ಎಲ್.ಎಸ್.ಶಶಿಧರ
ಎಲ್.ಎಸ್.ಶಶಿಧರ | |
---|---|
![]() | |
ಜನನ | ೨೩ ಮಾರ್ಚ್ ೧೯೬೩ ಕರ್ನಾಟಕ, ಭಾರತ |
ವಾಸಸ್ಥಳ | ಪೂನಾ. ಮಹಾರಾಷ್ಟ್ರ,ಭಾರತ |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ |
|
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಪ್ರಸಿದ್ಧಿಗೆ ಕಾರಣ | ಡ್ರೊಸೊಫಿಲಾ ಮೇಲಿನ ಅಧ್ಯಯನಕ್ಕೆ[೧] |
ಗಮನಾರ್ಹ ಪ್ರಶಸ್ತಿಗಳು |
|
ಲಿಂಗಾಧಹಳ್ಳಿ ಸುಬ್ರಹ್ಮಣ್ಯ ಶಶಿಧರ (೨೩ ಮಾರ್ಚ್ ೧೯೬೩) ರವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್ ಪೂನಾದಲ್ಲಿ ಜೀನ್ ತಜ್ಞ ಮತ್ತು ಭಾರತೀಯ ಪ್ರಾಧ್ಯಾಪಕ ಜೀವಶಾಸ್ತ್ರಜ್ಞರಾಗಿದ್ದಾರೆ.[೨] ಅವರು ಐಎಸ್ಎಸ್ಇಆರ್ ನಲ್ಲಿನ ಎಲ್ಎಸ್ಎಸ್ ಪ್ರಯೋಗಾಲಯದಲ್ಲಿ ನೇತೃತ್ವವಹಿಸುತ್ತಿದ್ದಾರೆ. ಅವರು ತಮ್ಮ ಡ್ರೊಸೋಫಿಲಾ ದ ಅಧ್ಯಯನಕ್ಕೆ ಹೆಸರುವಾಸಿಯಾಗಿದ್ದಾರೆ. ವಿಶೇಷವಾಗಿ ಅದರ ಅನುಬಂಧಗಳ ವಿಕಸನ ಮತ್ತು ಹೋಮಿಯೋಟಿಕ್ ಸೆಲೆಕ್ಟರ್ ಜೀನ್ ಗಳ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸೈನ್ಸ್ ಅಂಡ್ ಟೆಕ್ನಾಲಜಿ ಇಲಾಖೆಯ ಜೆ.ಸಿ. ಬೋಸ್ ರಾಷ್ಟ್ರೀಯ ಫೆಲೋ ಮತ್ತು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ [೩], ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ಮತ್ತು ಭಾರತದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್ ನ ಚುನಾಯಿತ ಸದಸ್ಯರಾಗಿದ್ದಾರೆ.[೪] ವೈಜ್ಞಾನಿಕ ಸಂಶೋಧನೆಗಾಗಿ ಭಾರತ ಸರ್ಕಾರದ ಅತ್ಯುನ್ನತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಅವರು ಜೈವಿಕ ವಿಜ್ಞಾನಿಗಳು ನೀಡಿದ ಕೊಡುಗೆಗಳಿಗಾಗಿ, ೨೦೦೮ ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅತ್ಯುನ್ನತ ಪ್ರಶಸ್ತಿಯಾದ, ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ, ಶಾಂತಿ ಸ್ವರೂಪ್ ಭಟ್ ನಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.[೫]
ಜನನ
[ಬದಲಾಯಿಸಿ]ಎಲ್.ಎಸ್.ಶಶಿಧರ ರವರು ೨೩ ಮಾರ್ಚ್ ೧೯೬೩ ರಂದು ಜನಿಸಿದರು.[೬][೭]
ಶಿಕ್ಷಣ
[ಬದಲಾಯಿಸಿ]ಶಶಿಧರ ರವರು ೧೯೮೫ ರಲ್ಲಿ ಧಾರವಾಡ ವಿಶ್ವವಿದ್ಯಾನಿಲಯದಿಂದ ಕೃಷಿ ವಿಜ್ಞಾನದಲ್ಲಿ ಪದವಿಯನ್ನು ಪಡೆದರು[೮], ನಂತರ ಅದೇ ವಿಶ್ವವಿದ್ಯಾನಿಲಯದಿಂದ ಜೆನೆಟಿಕ್ಸ್ ಮತ್ತು ಪ್ಲಾಂಟ್ ಬ್ರೀಡಿಂಗ್ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ೧೯೯೧ ರಲ್ಲಿ ಅವರು ಡಾಕ್ಟರೇಟ್ ಅಧ್ಯಯನಕ್ಕಾಗಿ ಕೇಂಬ್ರಿಡ್ಜ್ ಗೆ ತೆರಳಿದರು. ಕೇಂಬ್ರಿಡ್ಜ್ ನಲ್ಲಿ(೧೯೯೧-೧೯೯೩) ಅವರ ಡಾಕ್ಟರೇಟ್ ಅಧ್ಯಯನಗಳು ಪೂರ್ಣಗೊಂಡ ನಂತರ, ಅವರು ಜೈವಿಕ ವಿಜ್ಞಾನದ ರಾಷ್ಟ್ರೀಯ ಕೇಂದ್ರದಲ್ಲಿ ಸೇರಲು ಭಾರತಕ್ಕೆ ಹಿಂದಿರುಗಿದರು ಮತ್ತು ಎರಡು ವರ್ಷಗಳ ಕಾಲ ಸಂದರ್ಶಕರಾಗಿ ಕೆಲಸ ಮಾಡಿದರು. ಪ್ರಸ್ತುತ ಶಶಿಧರ ರವರು ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಸ್ಥಾನಿಕ ಸದಸ್ಯರಾಗಿದ್ದಾರೆ.[೯]
ಲೀಗಸಿ
[ಬದಲಾಯಿಸಿ]
ಶಶಿಧರ ರವರ ಸಂಶೋಧನಾ ಬೆಳವಣಿಗೆಗಳು ಜೀವಶಾಸ್ತ್ರದ ಮೇಲೆ ಕೇಂದ್ರೀಕೃತವಾಗಿದ್ದವು. ನಿರ್ದಿಷ್ಟವಾಗಿ ಅವಯಗಳ ಬೆಳವಣಿಗೆ ಮತ್ತು ಅಲ್ಟ್ರಾಬಿಥೊರಾಕ್ಸ್ ,[೧೦] ಒಂದು ಹಾಕ್ಸ್ ಜೀನ್ ಸಂಶೋಧನಾ ಕಾರ್ಯದಲ್ಲಿ ಆಸಕ್ತಿ ವಹಿಸಿದ್ದರು.


ಪ್ರಶಸ್ತಿಗಳು
[ಬದಲಾಯಿಸಿ]- ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನಿಂದ ಜೈವಿಕ ವಿಜ್ಞಾನದಲ್ಲಿ ತಂತ್ರಜ್ಞಾನ ಪ್ರಶಸ್ತಿ - ೨೦೦೩.
- ಸೈನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಅಟಾಮಿಕ್ ಎನರ್ಜಿ ಇಲಾಖೆಯಿಂದ ಅತ್ಯುತ್ತಮ ರಿಸರ್ಚ್ ಇನ್ವೆಸ್ಟಿಗೇಟರ್ ಅವಾರ್ಡ್ - ೨೦೦೬.[೧೧]
- ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೨೦೦೮.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ ಡ್ರೊಸೊಫಿಲಾ
- ↑ ಐಐಎಸ್ಸಿ
- ↑ "ಇಂಡಿಯನ್ ಫೆಲೋ". Archived from the original on 2019-05-30. Retrieved 2019-05-30.
- ↑ [೧]
- ↑ ಭಟ್ನಗರ್ ಪ್ರಶಸ್ತಿ ಪುರಸ್ಕೃತರು
- ↑ ಎಲ್.ಎಸ್.ಶಶಿಧರ
- ↑ ಜನನ
- ↑ "ಬಿ.ಎಸ್ಸಿ". Archived from the original on 2019-05-30. Retrieved 2019-05-30.
- ↑ ಪ್ರೊ.ಎಲ್.ಎಸ್.ಶಶಿಧರ, ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಚುನಾಯಿತ ಸದಸ್ಯರು
- ↑ ಅಲ್ಟ್ರಾಬಿಥೊರಾಕ್ಸ್
- ↑ ಅತ್ಯುತ್ತಮ ರಿಸರ್ಚ್ ಇನ್ವೆಸ್ಟಿಗೇಟರ್ ಪ್ರಶಸ್ತಿ
- ↑ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ