ಎಲ್. ಜಿ. ಶಿವಕುಮಾರ್

ವಿಕಿಪೀಡಿಯ ಇಂದ
Jump to navigation Jump to search


ದಶಕಕ್ಕೂ ಹೆಚ್ಚುಸಮಯದಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ನೇರಪ್ರಸಾರವಾಗುತ್ತಿರುವ 'ಬೆಳಗು' ಕಾರ್ಯಕ್ರಮದ ರುವಾರಿ, ಎಲ್. ಜಿ. ಶಿವಕುಮಾರ್ ಕರ್ನಾಟಕದಲ್ಲಿ ಮನೆಯಮಾತಾಗಿದ್ದಾರೆ.

ಬೆಳಗು ಕಾರ್ಯಕ್ರಮ ಶುರುವಾದ ಬಗೆ[ಬದಲಾಯಿಸಿ]

ಬೆಳಗಿನ ಕಾಯಕ್ರಮಗಳು ನೇರಪ್ರಸಾರ ಹೊಂದಿರಲಿ ಎಂದು ದೆಹಲಿದೂರದರ್ಶನ ಕೇಂದ್ರದಿಂದ ಕಳೆದ ದಶಕದಲ್ಲಿ ಆದೇಶ ಬಂತು. ೨೦೦೧ ರ ಸೆಪ್ಟೆಂಬರ್ ೧ ರಂದು ಚಂದನ ವಾಹಿನಿಯಲ್ಲಿ 'ಬೆಳಗು' ಕಾರ್ಯಕ್ರಮ ಆರಂಭವಾಯಿತು. ಪ್ರತಿದಿನ ಬೆಳಿಗ್ಯೆ ೭ ರಿಂದ ೭-೪೦ ರವರೆಗೆ ಈ ಕಾರ್ಯಕ್ರಮ ಸತತವಾಗಿ ನಡೆದುಕೊಂಡು ಬರುತ್ತಿದೆ. ಬೆಂಗಳೂರು ದೂರದರ್ಶನದ ಆಗಿನ ನಿರ್ದೆಶಕ ವೆಂಕಟೇಶ್ವರಲು ಕಾರ್ಯಕ್ರಮದ ಹೊಣೆಯನ್ನು ಶಿವಕುಮಾರ್ ಗೆ, ವಹಿಸಿದರು. ಹಾಗೆ ಶುರುವಾದ 'ಬೆಳಗು ಕಾರ್ಯಕ್ರಮ'ದ ಪ್ರಥಮ ಅತಿಥಿ, ನಟಿ, 'ಶ್ರೀಮತಿ ಉಮಾಶ್ರೀ'.

ಪ್ರತಿದಿನ ಸಂದರ್ಶನ[ಬದಲಾಯಿಸಿ]

ಪ್ರತಿದಿನವೂ ಸಂದರ್ಶನ. ನಾಟಕ ಸಂಗೀತ,ನೃತ್ಯ ಕ್ಷೇತ್ರದ ಪ್ರತಿಭಾವಂತ ಕಲಾವಿದರನ್ನು ಮೊದಮೊದಲು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ೪೦-೫೦ ಸಂದರ್ಶ ಆಗೋವರೆಗೆ ಸ್ವಲ್ಪ ತೊಡಕಾಗಿತ್ತು. ಇದುವರೆವಿಗೆ ಸುಮಾರು ೪ ಸಾವಿರಕ್ಕೂ ಅಧಿಕ ವ್ಯಕ್ತಿಗಳನ್ನು ಸಂದರ್ಶಿದ್ದಾಗಿದೆ. ದೂರದರ್ಶನದ ವಿವಿಧ ಭಾಷೆಗಳ ಚಾನೆಲ್ ಗೆ ಹೋಲಿಸಿದರೆ ಇದೊಂದು ದಾಖಲೆ ಎನ್ನುವ ಮಾತಿದೆ. ಮಧ್ಯೆ , ಬಿ.ಎನ್.ಚಂದ್ರಶೇಖರ್ ಸುಮಾರು ೪ ವರ್ಷಗಳ ಕಾಲ ನಿರ್ಮಿಸಿದ್ದರು. ಉಳಿದಂತೆ ಶಿವಕುಮಾರ್ ಹೆಚ್ಚು ಸಮಯ ತಮ್ಮ ಸೇವೆಯನ್ನು ಉಪಯೋಗಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕೆಲಸಮಾಡಿದ ವಿಶೇಷಜ್ಞರನ್ನು ಪತ್ತೆಹಚ್ಚಿ ಆಯ್ಕೆ ಮಾಡುವುದರಿಂದ ವೈವಿದ್ಯತೆ ಸಾಧ್ಯ.. ಇದು ವೀಕ್ಷಕರು ಆಶಿಸುವ ಸಂಗತಿ. ಖಾಸಗೀ ಚಾನೆಲ್ ನಲ್ಲಿ ಈಗಾಗಲೇ ಹೆಸರುಮಾಡಿದ ವ್ಯಕ್ತಿಗಳನ್ನೆ ಪದೇ ಪದೇ ಕರೆಸುವ ವಾಡಿಕೆ ಇದೆ. ಆದರೆ ಪ್ರತಿಭೆಯ ಆಗರವಾಗಿರುವ ಹಲವು ಎಲೆಮರೆಯಲ್ಲಿರುವ ಗ್ರಾಮೀಣವಲಯದ ಕಲಾವಿದರನ್ನು ಗುರುತಿಸುವ ಆಧ್ಯತೆ ಇದೆ.

ದೂರದರ್ಶನದ ಕೆಲಸ[ಬದಲಾಯಿಸಿ]

ಬೆಳಗಿನ ಜಾವ ೫ ಗಂಟೆಗೆ ದೂರದರ್ಶನ ಕೇಂದ್ರಕ್ಕೆ ಆಗಮಿಸಿ, ೬ ಗಂಟೆಯ ಒಳಗೆ ಅತಿಥಿಗಳು ಮತ್ತು ಸಂದರ್ಶಕರು ಸ್ಟುಡಿಯೋ ಒಳಗೆ ಸಿದ್ಧರಿರಬೇಕು. ಒಮ್ಮೊಮ್ಮೆ ಒಮ್ಮೆ ದಾರಿಯಲ್ಲಿ ಅಪಘಾತವಾಗಿದ್ದು. ೬-೩೦ ಆದರೂ ಬರಲು ಸಾಧ್ಯವಾಗದೆ ತಡವಾದಾಗ, ಬಂದರೆ, ಹತ್ತಿರದಲ್ಲೇ ಸಿಗುವ ಪ್ರತಿಭಾವಂತರನ್ನು ಕರೆತಂದು ಕೆಲಸ ನಿರ್ವಹಿಸಬೇಕಾಗುತ್ತದೆ.

ಶಿವಕುಮಾರರ ವ್ಯಕ್ತಿತ್ವ[ಬದಲಾಯಿಸಿ]

ಅವರೊಬ್ಬ ಸಮರ್ಥ ನಾಟಕಕಾರ, ನಟ, ನಿರ್ದೇಶಕ, ಚಂದನದ ನಾಟಕ ವಿಭಾಗದಲ್ಲಿ ಹೆಚ್ಚು ಸಮಯ ಕೆಲಸಮಾಡಿದ್ದಾರೆ. ಈ ಅನುಭವ ಕೆಲವು ವೇಳೆ ಸಹಾಯಕ್ಕೆ ಬರುತ್ತದೆ. ಜಿಎಂ ಶಿರಹಟ್ಟಿಯವರು ಚಂದನದ ನಿರ್ದೇಶಕರಾಗಿದ್ದಾಗ 'ಮಾತೃ ಅಂಧರ ಸಂಸ್ಥೆ'ಗೆ ಪರಿಚಯಿಸಿ ನಿರ್ದೇಶನ ಮಾಡಲು ಒಪ್ಪಿಸಿದರು. ಆಮಕ್ಕಳಿಗಾಗಿ 'ನಿರಂತರ',' ರಾಜಮಾತೆ', 'ಅಹಿಂಸಕ',ಮುಂತಾದ ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಬರೆದು ನಿರ್ದೇಶಿಸಿದರು. ಅದು ಈಗ ಚಾಲ್ತಿಯಲ್ಲಿಲ್ಲ. ಆದರೆ ಶಿವಕುಮಾರರು ಈಗಲೂ ನಾಟಕ ರಚನೆ, ನಟನೆ, ಸಂದರ್ಶನದ ಮೂಲಕ ಕ್ರಿಯಾಶೀಲರಾಗಿದ್ದಾರೆ.