ಓಯಸಿಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪೆರು ದೇಶದ ಇಕ ಪ್ರದೇಶದಲ್ಲಿರುವ ಓಯಾಸಿಸ್

ಮರುಭೂಮಿಯಲ್ಲಿ ಕಂಡುಬರುವ ನೀರಿನ ಬುಗ್ಗೆಗೆ ಓಯಾಸಿಸ್ ಎಂದು ಕರೆಯುತ್ತಾರೆ. ಅತಿಉಷ್ಣ ಪ್ರದೇಶಗಳಾದ ಥಾರ್ ಮರುಭೂಮಿ ಮತ್ತು ಸಹಾರ ಮರುಭೂಮಿಯಂತಹ ಮರಳುಗಾಡಿನಲ್ಲಿ ಓಯಸಿಸಗಳು ಅಲ್ಲಿನ ನಿವಾಸಿಗಳಿಗೆ ಮತ್ತು ಪ್ರಾಣಿಗಳಿಗೆ ಜೀವಜಲವಿದ್ದಂತೆ. ಆದರೆ ಮರಳುಗಾಡಿನ ಪ್ರದೇಶಗಳಲ್ಲಿ ಅಲ್ಲಿನ ತೀಕ್ಷ್ಣ ಬಿಸಿಲು ಮರಳಿನ ಮೇಲೆ ಪ್ರತಿಫಲಿಸಿ ದೂರದಲ್ಲೆಲ್ಲೋ ನೀರಿನ ಚಿಲುಮೆಯಿದ್ದಂತೆ ಭ್ರಮೆಯುಂಟು ಮಾಡುತ್ತದೆ. ಇದೇ ಕಾರಣಕ್ಕೆ ಈ ಭ್ರಮಾಸ್ವರೂಪಕ್ಕೆ ಮಾಯಾಜಲ ಅಥವಾ ಬಿಸಿಲ್ಗುದುರೆ ಅಂತಲೂ ಹೆಸರಿದೆ. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಮಾಯಾಜಲದ ಬಗ್ಗೆ ರೂಪಕಗಳನ್ನು ಅಲ್ಲಲ್ಲಿ ನೋಡಬಹುದಾಗಿದೆ.

"https://kn.wikipedia.org/w/index.php?title=ಓಯಸಿಸ್&oldid=319061" ಇಂದ ಪಡೆಯಲ್ಪಟ್ಟಿದೆ