ಐಡೆಯು (ಅಸ್ಸಾಮಿ ಚಲನಚಿತ್ರ)
| ಐಡೆಯು (ತೆರೆಯ ಹಿಂದೆ) | |
|---|---|
| ನಿರ್ದೇಶನ | ಅರೂಪ್ ಮನ್ನಾ |
| ನಿರ್ಮಾಪಕ | ನಬಮಿಕಾ ಬಾರ್ತಕೂರ್ |
| ಪಾತ್ರವರ್ಗ | ಐಡು ಹ್ಯಾಂಡಿಕ್, ಚಂದನಾ ಶರ್ಮಾ ನಬಮಿಕಾ ಬೋರ್ಥಾಕುರ್ ಸೊಪುಂಟಿ ಬೋರ್ಡೊಲೊಯ್ |
| ಸಂಗೀತ | ಮನಶ್ ಹಜರಿಕಾ |
| ಛಾಯಾಗ್ರಹಣ | ಅರೂಪ್ ಮನ್ನಾ |
| ಸ್ಟುಡಿಯೋ | ಟ್ರಿನಾಯೋನ್ ಮೀಡಿಯಾ ಫೌಂಡೇಶನ್, ನಾಗಾವ್ ಜಿಲ್ಲೆ |
| ಬಿಡುಗಡೆಯಾಗಿದ್ದು |
|
| ಅವಧಿ | 81 ನಿಮಿಷಗಳು |
| ದೇಶ | ಭಾರತ |
| ಭಾಷೆ | ಅಸ್ಸಾಮಿ ಭಾಷೆ |
ಐಡೆಯು (ಬಿಹೈಂಡ್ ದಿ ಸ್ಕ್ರೀನ್/ ಸ್ಕ್ರೀನ್ ನ ಹಿಂದೆ) ಒಂದು ಅಸ್ಸಾಮಿಚಲನಚಿತ್ರ ನಾಗಾವ್ ಮೂಲದ ಸಂಸ್ಥೆ ತ್ರಿನಯನ್ ಮೀಡಿಯಾ ಫೌಂಡೇಶನ್ ಈ ಚಿತ್ರವನ್ನು ನಿರ್ಮಿಸಿದೆ ಮತ್ತು ಅರೂಪ್ ಮನ್ನಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು 8 ಫೆಬ್ರವರಿ 2007 ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಡುಗಡೆಯಾಯಿತು.[೧] ಮತ್ತು ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ದೆಹಲಿ ಹ್ಯಾಬಿಟಾಟ್ ಫಿಲ್ಮ್ ಫೆಸ್ಟ್ ಮತ್ತು 25 ನೇ ಮ್ಯೂನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು.[೧] ಈ ಚಿತ್ರವನ್ನು 1,600,000 ರೂ.ಗಳ ಸಾಧಾರಣ ಬಜೆಟ್ನೊಂದಿಗೆ 16 ಎಂಎಂ ಸ್ವರೂಪದಲ್ಲಿ ಚಿತ್ರೀಕರಿಸಲಾಗಿದೆ.[೨]
ಕಥಾವಸ್ತು
[ಬದಲಾಯಿಸಿ]ಈ ಚಿತ್ರವು, ಅಸ್ಸಾಮಿ ಚಿತ್ರರಂಗದ ಮೊದಲ ನಟಿ ಐಡೆಯು ಹಂಡಿಕ್ ನ ದುರಂತ ಜೀವನ ಮತ್ತು ಸಮಯಕ್ಕೆ ಸಂಬಂಧಿಸಿದೆ. ಐಡೆಯು ಹಂಡಿಕ್ 1935 ರ ಜಾಯ್ಮೋತಿ ಚಲನಚಿತ್ರದಲ್ಲಿ ಪಾದಾರ್ಪಣೆ ಮಾಡಿದ್ದರು ಮತ್ತು ಅವರು 2002 ರಲ್ಲಿ ನಿಧನರಾದರು.[೧]
ಪಾತ್ರ ಪರಿಚಯ
[ಬದಲಾಯಿಸಿ]- ಐಡೆಯು ಹ್ಯಾಂಡಿಕ್ ಐಡೆಯು ಹ್ಯಾಂಡಿಕ್ ಪಾತ್ರದಲ್ಲಿ
- ಜ್ಯೋತಿಪ್ರಸಾದ್ ಅಗರ್ವಾಲ್ ಪಾತ್ರದಲ್ಲಿ ಪ್ರಶಾಂತ್ ಕುಮಾರ ದಾಸ್
- ಐಡು ಹಂಡಿಕ್ ಪಾತ್ರದಲ್ಲಿ ಚಂದನಾ ಶರ್ಮಾ
- ಐಡೆವಿನ ತಾಯಿಯಾಗಿ ನಬಮಿಕಾ ಬೋರ್ಥಾಕುರ್
- ಡಿಂಬೊ ಗೊಹೈನ್ ಪಾತ್ರದಲ್ಲಿ ಸೊಪುಂಟಿ ಬೋರ್ಡೊಲೊಯ್
- ಕೇಶಾಬ್ ಪಾತ್ರದಲ್ಲಿ ಪಿಥುರಾಜ್ ಗೋಸ್ವಾಮಿ( ಐಡೆಯು ಅವರ ಕಿರಿಯ ಸಹೋದರ)
ಬಿಡುಗಡೆ
[ಬದಲಾಯಿಸಿ]ಈ ಚಿತ್ರವು ಫೆಬ್ರವರಿ 8, 2007 ರಂದು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ಪೂನಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ದೆಹಲಿ ಹ್ಯಾಬಿಟಾಟ್ ಚಲನಚಿತ್ರೋತ್ಸವ ಮತ್ತು ಮ್ಯೂನಿಚ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲ್ಪಟ್ಟಿತು. ಈ ಚಿತ್ರವನ್ನು ಬ್ರೆಜಿಲ್ ನಲ್ಲಿ ನಡೆದ ಸೌ-ಪಾಲೊ ಚಲನಚಿತ್ರೋತ್ಸವದಲ್ಲಿ "ದಿ ನ್ಯೂ ಫಿಲ್ಮ್ ಮೇಕರ್ಸ್" ಸ್ಪರ್ಧೆ ವಿಭಾಗದಲ್ಲಿ ಪ್ರದರ್ಶಿಸಲಾಯಿತು.[೩]
ಪ್ರಶಸ್ತಿಗಳು
[ಬದಲಾಯಿಸಿ]"ಐಡೆಯು" ಚಿತ್ರವು ಭಾರತದಲ್ಲಿ ೫೪ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು ಮತ್ತು ನಂತರ ಅಸ್ಸಾಮಿ ಭಾಷೆಯ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆಯಿತು.[೩]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ "Aideu, the story of Assam's first actress". The Indian Express. Retrieved 9 ಮಾರ್ಚ್ 2013.
- ↑ Santanava Hazarika. "Reel Reality". bipuljyoti.in. Archived from the original on 4 ಮಾರ್ಚ್ 2016. Retrieved 15 ಏಪ್ರಿಲ್ 2013.
- ↑ ೩.೦ ೩.೧ "Santanava Hazarika, Reel Reality, The Assam Tribune, October 2007"। ৪ মার্চ ২০১৬ তারিখে মূল থেকে আর্কাইভ করা। সংগ্রহের তারিখ ২১ অক্টোবর ২০১৬।
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Recognition too late, Sangeeta Barooah Pisharoty at Hindu.com.
- Use dmy dates from February 2025
- Articles with invalid date parameter in template
- Use Indian English from November 2015
- All Wikipedia articles written in Indian English
- Template film date with 1 release date
- ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ
- 2007 films
- Films set in Assam
- 2000s Assamese-language films
- Films about women in India