ಒರೆಗಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒರೆಗಲ್ಲು ಎಂದರೆ ಅಮೂಲ್ಯ ಮಿಶ್ರ ಲೋಹಗಳನ್ನು ಪರೀಕ್ಷಿಸಲು ಬಳಸಲಾದ ಬಯಲುಗಲ್ಲು, ಸ್ಲೇಟು ಕಲ್ಲು, ಅಥವಾ ಲಿಡೈಟ್‍ನಂತಹ ಗಾಢಬಣ್ಣದ ಕಲ್ಲಿನ ಸಣ್ಣ ಫಲಕ. ಇದು ನವಿರಾದ ಕಣಗಳ ಮೇಲ್ಮೈಯನ್ನು ಹೊಂದಿರುತ್ತದೆ. ಇದರ ಮೇಲೆ ಮೃದು ಲೋಹಗಳು ಕಾಣುವಂಥ ಕುರುಹು ಬಿಡುತ್ತವೆ. ಒರೆಗಲ್ಲನ್ನು ಪ್ರಾಚೀನ ಗ್ರೀಸ್‍ನಲ್ಲಿ ಬಳಸಲಾಗುತ್ತಿತ್ತು. ಇದನ್ನು ಮೃದು ಲೋಹಗಳ ಶುದ್ಧತೆಯನ್ನು ಪರೀಕ್ಷಿಸಲು ಕ್ರಿ.ಪೂ. ೩೫೦೦ರ ಸುಮಾರಿನ ಸಿಂಧೂತಟದ ನಾಗರೀಕತೆಯಲ್ಲಿ ಕೂಡ ಬಳಸಲಾಗುತ್ತಿತ್ತು.[೧]

ಚಿನ್ನದಿಂದ ಒರೆಗಲ್ಲಿನ ಮೇಲೆ ರೇಖೆ ಎಳೆಯುವುದರಿಂದ ಕಾಣುವಂಥ ಕುರುಹು ಬಿಡುತ್ತದೆ. ಚಿನ್ನದ ವಿಭಿನ್ನ ಮಿಶ್ರಲೋಹಗಳು ಭಿನ್ನ ಬಣ್ಣಗಳನ್ನು ಹೊಂದಿರುವುದರಿಂದ ಅಜ್ಞಾತ ಮಾದರಿಯನ್ನು ಗೊತ್ತಿರುವ ಶುದ್ಧತೆಯ ಮಾದರಿಗಳೊಂದಿಗೆ ಹೋಲಿಸಬಹುದು. ಈ ವಿಧಾನವನ್ನು ಪ್ರಾಚೀನ ಕಾಲದಿಂದ ಬಳಸಲಾಗಿದೆ. ಆಧುನಿಕ ಕಾಲದಲ್ಲಿ, ಹೆಚ್ಚುವರಿ ಪರೀಕ್ಷೆಗಳನ್ನು ಮಾಡಬಹುದು. ನೈಟ್ರಿಕ ಆಮ್ಲ ಅಥವಾ ರಾಜೋದಕದ ನಿರ್ದಿಷ್ಟ ಸಾರತೆಗೆ ಒರೆಗಲ್ಲಿನ ಮೇಲಿನ ಕುರುಹು ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯಿಸುತ್ತದೆ. ಹೀಗೆ, ಚಿನ್ನದ ಗುಣಮಟ್ಟವನ್ನು ಗುರುತಿಸಲಾಗುತ್ತದೆ. ಹಾಗಾಗಿ, ೨೪ ಕ್ಯಾರಟ್ ಚಿನ್ನ ಪ್ರಭಾವಿತವಾಗುವುದಿಲ್ಲ, ಆದರೆ ೧೪ ಕ್ಯಾರಟ್ ಚಿನ್ನವು ರಾಸಾಯನಿಕ ಚಟುವಟಿಕೆಯನ್ನು ತೋರಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Bisht, R. S. (1982). "Excavations at Banawali: 1974-77". In Possehl, Gregory L. (ed.). Harappan Civilization: A Contemporary Perspective. New Delhi: Oxford and IBH Publishing Co. pp. 113–124.