ವಿಷಯಕ್ಕೆ ಹೋಗು

ಐವಾನ್ ಫ್ರೇನಾರ್ ಗೂಂಡೂಲಿಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐವಾನ್ ಫ್ರೇನಾರ್ ಗೂಂಡೂಲಿಚ್ (1588-1638) ಹದಿನೇಳನೆಯ ಶತಮಾನದ ಆದಿಯಲ್ಲಿದ್ದ ಸರ್ಬೋ-ಕ್ರೋಟ್ ಕವಿ. ಇತ ರೆಗೊಸಾ ಗಣರಾಜ್ಯದ ಅತ್ಯಂತ ಪ್ರಸಿದ್ಧ ಬ್ಯಾರೋಕ್ ಕವಿಯಾಗಿದ್ದ.[][][]

ಜೀವನ, ಸಾಧನೆಗಳು

[ಬದಲಾಯಿಸಿ]

ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈತ ಶ್ರೇಷ್ಠಮಟ್ಟದ ಗ್ರೀಕ್ ಮತ್ತು ಲ್ಯಾಟಿನ್ ಭಾಷಾ ಸಾಹಿತ್ಯಗಳ ಜ್ಞಾನವನ್ನು ಪಡೆದಿದ್ದ. ತನ್ನ ಸ್ವಂತ ಊರಾದ ರೆಗೊಸಾದಲ್ಲಿ ಉನ್ನತ ಅಧಿಕಾರ ಸ್ಥಾನಗಳನ್ನು ಅಲಂಕರಿಸಿದ್ದ.

ಈತನ ಕಾವ್ಯರಚನೆ ಕ್ರೈಸ್ತಧರ್ಮವನ್ನು ಕುರಿತದ್ದಾಗಿದೆ. 1621ರಲ್ಲಿ ಹಳೆಯ ಒಡಂಬಡಿಕೆಯಲ್ಲಿರುವ ಸ್ತುತಿಪದ್ಯವನ್ನು ಅವಲಂಬಿಸಿ ದ ಪೆನಿಟೆನ್ಷಿಯಲ್ ಸಾಂಗ್ ಆಫ್ ಕಿಂಗ್ ಡೇವಿಡ್ (ದೊರೆ ಡೇವಿಡನ ಪಶ್ಚಾತ್ತಾಪ ಪದ) ಎಂಬ ಕವನವನ್ನು ಬರೆದ. 1622ರಲ್ಲಿ ದ ಟಿಯರ್ಸ್ ಆಫ್ ದ ಪ್ರಾಡಿಗಲ್ ಸನ್ (ದುಂದುಗಾರ ಮಗನ ಕಂಬನಿ) ಎಂಬ ಕೃತಿ ಪ್ರಕಟಗೊಂಡಿತು. ಈ ಕವಿ ರಚಿಸಿದ ಆಸ್ಮಾನ್ ಎಂಬ ಮಹಾಕಾವ್ಯ ಈತನ ಅತ್ಯುತ್ತಮ ಕೃತಿ ಎನಿಸಿದೆ. ಇದು ಇಪ್ಪತ್ತು ಸರ್ಗಗಳನ್ನು ಒಳಗೊಂಡಿರುವ ಕಾವ್ಯ. ಇದರ 14 ಮತ್ತು 15ನೆಯ ಸರ್ಗಗಳು ಈಗ ಲಭ್ಯವಿಲ್ಲ. ಈ ಮಹಾಕಾವ್ಯ ತುರ್ಕಿಯ ದೊರೆ ಆಸ್ಮಾನ್ ಮತ್ತು ಆತನ ಆಡಳಿತ ಕಾಲದಲ್ಲಿ ನಡೆದ ಕ್ರೈಸ್ತರ ಹಾಗೂ ಮಹಮ್ಮದೀಯರ ಕಾಳಗವನ್ನು ಕುರಿತದ್ದಾಗಿದೆ. ಇದು ಇಟಾಲಿಯನ್ ಮಹಾಕವಿ ಟಾಸೊನ ಮಹಾಕಾವ್ಯವನ್ನು ಅನುಸರಣೆ ಮಾಡಿ ರಚಿತವಾದ ಕೃತಿ.

ಉಲ್ಲೇಖಗಳು

[ಬದಲಾಯಿಸಿ]
  1. Gordana P. Crnković, Ivan Gundulić - Croatian author; Encyclopædia Britannica online.
  2. Sebok, Marcell (2017-06-30). Practices of Coexistence: Constructions of the Other in Early Modern Perceptions (in ಇಂಗ್ಲಿಷ್). Central European University Press. ISBN 9789633861493.
  3. Dvornik, Francis (1962). The Slavs in European history and civilization (in ಇಂಗ್ಲಿಷ್). Rutgers University Press. Ivan Gundulic Ragusan poet.