ವಿಷಯಕ್ಕೆ ಹೋಗು

ಐತಲ್ ಖೋಸ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐತಲ್ ಖೋಸ್ಲಾ
Beauty pageant titleholder
Bornಐತಾಲ್ ಖೋಸ್ಲಾ
(1993-12-03) 3 December 1993 (ವಯಸ್ಸು 31)
ಚಂಡೀಗಢ, ಭಾರತ
Educationಇಂಗ್ಲಿಷ್ (Honours)ನಲ್ಲಿ ಪದವಿ (ಪಂಜಾಬ್ ವಿಶ್ವವಿದ್ಯಾಲಯ)
ಐಷಾರಾಮಿ ನಿರ್ವಹಣೆ (ಲಂಡನ್ ಸ್ಕೂಲ್ ಆಫ್ ಫ್ಯಾಷನ್)
Alma materಸೇಂಟ್ ಸ್ಟೀಫನ್ಸ್ ಶಾಲೆ, ಚಂಡೀಗಢ
ಎಂ. ಸಿ. ಎಂ. ಡಿಎವಿ ಮಹಿಳಾ ಕಾಲೇಜು
Years active2015 - present
Height170 cm (5 ft 7 in)
Title(s)ಮಿಸ್ ಅರ್ಥ್ ಇಂಡಿಯಾ 2015
ಪಲಾಶ್ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆ 2015
Major
competition(s)
ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ 2015
(ವಿಜೇತ)
(ಮಿಸ್ ಇಂಡಿಯಾ ಅರ್ಥ್ 2015) (ಮಿಸ್ ಇಂಟರ್ನೆಟ್)
(ಮಿಸ್ ಇಕೋ-ಟೂರಿಸಂ)
(ಮಿಸ್ ಪ್ರೋಡಕ್ಟಿವ್ ಬ್ಯೂಟಿ)
ಪಲಾಶ್ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆ 2015 (ವಿಜೇತ) ಪಲಾಶ್ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆ ಚಂಡೀಗಢ
(1ನೇ ರನ್ನರ್ ಅಪ್)
ಫೆಮಿನಾ ಮಿಸ್ ಇಂಡಿಯಾ ದೆಹಲಿ 2015]
(ಅಂತಿಮ)
ಮಿಸ್ ಅರ್ಥ್ 2015
"(ಅನ್ಪ್ಲೇಸ್ಡ್)"

ಐತಾಲ್ ಖೋಸ್ಲಾ ಒಬ್ಬಾಕೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಭಾರತೀಯ ರೂಪದರ್ಶಿ. ಅವರು ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ ಕಿರೀಟವನ್ನು ಪಡೆದವರು ಮತ್ತು ವಿಯೆನ್ನಾ, ಆಸ್ಟ್ರಿಯಾ ನಲ್ಲಿ ನಡೆದ ಮಿಸ್ ಅರ್ಥ್ 2015 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಐತಾಳ್ ಚಂಡೀಗಢ ವ್ಯಾಪಾರ ಮತ್ತು ರಾಜಕೀಯ ಕುಟುಂಬದಲ್ಲಿ ಜನಿಸಿದರು. ಅವಳು ಸೇಂಟ್ ಸ್ಟೀಫನ್ಸ್ ಸ್ಕೂಲ್, ಚಂಡೀಗಢ ಮತ್ತು ನಂತರ ಹೆಚ್ಚಿನ ಅಧ್ಯಯನಕ್ಕಾಗಿ ಮಹಿಳೆಯರ MCM DAV ಕಾಲೇಜಿನಲ್ಲಿ ವಿದ್ಯಾಬ್ಯಾಸ ನಡೆಸಿದ್ದಾರೆ.

ವೃತ್ತಿ ಮತ್ತು ಸೌಂದರ್ಯ ಸ್ಪರ್ಧೆಗಳು

[ಬದಲಾಯಿಸಿ]
  • ಡಿಸೆಂಬರ್ 2015 ರಲ್ಲಿ, ಅವರು ಹಯಾತ್, ಗುರ್ಗಾಂವ್ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ, ದೆಹಲಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದರು, ಅಲ್ಲಿ ಅವರು ಟಾಪ್ 6 ರಲ್ಲಿ ಸ್ಥಾನ ಪಡೆದರು ಮತ್ತು "ಮಿಸ್ ಫ್ಯಾಶನ್ ಐಕಾನ್" ಉಪ-ಪ್ರಶಸ್ತಿಯನ್ನು ಗೆದ್ದರು.[]
  • ಅದೇ ವರ್ಷ ಅವರು ಪಲಾಶ್ ನ್ಯಾಷನಲ್ ಬ್ಯೂಟಿ ಪೇಜೆಂಟ್ ಚಂಡೀಗಢ 2015 ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮತ್ತು 1 ನೇ ರನ್ನರ್ ಅಪ್ ಎಂದು ಘೋಷಿಸಲಾಯಿತು. ನಂತರ, ಅವರು ಪಲಾಶ್ ರಾಷ್ಟ್ರೀಯ ಸೌಂದರ್ಯ ಸ್ಪರ್ಧೆ 2015 ಅನ್ನು ಪ್ರವೇಶಿಸಿದರು ಮತ್ತು ಅಂತಿಮವಾಗಿ ವಿಜೇತರಾಗಿ ಕಿರೀಟವನ್ನು ಪಡೆದಿದ್ದಾರೆ.
  • ಭಾರತದಲ್ಲಿ ನಡೆದ ಮಿಸ್ ಅರ್ಥ್ ಸ್ಪರ್ಧೆಯ ರಾಷ್ಟ್ರೀಯ ಪೂರ್ವಭಾವಿಯಾದ ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾದ ಎರಡನೇ ಆವೃತ್ತಿಯಲ್ಲಿ ಅವರು ಸ್ಪರ್ಧಿಸಿದರು ಮತ್ತು 4 ನವೆಂಬರ್ 2015 ರಂದು ಕೋರ್ಟ್‌ಯಾರ್ಡ್ ಮ್ಯಾರಿಯೆಟ್ ಹೋಟೆಲ್, ಗುರ್ಗಾಂವ್ ನಲ್ಲಿ ನಡೆದ ಅಂತಿಮ ಈವೆಂಟ್‌ನ ಮುಕ್ತಾಯದಲ್ಲಿ ವಿಜೇತರಾದರು. ಮುಖ್ಯ ಪ್ರಶಸ್ತಿಯನ್ನು ಗೆಲ್ಲುವುದರ ಜೊತೆಗೆ ಅವರು ಸ್ಪರ್ಧೆಯಲ್ಲಿ ಮೂರು ವಿಶೇಷ ಪ್ರಶಸ್ತಿಗಳನ್ನು ಗೆದ್ದರು: ಮಿಸ್ ಇಂಟರ್ನೆಟ್, ಮಿಸ್ ಇಕೋ-ಟೂರಿಸಂ ಮತ್ತು ಮಿಸ್ ಪ್ರೊಡಕ್ಟಿವ್ ಬ್ಯೂಟಿ. ಅವರು ಮೋಹಿನಿ ರಾಜ್ ಪುನಿಯಾ ಅವರ ನಂತರ ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ ಮತ್ತು ಅಲಂಕೃತ ಸಹಾಯ ಮಿಸ್ ಅರ್ಥ್ ಇಂಡಿಯಾ ಆಗಿ ಆಯ್ಕೆಯಾದರು. ಮಾರ್ಕ್ಸ್ ಹಾಲೆ, ವಿಯೆನ್ನಾ, ಆಸ್ಟ್ರಿಯಾ ನಲ್ಲಿ ನಡೆದ ಮಿಸ್ ಅರ್ಥ್ 2015 ಸ್ಪರ್ಧೆಯಲ್ಲಿ ಐತಾಳ್ ಭಾರತವನ್ನು ಪ್ರತಿನಿಧಿಸಿದ್ದರು.[][][]

ವಿವಾದ

[ಬದಲಾಯಿಸಿ]

ನವೆಂಬರ್ 2015 ರಲ್ಲಿ, ಐತಾಳನ್ನು ಪ್ರತಿನಿಧಿಸುವ ಮಿಸ್ ಅರ್ಥ್ ಇಂಡಿಯಾದೃಶ್ಯ ಮಾಧ್ಯಮ ದೊಡ್ಡ ವಿವಾದಕ್ಕೆ ಕಾರಣವಾಯಿತು, ವೀಡಿಯೊಗ್ರಾಫಿ ತಂಡವು ಹಿಮಾಲಯವನ್ನು ಚಿತ್ರಿಸುವ ಪ್ರಯತ್ನದಲ್ಲಿ ಮೌಂಟ್ ಎವರೆಸ್ಟ್ ಅನ್ನು ತೋರಿಸಿತ್ತು. ಆ ವರ್ಷ ಆಸ್ಟ್ರಿಯಾದಲ್ಲಿ ನಡೆಯಲಿರುವ ಮಿಸ್ ಅರ್ಥ್ 2015 ಅನ್ನು ಉಲ್ಲೇಖಿಸಿ, ಭಾರತದ ಸ್ಪರ್ಧಿಗಳಲ್ಲಿ ಒಬ್ಬರಾದ ಮಿಸ್ ಅರ್ಥ್ ಇಂಡಿಯಾ, ಐತಾಲ್ ಖೋಸ್ಲಾ ಅವರು ನೇಪಾಳ ದೇಶದ ಹೆಚ್ಚಿನ ದೃಶ್ಯಗಳನ್ನು ಒಳಗೊಂಡಿರುವ ಪರಿಸರ-ಸೌಂದರ್ಯದ ದೃಶ್ಯ ಮಾಧ್ಯಮವನ್ನು ಪ್ರಸ್ತುತಪಡಿಸಿದ್ದಾರೆ. ಇದು ನೇಪಾಳದ ಪ್ರಾಕೃತಿಕ ಸೌಂದರ್ಯವನ್ನು ತೋರಿಸಿದೆ. ಈ ಕೃತಿಚೌರ್ಯದ ಪರಿಸರ-ಸೌಂದರ್ಯ ದೃಶ್ಯ ಮಾಧ್ಯಮದ ಮೂಲಕ ನೇಪಾಳದ ಸೌಂದರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಕ್ರಿಯೆಯಲ್ಲಿ ಉಲ್ಲಂಘಿಸಲಾಗಿದೆ ಎಂದು ಹೇಳಿರುತ್ತಾರೆ.[] ಆ ದೃಶ್ಯ ಮಾಧ್ಯಮ ತ್ವರಿತವಾಗಿ ಎಲ್ಲರ ಗಮನ ಸೆಳೆಯಿತು ಮತ್ತು 24 ಗಂಟೆಗಳ ಒಳಗೆ ತೆಗೆದುಹಾಕಲಾಗಿದೆ ಮತ್ತು ಹೊಸ ದೃಶ್ಯ ಮಾಧ್ಯಮವನ್ನು ಅಪ್‌ಲೋಡ್ ಮಾಡಲಾಗಿದೆ, ವೀಡಿಯೋಗ್ರಾಫಿ ತಂಡದಿಂದ ತಪ್ಪಾಗಿದೆ ಎಂದು ರಾಷ್ಟ್ರೀಯ ನಿರ್ದೇಶಕರು ಸ್ಪಷ್ಟಪಡಿಸಿದ್ದರು ಮತ್ತು ದೋಷದ ಅರಿವಾದ ತಕ್ಷಣ ದೃಶ್ಯ ಮಾಧ್ಯಮವನ್ನು ತೆಗೆದುಹಾಕಲಾಗಿದೆ, ಎಂದು ನಂತರ ತನ್ನ ಫೇಸ್‌ಬುಕ್ ಪುಟದಲ್ಲಿ ಐತಾಳ್ ಕ್ಷಮೆಯಾಚಿಸಿದಳು.[]

ಮಿಸ್ ಇಂಟರ್ಕಾಂಟಿನೆಂಟಲ್ ಇಂಡಿಯಾದ ರಾಷ್ಟ್ರೀಯ ನಿರ್ದೇಶಕರಾಗಿ

[ಬದಲಾಯಿಸಿ]

ಮಿಸ್ ಅರ್ಥ್ 2015 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಿಸ್ ಅರ್ಥ್ ಇಂಡಿಯಾ 2015 ಐತಾಲ್ ಖೋಸ್ಲಾ ಅವರು, 2016ರಲ್ಲಿ ಮಿಸ್ ಇಂಟರ್ಕಾಂಟಿನೆಂಟಲ್ ಇಂಡಿಯಾದ ಹೊಸ ರಾಷ್ಟ್ರೀಯ ನಿರ್ದೇಶಕರಾಗಿ ನೇಮಕಗೊಂಡಿದ್ದರು. ಹೊಸ ರಾಷ್ಟ್ರೀಯ ನಿರ್ದೇಶಕರಾಗಿ ಭಾರತದ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿ ಆಡಿಷನ್‌ಗಳೊಂದಿಗೆ ತಮ್ಮ ಹೊಸ ಹಂತವನ್ನು ಪ್ರಾರಂಭಿಸಿದ್ದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Miss India Delhi 2015 - Miss India Delhi 2015 - Contestants - Miss India - Beauty Pageants - Indiatimes". 2015-11-07. Archived from the original on 2015-11-07. Retrieved 2024-08-16.
  2. Locsin, Joel (2014). "Pinay bags Miss Earth 2014 title". GMA Network. Retrieved 29 November 2014.
  3. Жигарева, Гертруда (2014). "Россиянка получила титул "Мисс огонь" на конкурсе "Мисс Земля" (in Russian)". Moskovskij Komsomolets. Retrieved 30 November 2014.
  4. "Miss Earth 2014 Crown Goes To Miss Philippines". Travelers Today. 29 November 2014. Retrieved 10 March 2024.
  5. "68 people signed and won this petition". Change.org.
  6. Bajracharya, Nasana (29 November 2015). "Miss Earth India apologises to Nepal for 'hurting sentiments'". The Himalayan Times. Retrieved 10 March 2024.
  7. "Aaital Khosla appointed as the National Director of Miss Intercontinental India | Angelopedia". www.angelopedia.com (in english).{{cite web}}: CS1 maint: unrecognized language (link)


ಬಾಹ್ಯ ಕೊಂಡಿಗಳು

[ಬದಲಾಯಿಸಿ]