ಎಂ ಎಸ್ ವಿಜಯಾಹರನ್
ಗೋಚರ
(ಎ೦ ಎಸ್ ವಿಜಯಾಹರನ್ ಇಂದ ಪುನರ್ನಿರ್ದೇಶಿತ)
ಎಂ ಎಸ್ ವಿಜಯಾಹರನ್ ಇವರು ಮೈಸೂರು ಆಕಾಶವಾಣಿಯ ನಿಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ನಡೆಸಿಕೊಡುವ ಕಾರ್ಯಕ್ರಮ ಹಟ್ಟಿಹರಟೆ, ಗಾದೆಗದ್ದುಗೆ ಬಹಳ ಸೊಗಸಾಗಿರುತ್ತದೆ. ಹಟ್ಟಿಹರಟೆಯ ಹನುಮಕ್ಕನ ಪಾತ್ರವಂತೂ ಬಹಳ ಜನಪ್ರಿಯ. ಬಾಯಿಯಲ್ಲಿ ಎಲೆಅಡಿಕೆ ಹಾಕಿಕೊಂಡಂತೆ ಮಾತನಾಡುವ ಹನುಮಕ್ಕನ ಪಾತ್ರವಂತೂ ಬಹಳ ಚೆನ್ನಾಗಿರುತ್ತದೆ. ಗಾದೆ ಗದ್ದುಗೆಯ ನಿರೂಪಣೆಯ ಶೈಲಿ ಬಹಳ ಅಧ್ಭುತವಾಗಿರುತ್ತದೆ. ಡಾ. ಎಂ ಎಸ್ ವಿಜಯಾಹರನ್ ಮತ್ತು ಕೇಶವಮೂರ್ತಿ ಯವರ ನಿರೂಪಣೆ ಓದು ಬರಹ ಬಲ್ಲದ ಒಬ್ಬ ಅನಕ್ಷರಸ್ಥನಿಗೂ ಅರ್ಥವಾಗುವಂತೆ ಇರುತ್ತದೆ. ಮಾತಿನಲ್ಲೂ ನಡೆಯಲ್ಲೂ ಅತ್ಯಂತ ಸರಳವಾಗಿರುವ ಇವರು ಕೆಲಸದಲ್ಲಿ ಬಹಳ ಶಿಸ್ತು ಮತ್ತು ಅಚ್ಚುಕಟ್ಟು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |