ಎಸ್.ಕೆ.ಜೋಶಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಎಸ್.ಕೆ.ಜೋಶಿ (ಶ್ರೀನಿವಾಸ ಕೃಷ್ಣ ಜೋಶಿ) ಇವರು ೧೯೩೬ ಜೂನ್ ೯ರಂದು ಬೆಳಗಾವಿ ಜಿಲ್ಲೆಯ ಹಿಡಕಲ್ ಗ್ರಾಮದಲ್ಲಿ ಜನಿಸಿದರು. ಧಾರವಾಡದ ಕರ್ನಾಟಕ ವಿವಿ ಪದವೀಧರರಾಗಿ Defense Architecture in Early Karnataka ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ ಇವರು ನಾಡಿನ ಗಣ್ಯ ಪುರಾತತ್ವವಿದರು, ಇತಿಹಾಸಕಾರರು. ಜೋಶಿಯವರ ಪಿ.ಎಚ್.ಡಿ. ಪ್ರಬಂಧವು ದೇಶದ ನಾನಾ ವಿವಿಗಳಲ್ಲಿ ಮಾನ್ಯವಾದ ವಿಶೇಷ ಆಕರಗ್ರಂಥವಾಗಿದೆ. ಕರ್ನಾಟಕದ ಕೋಟೆ ಕೊತ್ತಲಗಳು, ಕಾಳಿಕಾ ದರ್ಶನ, ಗೋವಾದ ಸಾಂಸ್ಕೃತಿಕ ಅಧ್ಯಯನ, Bijapur Architecture, Arts of Western India ಈ ಘನತರವಾದ ಮಾಹಿತಿಪೂರ್ಣ ಕೃತಿಗಳಲ್ಲದೆ ೪೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ.

ಇವರ ಮೌಲಿಕ ಸೇವೆಗೆ ಮೆಚ್ಚಿ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ "ಅಸಾಮಾನ್ಯ ಪುರಾತತ್ವವಿದ" ಪ್ರಶಸ್ತಿ ಸಂದಿದೆ.

ಡಾ. ಎಸ್ ಕೆ ಜೋಶಿಯವರು ೨೦೨೧ ಮೇ ೧೫ರಂದು ನಿಧನರಾದರು.

ಸಾಹಿತ್ಯ[ಬದಲಾಯಿಸಿ]

  • ಪುರಾತತ್ವ/ಇತಿಹಾಸ
  • ಕಾಲಿಕಾ ದರ್ಶನ
  • Defence Architecture in Early Karnataka
  • Bijapur Architecture
  • Arts of Western India


ಪ್ರಶಸ್ತಿ[ಬದಲಾಯಿಸಿ]

  • ಕರ್ನಾಟಕ ವಿಶ್ವಕರ್ಮ ಸಮಾಜದ ಸತ್ಯಶೋಧಕ ಪ್ರಶಸ್ತಿ
  • ಮಹಿಷಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿ
  • ಮುಂಬೈಯ ಮೊಗವೀರ ಟ್ರಸ್ಟ್ ಪ್ರಶಸ್ತಿ