ವಿಷಯಕ್ಕೆ ಹೋಗು

ಓಡೋಮೀಟರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಓಡೋಮೀಟರ್


ಓಡೋಮೀಟರ್: ದೂರಮಾಪನ ಸಾಧನವು ಕ್ರಮಿಸಿದ ದೂರವನ್ನು ನಿರ್ದಿಷ್ಟ ಸಂಖ್ಯೆಗಳಲ್ಲಿ ಸೂಚಿಸುವ ಉಪಕರಣ. ಕಾರ್, ಮೋಟಾರ್ ಮುಂತಾದ ಸಂಚಾರ ವಾಹನಗಳಲ್ಲಿಯೂ ಇದರ ಉಪಯೋಗವಿದೆ. ಅವುಗಳಲ್ಲಿ ವೇಗಮಾಪಕಕ್ಕೆ (ಸ್ಪೀಡೋಮೀಟರ್) ಇದನ್ನು ಲಗತ್ತಿಸಿರುತ್ತಾರೆ. ಭೂಮಿಯನ್ನು ಅಳತೆ ಮಾಡುವುದು ಭೂವಿಜ್ಞಾನದಲ್ಲಿಯೂ ಮೋಜಣಿಯಲ್ಲಿಯೂ ಒಂದು ಪ್ರಮುಖ ಕ್ರಿಯೆ. ಅಲ್ಲಿ ಟೇಪ್, ಚೈನ್ ಮುಂತಾದ ನೇರ ಸಾಧನಗಳೂ ಪಾಸೋಮೀಟರ್, ಪೆಡೋಮೀಟರ್, ಸ್ಪೀಡೋಮೀಟರ್ ಎಂಬ ಪರೋಕ್ಷವಾಗಿ ದೂರ ತಿಳಿಯಲಾಗುವ ಉಪಕರಣಗಳೂ ಬಳಕೆಯಲ್ಲಿವೆ. ಓಡೋಮೀಟರ್ ಇಂಥ ಒಂದು ಉಪಕರಣ.

ಓಡೋಮೀಟರನ್ನು ಚಲಿಸುವ ವಾಹನಕ್ಕೆ ಜೋಡಿಸುತ್ತಾರೆ. ವಾಹನ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿರುವಾಗ ಅದರ ಚಕ್ರಗಳು ಎಷ್ಟು ಪುರ್ಣ ಪರಿಭ್ರಮಣೆಗಳನ್ನು ಮಾಡಿವೆ ಎಂಬುದನ್ನು ಓಡೋಮೀಟರ್ ಸೂಚಿಸುವುದು. ಈ ಸಂಖ್ಯೆ ಟಿ ಮತ್ತು ಚಕ್ರದ ವ್ಯಾಸ ಜ (ಅಳೆಯಬಹುದು) ಆಗಿದ್ದರೆ ವಾಹನ ಸಂಚರಿಸಿದ ದೂರರ್ ಜಟಿ ಎಂದು ಸುಲಭವಾಗಿ ತಿಳಿಯುತ್ತದೆ. ಮಟ್ಟಸ ನೆಲದ ಮೇಲೆ ಮಾತ್ರ ಈ ಉಪಕರಣ ಫಲಿತಾಂಶವನ್ನು ನೀಡಬಲ್ಲುದು. ಹಳ್ಳ ತಿಟ್ಟುಗಳಿಂದ ಕೂಡಿದ ನೆಲದ ಮೇಲೆ, ಗಾಲಿಗಳು ಉರುಳದೆ ಸರಿಯುವ ಅಥವಾ ಜಾರುವ ಎಡೆಗಳಲ್ಲಿ ಓಡೋಮೀಟರಿನಿಂದ ದೊರೆಯುವ ಫಲಿತಾಂಶ ಸಮರ್ಪಕ ಫಲಿತಾಂಶಕ್ಕಿಂತ ಸಹಜವಾಗಿ ಕಡಿಮೆ ಇರುತ್ತದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: