ಏಂಜೆಲ್ ಮೀನು

ವಿಕಿಪೀಡಿಯ ಇಂದ
Jump to navigation Jump to search

ಏಂಜೆಲ್ ಮೀನು:

ಅನೇಕ ಬೇರೆ ಬೇರೆ ಮೀನು ಜಾತಿಗಳನ್ನು ಸೂಚಿಸುವ ಸಾಮಾನ್ಯ ಹೆಸರು. ಕೀಟೋಡಾನ್ಟಿಡೀ ಕುಟುಂಬಕ್ಕೆ ಸೇರಿದ ಅತ್ಯಂತ ರಮಣೀಯವಾದ ಈ ಮೀನುಗಳು ಉಷ್ಣವಲಯದ ಸಮುದ್ರವಾಸಿಗಳು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹವನ್ನುಳ್ಳ ಈ ಕುಟುಂಬದ ಮೀನುಗಳು ಸಾಧಾರಣವಾಗಿ ಉದ್ದದಲ್ಲಿ 15-20 ಸೆಂಮೀ. ಗಿಂತ ಹೆಚ್ಚಾಗಿರುವುದಿಲ್ಲ. ಕೆಲವು ಪ್ರಬೇಧಗಳು 60 ಸೆಂಮೀ. ನಷ್ಟೂ ಬೆಳೆಯಬಹುದು.[೧]

ಮತ್ಸ್ಯ ವಿಜ್ಞಾನಿಗಳಲ್ಲಿ ಕೆಲವರು ಕೀಟೋಡಾನ್ಟಿಡೀ ಕುಟುಂಬವನ್ನು ಏಂಜೆಲ್ ಮೀನುಗಳೆಂದೂ ಬಟರ್ ಫ್ಲೈ (ಚಿಟ್ಟೆ) ಮೀನುಗಳೆಂದೂ ವಿಭಾಗಮಾಡುವರು. ಆಪರ್ಕ್ಯುಲಂ ಮೂಳೆಯ ಮುಂತುದಿಯ ಕೆಳ ಅಂಚಿನಲ್ಲಿ ಗಟ್ಟಿಯಾದ ಮುಳ್ಳು ಇರುವುದು ಏಂಜೆಲ್ ಮೀನು; ಇಲ್ಲದ್ದು ಬಟರ್ ಫ್ಲೈ ಮೀನು.

ಸ್ಕೇಟ್ ಮೀನು

ಸಿಕ್ಲಿಡೆ ಕುಟುಂಬಕ್ಕೆ ಸೇರಿದ್ದು ದಕ್ಷಿಣ ಅಮೆರಿಕದ ಸಿಹಿನೀರು ವಾಸಿಗಳಾದ ಮೂರು ಟೆರೊಫಿಲ್ಲಂ ಪ್ರಭೇದಗಳನ್ನೂ ಮೃದ್ವಸ್ಥಿ ಮತ್ಸ್ಯಗಳಾದ ಸ್ಕೇಟ್ (ಸ್ಕ್ವಾಟಿನ ಸ್ಕಾಟಿನ)ಗಳನ್ನೂ ಏಂಜೆಲ್ ಮೀನುಗಳೆಂದೇ ಕರೆಯುವುದುಂಟು.

ಏಂಜೆಲ್ ಮೀನುಗಳು ಹೆಸರೇ ಸೂಚಿಸುವಂತೆ ಅಪ್ಸರೆಯಂತೆ ಬಲು ಸುಂದರ. ವಿವಿಧ ವರ್ಣ ಮತ್ತು ಮಾಟಗಳಲ್ಲಿರುವ ಇವನ್ನು ಅನೇಕ ಮತ್ಸ್ಯಸಂಗ್ರಹಾಲಯಗಳಲ್ಲೂ ಮನೆಗಳಲ್ಲೂ ಪ್ರೀತಿಯಿಂದ ಸಾಕುತ್ತಾರೆ (ನೋಡಿ- ಚಿಟ್ಟೆ-ಮೀನುಗಳು). (ಸಿ.ಜಿ.ಕೆ.)

ಉಲ್ಲೇಖ[ಬದಲಾಯಿಸಿ]

  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಎಲುಬುಮೀನು
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: