ಏಂಜಲ್ ವಿಂಗ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಲ್ ವಿಂಗ್ಸ್ ಗಿಡ

ಏಂಜಲ್ ವಿಂಗ್ಸ್ ಹೃದಯಾಕಾರದ ಅಗಲವಾದ ಹಸಿರು ಎಲೆಗಲು! ನಡುವೆ ಕೆಂಪು, ಬಿಳಿ, ನೇರಲೆ, ಹಳದಿ, ಇತ್ಯಾದಿ ಹಲವಾರು ಬಣ್ಣಗಳಿಂದ ಕೂಡಿದ ಚುಕ್ಕಿಗಳ ಅಪೂರ್ವ ಸಮ್ಮಿಲನ. ಮಧ್ಯಭಾಗದಲ್ಲಿ ಸ್ಪಷ್ಟವಾಗಿ ಎದ್ದು ಕಾಣುವ ಗೆರೆಗಳನ್ನು ಹೊಂದಿರುವ ಈ ಎಲೆಗಳನ್ನು ನೋಡುವುದೇ ಕಣ್ಣಿಗೆ ಅಂದ. ಏಂಜಲ್ ವಿಂಗ್ಸ್ ಎಂದು ಕರೆಯುವ ಆಕರ್ಷಕವಾದ ಎಲೆಗಳನ್ನು ಹೊಂದಿರುವ ಈ ಗಿಡಗಳು ಹೂವಿನ ತೋಟದ ಮೆರುಗನ್ನು ಹೆಚ್ಚಿಸುತ್ತವೆ. ಕೆಲಾಡಿಯಂ ಹಾರ್ಟುಲೋಮ್ ಎಂಬ ಇನ್ನೊಂದು ಹೆಸರನ್ನು ಹೂಂದಿರುವ ಇವುಗಳು ಹಲವಾರು ನಮೂನೆಗಳಿಂದ ಕೂಡಿದ್ದು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನೋಡಲು ಬಲು ಸುಂದರವಗಿದೆ. ಇವುಗಳಲ್ಲಿ ಕೆಲವು ಜಾತಿಯ ಗಿಡದ ಎಲೆಗಳು ಸುಮಾರು ಒಂದು ಅಡಿ ಉದ್ದ ಬೆಳೆಯುತ್ತವೆ. ಮೃದುವಾಗಿ ದಪ್ಪವಾಗಿದ್ದು ಈ ಎಲೆಗಳ ಕೆಳಭಾಗವು ನಸುನೇರಲೆ ಬಣ್ಣವನ್ನು ಹೊಂದಿರುತ್ತದೆ. ಮೇಲ್ಭಗದಲ್ಲಿ ತುಸು ಹಸಿರುಬಣ್ಣ ನಡುವೆ ಆಕರ್ಷಕ ಗೆರೆಗಳಿದ್ದು ವಿಶಿಷ್ಟ ಆಕೃತಿ. ಹೂತೋಟದಲ್ಲಿ ಈ ಏಲೆಯನ್ನು ಕಂಡಾಗ ಚಿಣ್ಣರು ಆಡಿನ ಮುಖವನು ನೆನಪಿಸುಕೊಳ್ಳುತ್ತಾರೆ. ಏಂಜಲ್ ವಿಂಗ್ಸ್ ನ ಇನ್ನೊಂದು ತಳಿಯಾದ ಘೈರ್ ಚೀಘ್ ಗಿಡದ ಏಲೆಗಳು ಗಾಢ ಕೆಂಪುವರ್ಣದಿಂದ ಕೂಡಿದ್ದು ಅಂಚುಗಳು ಹಸಿರು ಬಣ್ಣ ಹೊಂದಿವೆ. ನಡುವೆ ನರಗಳಂತೆ ಎದ್ದುತೋರುವ ಗೆರೆಗಳನ್ನು ಹೊಂದಿದ್ದು ನೋಡುಗರನ್ನು ತನ್ನತ್ತ ಸೆಳೆಯುತ್ತವೆ. ಕೆಲವು ಗಿಡಗಳಲ್ಲಿಯ ಎಲೆಗಳು ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದ್ದರೆ ಕೆಲವು ಎಲೆಗಳಲ್ಲಿ ಹಸಿರು ಹೊದಿಕೆಯ ಮೇಲೆ ಬಿಳಿಯ ಬುಟ್ಟಗಳು, ನಡುವೆ ತುಸು ಎದ್ದು ತೋರುವ ನಸುಕೆಂಪು ಬಣ್ಣದ ಗೆರೆಗಳು. ಈ ಎಲೆಗಳಲ್ಲಿ ಕಂಡುಬರುವ ಬಣ್ಣಗಳ ಸಂಯೋಜನೆ ಹಾಗೂ ಎಲೆಗಳ ನಡುವೆ ಇರುವ ಗೆರೆಗಳೇ ಹೆಚ್ಚು ಅಕರ್ಷಣೆ. ನಾಟಿ ಮಾಡುವ್ ವಿಧನ : ನೋಡಲು ಕೆಸುವಿನ ಎಲೆಯನ್ನು ಹೋಲುವ ಈ ಗಿಡಗಳು ತಂಪು ವಾತವರಣದಲ್ಲಿ ಬಹಳ ಸುಲಭವಾಗಿ ಗುಂಪುಗುಂಪಾಗಿ ಬೆಳೆಯುತ್ತವೆ. ಕುಂಡಗಳಲ್ಲಿ ಬೆಳೆಸಿ ನಿಮ್ಮ ಮನೆಯ ಮುಂಭಾಗದಲ್ಲಿ ಅಥವಾ ಗಾರ್ಡನ್ನಲ್ಲಿ ನೆರಳು ಬೀಳುವ ಕಡೆಗಳಲ್ಲಿ ಇಡಬೇಕು. ಈ ಗಿಡಗಳಿಗೆ ಶೇಕಡಾ ೭೦ ರರ್ಷ್ಟು ನೆರಳು ಹಾಗೂ ಶೇ.೩೦ ರರ್ಷ್ಟು ಬಿಸಿಲು ಸಾಕು. ಕುಂಡಗಳಲ್ಲಿ ೨:೧ ರಂತೆ ಮರಳು, ಮಣ್ಣು ಹಾಗೂ ಎಲೆಗೊಬ್ಬರ ಹಾಕಿ ಬೆಳಸಬಹುದು. ಬುಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಬಿಸಿಲು ಹೆಚ್ಚಾದರೆ ಎಲೆಗಳು ಕರಟಿ ಬಣ್ಣ ಕಳೆದುಕೊಳ್ಳುತ್ತವೆ. ಒಂದು ಗಿಡ ನೆಟ್ಟರೆ ಸಾಕು, ಬುಡದಲ್ಲಿ ಸಣ್ಣಸಣ್ಣ ಪಿಳ್ಳೆಗಳು ಹುಟ್ಟಿಕೊಂಡು ಚೆನ್ನಾಗಿ ಬೆಳೆಯುತ್ತವೆ. ಸಣ್ಣಗಿಡಗಳಿಂದ ಅಥವಾ ಬುಡದ ಗಡ್ಡೆಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಗೃಹಾಲಂಕಾರದ ಹೂದಾನಿಗಳಲ್ಲಿ ಇತರ ಹೂವುಗಳ ಜೊತೆ ಬಹಳ ಚೆನ್ನಾಗಿ ಹೊಂದಿಕೊಳ್ಳುವ ಏಂಜಲ್ ವಿಂಗ್ಸ್, ನೇರ ಬಿಸಿಲನ್ನು ಸಹಿಸುವುದಿಲ್ಲ. ಈ ಆಕರ್ಷಕ ಗಿಡಗಳು ನಿಮ್ಮ ಮನೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ.