ಐ.ಎನ್.ಎಸ್.ವಿರಾಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುದ್ಧ ವಿಮಾನಗಳನ್ನು ಹೊತ್ತೂಯ್ಯುವ ಭಾರತೀಯ ನೌಕಾ ಸೇನೆಯಲ್ಲಿರುವ ಎರಡನೇ ದೊಡ್ಡ ವಿಮಾನ ವಾಹಕ ಹಡಗು ‘ಐ.ಎನ್‌.ಎಸ್‌. ವಿರಾಟ್‌’ ತನ್ನ ಕಾರ್ಯಾಚರಣೆಯನ್ನು 2016ರಲ್ಲಿ ಸ್ಥಗಿತಗೊಳಿಸಿದ ಅನಂತರ ಅದನ್ನು ಮಂಗಳೂರು ಕರಾವಳಿ ತೀರದಲ್ಲಿ “ಏರ್‌ಕ್ರಾಫ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯ’ ಆಗಿ ಪರಿವರ್ತಿಸುವ ಸಾಧ್ಯತೆ ದಟ್ಟವಾಗಿದೆ. ಭಾರತೀಯ ನೌಕಾಪಡೆಯ ಕಾರವಾರ ಸೀಬರ್ಡ್‌ ರೇರ್‌ ಅಡ್ಮಿರಲ್‌ ಎಸ್‌.ಎನ್‌. ಘೋರ್ಮಡೆ ಅವರು ಜು. 8ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರಿಗೆ ಪತ್ರ ಬರೆದು, 2016ರಲ್ಲಿ ಸೇವೆ ಸ್ಥಗಿತಗೊಳಿಸುವ ಐ.ಎನ್‌.ಎಸ್‌. ವಿರಾಟ್‌ ನೌಕೆಯನ್ನು “ಏರ್‌ಕ್ರಾಫ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯ’ ಆಗಿ ಪರಿವರ್ತಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕೆ ಕರ್ನಾಟಕದಲ್ಲಿ ಅವಕಾಶ ಇರುವುದಾದರೆ, ಸಾಧ್ಯತಾ ವರದಿ ಸಲ್ಲಿಸುವಂತೆ ತಿಳಿಸಿದ್ದರು. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಪತ್ರ ಬರೆದು ಸಾಧ್ಯತೆಗಳ ಕುರಿತು ಕೆಲವು ವಿವರಗಳನ್ನು ಕೋರಿ ಪತ್ರ ಬರೆದಿದ್ದರು. ಇದರಂತೆ ದ.ಕ. ಜಿಲ್ಲಾಧಿಕಾರಿ ಜು. 14ರಂದು ಸರಕಾರಕ್ಕೆ ಸಕಾರಾತ್ಮಕ ಉತ್ತರ ನೀಡಿದ್ದು, ಮಂಗಳೂರಿನಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗುವುದಾದರೆ ಅದಕ್ಕೆ ಸರ್ವ ವ್ಯವಸ್ಥೆ ಹಾಗೂ ಪೂರಕ ಪ್ರಕ್ರಿಯೆ ಕೈಗೊಳ್ಳಲು ಆಸಕ್ತಿ ಇರುವುದಾಗಿ ತಿಳಿಸಿದ್ದಾರೆ. ನೇತ್ರಾವತಿ ಅಥವಾ ಗುರುಪುರ ನದಿಯಲ್ಲಿ ಮ್ಯೂಸಿಯಂ ಐ.ಎನ್‌.ಎಸ್‌. ವಿರಾಟ್‌ “ಏರ್‌ಕ್ರಾಫ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯ’ಕ್ಕೆ ಮಂಗಳೂರಿಧಿನಲ್ಲಿ ಅವಕಾಶ ನೀಡಿದರೆ, ನಗರದ ನೇತ್ರಾವತಿ ನದಿ, ಗುರುಪುರ ನದಿ ಅಥವಾ ಸಮುದ್ರ ತಡಿಯ ನಿರ್ದಿಷ್ಟ ಸ್ಥಳದಲ್ಲಿ ಅವಕಾಶ ನೀಡಲಾಗುವುದು. ಸುಲ್ತಾನ್‌ಬತ್ತೇರಿ ಅಥವಾ ಮಂಗಳೂರಿನ ಇತರ ಭಾಗದಲ್ಲಿಯೂ ಅವಕಾಶ ನೀಡಲು ಸಿದ್ಧರಿದ್ದೇವೆ. ಇದಕ್ಕಾಗಿ ಸುಮಾರು 10,000 ಚದರ ಅಡಿ ಸ್ಥಳಾವಕಾಶ ನೀಡಲಾಗುವುದು. ಮ್ಯೂಸಿಯಂ ಮಾಡಿದರೆ ಅದರ ಉಸ್ತುವಾರಿಯನ್ನು ಮನಪಾ, ಪ್ರವಾಸೋದ್ಯಮ ಇಲಾಖೆ ಅಥವಾ ಪುರಾತತ್ವ ಇಲಾಖೆ ವತಿಯಿಂದ ನೋಡಿಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿರುವುದಾಗಿ ಜಿಲ್ಲಾಧಿಕಾರಿ ಸುದ್ದಿಗಾರರಿಗೆ ವಿವರಿಸಿದರು. ಕರಾವಳಿ ತೀರ ಅತ್ಯಂತ ಸೂಕ್ತ ಕರಾವಳಿ ತೀರ ಪ್ರದೇಶ, ವಿಮಾನ ಸೇವೆ, ರೈಲು, ಬಂದರು ಸೇರಿದಂತೆ ಎಲ್ಲ ರೀತಿಯಲ್ಲೂ ಸಂಪರ್ಕ ವ್ಯವಸ್ಥೆ ಹೊಂದಿರುವ ಮಂಗಳೂರಿನಲ್ಲಿ ಈ ಸೇವೆ ಆರಂಭಿಸುವುದು ಅತ್ಯಂತ ಸೂಕ್ತ. ಹಲವು ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ಬಂದರು ದೇಶ-ವಿದೇಶದಲ್ಲೂ ಮಾನ್ಯತೆ ಹೊಂದಿದೆ. ಇಂತಹ ಕರಾವಳಿ ಭಾಗಧಿದಲ್ಲಿ “ಏರ್‌ಕ್ರಾಫ್ಟ್ ಕ್ಯಾರಿಯರ್‌ ವಸ್ತು ಸಂಗ್ರಹಾಲಯ’ ನಿರ್ಮಾಣವಾದರೆ, ಕರಾವಳಿಯ ಯುವಕರಿಗೂ ಸ್ಫೂರ್ತಿ, ಹುರುಪು ದೊರೆಯಲಿದೆ ಎಂದು ಸರಕಾರಕ್ಕೆ ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು. 30 ವಿಮಾನಗಳನ್ನು ಹೊತ್ತೂಯ್ಯುವ ವಿರಾಟ್‌ ಇಂಗ್ಲೆಂಡಿನ ವಿಕ್ಕರ್ಸ್‌ ಆರ್ಮ್ಸ್ಟ್ರಾಂಗ್‌ ಹಡಗು ನಿರ್ಮಾಣ ಕಂಪೆನಿಯಿಂದ 1944ರಲ್ಲಿ ವಿರಾಟ್‌ ನಿರ್ಮಾಣವಾಗಿ, 1959ರಲ್ಲಿ ಇಂಗ್ಲೆಂಡ್‌ ನೌಕಾದಳಕ್ಕೆ ಇದು ಹಸ್ತಾಂತರವಾಯಿತು. 1985ರಲ್ಲಿ ಅಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. 1986ರಲ್ಲಿ ಭಾರತದಿಂದ ಇದರ ಖರೀದಿಯಾಗಿ, 1997ರಲ್ಲಿ ಸಂಪೂರ್ಣ ನವೀಕೃತಗೊಂಡು ಇದು ಕಾರ್ಯಾಚರಣೆಗೆ ಇಳಿದಿತ್ತು. ಐದು ಬಾರಿ ಈ ನೌಕೆ ದುರಸ್ತಿ ಕಂಡಿತ್ತು. ಪ್ರಸ್ತುತ ಇದು ಮುಂಬಯಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಬರಾಕ್‌ ಮಿಸೈಲ್‌ ಉಡಾವಣಾ ವ್ಯವಸ್ಥೆ, ಎರಡು ವಿಮಾನ ನಿರೋಧಿಧಕ ಬೊಫೋರ್ಸ್‌ ತೋಪು, ಎ.ಕೆ. 230 ಗನ್‌ಗಳು ಇದರಲ್ಲಿದ್ದು, 30 ವಿಮಾನಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಭಾರತದ ನೌಕಾಪಡೆಯ ವಿಮಾನವಾಹಕ ನೌಕೆಯಾಗಿ ಐಎನ್‌ಎಸ್‌ ವಿಕ್ರಮಾದಿತ್ಯ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಹಳೆಯದಾದ ವಿರಾಟ್‌ ತನ್ನ ಸೇವೆಯಿಂದ 2016ರಲ್ಲಿ ನಿವೃತ್ತಿ ಪಡೆಯಲಿದೆ. 56 ವರ್ಷಗಳ ದಾಖಲಾರ್ಹ ಸೇವೆ ಸಲ್ಲಿಸಿದ ವಿರಾಟ್‌ ನೌಕೆಗೆ ಸೂಕ್ತ ಗೌರವ ಕಲ್ಪಿಸುವ ಹಿನ್ನೆಲೆಯಲ್ಲಿ ಈ ನೌಕೆಯನ್ನು ಮ್ಯೂಸಿಯಂ ಆಗಿ ನೆಲೆಗೊಳಿಸಲು ಸಿದ್ಧತೆ ನಡೆದಿದೆ. ಕರ್ನಾಟಕದ ಮಂಗಳೂರಿನಿಂದ ಸಲ್ಲಿಕೆಯಾದ ಪ್ರಸ್ತಾವನೆಯಂತೆ, ಆಂಧ್ರಪ್ರದೇಶದಿಂದಲೂ ಇದೇ ರೀತಿಯ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ರಕ್ಷಣಾ ಸಚಿವಾಲಯದಿಂದ ಅಂತಿಮ ನಿರ್ಣಯದ ಬಳಿಕ ಸ್ಥಳ ನಿರ್ಧಾರವಾಗಲಿದೆ.