ಕಟಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Katasraj Temple by Aizad Sayid

ಕಟಾಸ್ :ಈಗ ಪಾಕಿಸ್ತಾನದಲ್ಲಿರುವ ಉತ್ತರ ಪಂಜಾಬಿನಲ್ಲಿ ಒಂದು ಪ್ರಸಿದ್ಧ ಯಾತ್ರಾಸ್ಥಳ. ಶಿವನು ಸತಿಯನ್ನು ಕಳೆದುಕೊಂಡಾಗ ಅವನ ಕಣ್ಣೀರಿನಿಂದ ಕಟಾಕಕ್ಷವೆಂಬ ಹೆಸರಿನ ಇಲ್ಲಿನ ಸರೋವರಗಳಲ್ಲೊಂದು ಆಯಿತೆಂದು ಸ್ಥಳಪುರಾಣ ತಿಳಿಸುತ್ತದೆ. ಇಲ್ಲಿ ಕ್ಷೀಣದಶೆಯಲ್ಲಿರುವ ಹನ್ನೆರಡು ದೇವಾಲಯಗಳಲ್ಲಿ ಏಳು, ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಕಟ್ಟಿದವೆಂದು ಒಂದು ಐತಿಹ್ಯವಿದೆ. ಈ ದೇವಾಲಯಗಳ ವಾಸ್ತು ಶಿಲ್ಪ ಕಾಶ್ಮೀರಿ ಶೈಲಿಯನ್ನು ಹೋಲುತ್ತದೆ.

Katas Raj Temples by Muhammad Ehsan Junaid
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು[ಬದಲಾಯಿಸಿ]"https://kn.wikipedia.org/w/index.php?title=ಕಟಾಸ್&oldid=1183528" ಇಂದ ಪಡೆಯಲ್ಪಟ್ಟಿದೆ