ಐ.ಎನ್.ಎಸ್ ಐರಾವತ್ (ಎಲ್೨೪)
ಗೋಚರ
ವೃತ್ತಿಜೀವನ | ಭಾರತೀಯ ನೌಕಾ ಸೇನೆ |
---|---|
ಹೆಸರು: | ಐ.ಎನ್.ಎಸ್ ಐರಾವತ್ |
Ordered: | 2003 |
ನಿರ್ಮಾತೃ: | ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ |
ನಿರ್ಮಾಣಾರಂಭ: | ೨೦೦೪ |
ಬಿಡುಗಡೆ: | ಮಾರ್ಚ್ ೨೭, ೨೦೦೬ |
ಕಾರ್ಯಾರಂಭ: | ಮೇ ೧೯, ೨೦೦೯ |
ಸ್ಥಿತಿ: | ಕಾರ್ಯನಿರತವಾಗಿದೆ |
ಸಾಮಾನ್ಯ ವಿವರಗಳು | |
ವರ್ಗ ಮತ್ತು ನಮೂನೆ: | ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ನೌಕೆಗಳು (ಬೃಹತ್) |
ನೋದನ: | Kirloskar PA6 STC engines |
ಪೂರಕ: |
೧೪೫ ನೌಕಾ ಸಿಬ್ಬಂದಿಗಳು ಮತ್ತು ೧೧ ಮೇಲಾಧಿಕಾರಿಗಳು, ೫೦೦ ಟ್ರೂಪ್'ಗಳು (ನೌಕಾ ಸಿಬ್ಬಂದಿಯನ್ನು ಹೊರತುಪಡಿಸಿ), ೧೧ ಪ್ರಮುಖ ಯುದ್ಧ ಟ್ಯಾಂಕ್'ಗಳು, ೧೦ ಸೇನಾ ಟ್ಯಾಂಕ್'ಗಳು |
ಹೊತ್ತೊಯ್ಯುವ ವಿಮಾನಗಳು: | 1 x ಹೆಚ್.ಎ.ಎಲ್ ಧ್ರುವ್/ಸೀ ಕಿಂಗ್ |
ಐ.ಎನ್.ಎಸ್ ಐರಾವತ್ ನೌಕೆಯು, ಭಾರತೀಯ ನೌಕಾಸೇನೆಯ ಯುದ್ಧ ಟ್ಯಾಂಕ್'ಗಳನ್ನು ಭೂಸ್ಪರ್ಶಿಸುವ ಶಾರ್ದೂಲ ವರ್ಗದ ಬೃಹತ್ ನೌಕೆಗಳ ಶ್ರೇಣಿಯಲ್ಲಿ, ತೃತೀಯ ನೌಕೆಯಾಗಿದೆ. ಸಕಲ ಆನೆಗಳ ರಾಜನಾದ ಐರಾವತವು ದೇವರಾಜ ಇಂದ್ರನ ವಾಹನವಾಗಿದೆ. ಭಾರತೀಯ ನೌಕಾಸೇನೆಯಿಂದ ಕಾರ್ಯಾರಂಭಕ್ಕೊಳಪಟ್ಟ ೧೩೨ನೇ ನೌಕೆಯಾಗಿರುವ ಇದು ಕಲ್ಕತ್ತಾದಲ್ಲಿನ ಗಾರ್ಡನ್ ರೀಚ್ ಶಿಪ್-ಬಿಲ್ಡರ್ಸ್ ಮತ್ತು ಇಂಜಿನಿಯರ್ಸ್ರವರಿಂದ ನಿರ್ಮಿತವಾಗಿದೆ.