ಒಪೇರಾ ಹೌಸ್, ಮುಂಬೈ

ವಿಕಿಪೀಡಿಯ ಇಂದ
Jump to navigation Jump to search
RoyalOperaHouse

ರಾಯಲ್ ಒಪೇರಾ ಹೌಸ್ ಎಂದು ಸಂಬೋಧಿಸಲಾಗುತ್ತಿದ್ದ,ಎಲ್ಲರ ಕನಸಿನ ರಂಗಮಂದಿರವಾಗಿದ್ದ, ಈಗಿನ ಮುಂಬಯಿಮಹಾನಗರದ ಒಪೇರಾ ಹೌಸ್ [೧] ಕಟ್ಟಡ,ಸನ್ ೧೯೦೯ ರಲ್ಲಿ ಕಟ್ಟಡದ ಶಂಕುಸ್ಥಾಪನೆ ಆಗಿತ್ತು. ಯೂರೋಪಿಯನ್ ಸೈನ್ಯದಲ್ಲಿ ಅಧಿಕಾರಿಗಳಾಗಿದ್ದವರು ತಮ್ಮ ಪರಿವಾರದ ಜೊತೆ, ಮತ್ತು ಗೆಳೆಯರ ಜೊತೆ, ಸಾಯಂಕಾಲದಲ್ಲಿ ನೃತ್ಯ, ನಾಟಕ, ಬ್ಯಾಲೆಗಳನ್ನು ವೀಕ್ಷಿಸುತ್ತಾ ಕಾಲಕಳೆಯಲು 'ಒಪೇರಾ ಹೌಸ್' ನ ನಿರ್ಮಾಣಕಾರ್ಯವನ್ನು ಕೈಗೊಂಡರು. ಆದರೆ ಉದ್ಘಾಟನೆಯ ಶಾಸ್ತ್ರವನ್ನು ೫ ನೆಯ ಕಿಂಗ್ ಜಾರ್ಜ್ ಚಕ್ರವರ್ತಿಯವರು ಸನ್ ೧೯೧೧ ರಲ್ಲಿ ಇನ್ನು ಕಟ್ಟಡ ನಿರ್ಮಾಣದ ಹಂತದಲ್ಲೇ ನೆರವೇರಿಸಿದರು. 'ಯುನೈಟೆಡ್ ಕಿಂಗ್ಡಮ್' ಹಾಗೂ 'ಭಾರತದ ಚಕ್ರವರ್ತಿ'ಯೆಂದು ಘೋಶಿಸಲ್ಪಟ್ಟು ಪಟ್ಟಾಭಿಶಕ್ತರಾದ ಅವರು 'ಡಿಲ್ಲಿ ದರ್ಬಾರ್' ನಲ್ಲಿ ಭಾಗವಹಿಸಲು ಬಂದಿದ್ದರು. ಬೊಂಬಾಯಿನಲ್ಲಿ ಗೇಟ್ ವೇ ಆಫ್ ಇಂಡಿಯ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದಲ್ಲದೆ, ರಾಯಲ್ ಒಪೇರಾ ಹೌಸ್ ನ ಉದ್ಘಾಟನೆಯನ್ನೂ ಅವರೇ ನೆರವೇರಿಸಿದರು. ೧೯೧೨ ರಲ್ಲಿ 'ಒಪೇರಾ ಹೌಸ್' ಪೂರ್ಣಗೊಂಡಿತು. ಮುಂದೆ ಹೆಚ್ಚುವರಿ ಸೇರಿಕೆಗಳು ನಿಧಾನವಾಗಿ ಬಂದು ಸೇರಿದವು.

'ಗೊಂಡಾಲ್ ರಾಜಪರಿವಾರ ಒಪೇರಾ ಹೌಸನ್ನು ಖರೀದಿಸಿತು[ಬದಲಾಯಿಸಿ]

೧೯೩೦ ರ ಮೊದಲಲ್ಲಿ ಆಗತಾನೇ ವಿಶ್ವದಲ್ಲಿ ಹೆಸರುವಾಸಿಯಾದ 'ಸಿನಿಮಾಟೊಗ್ರಫಿ ತಂತ್ರಜ್ಞಾನ'ಕ್ಕೆ 'ರಾಯಲ್ ಒಪೇರಾ ಹೌಸ್' ನ್ನು ಅಳವಡಿಸಲಾಯಿತು. 'ಫ್ಯಾಶನ್ ಶೋ'ಗಳಿಗೆ ಹೊಂದುವಂತೆ ಕೆಲವು ಮಾರ್ಪಾಡುಗಳನ್ನೂ ಅಳವಡಿಸಲಾಯಿತು. ಸನ್, ೧೯೯೧ ರ ಜನವರಿ ವರೆಗೂ ಈ ಸಭಾಗೃಹದಲ್ಲಿ ಚಲನಚಿತ್ರ ಪ್ರದರ್ಶನಗಳು ನಡೆಯುತ್ತಲೇ ಇದ್ದವು. ಆ ಬಳಿಕ ಭಾರತದ 'ಗೊಂಡಾಲ್ ರಾಜಪರಿವಾರ' ಖರೀದಿಸಿ ಈ ಭವನವನ್ನು '೯೯೯ ವರ್ಷಗಳ ಲೀಸ್ ಮೇರೆಗೆ ತನ್ನ ವಶ'ಕ್ಕೆ ತೆಗೆದುಕೊಂಡಿತು. ೧೯೯೩ ರಲ್ಲಿ 'ಕಾಥಿಯವಾಡ ಫ್ಯಾಶನ್ ಶೋ' ಕೊನೆಯದು. ಒಪೇರಾ ಹೌಸ್ ನ ಸುತ್ತುಮುತ್ತಲ ಜಿಲ್ಲೆಯನ್ನು ಇಂದಿಗೂ 'ಒಪೇರಾ ಹೌಸ್' ಯೆಂದೇ ಕರೆಯಲಾಗುತ್ತಿದೆ. ಆದರೆ, ೧೯೮೦ ರಲ್ಲಿ ಒಪೇರಾ ಹೌಸ್ ರಂಗಮಂದಿರವನ್ನು ಮುಚ್ಚಬೇಕಾದ ಪರಿಸ್ಥಿತಿ ಬಂತು. ಬಹಳವರ್ಷ ಅದನ್ನು ಮತ್ತೆ ಸಾರ್ವಜನಿಕರಿಗೆ ಬಿಡುಗಡೆಮಾಡಲು ಮತ್ತು ಅದರ ದುರಸ್ತಿಮಾಡಲು ಯಾರೂ ಗಮನ ಕೊಡಲಿಲ್ಲ. ಮಾರ್ಚ್, ೨೦೦೮ ರಲ್ಲಿ 'ಮಹಾರಾಷ್ಟ್ರ ಸರ್ಕಾರ ಹೆರಿಟೇಜ್ ಕಟ್ಟಡಗಳ ದುರಸ್ತಿ'ಗೆ ಮುಂದೆಬಂದು ಕೆಲಸ ಪ್ರಾರಂಭಿಸಿತು. ಮೊದಲು ಗ್ರೌಂಡ್ ಫ್ಲೋರ್ ನಲ್ಲಿ ಕೇವಲ ಒಂದು ಟೀ ಸ್ಟಾಲ್ ಹಾಗೂ ಕೆಲವು ಮಳಿಗೆಗಳಿದ್ದವು ಇದ್ದವು.

'ಮಾರಿಸ್ ಬ್ಯಾಂಡ್ಮನ್' ಮತ್ತು 'ಜೆಹಾಂಗೀರ್ ಫ್ರಾಮ್ ಜಿ ಕರಕ'ರ ಅದ್ವಿತೀಯ ಕೊಡುಗೆ[ಬದಲಾಯಿಸಿ]

ಸನ್ ೧೯೦೮ ರಲ್ಲಿ 'ಬೊಂಬಾಯಿನ ಕೆನೆಡಿ' ಮತ್ತು 'ಸ್ಯಾಂಡ್ ಹರ್ಸ್ಟ್ ಸೇತುವೆ'ಯ ಸಮೀಪದಲ್ಲಿ 'ಕಲ್ಕತ್ತಾ ನಗರ'ದಿಂದ ಆಗಮಿಸಿದ್ದ ಮಾರಿಸ್ ಬ್ಯಾಂಡ್ಮನ್ ಹಾಗೂ ಅವರ ಗೆಳೆಯ, ಫ್ರಾಮ್ ಜಿ ಕರಕ ರವರಿಂದ 'ಯೂರೋಪಿಯನ್ ಹಾಗೂ ಭಾರತೀಯ ವಾಸ್ತುಶಿಲ್ಪದ ಪ್ರತಿರೂಪ'ವಾಗಿ 'ಒಪೇರಾ ಹೌಸ್ ಭವನ'ವನ್ನು ನಿರ್ಮಿಸಲಾಯಿತು. 'baroque ಶೈಲಿ'ಯೆಂದೇ ಸುಪ್ರಸಿದ್ಧವಾದ ಶೈಲಿಯಲ್ಲಿ ನಿರ್ಮಿಸಲಾದ ಈ ಭವನವನ್ನು ಇಟಲಿಯಿಂದ ತಂದ ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿತ್ತು.

ಬಾಗ್ದಾದ್ ನ ಅತಿ-ಹಣವಂತ ವರ್ತಕ,'ಡೇವಿಡ್ ಸಸೂನ್' ರವರ ಕೊಡುಗೆ[ಬದಲಾಯಿಸಿ]

ಆಗಿನ ಕಲದ ಸುಪ್ರಸಿದ್ಧ ಬಾಗ್ದಾದ್ ವರ್ತಕ, ಡೇವಿಡ್ ಸಸೂನ್ ಪರಿವಾರದವರ ಕೊಡುಗೆ. ಇದನ್ನು ಅವರ ನಿವಾಸದಿಂದ ತಂದು ದಿವಾನ್ ಖಾನೆಗೆ ಅಳವಡಿಸಲಾಗಿದೆ. ತುಟ್ಟತುದಿಯ ಬಾಲಕಿಯ ವಿಗ್ರಹ ಒಂದು ಜೊತೆ ’ಸನ್ಸ್ ಸುಸುಸಿ'ಯೆಂದು ಹೆಸರಾದ ಭವ್ಯ 'ಶ್ಯಾಂಡ್ಲಿಯರ್' ಜೊತೆಗೂಡಿದೆ. ಪ್ರಮುಖ ದ್ವಾರದಲ್ಲಿ ಗುಮ್ಮಟ ೮ ಆಕೃತಿಗಳಿಂದ ಸಜಾಯಿಸಲಾಗಿದೆ. ಅವೆಲ್ಲಾ ಒಂದೊಂದೂ, ಹೆಸರಾಂತ ಕವಿಗಳು, ನಾಟಕಕಾರರು, ಕಾದಂಬರಿಕಾರರು, ಕಲೆ-ಸಾಹಿತ್ಯಗಳಲ್ಲಿ ನಿಷ್ಣಾತರಾದವರನ್ನು ಪ್ರತಿನಿಧಿಸುತ್ತದೆ. ಒಳಭಾಗದ ಮಳಿಗೆಗಳು, ಆರ್ಕೆಸ್ಟ್ರಾ ಸ್ಟಾಲ್ ಗಳನ್ನು ಒಳಗೊಂಡಿದ್ದು ಕುಳಿತುಕೊಂಡು ಸಂಗೀತ ಆಲಿಸಲು ಬೆತ್ತದ ಕುರ್ಚಿಗಳನ್ನು ಅಳವಡಿಸಲಾಗಿದೆ. ಸಭಾಂಗಣದ ಒಳಭಾಗದಲ್ಲಿ ೨೬ ಜೊತೆ ಬಾಕ್ಸ್ ಗಳಿವೆ. ಅವುಗಳಿಗೆ ಅರಾಮವಾಗಿ ಕಾಲು ಚಾಚಲು ಇಲ್ಲವೇ ಮಲಗಲು ಅನುಕುಲವಾಗುವಂತಹ ಮೃದುವಾದ ಮಕಮಲ್ಲಿನ ಕುಶನ್ನಿನ ಸೋಫಾ. ಸಭಾಂಗಣದಲ್ಲಿ 'ಡ್ರೆಸ್ ಸರ್ಕಲ್' ಹಾಗೂ 'ಸ್ಟಾಲ್' ಗಳಲ್ಲಿ ಕುಳಿತವರಿಗೆ ಎಲ್ಲರಿಗೂ ಚೆನ್ನಾಗಿಕಾಣುವಂತೆ ಸಂರಚಿಸಲಾಗಿದೆ. ಶ್ರವಣ ಮಾಧ್ಯಮ ಅತ್ಯಂತ ಪರಿಣಾಮಕಾರಿಯಗಿದ್ದು ಸೀಲಿಂಗ್ ನ ಕಡೆಯಿಂದ ಗ್ಯಾಲರಿಯಲ್ಲಿ ಆಸೀನರಾಗಿರುವ ಪ್ರೇಕ್ಷಕರಿಗೆ ಪ್ರತಿಶಬ್ದವೂ,ವಾದ್ಯ-ಸಂಗೀತವೂ ಸ್ಪಷ್ಟವಾಗಿ ಕೇಳಿಸುವಂತೆ ನಿಯೋಜಿಸಲಾಗಿದೆ. ಒಳ ದ್ವಾರದ ತನಕ ಮೊದಲು 'ಕುದುರೆಕೋಚ್ ಗಾಡಿ'ಗಳು ನೇರವಾಗಿ ಒಳಗೆ ಬರುವಂತೆ ಸಂರಚಿಸಲಾಗಿತ್ತು.

ಉದ್ಘಾಟನೆ ೧೯೧೨ ರಲ್ಲೇ ಶುರುವಾಯಿತು[ಬದಲಾಯಿಸಿ]

೧೯೧೨ ರಲ್ಲಿ ಉದ್ಘಾಟನೆಗೊಂಡ ರಾಯಲ್ ಅಪೇರಾ ಹೌಸ್ ಭಾರತದಲ್ಲೇ ಪ್ರಪ್ರಥಮವಾಗಿ ನಿರ್ಮಿಸಲ್ಪಟ್ಟ ಬೊಂಬಾಯಿನ ಹೆಮ್ಮೆಯ ಸಂಕೇತವಾಗಿತ್ತು. ಮನೋರಂಜನೆಯ ಶುರುವಾದದ್ದು ಅಮೆರಿಕದ ಪ್ರಖ್ಯಾತ ಜಾದೂಗಾರ, ಮಾಂತ್ರಿಕ ರೇಮಾಂಡ್ ರವರಿಂದ. ಅನಂತರ ಹಲವಾರು ಹಾಲಿವುಡ್ ಚಿತ್ರಗಳ ಪ್ರೀಮಿಯರ್ ಶೋಗಳು ಪ್ರದರ್ಶಿಸಲ್ಪಟ್ಟವು. ಇದಲ್ಲದೆ ನೈಜ ರಂಗಭೂಮಿ ಪ್ರದರ್ಶನಗಳಲ್ಲಿ ಹೆಸರು ಮಾಡಿದ, ಪಥೆ ಎಂಬ ಫ್ರೆಂಚ್ ಪ್ರದರ್ಶನ ಪ್ರಮುಖವಾದದ್ದು. ಹಿಂದಿ ಚಲನ ಚಿತ್ರರಂಗದ ಸುಪ್ರಸಿದ್ಧ ನಟ,ಪ್ರಿಥ್ವಿರಾಜ್ ಕಪೂರ್, ಮರಾಠಿ ರಂಗಭೂಮಿಯ ದಿಗ್ಗಜ, ಶಾಸ್ತ್ರೀಯ ಸಂಗೀತಕಾರ, ಬಾಲ ಗಂಧರ್ವ, ಮೇರು ನಟ, ದೀನಾನಾಥ್ ಮಂಗೇಶ್ಕರ್, ಮೊದಲಾದ ಹೆಸರಾಂತ ಕಲಾವಿದರು ತಮ್ಮ ಕಲೆಯನ್ನು ಇಲ್ಲಿ ಪ್ರದರ್ಶಿಸಿದರು. ಹಿಂದಿ ಹಾಗೂ ಮರಾಠಿ ಚಿತ್ರರಂಗದ ಕೋಗಿಲೆಯೆಂದೇ ಹೆಸರಾಂತ,ಲತಾ ಮಂಗೇಶ್ಕರ್ರವರು, ತಮ್ಮ ಮೊದಲ ಹಾಡುಗಾರಿಕೆಯ ಕಾರ್ಯಕ್ರಮ ಆದದ್ದು ಇಲ್ಲೇ.

ಸಂಗೀತ ಕಾಥಿಯವಾಡ್ ಕಾರ್ಯಕ್ರಮ[ಬದಲಾಯಿಸಿ]

೧೯೯೩ ರಲ್ಲಿ 'ಮಾಜಿ ಗೊಂಡಾಲ್ ಮಹಾರಾಜ', ಶ್ರೀ ಜ್ಯೋತೀಂದ್ರ ಸಿಂಗ್(ಒಪೇರಾ ಹೌಸ್ ನ ಒಡೆಯರು) ಸಂಬಂಧಿ, ಸಂಗೀತ ಕಾಥಿಯವಾಡ್ ಆಯೋಜಿಸಲ್ಪಟ್ಟ ಕಾರ್ಯಕ್ರಮ ಒಂದು ವಿಕ್ರಮವನ್ನೇ ಸ್ಥಾಪಿಸಿತು. ಇದಾದ ಮೇಲೆ ಅಲ್ಲಿ ನಿಧಾನವಾಗಿ ಶೋಗಳು ಸ್ಥಗಿತವಾಗಿ ಕೊನೆಗೆ ನಿಂತೆ ಹೋಗುವ ಪ್ರಮೇಯ ಒದಗಿಬಂತು.

ಅಪೇರಾ ಹೌಸ್ ಹೆರಿಟೇಜ್ ಭವನವಾಗಿ ಪರಿಗಣಿಸಲ್ಪಟ್ಟಿತು[ಬದಲಾಯಿಸಿ]

ಮೇ ೨೦೦೧ ರಲ್ಲಿ ಒಪೇರಾ ಹೌಸ್ ಕಟ್ಟಡ, ಹೆರಿಟೇಜ್ ಸಾಲಿನಲ್ಲಿ ಬರುವುದೆಂದು ಗೊತ್ತಾಯಿತು. ಅದನ್ನು ಹಿಂದೆ ಹೇಗಿತ್ತೋ ಹಾಗೆಯೇ ದುರಸ್ತಿಮಾಡಬೇಕು. ಪುನರ್ಸ್ಥಾಪಿಸುವ ಕಾರ್ಯದಲ್ಲಿ, ಯಾವ ಬದಲಾವಣೆಯನ್ನೂ ಮಾಡುವಂತಿಲ್ಲ. ಥಿಯೇಟರ್ ಅಗಿಯೇ ಬಳಸಬೇಕು. ಇದಕ್ಕೆಲಾ ಹಣದ ಮುಗ್ಗಟ್ಟಿತ್ತು. ಶುರುವಿನಿಂದ ಅದೇ ಆದ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲಾಗಿತ್ತು. ಮಾಲೀಕತ್ವದಲ್ಲಿ ಬದಲಾವಣೆ ಸಲ್ಲದು. ಧನ ಸಂಗ್ರಹಣೆಗೆ ಸ್ವಲ್ಪ ಭಾಗವನ್ನು ವಾಣಿಜ್ಯ ಸಂಸ್ಥೆಗಳಿಗೆ ಜಾಗ ಗೊಂಡಾಲ್ ನ ಮಾಲೀಕರಾದ ಮಹಾರಾಜ ವಿಕ್ರಮ್ ಸಿಂಗ್ ಜಿ ಭೋಜ್ ರಾಜಿಯವರ ಮನ ಒಪ್ಪಿಸಿ ಮಹಾರಾಷ್ಟ್ರ ಸರಕಾರ ಮೊದಲಿನತರಹ ಶೋಭೆಯನ್ನು ಕಾಯ್ದಿಡಲು ಒಪ್ಪಿಗೆನೀಡಿತು. 'ಮುಂಬಯಿ ಅರ್ಬನ್ ಹೆರಿಟೇಜ್ ಕನ್ಸರ್ವೇಶನ್ ಸಮಿತಿ'ಯನ್ನು(MUHCC) ಸಮಾಲೋಚಿಸಿ ತಮ್ಮ ವಶಕ್ಕೆ ಪಡೆದು, ಕಾನೂನುರೀತ್ಯ ಗ್ರೇಡ್ ೨ ಹೆರಿಟೇಜ್ ಸ್ಟ್ರಕ್ಛರ್ ಪಟ್ಟಿಯಲ್ಲಿ ಸೇರಿಸಲು, ಮೇ ೨೦೦೮ ರಲ್ಲಿ ಸುಪ್ರಸಿದ್ಧ ಕಟ್ಟಡ ನಿರ್ಮಾಣಕಾರ ಅಭಾ ನಾರಾಯನ್ ಲಂಬಾ ಹಾಗೂ ಸಹೋದ್ಯೋಗಿಗಳಿಗೆ ಮೊದಲಿನ ರೀತಿ ಕಾಯ್ದುಕೊಂಡು ಬರುವ ಯೋಜನೆಗೆ ಒಪ್ಪಿಸಿದರು. ಎಲ್ಲಕ್ಕಿಂತ ಮೊದಲು ಬಾಲ್ಕನಿ ಹಾಗೂ ಛಾವಣಿಯ ದುರಸ್ತಿ. ಹೀಗೆ ಮೊದಲಿನ ರಾಯಲ್ ಒಪೇರಾ ಹೌಸನ ಶೋಭೆಯನ್ನು ಮತ್ತೆ ತರುವಲ್ಲಿ 'ಗೊಂಡಾಲ್ ಮಹಾರಾಜ'ರು ಬಹಳವಾಗಿ ಶ್ರಮಿಸಿದರು. ಅವರು ತಮ್ಮ ಈ ಕಾರ್ಯದಲ್ಲಿ ನಂಬುಗೆ ಹೊಂದಿದ್ದಾರೆ.[೨]

ಉಲ್ಲೇಖಗಳು[ಬದಲಾಯಿಸಿ]

  1. 'ಅಪೇರಾ ಹೌಸ್ ಮುಂಬಯಿನ ಹೆರಿಟೇಜ್ ಕಟ್ಟಡಗಳಲ್ಲೊಂದು'
  2. Royal Opera House to get back its glory