ಎ. ರಾಮಾನಾಯಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಕ್ಕಾರು ರಾಮನಾಯಕ್, (೧೯೦೨-೧೯೮೧)
೧೯೪೨ ರಾಮಾನಾಯಕರು, ಉಡಿಪಿ ಶ್ರೀಕೃಷ್ಣ ಭವನ ಎಂಬ ಹೆಸರಿನಲ್ಲಿ ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಅದರ ಉದ್ಘಾಟನೆಯನ್ನು 'ಸಾನೆ ಗುರೂಜಿ'ಯವರ ಹಸ್ತದಿಂದ ನೆರೆವೇರಿಸಲಾಯಿತು.
ರಾಷ್ಟ್ರೀಯತೆಭಾರತೀಯರು
ಹಳೆ ವಿದ್ಯಾರ್ಥಿಅಡುಗೆ ವಿದ್ಯೆಯಲ್ಲಿ ನಿಪುಣರು.
ಉದ್ಯೋಗಜನರಿಗೆ ಊಟ ತಯಾರಿಸಿ ಅದನ್ನು ಸುವ್ಯವಸ್ಥಿತವಾಗಿ ಬಡಿಸುವುದು. ಊಟಡ ಡಬ್ಬಗಳನ್ನು ತುಂಬಿಸಿ ಆಸಕ್ತರಿಗೆ ಒದಗಿಸುವುದು.
ಜೀವನ ಸಂಗಾತಿಸೀತಾಬಾಯಿ ರಾಮನಾಯಕ್,
ಮಕ್ಕಳು೧. ನಾಗೇಶ್ ರಾಮನಾಯಕ್, ಹೃದಯಾಘಾತದಿಂದ ನಿಧನರಾದರು. ೨. ಹರೀಶ್ ರಾಮನಾಯಕ್,ಕಾರ್ ಅಪಘಾತದಲ್ಲಿ ಪರಿವಾರದ ಸಮೇತ ನಿಧನರಾದರು.೩.ಸತೀಶ್ ರಾಮನಾಯಕ್, 'ಉಡುಪಿ ಕೃಷ್ಣ ಬೋರ್ಡಿಂಗ್ ಹೋಟೆಲೆನ ಮಾಲಿಕ'ರಾಗಿದ್ದಾರೆ.೪. ಸಾಯಿಪ್ರಕಾಶ್ ರಾಮನಾಯಕ್,ಮಾಟುಂಗ ಜಿಲ್ಲೆಯ ಮಹೇಶ್ವರಿ ಉದ್ಯಾನ್ ಬಳಿ ಇರುವ 'ಮೈಸೂರ್ ಉಪಹಾರಗೃಹ'ವನ್ನು ನಡೆಸಿಕೊಂಡುಹೋಗುತ್ತಿದ್ದಾರೆ.

ಎಕ್ಕಾರು ರಾಮನಾಯಕ್, (೧೯೦೨-೧೯೮೧) ಮುಂಬಯಿನಗರದ ಹೋಟೆಲ್ ವಲಯಕ್ಕೆ 'ಎ.ರಾಮಾನಾಯಕ್' [೧] ಎಂದು ಪ್ರಸಿದ್ಧರಾಗಿದ್ದಾರೆ. ಅವರೊಬ್ಬ ಸುಪ್ರಸಿದ್ಧ ಹೋಟೆಲ್ ಉದ್ಯಮಿ. ದಕ್ಷಿಣ ಭಾರತದಿಂದ ಮುಂಬಯಿಗೆ ಬರುವ ಯಾತ್ರಿಗಳಿಗೆ, ಊರಿನ ತರಹದ ಪೂರ್ಣಭೋಜನವನ್ನು ಒದಗಿಸುವಲ್ಲಿ 'ಉಡುಪಿ ಕ್ರಿಷ್ಣಭವನ್,'[೨] ಪ್ರಮುಖವಾದದ್ದು. ಮುಂಬಯಿನಗರದ 'ಮಾಟುಂಗಾ ಜಿಲ್ಲೆಯಲ್ಲಿ ಇನ್ನೂ ಹಲವು ಇಂತಹ 'ಫುಲ್ ಮೀಲ್', 'ಪ್ಲೇಟ್ ಮೀಲ್' ಒದಗಿಸುವ ಕೆಲವು ಹೋಟೆಲ್ಲುಗಳಿವೆ :

 1. ರಾಮಕೃಷ್ಣ ಲಂಚ್ ಹೋಂ,
 2. ಸರಸ್ವತಿ ರೆಸ್ಟೊರೆಂಟ್,
 3. ಮಹಾಭೋಜ್, ಇತ್ಯಾದಿ.

ದಕ್ಷಿಣ ಭಾರತದ ಜನಸಮುದಾಯಕ್ಕೆಲ್ಲಾ ಈ ಖಾನಾವಳಿ ಚಿರಪರಿಚಿತ. ಮಾಟುಂಗ (ಸೆಂ.ರೈಲ್ವೆ) ರೈಲ್ವೆಸ್ಟೇಷನ್ ಬದಿಯಲ್ಲೇ ಇದ್ದು, ವಿಶಾಲವಾಗಿರುವುದರಿಂದ ಪರಿವಾರದವರೆಲ್ಲಾ ಒಟ್ಟಿಗೆ ಭೋಜನಮಾಡಬಹುದು.[೩] 'ಮೈಸೂರ್ ಮೆಸ್,' ಎಂಬ ಇದೇತರಹದ ಪುರಾತನ ಭೋಜನಶಾಲೆ, ಕಾರಣಾಂತರಗಳಿಂದ ಮುಚ್ಚಲ್ಪಟ್ಟಿತು.[೪]

ಚಿತ್ರ:My cafe.jpg
'ಮುಂಬಯಿನ ಮಾಟುಂಗಾ ವಲಯದ ಮಹೇಶ್ವರಿ ಉದ್ಯಾನದ ಹತ್ತಿರವಿರುವ ಈಗಿನ ರಾಮಾನಾಯಕರ ಮೈಸೂರ್ ಕೆಫೆ'

ಮುಂಬಯಿನ ಪ್ರಥಮ ಉಡಿಪಿ-ಊಟದ ಹೋಟೆಲ್[ಬದಲಾಯಿಸಿ]

ರಾಮಾನಾಯಕ್, ಉಡಿಪಿ ಊಟದ ಮನೆ Archived 2010-01-23 ವೇಬ್ಯಾಕ್ ಮೆಷಿನ್ ನಲ್ಲಿ.</ref> ಖಾನಾವಳಿಗೆ ಬರುವ ಬಳಕೆದಾರರ ಆದ್ಯತೆಗಳಿಗೆ ಸ್ಪಂದಿಸಿ ಸಹಾಯಮಾಡುತ್ತಾರೆ. ರಾಮಾನಾಯಕರು, ತಮ್ಮ ೧೧ ನೆಯ ಚಿಕ್ಕ ಪ್ರಾಯದಲ್ಲೇ ತಮ್ಮ ಊರುಬಿಟ್ಟು, ಆಗಿನ ಮುಂಬಯಿ ಮಹಾಶಹರಿಗೆ ವಲಸೆ ಬಂದು ಸೇರಿಕೊಂಡರು. ತಮಗೆ ತಿಳಿದ ಆಡುಗೆಯ-ಕಲೆಯಿಂದ 'ಸಾಂತಾ ಕ್ರೂಝ್ ನಲ್ಲಿದ್ದ ಸರಸ್ವತಿಕಾಲೋನಿ'ಯಲ್ಲಿ ಊಟದ ವ್ಯವಸ್ಥೆಮಾಡಿ ಹೆಸರುಗಳಿಸಿದರು. ೧೯೪೨ ರಾಮಾನಾಯಕರು, ಒಂದು ಚಿಕ್ಕ 'ಖಾನಾವಳಿ'ಯನ್ನು ತೆರೆದರು. ಸಾನೆ ಗುರೂಜಿ ಯವರ ಹಸ್ತದಿಂದ ಪ್ರಾರಂಭೋತ್ಸವವನ್ನು ಮಾಡಿಸಿದ ಭೋಜನಮಂದಿರ, ಇದುವರೆವಿಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಅವರ ಮನಸ್ಸಿನಲ್ಲಿದ ೩ ಮುಖ್ಯ ಸಂಗತಿಗಳನ್ನು ಬಿಡದೆ, ತಮ್ಮ ಜೀವಿತದ ಕೊನೆಗಾಲದವರೆಗೂ ಕಾಪಾಡಿಕೊಂಡು ಬಂದರು.[೫]

ರಾಮಾನಾಯಕರ ಪರಿವಾರ[ಬದಲಾಯಿಸಿ]

ಚಿತ್ರ:Rama nayak.jpg
'ಮೂಲ ಉಡಿಪಿ ಶ್ರೀ ಕ್ರಿಷ್ಣ ಬೋರ್ಡಿಂಗ್,ಮುಂಬಯಿನ, 'ಮಾಟುಂಗಾ ರೈಲ್ವೆ ನಿಲ್ದಾಣ'ದ ಬಳಿ ಇದೆ'

೪ ಜನ ಗಂಡುಮಕ್ಕಳಲ್ಲಿ, ನಾಗೇಶ್ ರಾಮಾನಾಯಕ್(ಜ: ೧೯೪೭, ರ ಫೆಬ್ರವರಿ, ೭ ರಂದು) ಹಿರಿಯವರು. ಅವರು ಸನ್, ೨೦೦೯ ರ, ಜನವರಿ, ೭ ರಂದು, 'ಹೃದಯಾಘಾತ'ದಿಂದ ನಿಧನರಾದರು. ಎರಡನೆಯವರಾಗಿದ್ದ, ಡಾ. ಹರೀಶ್ ರಾಮನಾಯಕ್ ರವರು, ಕಾರ್ ಅಪಘಾತದಲ್ಲಿ ತಮ್ಮ ಪರಿವಾರದವರ ಜೊತೆ ಮೃತರಾದರು. ಮೂರನೆಯ ಮಗ, ಸತೀಶ್ ರಾಮನಾಯಕ್, ಉಡಿಪಿ ಕ್ರಿಷ್ಣ ಬೋರ್ಡಿಂಗ್ ಉಪಹಾರಗೃಹವನ್ನು ನೋಡಿಕೊಂಡು ಹೋಗುತ್ತಿದ್ದಾರೆ. ನಾಲ್ಕನೆಯವರಾದ, ಸಾಯಿಪ್ರಕಾಶ್, ಮಹೇಶ್ವರಿ ಉದ್ಯಾನದ ಬಳಿಯಿರುವ ಉಪಹಾರಗೃಹದ ಮಾಲೀಕರಾಗಿದ್ದಾರೆ.

'ಮಹಾಶ್ವರಿ ಉದ್ಯಾನದ ಬಳಿಯ ಶಾಖೆಯಲ್ಲಿ ಪಂಜಾಬಿ, ಗುಜರಾತಿ, ಮತ್ತಿತರ ತಿಂಡಿ-ಊಟಗಳು,ಹಾಗೂ ತಿಂಡಿಗಳ ಪಾರ್ಸೆಲ್ ಸೇವೆ ಲಭ್ಯವಿದೆ'

ಗ್ರಾಹಕರ ಆದ್ಯತೆ ಮೊದಲು[ಬದಲಾಯಿಸಿ]

 1. ಊಟದ ಗುಣಮಟ್ಟದಲ್ಲಿ ಯಾವ ಕೊರತೆಯೂ ಆಗದಂತೆ ಪ್ರಯತ್ನಮಾಡುವುದು.
 2. ಎಲ್ಲವರ್ಗದವರಿಗೂ ಎಟುಕುವಂತೆ ಊಟದ-ದರವನ್ನು ಕಾಪಾಡಿಕೊಂಡುಬರುವುದು.
 3. ಊಟದಲ್ಲಿ ಸ್ವಾದಿಷ್ಟತೆ, ಮತ್ತು ಶುಚಿತ್ವವನ್ನು ಕಾಯ್ದುಕೊಂಡು ಬರುವುದು.

ಈ ತತ್ವಗಳನ್ನು ಅವರ ಮಕ್ಕಳು ಪಾಲಿಸಿಕೊಂಡು ಬರುತ್ತಿದ್ದಾರೆ. ಶುಚಿ-ರುಚಿಯಲ್ಲಿ ಇದುವರೆವಿಗೂ ವ್ಯತ್ಯಾಸವಿಲ್ಲ. ಊಟದ ಸೇವೆ, ಅತ್ಯಂತ ತ್ವರಿತ. ಉಂಡತಟ್ಟೆಗಳನ್ನು ತೆಗೆದು, ಮತ್ತೆ ಟೇಬಲ್ ನ್ನು ಶುಚಿಗೊಳಿಸಿ, ಹೊಸತಾಟನ್ನು ತಂದಿರಿಸಲು ಆಗುವ ಸಮಯ ಬಹಳ ಕಡಿಮೆ. ಇದನ್ನು ನಿರ್ವಹಿಸಲು ಸಿಬ್ಬಂದಿವರ್ಗವನ್ನು ಚೆನ್ನಾಗಿ ತರಪೇತುಮಾಡಿದ್ದಾರೆ.[೬]

ಎರಡು ಬಗೆಯ ಊಟದವ್ಯವಸ್ಥೆ[ಬದಲಾಯಿಸಿ]

 1. ಫುಲ್ ಮೀಲ್ : ಬಾಳೆಯೆಲೆಯಮೇಲೆ ಬಡಿಸುವ ವ್ಯವಸ್ಥೆ ಇದೆ. ಎಲ್ಲಾ ವ್ಯಂಜನಗಳೂ ಕೇಳಿದಷ್ಟು ದೊರೆಯುತ್ತವೆ.[೭]
 2. ಪ್ಲೇಟ್ ಮೀಲ್ : [ಪ್ರತಿಊಟ-೧,೫೦೦ ಕ್ಯಾಲರಿ] ಫುಲ್ ಮೀಲ್ ನಲ್ಲಿ ಬಡಿಸುವ ಊಟವನ್ನೇ ಇಲ್ಲಿಯೂ ಬಡಿಸಲಾಗುವುದು. ಆದರೆ, ಪದಾರ್ಥಗಳು ಸೀಮಿತ.[೮]

ಪ್ಲೇಟ್ ಮೀಲ್ಸ್[ಬದಲಾಯಿಸಿ]

 1. ಎರಡು ಮುದ್ದೆ ಅನ್ನ,
 2. ಮೂರು ಚಪಾತಿಗಳು ಅಥವಾ ಪೂರಿಗಳು.
 3. ಒಂದು ಬಟ್ಟಲು ಸಾಂಬಾರ್‍. (ಬೇಕಾದರೆ ಕೇಳಿಪಡೆಯಬಹುದು.ಇದಕ್ಕೆ ಹಣಕೊಡಬೇಕಾಗಿಲ್ಲ)
 4. ಒಂದು ಬಟ್ಟಲು ರಸಮ್ . (ಬೇಕಾದರೆ ಕೇಳಿಪಡೆಯಬಹುದು.ಇದಕ್ಕೆ ಹಣಕೊಡಬೇಕಾಗಿಲ್ಲ)
 5. ಹಪ್ಪಳ,
 6. ಉಪ್ಪಿನಕಾಯಿ ಹೋಳು-ರಸ,
 7. ದಾಲ್,ಮತ್ತು ಉಪ್ಪು.

೪೦ ರ ದಶಕದಲ್ಲಿ, ಈಗಿರುವ ಹೋಟೆಲ್ ನ ಪಕ್ಕದ ಮಂಗಳೂರು ಹೆಂಚಿನ ಕಟ್ಟಡದಲ್ಲಿ, ಭೋಜನಗೃಹವನ್ನು ನಡೆಸುತ್ತಿದ್ದರು. ಈ ವ್ಯವಸ್ಥೆ ಸುಮಾರು ಎರಡು ದಶಕಗಳಿಗೂ ಮೇಲ್ಪಟ್ಟು ನಡೆಸಿಕೊಂಡುಬರಲಾಯಿತು.ಸ್ವತಂತ್ರ್ಯಪೂರ್ವದಲ್ಲಿ ರಾಮನಾಯಕ್ ತಮ್ಮ ಹೋಟೆಲ್ ನಲ್ಲಿ ತಿಂಗಳಿಗಾಗುವಷ್ಟು ಊಟದ ಕೂಪನ್ ತೆಗೆದುಕೊಂಡರೆ, ಒಂದು ಊಟಕ್ಕೆ ೨ ರೂಪಾಯಿಹಣವನ್ನು ತೆಗೆದುಕೊಳ್ಳುತ್ತಿದ್ದರು. ಪ್ರತಿ ತಿಂಗಳ ಕೊನೆಯ ಅದಿತ್ಯವಾರ ಮಿತಿಯಿಲ್ಲದ, ಹಬ್ಬದಊಟವನ್ನು ಮಾಡಿ ಪ್ಲೇಟ್ ಮೀಲ್ಸ್ ದರದಲ್ಲೇ ಬಡಿಸುತ್ತಿದ್ದರು."ತಿಂಗಳಿನ ೨೯ ದಿನದಲ್ಲಿ ನಿಮ್ಮ ಹಣ ಖರ್ಚುಮಾಡಿ ಊಟಮಾಡಿದ್ದೀರಿ. ಇಂದು ನಮ್ಮ ಸೇವೆಯನ್ನು ಸ್ವೀಕರಿಸಿ ", ಎಂದು ಆದರ ವಿಶ್ವಾಸಗಳಿಂದ ದೈನ್ಯತೆಯ, ಮುಗುಳ್ನಗೆಯಿಂದ ಜನರನ್ನು ಸತ್ಕರಿಸುತ್ತಿದ್ದ, ನೋಟ ಇಂದಿಗೂ ಅಲ್ಲಿ ಬರುವ ಹಳೆಯ ಬಳಕೆದಾರರ ಮುಖದಿಂದಲೇ ಕೇಳುವುದು ಬಹಳ ಸೊಗಸು.[೯] ಉಡಿಪಿ ಭೋಜನಗೃಹದಲ್ಲಿ ಎಲ್ಲವೂ ವ್ಯವಸ್ಥಿತ. ಶುಚಿ-ರುಚಿಯಾದ ಭಕ್ಷಭೋಜ್ಯಗಳನ್ನು ಅಲ್ಲೇ ತಯಾರಿಸಿ ಉಣಬಡಿಸುತ್ತಾರೆ, ಸ್ವಚ್ಛತೆಗೆ ಅತಿಮಹತ್ವಕೊಡುತ್ತಾರೆ. ಬಳಕೆದಾರರು, ಹೋಟೆಲ್ ನ ಅಡುಗೆಮನೆಯ ಸ್ವಚ್ಛತೆಯನ್ನು ನೋಡಬಹುದು. ಇದಕ್ಕೆ ವೇಳೆಯನ್ನು ನಿಗದಿಮಾಡಿದ್ದಾರೆ. ಬೆಳಿಗ್ಯೆ ೧೦-೩೦-೨.೦೦ ಘಂಟೆ. ಸಾಯಂಕಾಲ : ೭.೦೦-೯-೩೦ ರವರೆಗೆ.

ಶಾಖೆಗಳಲ್ಲಿ ತಾಜಾವ್ಯಂಜನಗಳು ಲಭ್ಯ[ಬದಲಾಯಿಸಿ]

ಉಡುಪಿ ಶ್ರೀಕೃಷ್ಣ ಬೋರ್ಡಿಂಗ್ ನ ಹತ್ತಿರದ ಶಾಖೆಗಳಾದ ಮಹೇಶ್ವರಿ ಉದ್ಯಾನ್ ಶಾಖೆ, ರೈಲ್ವೆ ಷ್ಟೇಷನ್ ಶಾಖೆಗಳಲ್ಲಿ, ತಾಜಾ ವ್ಯಂಜನಗಳು ದೊರೆಯುತ್ತವೆ. ನಮಗೆ ತಾಜಾಫೇಡೆ, ಬರ್ಫಿ, ಫರ್ಸಾನ್, ಜಲೇಬಿ, ಮೈಸೂರ್ ಪಾಕ್, ಕೋಡುಬಳೆ, ಚಕ್ಕಲಿ, ಮಿಕ್ಸ್ಚರ್, ಲಾಡು ಉಂಡೆ, ಬೇಳೆ-ಹೋಳಿಗೆ, ಇತ್ಯಾದಿಗಳು ದೊರೆಯುತ್ತವೆ.

ವಿಶೇಷ ಊಟಗಳು[ಬದಲಾಯಿಸಿ]

ವರ್ಷದ ೫ ದಿನಗಳಲ್ಲಿ, ವಿಶೇಷ ಊಟದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.[೧೦]

 1. 'ಗಣರಾಜ್ಯದಿನೋತ್ಸವದಂದು'.
 2. ೩೦ ನೆಯ ಮಾರ್ಚ್ ನ ಮುಂದಿನ ರವಿವಾರ, 'ಸ್ಥಾಪಕರ-ದಿನಾಚರಣೆಯನಿಮಿತ್ತ'.
 3. ಮೇ,೧ ನೆಯ ತಾರೀಖು, 'ಮಹಾರಾಷ್ಟ್ರದಿನಾಚರಣೆಯ ನಿಮಿತ್ತ'.
 4. 'ಸ್ವಾತಂತ್ರ್ಯದಿನೋತ್ಸವದಂದು'.
 5. 'ಶ್ರೀ.ವಿಶ್ವಕರ್ಮ ಮಾನಿಕ್ ರಾವ್', 'ಡಿ.ಲೊಟ್ಲಿಕರ್ ರವರ ಸ್ಮರಣದಿನ'ದಂದು ೨೮ ರ ನವೆಂಬರ್

ನಿಧನ[ಬದಲಾಯಿಸಿ]

ಮುಂಬಯಿ ಮಹಾನಗರದಲ್ಲಿ ಉಡುಪಿ ಪದ್ಧತಿಯ ಊಟ,ತಿಂಡಿ, ಅತಿಥಿ ಸತ್ಕಾರಗಳ ಉತ್ತಮ ವ್ಯವಸ್ಥೆಗಳನ್ನು ಮಹಾರಾಷ್ಟ್ರದ ಜನತೆಗೆ ಪರಿಚಯಿಸಿ ಹೆಸರುವಾಸಿಯಾಗಿದ್ದ ರಾಮಾನಾಯಕರು, ೩೦,ಮಾರ್ಚ್,೧೯೮೧ ರಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

 1. CNN.Travel
 2. geobeats, Ramanayak's Udupi video, ಪ್ರೇಮ್ಜಿತ್ ಸಿಂಗ್ ನಿರ್ಮಿಸಿದ ಮಾಹಿತಿ ಪೂರ್ಣ ವೀಡಿಯೊ'
 3. Sept 9th 22015, Free press journal, 8 oldest Udupi restaurants in Mumbai
 4. http://wikimapia.org/3431188/Rama-Nayak-s
 5. "Oct,11,2009, 'A. Rama Nayak's UDIPI'". Archived from the original on 2010-01-23. Retrieved 2010-04-11.
 6. ದಕ್ಷಿಣ ಭಾರತೀಯ ಪದ್ಧತಿಯ ಊಟ
 7. A Ramanayak's Udipi Shri.krishna bhavan
 8. Ramanayak's udipi
 9. ಊಟಧ ಹೋಟೆಲ್
 10. "A. Ramanayak Udipi Shri Krishna Boarding". Archived from the original on 2020-09-26. Retrieved 2014-03-17.