ಏಯೋನಿಯಂ
| ಏಯೋನಿಯಂ | |
|---|---|
| ತಟ್ಟೆ ಗಿಡ (ಏಯೋನಿಯಂ ಅಂಡ್ಯುಲೇಟಮ್) | |
| Scientific classification | |
| ಸಾಮ್ರಾಜ್ಯ: | ಪ್ಲಾಂಟೇ |
| ಏಕಮೂಲ ವರ್ಗ: | ಹೂಬಿಡುವ ಸಸ್ಯ |
| ಏಕಮೂಲ ವರ್ಗ: | ಯೂಡಿಕಾಟ್‌ಗಳು |
| ಗಣ: | ಸ್ಯಾಕ್ಸಿಫ಼್ರಜಾಲೀಸ್ |
| ಕುಟುಂಬ: | ಕ್ರ್ಯಾಸ್ಯುಲೇಸೀ |
| ಉಪಕುಟುಂಬ: | ಸೆಂಪರ್ವಿವಾಯ್ಡಿಯೇ |
| ಪಂಗಡ: | ಏಯೋನಿಯೇ |
| ಕುಲ: | ಏಯೋನಿಯಂ Webb & Berthel. |
| ಪ್ರಭೇದಗಳು | |
|
ಸುಮಾರು ೩೫ | |
ಏಯೋನಿಯಂ ಎನ್ನುವುದು ಒಂದು ಕ್ರ್ಯಾಸ್ಯುಲೇಸಿ ಕುಟುಂಬದ ಒಂದು ಜಾತಿಯಾಗಿದೆ. ಇದಕ್ಕೆ ಸೇರಿದ ಪ್ರಭೇದಗಳು ರಸಭರಿತ, ಉಪೋಷ್ಣವಲಯದ ಸಸ್ಯಗಳಾಗಿವೆ. ಈ ಜಾತಿಯ ಹೆಸರು ಪ್ರಾಚೀನ ಗ್ರೀಕ್ ಏಯೋನಿಯೋಸ್ (ಅಂದರೆ ಸಾವಿಲ್ಲದ) ನಿಂದ ಬರುತ್ತದೆ.[೧] ಬಹುತೇಕ ಏಯೋನಿಯಂ ಪ್ರಭೇದಗಳು ಕೆನೇರಿ ದ್ವೀಪಗಳಿಗೆ ಸ್ಥಳೀಯವಾಗಿವೆ.[೨][೩]
ಗ್ರೀನೋವಿಯ
[ಬದಲಾಯಿಸಿ]ಮೊದಲು ಗ್ರೀನೋವಿಯ ಒಂದು ಪ್ರತ್ಯೇಕ ಜಾತಿಯಾಗಿತ್ತು. ಆದರೆ ಇತ್ತೀಚೆಗೆ ಇದನ್ನು ಏಯೋನಿಯಂ ಜಾತಿಯಲ್ಲಿ ವಿಲೀನಗೊಳಿಸಲಾಗಿದೆ. ಗ್ರೀನೋವಿಯ ಒಂದು ಅಲಂಕಾರ ಸಸ್ಯ. ಆಕರ್ಷಕ ಎಲೆ ಮತ್ತು ಹಳದಿ ಬಣ್ಣದ ಹೂಗಳಿಂದ ಕೂಡಿದ್ದು ನೋಡಲು ಬಹಳ ಅಂದವಾಗಿ ಕಾಣುವುದರಿಂದ ಇದನ್ನು ಕುಂಡಸಸ್ಯವಾಗಿ ಬೆಳೆಸುತ್ತಾರೆ. ಗ್ರೀನೋವಿಯ ಕುಳ್ಳುಗಾತ್ರದ ಬಹುವಾರ್ಷಿಕ ಪೊದೆಸಸ್ಯ. ಇದರ ಎಲೆಗಳು, ಮೋಟು ಕಾಂಡದ ಮೇಲೆ ಕಮಲದ ದಳಗಳ ರೀತಿಯಲ್ಲಿ ಜೋಡಣೆಗೊಂಡಿವೆ. ಹೂ ಅರಳಿದ ಮೇಲೆ ಎಲೆಗಳು ಉದುರಿಹೋಗುತ್ತವೆ. ಎಲೆಗಳು ಎಳೆಯವಾಗಿದ್ದಾಗ ಕೆಂಪು ಬಣ್ಣದವೂ, ಬಲಿತಾಗ ನೀಲಿ ಛಾಯೆಯುಳ್ಳ ಹಸಿರು ಬಣ್ಣದವೂ ಆಗಿದ್ದು ಆಕರ್ಷಕವಾಗಿರುತ್ತವೆ. ಬೇಸಗೆಯಲ್ಲಿ ಉಷ್ಣತೆ ಹೆಚ್ಚಾದಾಗ ಎಲೆಗಳೆಲ್ಲ ಮೇಲಕ್ಕೆ ಮುದುರಿಕೊಳ್ಳುವುದರಿಂದ ಗಿಡ ಮೊಗ್ಗಿನಂತೆ ಕಾಣುತ್ತದೆ. ಹೂಗಳು ಏಪ್ರಿಲ್-ಮೇ ತಿಂಗಳಲ್ಲಿ ಅರಳುತ್ತವೆ. ಗ್ರೀನೋವಿಯದಲ್ಲಿ ಐಜ಼ೂನ್, ಆರಿಯ ಮತ್ತು ಗ್ರ್ಯಾಸಿಲಿಸ್ ಎಂಬ ಮುಖ್ಯ ಪ್ರಭೇದಗಳಿವೆ. ಇವನ್ನು ಬೀಜಗಳಿಂದ ಇಲ್ಲವೆ ಕಾಂಡ ತುಂಡುಗಳಿಂದ ವೃದ್ಧಿಸಬಹುದು. ವೃದ್ಧಿಗೆ ಮರಳು ಭೂಮಿ ಉತ್ತಮ. ಬೆಳೆವಣಿಗೆಯ ಪ್ರಥಮ ಹಂತಗಳಲ್ಲಿ ಯಥೇಚ್ಛವಾಗಿ ನೀರನ್ನು ಹಾಯಿಸಬೇಕು.
ಉಲ್ಲೇಖಗಳು
[ಬದಲಾಯಿಸಿ]- ↑ Eggli, U.; Newton, L.E. (2004). Etymological Dictionary of Succulent Plant Names. Springer Berlin Heidelberg. p. 3. ISBN 978-3-540-00489-9. Retrieved 25 September 2018.
- ↑ Bramwell, D.; Bramwell, Z. (2001). Wild flowers of the Canary Islands. Madrid, Spain: Editorial Rueda. ISBN 84-7207-129-4.
- ↑ "International Crassulaceae Network: Aeonium". International Crassulaceae Network. Retrieved 19 February 2017.
