ಎಲ್ ಎನ್ ಮುಕುಂದರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲ್ ಎನ್ ಮುಕುಂದರಾಜ್
ಜನನ
ರಾಷ್ಟ್ರೀಯತೆಭಾರತೀಯ
ಉದ್ಯೋಗಸಾಹಿತಿ, ಕವಿ, ಚಿಂತಕ, ವಿಮರ್ಶಕ, ಬರಹಗಾರ, ಚಲನಚಿತ್ರ ನಿರ್ದೇಶಕ
ಇದಕ್ಕೆ ಖ್ಯಾತರುದೇಶಕೋಶ ದಾಸವಾಳ, ನಿರಂಕುಶ, ವಿಲೋಮ ಚರಿತೆ, ವೈಶಂಪಾಯನತೀರ, ಇಗೋಪಂಜರ ಅಗೋಮುಗಿಲು, ದೇವರ ಆಟ, ಮುಳ್ಳಿನ ಕಿರೀಟ, ಕೇಂಪೇಗೌಡ ಕಥಾನಕ, ನೀಲವೇಣಿ, ಇಕ್ಕಲು ಮುದ್ದಯ್ಯ, ಸಂಗ್ರಾಮ ಭಾರತ
ಶೈಲಿತೌಲನಿಕ ಸಾಹಿತ್ಯ

ಪರಿಚಯ[ಬದಲಾಯಿಸಿ]

ಎಲ್.ಎನ್. ಮುಕುಂದರಾಜ್ ಕನ್ನಡದ ಲೇಖಕರು. ಸಾಹಿತ್ಯ, ಸಂಸ್ಕೃತಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರ‍್ರಿಯಾಶೀಲರಾಗಿದ್ದಾರೆ. ತುಮಕೂರು ಜಿಲ್ಲೆ ನಾಗವಲ್ಲಿ ಬಳಿಯ ಲಕ್ಕೇನಹಳ್ಳಿ ಇವರ ಹುಟ್ಟೂರು.

ಹೆಬ್ಬೂರು, ಗುಬ್ಬಿ, ತುರುವೇಕೆರೆ ಹಾಗೂ ತುಮಕೂರುಗಳಲ್ಲಿ ವಿದ್ಯಾಭ್ಯಾಸ. 1984ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಯಿಂದ ಕನ್ನಡ ತೌಲನಿಕ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ರಾಜ್ಯದ ಹಲವು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಎಲ್.ಎನ್. ಮುಕುಂದರಾಜ್ ದೇಶಕೋಶ ದಾಸವಾಳ, ನಿರಂಕುಶ, ವಿಲೋಮ ಚರಿತೆ ಎಂಬ ಕವನ ಸಂಕಲನಗಳನ್ನು, ವೈಶಂಪಾಯನತೀರ, ಇಗೋಪಂಜರ ಅಗೋಮುಗಿಲು, ದೇವರ ಆಟ, ಮುಳ್ಳಿನ ಕಿರೀಟ, ಕೆಂಪೇಗೌಡ ಕಥಾನಕ, ನೀಲವೇಣಿ, ಇಕ್ಕಲು ಮುದ್ದಯ್ಯ, ಸಂಗ್ರಾಮ ಭಾರತ ಮತ್ತಿತರ ನಾಟಕಗಳನ್ನು ರಚಿಸಿದ್ದಾರೆ.

ನಮ್ಮ ದಾರಿಯ ನೆರಳು, ಟಿ.ಆರ್. ಶಾಮಣ್ಣ, ಕೆ.ಎಚ್. ರಂಗನಾಥ್, ಪುಟ ಬಂಗಾರ (ಎಸ್. ಬಂಗಾರಪ್ಪ ಬದುಕಿನ ಪುಟಗಳು), ಕಿ.ರಂ. ನಾಗರಾಜ ಜೀವನ ಚರಿತ್ರೆಗಳು, ವಿಯತ್ತಳ ವಿಹಾರಿ, ಬಸವನೆ ಮಾಮರ ಇವರ ಗದ್ಯ ಕೃತಿಗಳು. ನಾಥರಿದ್ದೊ ಅನಾಥೆ, ಜೀರೋ ಪಾಯಿಂಟ್, ಕ್ರೆöÊಂ 27 ಅನುವಾದಗಳು, ತಾರುಣ್ಯ, ಸರ್ವಜ್ಞ ವಚನಗಳು, ಸಾರೆಕೊಪ್ಪದ ಬಂಗಾರ, ಕಾಲಾತೀತ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.

ಆಫ್ರಿಕನ್, ಮಲೆಯಾಳಿ, ಬಂಗಾಲಿ, ಹಿಂದಿ, ಉರ್ದು, ಒರಿಯಾ ಭಾಷೆಗಳ ಕವಿತೆಗಳನ್ನು ಅನುವಾದಿಸಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಇವರ ಬರಹ ಪ್ರಕಟಗೊಂಡಿವೆ. ಚುಂಚನಗಿರಿ ರಾಷ್ಟಿçÃಯ ಕವಿಗೋಷ್ಠಿ, ಕೇರಳದ ದಕ್ಷಿಣ ಭಾರತ ಕವಿಗೋಷ್ಠಿಯೂ ಸೇರಿದಂತೆ ದಸರಾ, ನವರಸ, ಹಂಪಿ ಉತ್ಸವ, ಹೋಯಳೋತ್ಸವ, ತರಳಬಾಳು ಹುಣ್ಣಿಮೆ, ಆಳ್ವಾಸ್ ನುಡಿಸಿರಿ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು. ವಿಧಾನಮಂಡಲದ ಪ್ರತಿಭಾವಂತ ಸಂಸದೀಯ ಪಟು ಪುಸ್ತಕ ಮಾಲಿಕೆ, ಅಕ್ಕ ಪ್ರಕಾಶನದ ಸುವರ್ಣ ಸಂಭ್ರಮ ಪುಸ್ತಕ ಶ್ರೇಣಿಗಳ ಸಂಪಾದಕರಾಗಿದ್ದರು.

ಪದವಿಪೂರ್ವ ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘ, ಪಿ.ಯು. ಒಕ್ಕೂಟ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘಟನೆಗಳ ಸ್ಥಾಪಕರಾಗಿ ದುಡಿದಿದ್ದಾರೆ. ಕೇಂದ್ರ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ಪ್ರತಿನಿಧಿಯಾಗಿ, ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಕಿ. ರಂ. ನಾಗರಾಜ್ ಅವರ ಕಾವ್ಯಮಂಡಲದ ನಿರ್ದೇಶಕರಾಗಿದ್ದಾರೆ. ಪಿ.ಯು. ಕನ್ನಡ ಪಠ್ಯ ರವನಾ ಸಮಿತಿಯ ಸಂಚಾಲಕರಾಗಿದ್ದರು. ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಎಸ್. ಚನ್ನಬಸವಯ್ಯ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ, ಗೌತಮ ಬುದ್ಧ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಶಿವರುದ್ರಪ್ಪ ಗೌರವ ಕಾವ್ಯ ಪ್ರಶಸ್ತಿ, ಕಿ.ರಂ. ನಾಗರಾಜ ಸಂಸ್ಕೃತಿ ಪ್ರಶಸ್ತಿ, ಗೌರವಾನ್ವಿತ ಸಭಾಪತಿ ಹಾಗೂ ಸಭಾಧ್ಯಕ್ಷರ ಲೇಖಕ ಸನ್ಮಾನ - 2004, ಘನತೆವೆತ್ತ ರಾಜ್ಯಪಾಲರಿಂದ ಲೇಖಕ ಸನ್ಮಾನ್ಯ-2006 ಇತ್ಯಾದಿ ಪ್ರಶಸ್ತಿ - ಪುರಸ್ಕಾರಗಳಿಗೆ ಮುಕುಂದರಾಜ್ ಪಾತ್ರಾರಾಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಕಾಡಹಾದಿಯ ಹೂಗಳು ಕನ್ನಡ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

ಕವನ ಸಂಕಲನಗಳು[ಬದಲಾಯಿಸಿ]

  • ದೇಶಕೋಶ
  • ದಾಸವಾಳ
  • ನಿರಂಕುಶ
  • ವಿಲೋಮ ಚರಿತೆ

ನಾಟಕ ಬರಹ ಕೃತಿಗಳು[ಬದಲಾಯಿಸಿ]

  • ವೈಶಂಪಾಯನತೀರ
  • ಇಗೋಪಂಜರ ಅಗೋಮುಗಿಲು
  • ದೇವರ ಆಟ
  • ಮುಳ್ಳಿನ ಕಿರೀಟ
  • ಕೆಂಪೇಗೌಡ ಕಥಾನಕ
  • ನೀಲವೇಣಿ
  • ಇಕ್ಕಲು ಮುದ್ದಯ್ಯ
  • ಸಂಗ್ರಾಮ ಭಾರತ

ಗದ್ಯ ಕೃತಿಗಳು[ಬದಲಾಯಿಸಿ]

  • ನಮ್ಮ ದಾರಿಯ ನೆರಳು
  • ಟಿ.ಆರ್. ಶಾಮಣ್ಣ
  • ಕೆ.ಎಚ್. ರಂಗನಾಥ್
  • ಪುಟ ಬಂಗಾರ (ಎಸ್. ಬಂಗಾರಪ್ಪ ಬದುಕಿನ ಪುಟಗಳು)
  • ಕಿ.ರಂ. ನಾಗರಾಜ ಜೀವನ ಚರಿತ್ರೆಗಳು
  • ವಿಯತ್ತಳ ವಿಹಾರಿ
  • ಬಸವನೆ ಮಾಮರ

ಸಂಪಾದಕ ಕೃತಿಗಳು[ಬದಲಾಯಿಸಿ]

  • ನಾಥರಿದ್ದೊ ಅನಾಥೆ
  • ಜೀರೋ ಪಾಯಿಂಟ್
  • ಕ್ರೆöÊಂ 27
  • ಅನುವಾದಗಳು
  • ತಾರುಣ್ಯ
  • ಸರ್ವಜ್ಞ ವಚನಗಳು
  • ಸಾರೆಕೊಪ್ಪದ ಬಂಗಾರ
  • ಕಾಲಾತೀತ

ಉಲ್ಲೇಖಗಳು[ಬದಲಾಯಿಸಿ]

[೧]

[೨]

[೩]

  1. "Kada Hadiya Hoogalu – ಕಾಡ ಹಾದಿಯ ಹೂಗಳು (2015/೨೦೧೫)". Kannada Movies Info (in ಇಂಗ್ಲಿಷ್). wordpress.com. 29 October 2015.
  2. "Sandalwood Director L N Mukundaraj Biography, News, Photos, Videos". nettv4u (in ಇಂಗ್ಲಿಷ್). nettv4u.
  3. "ಎಲ್. ಎನ್. ಮುಕುಂದರಾಜ್". www.bookbrahma.com (in ಇಂಗ್ಲಿಷ್). www.bookbrahma.com.