ಏನು ? ಗಣಿತ ಅಂದ್ರಾ ? (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಏನು ? ಗಣಿತ ಅಂದ್ರಾ ?
ಲೇಖಕರುಶ್ರೀಮತಿ ಬಿ.ಎಸ್. ಶೈಲಜಾ
ದೇಶಭಾರತ
ಭಾಷೆಕನ್ನಡ
ವಿಷಯಗಣಿತ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೪, ೨ನೇ ಮುದ್ರಣ
ಪುಟಗಳು೧೨೪
ಐಎಸ್‍ಬಿಎನ್978-81-8467-352-4

ಏನು ? ಗಣಿತ ಅಂದ್ರಾ ? ಶ್ರೀಮತಿ ಬಿ.ಎಸ್. ಶೈಲಜಾ ಅವರು ಬರೆದ ಪುಸ್ತಕ.

ಪ್ರತಿಯೊಬ್ಬರೂ ಶಾಲೆಯಲ್ಲಿ ಗಣಿತ ಕಲಿತೇ ಇರುತ್ತಾರೆ. ಪಾಸು ಎನ್ನುವುದು ಅನಿವಾರ್ಯ; ಆದ್ದರಿಂದ ಪಾಸೂ ಮಾಡಿರುತ್ತಾರೆ. ಆದರೆ ಶಾಲೆಯಲ್ಲಿ ಕಲಿತ ಗಣಿತದ ಎಷ್ಟು ಭಾಗ ಹಲವಾರು ವರ್ಷಗಳ ನಂತರವೂ ನೆನಪಿನಲ್ಲಿ ಉಳಿದಿದೆ ಎಂದು ಪ್ರಶ್ನೆ ಕೇಳಿದಾಗ ಅವರ ವೃತ್ತಿಗೆ ಅನುಗುಣವಾಗಿ ವೈವಿಧ್ಯಮಯ ಉತ್ತರಗಳು ದೊರಕುತ್ತವೆ. ಗಣಿತದಂತಹ ಕಠಿಣ ವಿಷಯವನ್ನು ರಂಜನೀಯವಾಗಿ ಮಾಡಿ ಚಮತ್ಕಾರಗಳನ್ನು ಒಡಲಲ್ಲಿಟ್ಟುಕೊಂಡೇ ದೈನಂದಿನ ವ್ಯವಹಾರಗಳ ಮೂಲಕ ಗಣಿತವನ್ನು ನಮಗರಿವಿಲ್ಲದಂತೆ ಬೋಧಿಸುವ ಪುಸ್ತಕವಿದು. ಕತೆ ಹೇಳುತ್ತಲೇ ನಾವು ಮಕ್ಕಳಿಗೆ ಒಳ್ಳೆಯ ನಡತೆ ಕಲಿಸುವುದಿಲ್ಲವೇ ಹಾಗೆ ? ಗಣಿತವೆಂದರೆ ನಿದ್ದೆಯಲ್ಲೂ ಬೆಚ್ಚಿಬೀಳುವ ವಿದ್ಯಾರ್ಥಿಗಳಿಗೆ ಹೇಳಿ ಬರೆಸಿದಂತೆ ಬಹಳ ಸ್ವಾರಸ್ಯಕರವಾಗಿ ನಿರೂಪಿಸಿದೆ. ಗಣಿತವನ್ನು ಸಂತೋಷವಾಗಿ ಕಲಿಯುವಂತಾಗಲು, ಸೂಕ್ಷ್ಮಗಳನ್ನು ತಿಳಿದುಕೊಳ್ಳಲು ಈ ಪುಸ್ತಕ ಸಹಾಯಕ.


ಬಾಹ್ಯ ಸಂಪರ್ಕ[ಬದಲಾಯಿಸಿ]