ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ(ಎಸ್.ಡಿ.ಎಂ.ಐ.ಟಿ)ವನ್ನು 2007ರಲ್ಲಿ ನಿರ್ಮಿಸಲಾಯಿತು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಅಧೀನಕೊಳಪಟ್ಟಿದ್ದು, ಎಐಸಿಟಿಇ(ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ)ನಿಂದ ಮಾನ್ಯತೆ ಪಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈ ವಿದ್ಯಾ ಸಂಸ್ಥೆಯ

ಆಡಳಿತ ನಡೆಸುವ ಸಂಸ್ಥೆ[ಬದಲಾಯಿಸಿ]

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿ (ರಿ) ಇದರ ಮೇಲುಸ್ತುವಾರಿ ನಡೆಸುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈ ಟ್ರಸ್ಟ್‌ನ ಅಧ್ಯಕ್ಷರು, ಅವರ ಮಾರ್ಗದರ್ಶನದಲ್ಲಿ ಇಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಈ ಟ್ರಸ್ಟ್ 40ಕ್ಕೂ ಮಿಕ್ಕಿ ಶಿಕ್ಷಣ ಸಂಸ್ಥೆಗಳನ್ನು ಕರ್ನಾಟಕದಾದ್ಯಂತ ನಡೆಸುತ್ತಿದೆ.ಈ ಸ್ಥಾಪಿತ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ದಕ್ಷ ಶಿಕ್ಷಣದ ಜೊತೆಗೆ ಸಮಕಾಲೀನ ವೈದ್ಯಕೀಯ ವಿಷಯದಿಂದ ಹಿಡಿದು ಇಂಜಿನಿಯರಿಂಗ್, ಕಾನೂನು, ಸಮಾಜ ವಿಜ್ಞಾನ, ಮ್ಯಾನೇಜ್‍ಮೆಂಟ್, ಪ್ರಕೃತಿ ಚಿಕಿತ್ಸೆ, ಆಯುರ್ವೇದ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಿದೆ.[೧]

ಲಭ್ಯವಿರುವ ವಿಷಯಗಳು[ಬದಲಾಯಿಸಿ]

ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಕರ್ನಾಟಕ ಇದರ ಅಧೀನಕೊಳಪಟ್ಟಿದೆ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ(AICTE), ನವದೆಹಲಿಯಿಂದ ಮಾನ್ಯತೆ ಪಡೆದಿದೆ. ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ಕೆಳಕಂಡ ವಿಷಯಗಳಲ್ಲಿ ಬಿ.ಇ ಪದವಿ ಲಭ್ಯವಿದೆ.

ವಿಷಯ ಲಭ್ಯವಿರುವ ಸೀಟುಗಳು ಅವಧಿ
ಗಣಕ ವಿಜ್ಞಾನ ಇಂಜಿನಿಯರಿಂಗ್ ೯೦ ೪ ವರ್ಷ
ಎಲೆಕ್ಟ್ರೋನಿಕ್ಸ್ ಮತ್ತು ಕಮ್ಯುನಿಕೇಶನ್(ಸಂವಹನ) ಇಂಜಿನಿಯರಿಂಗ್ ೧೨೦ ೪ ವರ್ಷ
ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ೬೦ ೪ ವರ್ಷ
ಮೆಕ್ಯಾನಿಕಲ್ ಇಂಜಿನಿಯರಿಂಗ್ ೬೦ ೪ ವರ್ಷ
ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ೬೦ ೪ ವರ್ಷ
ಸಿವಿಲ್ ಇಂಜಿನಿಯರಿಂಗ್ ೬೦ ೪ ವರ್ಷ

[೨]

ಕಾಲೇಜಿನಲ್ಲಿರುವ ವಿಭಾಗಗಳು[ಬದಲಾಯಿಸಿ]

 • ಮಾಹಿತಿ ವಿಜ್ಞಾನ ಇಂಜಿನಿಯರಿಂಗ್ ವಿಭಾಗ
 • ಗಣಕ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗ
 • ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್ ವಿಭಾಗ
 • ಸಂವಿಧಾನ/ಇಂಗ್ಲೀಷ್ ವಿಭಾಗ
 • ಗ್ರಂಥಾಲಯ ವಿಭಾಗ
 • ರಸಾಯನ ಶಾಸ್ತ್ರ ವಿಭಾಗ
 • ಗಣಿತ(ಮ್ಯಾತಮ್ಯಾಟಿಕ್ಸ್)ವಿಭಾಗ
 • ಭೌತಶಾಸ್ತ್ರ ವಿಭಾಗ
 • ಎಲೆಕ್ಟ್ರೋನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗ
 • ಸಿವಿಲ್ ಇಂಜಿನಿಯರಿಂಗ್ ವಿಭಾಗ
 • ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ[೩]

ಸೌಲಭ್ಯಗಳು[ಬದಲಾಯಿಸಿ]

 • ತರಗತಿ ಕೋಣೆಗಳು ಮತ್ತು ಸಭಾ ಮಂಟಪಗಳು
 • ಕೇಂದ್ರೀಕೃತ ಕಂಪ್ಯೂಟರ್ ಸೌಲಭ್ಯ
 • ಪ್ರಯೋಗಾಲಯಗಳು
 • ವಿದ್ಯಾರ್ಥಿ ನಿಲಯ
 • ಕ್ರೀಡೆ
 • ಮಲ್ಟಿ ಜಿಮ್(ವ್ಯಾಯಾಮ ಶಾಲೆ)
 • ಉಪಹಾರ ಗೃಹ
 • ವಿದ್ಯಾರ್ಥಿ ನಿಲಯ
 • ಎಟಿಎಂ
 • ಛಾಯಾಪ್ರತಿ ಕೇಂದ್ರ
 • ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ
 • ವೈದ್ಯಕೀಯ
 • ವಾಹನ ವ್ಯವಸ್ಥೆ.[೪]

ಪುಸ್ತಕಗಳ ವಿವರಣೆಗಳು

ಪ್ರಕಾರಗಳು ಸಂಖ್ಯೆ
ಪ್ರಸ್ತುತ ಸಂಗ್ರಹ ೨೩,೦೩೨
ಪ್ರಸ್ತುತ ಗ್ರಂಥಗಳು ೬,೦೫೧
ನಿಯತಕಾಲಿಕಗಳು ೮೦
ಪತ್ರಿಕೆಗಳು ೫೬
ಅಂತರಾಷ್ಟ್ರೀಯ ೨೧
ರಾಷ್ಟ್ರೀಯ ೩೫
ಪುರವಣಿ ೨೪
ದೈನಿಕಗಳು ೧೦
ಹಿಂದಿನ ಸರಣಿಗಳು ೧೨೦
ಸಿಡಿಗಳು ೧೦೯೩

[೫]

ಸಂಶೋಧನೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ[ಬದಲಾಯಿಸಿ]

ಸಂಶೋಧನಾತ್ಮಕ ವಿದ್ಯಾರ್ಥಿ ಯೋಜನೆಗಳು ಮತ್ತು ತರಬೇತಿಗಳ ಮೂಲಕ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ದೃಷ್ಠಿಕೋನದೊಂದಿಗೆ ಕಾಲೇಜಿನಲ್ಲಿ ಸಂಶೋಧನೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ(The Innovation Entrepreneurship Development Center [IEDC])ವನ್ನು ಸ್ಥಾಪಿಸಲಾಗಿದೆ.

ಸಂಪರ್ಕ[ಬದಲಾಯಿಸಿ]

ಮಂಗಳೂರು ಧರ್ಮಸ್ಥಳ ಹೆದ್ದಾರಿಯಲ್ಲಿ ಶೈಕ್ಷಣಿಕ ನಗರ ಉಜಿರೆಯಿಂದ ಕೇವಲ 1 ಕಿ ಮೀ, ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಿಂದ 8 ಕಿ ಮೀ ದೂರದಲ್ಲಿದೆ. ಮಂಗಳೂರಿನ ಕಂಕನಾಡಿ, ಮತ್ತು ಮಂಗಳೂರು ಕ್ರಮವಾಗಿ ಸಮೀಪದ ರೈಲ್ವೇ ನಿಲ್ದಾಣ ಹಾಗೂ ವಿಮಾನ ನಿಲ್ದಾಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]