ವಿಷಯಕ್ಕೆ ಹೋಗು

ಏಷ್ಯನ್ ಹಣಕಾಸು ಬಿಕ್ಕಟ್ಟು 1997

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೯೭ರ ಏಶಿಯಾದ ಹಣ-ಕಾಸಿನ ಬಿಕ್ಕಟು
financial crisis
Point in time1997 ಸಂಪಾದಿಸಿ
ಆರಂಭದ ಸಮಯ೨ ಜುಲೈ 1997 ಸಂಪಾದಿಸಿ
ಅಂತ್ಯದ ಸಮಯ1999 ಸಂಪಾದಿಸಿ
Has effectFall of Suharto, 1998 ರಷ್ಯಾ ಹಣಕಾಸು ಬಿಕ್ಕಟ್ಟು ಸಂಪಾದಿಸಿ

1997ರ ಏಶಿಯನ್ ಹಣಕಾಸು ಬಿಕ್ಕಟ್ಟು ಇದು ಜೂನ್ ಮತ್ತು ಸೆಪ್ಟೆಂಬರ್ 1997 ಮಧ್ಯೆ ಆಗ್ನೇಯ ಪೂರ್ವ ಏಷ್ಯಾದ ಮೂರು ಅತಿ ದೊಡ್ಡ ದೇಶಗಳಾದ ಇಂಡೋನೇಷ್ಯಾ ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್, ಇವುಗಳನ್ನು ಕಂಗೆಡಿಸಿತ್ತು.

ಏಷ್ಯನ್ ಹುಲಿಗಳ ವಾರ್ಷಿಕ ತಲಾವಾರು ಜಿಡಿಪಿ ಬೆಳವಣಿಗೆ ಆಯಾ ದೇಶದ ಕರೆನ್ಸಿ ಪ್ರಕಾರವಾಗಿ, ಸರಾಸರಿ ಬೆಳವಣಿಗೆ ೧೯೯೫-೨೦೦೦

ಹಣಕಾಸು ಮೌಲ್ಯ ಕಡಿಮೆಯಾಗಿ ಶೇರು ಮಾರುಕಟ್ಟೆ ಭೂಮೌಲ್ಯ ಮತ್ತು ಕರೆನ್ಸಿ ಅಪ ಮೌಲ್ಯ ಇವುಗಳಿಂದಾಗಿ ಬಹುದೊಡ್ಡ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಯಿತು."Global Waves of Debt: Causes and Consequences" (in English). Retrieved 2025-12-22.{{cite web}}: CS1 maint: unrecognized language (link) CS1 maint: url-status (link)

ಹಿನ್ನೆಲೆ

[ಬದಲಾಯಿಸಿ]

1997ರ ಹೊತ್ತಿಗೆ ದಕ್ಷಿಣ ಪೂರ್ವ ಏಷ್ಯಾದಲ್ಲಿ ಇಂಡೋನೇಷ್ಯಾ ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್ ಗಳು ವೇಗವಾಗಿ ಅಭಿವೃದ್ಧಿ ಹೊಂದಿದವು. ಇವುಗಳಲ್ಲಿ ಥೈಲ್ಯಾಂಡ್ ಮತ್ತು ಇಂಡೋನೇಷಿಯಾ, ಡಾಲರ್ ಎದುರು ನಿಶ್ಚಿತ ಪ್ರಮಾಣದ ಮೌಲ್ಯವನ್ನು ಹೊಂದಿದವು. ಪ್ರತಿ ಅಮೇರಿಕನ್ ಡಾಲರ್ , 25 ಬಹಟ್ ಮೊತ್ತಕ್ಕೆ ಮಾರಾಟ ಆಗುವಂತೆ ಥೈಲ್ಯಾಂಡ್ ನ ರಿಸರ್ವ್ ಬ್ಯಾಂಕ್ ನಿಗದಿ ಮಾಡಿತ್ತು . ಇದರ ಪ್ರಯೋಜನ ಪಡೆದು ಬಹುತೇಕ ಥೈಲೆಂಡ್ ಉದ್ಯಮಿಗಳು ಡಾಲರ್ ನಲ್ಲಿ ಸಾಲ ಪಡೆದಿದ್ದರು. ಆದರೆ 1996-97 ಅವಧಿಯಲ್ಲಿ ನಡೆದ ಹಲವು ಘಟನೆಗಳು ಥೈಲೆಂಡ್ ನ ಜಿಡಿಪಿ ಬೆಳವಣಿಗೆಯನ್ನು ದಿಕ್ಕು ಗೆಡಿಸಿದವು.

ಮುಖ್ಯ ಕಾರಣಗಳು

[ಬದಲಾಯಿಸಿ]

ಜಾಗತಿಕ ಬ್ಯಾಂಕ್ ಗಳ ಮುಖ್ಯ ಕಛೇರಿಗಳ ಆವಾಸ ಆಗಿದ್ದ ಹಾಂಕಾಂಗ್ ಬ್ರಿಟನ್ ಕೈ ಬಿಟ್ಟು ಚೀನಾದ ಅಧಿಪತ್ಯಕ್ಕೆ ಒಳಪಟ್ಟದ್ದು ಮೂಲಧನ (ಬಂಡವಾಳ) ಹೂಡಿಕೆದಾರರ ಹಿಂಜರಿಕೆಗೆ ಎಡೆ ಮಾಡಿತು, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪನ್ನಗಳ ಮೌಲ್ಯ ಕುಸಿದದ್ದು, ಆ ಉತ್ಪನ್ನಗಳ ರಫ್ತುದಾರರಾದ ಈ ದೇಶಗಳ ಆದಾಯ ಕುಸಿಯಲು ಇನ್ನೊಂದು ಕಾರಣವಾಯಿತು. ಅಮೆರಿಕಾದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರಗಳನ್ನು ಏರಿಸಿದಾಗ ಹೂಡಿಕೆದಾರರು ಅಮೆರಿಕನ್ ಬಾಂಡುಗಳನ್ನು ಖರೀದಿಸಲು ಮುಂದಾದರು. ಹಣದ ಒಳಹರಿವು ಕಡಿಮೆ ಆದಾಗ, ಸಹಜವಾಗಿ ಸಾಲ ಮರುಪಾವತಿ, ಥಾಯ್, ಕೊರಿಯ ಮತ್ತು ಇಂಡೋನೇಷ್ಯದ ಉದ್ಯಮಗಳ ಪಾಲಿಗೆ ತ್ರಾಸಿನ ಕೆಲಸ ಆಯಿತು. ಹೀಗೆ ಹಲವು ಜಾಗತಿಕ ಕಾರಣಗಳು ಏಷಿಯನ್ ಹುಲಿಗಳು ಎಂದೇ ಹೆಸರಾದ ದೇಶಗಳ ಜಿಡಿಪಿ ದರವನ್ನು ಕುಗ್ಗಿಸಿದವು. "The Asian Financial Crisis Remembered: Ten Years Wiser" (in English). Retrieved 2025-12-22.{{cite web}}: CS1 maint: unrecognized language (link) CS1 maint: url-status (link)

ಸಾಲ ಮರುಪಾವತಿ ಮತ್ತು ಹಣದುಬ್ಬರದ ಅತಿ ಏರಿಕೆಯಿಂದಾಗಿ ಥಾಯ್ಲೆಂಡಿನ ಉದ್ಯಮಿಗಳು ಸಾಲ ಮರುಪಾವತಿ ಮಾಡಲು ವಿಫಲರಾದರು. ಥೈಲೆಂಡ್ ರಿಸರ್ವ್ ಬ್ಯಾಂಕ್ ಮುಕ್ತ ಮಾರುಕಟ್ಟೆಯಲ್ಲಿ ಡಾಲರ್ ಮಾರಾಟ ಮಾಡಲು ಪ್ರಯತ್ನಿಸಿ ವಿಫಲವಾಯಿತು. ತತ್ಕಾರಣ ಮುಕ್ತ ಮಾರುಕಟ್ಟೆಯ ಏರಿಳಿತಗಳಿಗೆ ಥಾಯ್ಲೆಂಡಿನ ಬಹಟ್ ಅನ್ನು ಒಳಪಡಿಸಲಾಯಿತು. ಇದರ ಫಲವಾಗಿ, ಅಮೇರಿಕನ್ ಡಾಲರ್ ಒಂದಕ್ಕೆ ೨೫ ಥಾಯ್ಲೆಂಡ್ ಬಹಟ್ ಇದ್ದುದು ,ಅಮೇರಿಕನ್ ಡಾಲರ್ ಒಂದಕ್ಕೆ ೫೨ ಥಾಯ್ಲೆಂಡ್ ಬಹಟ್ ರವರೆಗೂ ಮಾರಾಟವಾಗಲು ಶುರುವಾಯಿತು. ಇದರ ದುಷ್ಪರಿಣಾಮ ಅಮೆರಿಕನ್ ಡಾಲರ್ ನಲ್ಲಿ ಸಾಲ ಪಡೆದ ಎಲ್ಲಾ ಸಂಸ್ಥೆಗಳಿಗೂ ಅನ್ವಯವಾಯಿತು. "Finance & Development, September 1999 - Large Capital Flows Causes, Consequences, and Policy Responses" (in English). Retrieved 2025-12-22.{{cite web}}: CS1 maint: unrecognized language (link) CS1 maint: url-status (link)

ಥಾಯ್ಲೆಂಡ್ ಶೇರು ಮಾರುಕಟ್ಟೆ ೭೫ರಷ್ಟು ಮೌಲ್ಯವನ್ನು ಕಳೆದುಕೊಂಡಿತು. ಇದರ ಪರಿಣಾಮ ದಕ್ಷಿಣ ಕೋರಿಯ ಇಂಡೋನೇಷಿಯಾ ಇವೆರಡು ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿತು. ೧೯೯೮ ನವಂಬರ್ ವರೆಗೆ ಇಂಡೋನೇಷ್ಯಾ ದಕ್ಷಿಣ ಕೊರಿಯ ಮತ್ತು ಥಾಯ್ಲ್ಯಾಂಡ್ ಬಹಳ ಆರ್ಥಿಕ ಸಂಕಷ್ಟ ಅನುಭವಿಸಿದವು. Asian Financial Crisis EN vector

ಬಾಹ್ಯ ಕೊಂಡಿಗಳು

[ಬದಲಾಯಿಸಿ]