಟ್ಟಡದ ಮೇಲ್ಛಾವಣಿಗೆ ಮಾಡಾಗಿ ಹೊದಿಸಲು ಇವುಗಳ ಉಪಯೋಗ ಉಂಟು. ಇವು ಹೇರಳವಾಗಿ ದೊರೆಯುವುದರಿಂದಲೂ ಸುಲಭವಾಗಿ ಒಡೆದು ಎಳಕಿಸಬಹುದಾದ್ದರಿಂದಲೂ ಬಹಳ ಹೆಸರುವಾಸಿಯಾಗಿವೆ. 0.5" ಮತ್ತು 0.25" ತೆಳುವಾದ ಮತ್ತು 6'-8' ಚದರದ ದೊಡ್ಡ ಚಪ್ಪಡಿಗಳಾಗಿ ಇವನ್ನು ಎಳಕಿಸುತ್ತಾರೆ. ಈ ಕಲ್ಲು ಸುಣ್ಣಾಂಶವಿರುವ ಅಶುದ್ಧ ಜಾತಿಯ ಜೇಡುಶಿಲೆ. ಚಪ್ಪಡಿಗಳ ಮೇಲೆ ಕೆಲವು ವೇಳೆ ಅಲ್ಲಲ್ಲಿ ಹೊಂಬಣ್ಣದ ಪಿರೈಟಿಸಿನ ಹರಳುಗಳಿರುವುದೂ ಕಂಡುಬಂದಿದೆ. ಭಾರತದ ಭೂವಿಜ್ಞಾನದಲ್ಲಿ ಇದನ್ನು ಕರ್ನೂಲ್ ಗುಂಪಿಗೆ ಸೇರಿದ ಜಲಜಶಿಲೆಯೆಂದು ವರ್ಗೀಕರಿಸಲಾಗಿದೆ.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: