ಏಂಜೆಲ್ ಜಲಪಾತ

ವಿಕಿಪೀಡಿಯ ಇಂದ
Jump to navigation Jump to search
ಏಂಜೆಲ್ ಜಲಪಾತದ ಒಂದು ನೋಟ

ಏಂಜೆಲ್ ಜಲಪಾತ ಜಗತ್ತಿನ ಅತಿ ಎತ್ತರದ ಜಲಪಾತವಾಗಿದೆ. ವೆನೆಜುವೆಲಾದ ಬೊಲಿವಾರ್ ಪ್ರಾಂತ್ಯದಲ್ಲಿರುವ ಏಂಜೆಲ್ ಜಲಪಾತದ ಎತ್ತರ ೯೭೯ ಮೀಟರ್‌ಗಳು ಅಥವಾ ೩೨೧೨ ಅಡಿಗಳು. ಇದರಲ್ಲಿ ನೀರು ೮೦೭ ಮೀ. ಗಳಷ್ಟು ದಾರಿಯಲ್ಲಿ ಯಾವುದೇ ಬಂಡೆ ಯಾ ಗೋಡೆಗೆ ಆತುಕೊಳ್ಳದೆ ನೇರ ಗಾಳಿಯಲ್ಲಿ ಧುಮುಕುತ್ತದೆ. ಈ ಅಗಾಧ ಎತ್ತರದ ಕಾರಣದಿಂದಾಗಿ ಮೇಲಿನಿಂದ ಧುಮುಕುವ ನೀರಿನ ಬಹ್ವಂಶ ಕೆಳಗಿನ ನೆಲ ತಲುಪದೆ ಬಲವಾದ ಗಾಳಿಯಿಂದಾಗಿ ತುಂತುರು ಮತ್ತು ನೀರಾವಿಯಾಗಿ ಮಾರ್ಪಡುತ್ತದೆ.