ವಿಷಯಕ್ಕೆ ಹೋಗು

ಎಲಿಜಾ ಆಕ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Eliza Acton
ಆಕ್ಟನ್ ಅವರ ಅತ್ಯುತ್ತಮ ಕೃತಿಯಾದ "ಮಾಡರ್ನ್ ಕುಕರಿ ಫಾರ್ ಪ್ರೈವೇಟ್ ಫ್ಯಾಮಿಲಿಸ್" ನಿಂದ ಫ್ರಾಂಟಿಸ್ಪೀಸ್
ಜನನ(೧೭೯೯-೦೪-೧೭)೧೭ ಏಪ್ರಿಲ್ ೧೭೯೯
ಬ್ಯಾಟಲ್, ಸಸೆಕ್ಸ್, ಇಂಗ್ಲೆಂಡ್
ಮರಣ13 February 1859(1859-02-13) (aged 59)
ಹ್ಯಾಂಪ್ ಸ್ಟೆಡ್, ಲಂಡನ್, ಇಂಗ್ಲೆಂಡ್
ವೃತ್ತಿಕವಿ, ಆಹಾರ ಬರಹಗಾರ

ಎಲಿಜಾ ಆಕ್ಟನ್ (೧೭ ಏಪ್ರಿಲ್ ೧೭೯೯ - ೧೩ ಫೆಬ್ರವರಿ ೧೮೫೯) ಅವರು ಇಂಗ್ಲಿಷ್ ಆಹಾರ ಬರಹಗಾರ್ತಿ ಮತ್ತು ಕವಿಯಾಗಿದ್ದು, ದೇಶೀಯ ಓದುಗರನ್ನು ಗುರಿಯಾಗಿಟ್ಟುಕೊಂಡು ಬ್ರಿಟನ್‌ನ ಮೊದಲ ಅಡುಗೆ ಪುಸ್ತಕಗಳಲ್ಲಿ ಒಂದಾದ ಮಾಡರ್ನ್ ಕುಕರಿ ಫಾರ್ ಪ್ರೈವೇಟ್ ಫ್ಯಾಮಿಲಿಸ್ ಅನ್ನು ಬರೆದರು. ಈ ಪುಸ್ತಕವು ಇತ್ತೀಚಿನ ಬರಹಗಾರರಿಗೆ ಅಡುಗೆಗೆ ಬೇಕಾಗುವ ಪದಾರ್ಥಗಳನ್ನು ಪಟ್ಟಿ ಮಾಡುವ ಮತ್ತು ಪ್ರತಿ ಪಾಕವಿಧಾನಕ್ಕೆ ಬೇಕಾಗುವ ಸಮಯವನ್ನು ನೀಡುವ ಸಾರ್ವತ್ರಿಕ ಅಭ್ಯಾಸವನ್ನು ಪರಿಚಯಿಸಿತು. ಈ ಪುಸ್ತಕದಲ್ಲಿ ಮೊದಲ ಬಾರಿ ಬ್ರಸೆಲ್ಸ್ ಮೊಳಕೆ ಕಾಳುಗಳು ಮತ್ತು ಸ್ಪಾಗೆಟ್ಟಿಯ ಪಾಕವಿಧಾನಗಳನ್ನು ಬರೆಯಲಾಗಿತ್ತು. ಇದು ಆಕ್ಟನ್ "ಕ್ರಿಸ್ಮಸ್ ಪುಡ್ಡಿಂಗ್" ಎಂದು ಕರೆಯುವ ಮೊದಲ ಪಾಕವಿಧಾನವನ್ನು ಸಹ ಒಳಗೊಂಡಿದೆ; ಈ ಖಾದ್ಯವನ್ನು ಸಾಮಾನ್ಯವಾಗಿ ಪ್ಲಮ್ ಪುಡ್ಡಿಂಗ್ ಎಂದು ಕರೆಯಲಾಗುತ್ತಿತ್ತು. ಇದರ ಪಾಕವಿಧಾನಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದವು, ಆದರೆ ಹೆಸರು ಮತ್ತು ಪಾಕವಿಧಾನವನ್ನು ಒಟ್ಟಿಗೆ ಸೇರಿಸಿದವರಲ್ಲಿ ಆಕ್ಟನ್ ಮೊದಲಿಗರಾಗಿದ್ದರು.

ಆಕ್ಟನ್ ೧೭೯೯ ರಲ್ಲಿ ಸಸೆಕ್ಸ್ ನಲ್ಲಿ ಜನಿಸಿದರು. ಅವರು ಸಫೋಲ್ಕನ್‌ನಲ್ಲಿ ಬೆಳೆದರು. ಅಲ್ಲಿ ಅವರು ಫ್ರಾನ್ಸ್‌ನಲ್ಲಿ ಸಮಯ ಕಳೆಯುವ ಮೊದಲು ಬಾಲಕಿಯರ ಬೋರ್ಡಿಂಗ್ ಶಾಲೆಯನ್ನು ನಡೆಸುತ್ತಿದ್ದರು. ೧೮೨೬ ರಲ್ಲಿ ಇಂಗ್ಲೆಂಡ್‌ಗೆ ಮರಳಿದ ನಂತರ ಅವರು ಕವನ ಸಂಗ್ರಹವನ್ನು ಪ್ರಕಟಿಸಿದರು ಮತ್ತು ೧೮೪೫ ರಲ್ಲಿ ಮಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿಸಿಕೊಂಡು ತಮ್ಮ ಅಡುಗೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಆಕರ್ಷಕ ಗದ್ಯದಲ್ಲಿ ಬರೆಯಲಾದ ಈ ಪುಸ್ತಕವು ವಿಮರ್ಶಕರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು. ಇದು ವರ್ಷದೊಳಗೆ ಮರುಮುದ್ರಣಗೊಂಡಿತು ಮತ್ತು ೧೯೧೮ ರವರೆಗೆ ಹಲವಾರು ಆವೃತ್ತಿಗಳು ಬಂದವು. ನಂತರ ಪುಸ್ತಕದ ಪ್ರಕಾಶಕರಾದ ಲಾಂಗ್ಮನ್ ಮರುಮುದ್ರಣ ಮಾಡದಿರುವ ನಿರ್ಧಾರವನ್ನು ತೆಗೆದುಕೊಂಡರು. ೧೮೫೭ ರಲ್ಲಿ ಆಕ್ಟನ್ ದಿ ಇಂಗ್ಲಿಷ್ ಬ್ರೆಡ್-ಬುಕ್ ಫಾರ್ ಡೊಮೆಸ್ಟಿಕ್ ಯೂಸ್ ಅನ್ನು ಪ್ರಕಟಿಸಿದರು, ಇದು ಮಾಡರ್ನ್ ಕುಕರಿಗಿಂತ ಹೆಚ್ಚು ಶೈಕ್ಷಣಿಕ ಮತ್ತು ಅಧ್ಯಯನಶೀಲ ಕೃತಿಯಾಗಿದೆ. ಈ ಕೃತಿಯು ಇಂಗ್ಲೆಂಡ್‌ನಲ್ಲಿ ಬ್ರೆಡ್ ತಯಾರಿಕೆಯ ಇತಿಹಾಸ, ಯುರೋಪಿಯನ್ ಬೇಕಿಂಗ್ ವಿಧಾನಗಳ ಅಧ್ಯಯನ ಮತ್ತು ಹಲವಾರು ಪಾಕವಿಧಾನಗಳನ್ನು ಒಳಗೊಂಡಿತ್ತು.

ಅದರ ಪ್ರಕಟಣೆಯ ನಂತರದ ವರ್ಷಗಳಲ್ಲಿ, ಮಾಡರ್ನ್ ಕುಕರಿ ಇಸಾಬೆಲ್ಲಾ ಬೀಟನ್ ಅವರ ಮಿಸ್ಟ್ರೆಸ್ ಬೀಟನ್ ಬುಕ್ ಆಫ್ ಹೌಸ್ ಹೋಲ್ಡ್ ಮ್ಯಾನೇಜ್ ಮೆಂಟ್ (೧೮೬೧) ಎಂಬ ಪುಸ್ತಕ ಆಕ್ಟನ್ ಅವರ ಪುಸ್ತಕಕ್ಕಿಂತ ಹೆಚ್ಚು ಮಾರಾಟವಾಯಿತು. ಆದರೆ ಇದರಲ್ಲಿ ಆಕ್ಟನ್ ಅವರ ಕೆಲಸದಿಂದ ಕೃತಿಚೌರ್ಯಗೊಂಡ ಹಲವಾರು ಪಾಕವಿಧಾನಗಳು ಸೇರಿವೆ. ಮಾಡರ್ನ್ ಕುಕರಿ ೧೯೯೪ ರವರೆಗೆ ಪೂರ್ಣವಾಗಿ ಮರುಮುದ್ರಣಗೊಳ್ಳದಿದ್ದರೂ, ಈ ಪುಸ್ತಕವು ೨೦ ನೇ ಶತಮಾನದ ದ್ವಿತೀಯಾರ್ಧದಲ್ಲಿ ಇಂಗ್ಲಿಷ್ ಅಡುಗೆಯವರಿಂದ ಮೆಚ್ಚುಗೆ ಪಡೆದಿದೆ ಮತ್ತು ಎಲಿಜಬೆತ್ ಡೇವಿಡ್, ಜೇನ್ ಗ್ರಿಗ್ಸನ್, ಡೆಲಿಯಾ ಸ್ಮಿತ್ ಮತ್ತು ರಿಕ್ ಸ್ಟೈನ್ ಸೇರಿದಂತೆ ಅನೇಕರ ಮೇಲೆ ಪ್ರಭಾವ ಬೀರಿದೆ.

ಜೀವನಚರಿತ್ರೆ

[ಬದಲಾಯಿಸಿ]
ಆಕ್ಟನ್ ಅವರ ಬೋರ್ಡಿಂಗ್ ಶಾಲೆಗಾಗಿ "ದಿ ಇಪ್ಸ್ವಿಚ್ ಜರ್ನಲ್" ನಲ್ಲಿ ನೀಡಿದ ಜಾಹೀರಾತು

ಆರಂಭಿಕ ಜೀವನ

[ಬದಲಾಯಿಸಿ]

ಎಲಿಜಾ ಆಕ್ಟನ್ ೧೭೯೯ ರ ಏಪ್ರಿಲ್ ೧೭ ರಂದು ಸಸೆಕ್ಸ್ ನ ಬ್ಯಾಟಲ್ ನಲ್ಲಿ ಜನಿಸಿದರು ಮತ್ತು ಜೂನ್ ೫ ರಂದು ತನ್ನ ಸ್ಥಳೀಯ ಪ್ಯಾರಿಷ್ ಚರ್ಚ್ ನಲ್ಲಿ ದೀಕ್ಷಾಸ್ನಾನ ಪಡೆದರು. ಅವರು ಜಾನ್ ಆಕ್ಟನ್ ಎಂಬ ಮದ್ಯ ವ್ಯಾಪಾರಿ ಮತ್ತು ಅವರ ಪತ್ನಿ ಎಲಿಜಬೆತ್‌ರ ಮಗಳು.[] ಆರು ಸಹೋದರಿಯರು ಮತ್ತು ಮೂವರು ಸಹೋದರರಲ್ಲಿ ಇವರೇ ಹಿರಿಯರಾಗಿದ್ದರು. ೧೮೦೦ ರ ಹೊತ್ತಿಗೆ, ಕುಟುಂಬವು ಸಫೋಲ್ಕ‌ನ್‌ನ ಇಪ್ಸ್ವಿಚ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಸೇಂಟ್ ಪೀಟರ್ಸ್ ಬ್ರೂವರಿಗೆ ಹೊಂದಿಕೊಂಡಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಜಾನ್ ಟ್ರಾಟ್ಮನ್, ಹ್ಯಾಲಿಡೇ ಮತ್ತು ಸ್ಟಡ್ ಎಂಬ ಬ್ರೂವರಿಯನ್ನು ನಡೆಸುತ್ತಿದ್ದ ಉದ್ಯೋಗವನ್ನು ಪಡೆದರು.[] ೧೮೧೧ ರಲ್ಲಿ ಟ್ರಾಟ್ಮನ್ ನಿಧನರಾದರು ಮತ್ತು ಜಾನ್ ಅವರಿಗೆ ಸಂಸ್ಥೆಯ ಕಿರಿಯ ಪಾಲುದಾರರಾಗುವ ಅವಕಾಶವನ್ನು ನೀಡಲಾಯಿತು. ಅವರು ಒಪ್ಪಿಕೊಂಡರು ಮತ್ತು ವ್ಯವಹಾರವನ್ನು ಸ್ಟಡ್, ಹ್ಯಾಲಿಡೇ ಮತ್ತು ಆಕ್ಟನ್ ಎಂದು ಮರುನಾಮಕರಣ ಮಾಡಲಾಯಿತು.[]

೧೮೧೭ ರಲ್ಲಿ ಆಕ್ಟನ್, ಮಿಸ್ ನಿಕೋಲ್ಸನ್ ಳೊಂದಿಗೆ ಇಪ್ಸ್ವಿಚ್ ನ ಹೊರಗಿನ ಕ್ಲೇಡನ್ ನಲ್ಲಿ "ಯುವತಿಯರಿಗಾಗಿ ಬೋರ್ಡಿಂಗ್ ಶಾಲೆಯನ್ನು" ತೆರೆದರು.[][] ೧೮೧೯ ರಲ್ಲಿ ಆಕ್ಟನ್ ಶಾಲೆಯನ್ನು ತೊರೆದು ಸೆಪ್ಟೆಂಬರ್‌ನಲ್ಲಿ ತನ್ನ ಸಹೋದರಿಯರೊಂದಿಗೆ ಗ್ರೇಟ್ ಬೀಲಿಂಗ್ಸ್ನಲ್ಲಿ ಮತ್ತೊಂದು ಶಾಲೆಯನ್ನು ತೆರೆದರು.[][] ಶಾಲೆಯು ೧೮೨೨ ರಲ್ಲಿ ವುಡ್ಬ್ರಿಡ್ಜ್‌ಗೆ ಮೂರು ಮೈಲಿ (೪.೮ ಕಿಮೀ) ಸ್ಥಳಾಂತರಗೊಂಡಿತು ಮತ್ತು ಬಹುಶಃ ೧೮೨೫ ರ ವೇಳೆಗೆ ಮುಚ್ಚಲ್ಪಟ್ಟಿತು.

ತನ್ನ ಜೀವನದ ಆರಂಭದಲ್ಲಿ ಆಕ್ಟನ್ ಫ್ರಾನ್ಸ್‌ನಲ್ಲಿ ಸ್ವಲ್ಪ ಸಮಯವನ್ನು ಕಳೆದರು. ಆದರೆ ಅವರು ಇಂಗ್ಲೆಂಡ್ ಅನ್ನು ಯಾವಾಗ ತೊರೆದರು ಎಂಬುದು ತಿಳಿದಿಲ್ಲ.[] ಹಾರ್ಡಿ ಅವರು ೧೮೨೩ ರಲ್ಲಿ ಪ್ರಯಾಣಿಸಿದ ಸಾಧ್ಯತೆಯಿದೆ ಎಂದು ಪರಿಗಣಿಸುತ್ತಾರೆ. ಆಹಾರ ಇತಿಹಾಸಕಾರ ಎಲಿಜಬೆತ್ ರೇ, ಆಕ್ಸ್ಫರ್ಡ್ ಡಿಕ್ಷನರಿ ಆಫ್ ನ್ಯಾಷನಲ್ ಬಯೋಗ್ರಫಿಯಲ್ಲಿ ಬರೆಯುತ್ತಾ, ಆಕ್ಟನ್ ತನ್ನ ಆರೋಗ್ಯದ ಒಳಿತಿಗಾಗಿ ವಿದೇಶಕ್ಕೆ ಪ್ರಯಾಣಿಸಿದರು ಎಂದು ಹೇಳುತ್ತಾರೆ, ಏಕೆಂದರೆ ಅವರು ದುರ್ಬಲರಾಗಿದ್ದರು.[] ಅವರು ಪ್ಯಾರಿಸ್ಗೆ ತೆರಳಿದಾಗ ಗರ್ಭಿಣಿಯಾಗಿದ್ದರು ಮತ್ತು ಕಾನೂನುಬಾಹಿರ ಮಗಳಿಗೆ ಜನ್ಮ ನೀಡಲು ವಿದೇಶಕ್ಕೆ ಹೋದರು. ಆಹಾರ ಬರಹಗಾರರಾದ ಮೇರಿ ಐಲೆಟ್ ಮತ್ತು ಆಲಿವ್ ಆರ್ಡಿಶ್, ಆಕ್ಟನ್ ಅವರ ಮಗುವನ್ನು ಎಲಿಜಾಳ ಸಹೋದರಿ ಸಾರಾ ಬೆಳೆಸಿದರು ಎಂದು ಸಿದ್ಧಾಂತಿಸುತ್ತಾರೆ.[೧೦] "ಕುಟುಂಬ ಸಂಪ್ರದಾಯವನ್ನು ಹೊರತುಪಡಿಸಿ ಇದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ಇಬ್ಬರೂ ಗಮನಿಸುತ್ತಾರೆ.[೧೧] ಹಾರ್ಡಿ ಈ ಸಿದ್ಧಾಂತವನ್ನು ತಳ್ಳಿಹಾಕುತ್ತಾ, ಆಕ್ಟನ್ ಗೆ ಸಾರಾ ಎಂಬ ಸಹೋದರಿ ಇರಲಿಲ್ಲ, ಸರಿಯಾದ ವಯಸ್ಸಿನ ಮಗುವಿಗೆ ಕಾರಣವಾಗುವ ಯಾವುದೇ ದೀಕ್ಷಾಸ್ನಾನ ಅಥವಾ ಜನಗಣತಿ ದಾಖಲೆಗಳು ಕಂಡುಬಂದಿಲ್ಲ ಎಂದು ಹೇಳುತ್ತಾರೆ. ಫ್ರಾನ್ಸ್ನಲ್ಲಿದ್ದಾಗ ಆಕ್ಟನ್ ಫ್ರೆಂಚ್ ಸೇನಾಧಿಕಾರಿಯೊಂದಿಗೆ ಅತೃಪ್ತ ಸಂಬಂಧವನ್ನು ಹೊಂದಿದ್ದರು.[೧೨] ಆದರೆ ಅವರಿಗೆ ನಿಶ್ಚಿತಾರ್ಥವಾಗಿದ್ದ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ನಂತರ ಅದು ಮುರಿದುಬಿದ್ದಿತು. ಅವರು ಬಹುಶಃ ೧೮೨೬ ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದರು.[೧೩]

ಕವಯಿತ್ರಿ

[ಬದಲಾಯಿಸಿ]
ಬೋರ್ಡಿಕ್ ಹೌಸ್ (ಈಗ ರೆಡ್ ಹೌಸ್), ಟೋನ್ ಬ್ರಿಡ್ಜ್ ನಲ್ಲಿದೆ

ಅವರು ತಮ್ಮ ಒಂದು ಕವಿತೆಯ ಕೆಳಭಾಗದಲ್ಲಿ ಬರೆಯುತ್ತಿದ್ದ ವರ್ಷದ ಪ್ರಕಾರ ಆಕ್ಟನ್ ಕನಿಷ್ಠ ೧೮೨೨ ರಿಂದ ಕವಿತೆಗಳನ್ನು ಬರೆಯುತ್ತಿದ್ದರು.[೧೪] ಅವರು ೧೮೨೬ ರಲ್ಲಿ ಫ್ರಾನ್ಸ್ನಲ್ಲಿದ್ದಾಗ "ಆನ್ ಅಪ್ರೋಚಿಂಗ್ ಪ್ಯಾರಿಸ್" ಎಂಬ ಒಂದು ಪುಸ್ತಕವನ್ನು ಬರೆದರು. ಅವರು ಇಂಗ್ಲೆಂಡಿಗೆ ಹಿಂದಿರುಗಿದಾಗ, ಲಾಂಗ್ಮನ್ ಪ್ರಕಟಿಸಲು ಒಂದು ಸಂಗ್ರಹವನ್ನು ಏರ್ಪಡಿಸಿದರು.[೧೫][೧೬] ಆ ಸಮಯದಲ್ಲಿ ಪ್ರಕಾಶಕರಿಗೆ ಅಭ್ಯಾಸದಂತೆ, ಆಕ್ಟನ್ ಕೃತಿಯೊಳಗೆ ಪಟ್ಟಿ ಮಾಡಲಾದ ಚಂದಾದಾರರ ಹೆಸರುಗಳನ್ನು - ಪ್ರತಿಗಾಗಿ ಪೂರ್ವಪಾವತಿ ಮಾಡಿದವರು- ಒದಗಿಸಬೇಕಾಗಿತ್ತು; ಬಹುತೇಕ ಎಲ್ಲರೂ ಸಫೋಲ್ಕ್ ನಿಂದ ಬಂದವರು.[೧೭][೧೮] ಅಕ್ಟೋಬರ್ ೧೮೨೬ ರಲ್ಲಿ ೩೨೮ ಪ್ರತಿಗಳನ್ನು ಮುದ್ರಿಸಲಾಯಿತು ಮತ್ತು ಒಂದು ತಿಂಗಳೊಳಗೆ ಮರುಮುದ್ರಣದ ಅಗತ್ಯವಿತ್ತು. ನಂತರ ಅವರು ಕೆಲವು ದೀರ್ಘ ಕವಿತೆಗಳನ್ನು ಬರೆದರು, ಇದರಲ್ಲಿ ೧೮೩೮ ರಲ್ಲಿ ಸಡ್ಬರಿ ಕ್ರಾನಿಕಲ್‌ನಲ್ಲಿ ಮುದ್ರಿಸಲ್ಪಟ್ಟ "ದಿ ಕ್ರಾನಿಕಲ್ಸ್ ಆಫ್ ಕ್ಯಾಸ್ಟಲ್ ಫ್ರೇಮ್ಲಿಂಗ್ಹ್ಯಾಮ್" ಮತ್ತು ೧೮೪೨ ರಲ್ಲಿ ರಾಣಿ ವಿಕ್ಟೋರಿಯಾ ಸ್ಕಾಟ್ಲೆಂಡ್‌ಗೆ ಮೊದಲ ಭೇಟಿಯ ಸಂದರ್ಭದಲ್ಲಿ ಬರೆದ "ದಿ ವಾಯ್ಸ್ ಆಫ್ ದಿ ನಾರ್ತ್" ಸೇರಿವೆ.[೧೯][೨೦] ಇತರ ಕವಿತೆಗಳನ್ನು ಸ್ಥಳೀಯ ನಿಯತಕಾಲಿಕವಾದ ಸಡ್ಬರಿ ಪಾಕೆಟ್ ಬುಕ್ನಲ್ಲಿ ಪ್ರಕಟಿಸಲಾಯಿತು.[೨೧]

೧೮೨೭ ರಲ್ಲಿ ಜಾನ್ ಆಕ್ಟನ್ ಅವರನ್ನು ದಿವಾಳಿ ಎಂದು ಘೋಷಿಸಲಾಯಿತು ಮತ್ತು ಅವರು ಪಾಲುದಾರರಾಗಿದ್ದ ಕಂಪನಿಯನ್ನು ವಿಸರ್ಜಿಸಲಾಯಿತು.[೨೨] ಅವರ ವ್ಯವಹಾರ ಪಾಲುದಾರರಲ್ಲಿ ಒಬ್ಬರು ಅವರ ವಿರುದ್ಧದ ಆರೋಪದಲ್ಲಿ ಭಾಗಿಯಾಗಿದ್ದರು. ದಿವಾಳಿತನದ ಕಮಿಷನರ್ ಜಾನ್ ಅವರಿಗೆ ತನ್ನ ಸಂಪತ್ತನ್ನು ಬಹಿರಂಗಪಡಿಸಲು ಆಯುಕ್ತರ ಕಚೇರಿಗೆ ಶರಣಾಗುವಂತೆ ಆದೇಶಿಸಿದನು. ಆದರೆ ಅವರು ಫ್ರಾನ್ಸ್ ಗೆ ಪಲಾಯನ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬವು ಕೆಂಟ್‌ನ ಟೋನ್ಬ್ರಿಡ್ಜ್‌ನಲ್ಲಿರುವ ಬೋರ್ಡಿಕ್ ಹೌಸ್‌ಗೆ ಸ್ಥಳಾಂತರಗೊಂಡಿತು.[೨೩] ಅಲ್ಲಿ ಎಲಿಜಾ ಅವರ ತಾಯಿ ಎಲಿಜಬೆತ್ ಆಕ್ಟನ್, ದೊಡ್ಡ ಕಟ್ಟಡವನ್ನು ಮೇಲ್ವರ್ಗದ ಅತಿಥಿಗಳಿಗೆ, ವಿಶೇಷವಾಗಿ ರಾಯಲ್ ಟ್ಯೂನ್ಬ್ರಿಡ್ಜ್ ವೆಲ್ಸ್‌ಗೆ ಭೇಟಿ ನೀಡಲು ಮತ್ತು ಅಲ್ಲಿನ ಸ್ಪಾ ಸೌಲಭ್ಯಗಳನ್ನು ಆನಂದಿಸಲು ಬಯಸುವವರಿಗೆ ಬೋರ್ಡಿಂಗ್ ಹೌಸ್ ಆಗಿ ಪರಿವರ್ತಿಸಿದರು.[೨೪][೨೫] ಎಲಿಜಬೆತ್ ೧೮೪೧ ರ ಸುಮಾರಿಗೆ ಬೋರ್ಡಿಕ್ ಹೌಸ್ ಅನ್ನು ತೊರೆದಿರಬಹುದು, ಆದರೂ ಅವರ ಮಗಳು ನಿವಾಸದಲ್ಲೇ ಉಳಿದಳು.

ಅಡುಗೆ ಬರಹಗಾರ್ತಿ

[ಬದಲಾಯಿಸಿ]
ಮಾಡರ್ನ್ ಕುಕರಿ ಫಾರ್ ಪ್ರೈವೇಟ್ ಫ್ಯಾಮಿಲೀಸ್ನ ೧೮೪೫ ರ ಆವೃತ್ತಿಯ ವಿವರಣೆಗಳು.
ಗೋಮಾಂಸ ಕಡಿತ ಸೇರಿದಂತೆ ಪದಾರ್ಥಗಳ ಬಗ್ಗೆ ಮಾಹಿತಿ
ಹ್ಯಾಮ್ ಅಥವಾ ಮೀನಿಗೆ ತಾಮ್ರದ ಪಾತ್ರೆ ಸೇರಿದಂತೆ ಅಡುಗೆ ಉಪಕರಣಗಳ ವಿವರಗಳು
ಜೆಲ್ಲಿಯಿಂದ ತುಂಬಿದ ಕಿತ್ತಳೆ ಸೇರಿದಂತೆ ಪ್ರಸ್ತುತಿಯ ಉದಾಹರಣೆಗಳು

ಹಾರ್ಡಿಯ ಪ್ರಕಾರ ೧೮೩೫ ರಲ್ಲಿ, ಐಲೆಟ್ ಮತ್ತು ಆರ್ಡಿಶ್ ಪ್ರಕಾರ ೧೮೩೭ ರಲ್ಲಿ, ಆಕ್ಟನ್ ಲಾಂಗ್ಮನ್‌ಗೆ ಪ್ರಕಟಣೆಗಾಗಿ ಇನ್ನೂ ಹೆಚ್ಚಿನ ಕವಿತೆಗಳನ್ನು ಕಳುಹಿಸಿದರು. ಕಂಪನಿಯು ಕವಿತೆಗಳನ್ನು ನಿರಾಕರಿಸಿತು ಮತ್ತು ಅದರ ಬದಲು ಅಡುಗೆ ಪುಸ್ತಕವನ್ನು ಬರೆಯಲು ಸೂಚಿಸಿತು. ಹಾರ್ಡಿ ಈ ಕಥೆಯನ್ನು ಅಪೊಕ್ರಿಫಾಲ್ ಎಂದು ಪರಿಗಣಿಸುತ್ತಾನೆ. ಆಕ್ಟನ್ ತಾನೇ ಹೇಳುವ ಪ್ರಕಾರ, ತನ್ನ ಅಡುಗೆ ಪುಸ್ತಕವನ್ನು ಅಭಿವೃದ್ಧಿಪಡಿಸಲು ಹತ್ತು ವರ್ಷಗಳನ್ನು ತೆಗೆದುಕೊಂಡಳು.[೨೬] ಇದನ್ನು ಜನವರಿ ೧೮೪೫ ರಲ್ಲಿ ಅದರ ಎಲ್ಲಾ ಶಾಖೆಗಳಲ್ಲಿ ಮಾಡರ್ನ್ ಕುಕರಿ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಯಿತು. ಈ ಕೆಲಸವು ಇಂಗ್ಲಿಷ್ ಮಧ್ಯಮ ವರ್ಗಗಳನ್ನು ಗುರಿಯಾಗಿರಿಸಿಕೊಂಡಿತ್ತು.[೨೭]

ಮಾಡರ್ನ್ ಕುಕರಿಯು ಮುಖ್ಯವಾಗಿ ಇಂಗ್ಲಿಷ್ ಪಾಕವಿಧಾನಗಳನ್ನು ಒಳಗೊಂಡಿದೆ. ಆದಾಗ್ಯೂ ಆಕ್ಟನ್ ಅವುಗಳಲ್ಲಿ ಅನೇಕವನ್ನು "ಫ್ರೆಂಚ್" ಎಂದು ಹೆಸರಿಸಿದ್ದಾರೆ. ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕ ಸುಸಾನ್ ಝ್ಲೋಟ್ನಿಕ್ ಅವರ ಪ್ರಕಾರ, ಒಂದು ಅಧ್ಯಾಯವು ಪಲ್ಯಗಳನ್ನು (ಮತ್ತು ಮಡಕೆಯ ಮಾಂಸಗಳನ್ನು) ಒಳಗೊಂಡಿದೆ ಮತ್ತು "ಚಟ್ನಿ"ಗಾಗಿ ಪಾಕವಿಧಾನಗಳನ್ನು ನೀಡುತ್ತದೆ. ಅವುಗಳನ್ನು ಸಂಪೂರ್ಣವಾಗಿ ಭಾರತೀಯ ಮೂಲದ ಬದಲು ನೈಸರ್ಗಿಕ ಆಂಗ್ಲೋ-ಇಂಡಿಯನ್ ಖಾದ್ಯವೆಂದು ಪರಿಗಣಿಸುತ್ತದೆ.[೨೮] ಈ ಪುಸ್ತಕವು ಬ್ರಸೆಲ್ಸ್ ಮೊಳಕೆ ಕಾಳುಗಳ ಮೊದಲ ಪಾಕವಿಧಾನವನ್ನು ಒಳಗೊಂಡಿದೆ ಮತ್ತು ಇಂಗ್ಲಿಷ್ ಪಾಕಶಾಲೆಯ ಪುಸ್ತಕದಲ್ಲಿ ಸ್ಪಾಗೆಟ್ಟಿ ಎಂಬ ಪದದ ಮೊದಲ ಬಳಕೆಯನ್ನು ಒಳಗೊಂಡಿದೆ.[೨೯][೩೦] ಇದನ್ನು ಅವರು ಸ್ಪಾರ್ಗೆಟ್ಟಿ ಎಂದು ಉಚ್ಚರಿಸಿದರು.[೩೧] ಆಕ್ಟನ್ "ಕ್ರಿಸ್ ಮಸ್ ಪುಡ್ಡಿಂಗ್" ಎಂದು ಕರೆದ ಮೊದಲ ಪಾಕವಿಧಾನವನ್ನು ಸಹ ಇದು ಒಳಗೊಂಡಿದೆ. ಈ ಖಾದ್ಯವನ್ನು ಸಾಮಾನ್ಯವಾಗಿ ಪ್ಲಮ್ ಪುಡ್ಡಿಂಗ್ ಎಂದು ಕರೆಯಲಾಗುತ್ತಿತ್ತು.[೩೨] ಇದರ ಪಾಕವಿಧಾನಗಳು ಈ ಹಿಂದೆ ಕಾಣಿಸಿಕೊಂಡಿದ್ದವು, ಆದಾಗ್ಯೂ ಆಕ್ಟನ್ ಹೆಸರು ಮತ್ತು ಪಾಕವಿಧಾನವನ್ನು ಒಟ್ಟಿಗೆ ಸೇರಿಸಿದವರಲ್ಲಿ ಮೊದಲಿಗರಾಗಿದ್ದರು.[೩೩]

ಪ್ರತಿ ಪಾಕವಿಧಾನದಲ್ಲಿ ಆಕ್ಟನ್ ಅಡುಗೆ ಪ್ರಕ್ರಿಯೆಯ ವಿವರಣೆ ನೀಡುತ್ತಿದ್ದರು. ನಂತರ ಪದಾರ್ಥಗಳ ಪಟ್ಟಿ ಮತ್ತು ಖಾದ್ಯವನ್ನು ತಯಾರಿಸಲು ಅಗತ್ಯವಿರುವ ಒಟ್ಟು ಅಡುಗೆ ಸಮಯವನ್ನು ನೀಡುತ್ತಿದ್ದರು. ಸಮಯ ಮತ್ತು ಪದಾರ್ಥಗಳ ಸೇರ್ಪಡೆಯೊಂದಿಗೆ, ಮಾಡರ್ನ್ ಕುಕರಿ ಇತರ ಅಡುಗೆ ಪುಸ್ತಕಗಳಿಗಿಂತ ಭಿನ್ನವಾಗಿತ್ತು, ಮತ್ತು ಇದು ಆಕ್ಟನ್ ಅವರ ಸ್ವಂತ ಅಭಿವೃದ್ಧಿಯಾಗಿದೆ. ಪ್ರತಿಯೊಂದು ಪಾಕವಿಧಾನವನ್ನು ಮಾಡಿ ನೋಡಲಾಗಿದೆ ಮತ್ತು "ನಮ್ಮ ಸ್ವಂತ ಛಾವಣಿಯ ಕೆಳಗೆ ಮತ್ತು ನಮ್ಮ ಸ್ವಂತ ತಪಾಸಣೆಯ ಅಡಿಯಲ್ಲಿ ಸಾಬೀತುಪಡಿಸಲಾಗಿದೆ" ಎಂದು ಆಕ್ಟನ್ ಬರೆದಿದ್ದಾರೆ. ಆಹಾರ ಇತಿಹಾಸಕಾರ ಸಾರಾ ಫ್ರೀಮನ್ ಆಕ್ಟನ್ ತಯಾರಿಸಿದ ಅಡುಗೆ ಸೂಚನೆಗಳನ್ನು "ಎಷ್ಟು ಆತ್ಮಸಾಕ್ಷಿಯಿಂದ, ಮತ್ತು ಅಂತಹ ಗ್ಯಾಸ್ಟ್ರೋನಮಿಕ್ ಸೂಕ್ಷ್ಮತೆಯೊಂದಿಗೆ" ಬರೆಯಲಾಗಿದೆ ಎಂದು ವಿವರಿಸುತ್ತಾರೆ."

ಮಾಡರ್ನ್ ಕುಕರಿಯ ವಿಮರ್ಶೆಗಳು ಧನಾತ್ಮಕವಾಗಿದ್ದವು. ದಿ ಮಾರ್ನಿಂಗ್ ಪೋಸ್ಟ್ ನ ವಿಮರ್ಶಕರು ಇದನ್ನು "ನಿಸ್ಸಂದೇಹವಾಗಿ ಇನ್ನೂ ಪ್ರಕಟವಾದ ಕಲೆಯ ಅತ್ಯಂತ ಮೌಲ್ಯಯುತ ಸಂಗ್ರಹ" ಎಂದು ಪರಿಗಣಿಸಿದರು.[೩೪] ದಿ ಸ್ಪೆಕ್ಟೇಟರ್ ನಲ್ಲಿನ ವಿಮರ್ಶೆಯು ಪುಸ್ತಕದ ಕ್ರಮವು "ಬಹಳ ಸ್ವಾಭಾವಿಕವಾಗಿದೆ" ಎಂದು ಹೇಳಿದೆ.[೩೫][೩೬] ಆದರೆ "ವಿಧಾನಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ, ಮತ್ತು ರಾಸಾಯನಿಕ ತತ್ವಗಳ ಮೇಲೆ ಸ್ಥಾಪಿತವಾಗಿದೆ"; ಕೆಂಟಿಷ್ ಗೆಜೆಟ್ ನ ವಿಮರ್ಶಕರು ಸೂಚನೆಗಳ ಸ್ಪಷ್ಟತೆಯನ್ನು ಮತ್ತು ಪದಾರ್ಥಗಳು ಮತ್ತು ಸಮಯಗಳ ಸೇರ್ಪಡೆಯನ್ನು ಶ್ಲಾಘಿಸಿದರು. ದಿ ಅಟ್ಲಾಸ್ ಅನಾಮಧೇಯ ವಿಮರ್ಶಕನು ಪಾಕವಿಧಾನಗಳ ವಿನ್ಯಾಸವನ್ನು "ಅತ್ಯುತ್ತಮ" ಎಂದು ಬಣ್ಣಿಸಿದನು ಮತ್ತು ದಿ ಎಕ್ಸೆಟರ್ ಮತ್ತು ಪ್ಲೈಮೌತ್ ಗೆಜೆಟ್ ನಲ್ಲಿನ ಧನಾತ್ಮಕ ವಿಮರ್ಶೆಯಲ್ಲಿ, "ನೀಡಲಾದ ಸೂಚನೆಗಳ ಗ್ರಹಿಕೆಗೆ" ಪ್ರಶಂಸೆಯನ್ನು ನೀಡಲಾಯಿತು, ಇದು ಇತರ ಅಡುಗೆ ಪುಸ್ತಕಗಳಿಗೆ ವ್ಯತಿರಿಕ್ತವಾಗಿತ್ತು.

ಮಾಡರ್ನ್ ಕುಕರಿಯ ಎರಡನೇ ಆವೃತ್ತಿಯನ್ನು ಮೇ ೧೮೪೫ ರಲ್ಲಿ ಬಿಡುಗಡೆ ಮಾಡಲಾಯಿತು. ಇದು ತಿದ್ದುಪಡಿಗಳು ಮತ್ತು ನವೀಕರಣಗಳನ್ನು ಒಳಗೊಂಡಿದೆ. ಲೀ ಆಂಡ್ ಬ್ಲಾಂಚಾರ್ಡ್ ನ ಫಿಲಡೆಲ್ಫಿಯಾ ಕಂಪನಿಯ ಮೂಲಕ ಲಾಂಗ್ ಮ್ಯಾನ್ಸ್ ಈ ಆವೃತ್ತಿಯನ್ನು ಯುಎಸ್ ನಲ್ಲಿ ಬಿಡುಗಡೆ ಮಾಡಿದರು. ಪುಸ್ತಕವು ಚೆನ್ನಾಗಿ ಮಾರಾಟವಾಯಿತು, ಮತ್ತು ಜೂನ್ ೧೮೪೫ ರಲ್ಲಿ ಲಾಂಗ್ ಮ್ಯಾನ್ಸ್ ಆಕ್ಟನ್ ಗೆ £೬೭ ೧೧s ೨d ಅನ್ನು ಲಾಭದ ತನ್ನ ಪಾಲಾಗಿ ಕಳುಹಿಸಿದರು. ನಂತರದ ವರ್ಷಗಳಲ್ಲಿ ಅವರು ೧೮೪೬ ರಲ್ಲಿ £೧೬೨ ಮತ್ತು ೧೮೪೭ ರಲ್ಲಿ £೧೮೯ ಗಳಿಸಿದರು. ಆಗ ಅವರಿಗೆ ಲಾಭದ ಅರ್ಧದಷ್ಟು ಪಾವತಿಸಲಾಗುತ್ತಿತ್ತು. ೧೮೪೯ ರಲ್ಲಿ ಅವರು ಲಾಭದ ಕಾಲುಭಾಗಕ್ಕೆ ಇಳಿದರು ಮತ್ತು £೮೩ ಅನ್ನು ಪಡೆದರು.

ಮಾಡರ್ನ್ ಕುಕರಿ ಪ್ರಕಟವಾದ ಸ್ವಲ್ಪ ಸಮಯದ ನಂತರ, ಆಕ್ಟನ್ ಟೋನ್ಬ್ರಿಡ್ಜ್‌ನಿಂದ ವಾಯುವ್ಯ ಲಂಡನ್‌ನ ಹ್ಯಾಂಪ್ಸ್ಟೆಡ್‌ಗೆ ಸ್ಥಳಾಂತರಗೊಂಡರು. ಅವರು ದಿ ಲೇಡೀಸ್ ಕಂಪ್ಯಾನಿಯನ್ ಅಂಡ್ ಹೌಸ್ಹೋಲ್ಡ್ ವರ್ಡ್ಸ್ ಎಂಬ ಸಾಪ್ತಾಹಿಕ ನಿಯತಕಾಲಿಕೆಗಳಿಗೆ ಅಡುಗೆ ವರದಿಗಾರರಾದರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರ ಪೋಷಣೆಯ ಪುಸ್ತಕಕ್ಕಾಗಿ ಸಂಶೋಧನೆ ಬರೆಯಲು ಪ್ರಾರಂಭಿಸಿದರು. ಮಾಡರ್ನ್ ಕುಕರಿಯ ಹೊಸ ಆವೃತ್ತಿಯನ್ನು ಬರೆಯಲು ಅವರು ತಮ್ಮ ಸಂಶೋಧನೆಗೆ ಅಡ್ಡಿಪಡಿಸಿಕೊಂಡರು. ಇದನ್ನು ೧೮೫೫ ರಲ್ಲಿ ಪ್ರಕಟಿಸಲಾಯಿತು ಮತ್ತು ಆ ಪುಸ್ತಕವನ್ನು ಮಾಡರ್ನ್ ಕುಕರಿ ಫಾರ್‌ ಪ್ರೈವೇಟ್ ಫ್ಯಾಮಿಲೀಸ್ ಎಂದು ಮರುನಾಮಕರಣ ಮಾಡಲಾಯಿತು. ಈ ಹೆಸರಿನಿಂದ ಇದು ಹೆಚ್ಚು ಪ್ರಸಿದ್ಧವಾಗಿದೆ. ಈ ಆವೃತ್ತಿಯು "ವಿದೇಶಿ ಮತ್ತು ಯಹೂದಿ ಅಡುಗೆ" ಎಂಬ ಹೆಚ್ಚುವರಿ ಅಧ್ಯಾಯವನ್ನು ಒಳಗೊಂಡಿದೆ; ಯಹೂದಿ ಪಾಕವಿಧಾನಗಳು ಅಶ್ಕೆನಾಜಿ ಪಾಕಪದ್ಧತಿಯಿಂದ ಬಂದವು.

ಫ್ರಂಟಿಸ್ಪೀಸ್ ಆಫ್ ದಿ ಇಂಗ್ಲಿಷ್ ಬ್ರೆಡ್ ಬುಕ್, ೧೮೫೭


ಆಕ್ಟನ್ ಅವರ ಪುಸ್ತಕದ ಮೊದಲ ಆವೃತ್ತಿಗಳ ಯಶಸ್ಸು ಎಷ್ಟಿತ್ತೆಂದರೆ, ಅದನ್ನು ಇತರ ಅಡುಗೆ ಬರಹಗಾರರೂ ನಕಲು ಮಾಡಿದರು. ೧೮೫೫ ರ ಆವೃತ್ತಿಯ ಮುನ್ನುಡಿಯಲ್ಲಿ, ಆಕ್ಟನ್ "ನನ್ನ ಸಂಪುಟದ ಹೆಚ್ಚಿನ ಭಾಗಗಳನ್ನು ಸಮಕಾಲೀನ ಲೇಖಕರು ಯಾವ ಮೂಲದಿಂದ ಪಡೆಯಲಾಗಿದೆ ಎಂಬುದರ ಬಗ್ಗೆ ಕಿಂಚಿತ್ತೂ ಒಪ್ಪಿಕೊಳ್ಳದೆ, ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ನಿರ್ಲಜ್ಜ ವಿಧಾನದ ಬಗ್ಗೆ ಬರೆದಿದ್ದಾರೆ". ೧೮೫೦ ರ ದಶಕದಲ್ಲಿ ಅವರು ಹೆಚ್ಚೆಚ್ಚು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆದರು: "ತಾವು ಅತಿಯಾಗಿ ಶ್ರಮ ಪಟ್ಟಿದ್ದರಿಂದ ಪ್ರಸ್ತುತ ತುಂಬಾ ಕಠಿಣವಾದ ದಂಡವನ್ನು ಅನುಭವಿಸುತ್ತಿದ್ದಾರೆ ..." ಈ ಶ್ರಮವು "ನನ್ನ ಜೀವನದ ಹಿಂದಿನ ಎಲ್ಲಾ ಅಭ್ಯಾಸಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಮತ್ತು ... ಅದರ ಪರಿಣಾಮವೂ ತುಂಬಾ ಹಾನಿಕಾರಕವಾಗಿದೆ."[೩೭]

೧೮೫೫ ರ ಆವೃತ್ತಿಯಲ್ಲಿ ಬ್ರೆಡ್ ತಯಾರಿಕೆಯ ಬಗ್ಗೆ ತಾವು ಬಯಸಿದಷ್ಟು ಮಾಹಿತಿಯನ್ನು ಸೇರಿಸಲು ಸಾಧ್ಯವಾಗಲಿಲ್ಲ ಎಂದು ಆಕ್ಟನ್ ನಿರಾಶೆಗೊಂಡಿದ್ದರು. ಆದರೆ ಅವರ ಆರೋಗ್ಯದ ಹೊರತಾಗಿಯೂ, ದಿ ಇಂಗ್ಲಿಷ್ ಬ್ರೆಡ್-ಬುಕ್ ಫಾರ್ ಡೊಮೆಸ್ಟಿಕ್ ಯೂಸ್ ಎಂಬ ಹೊಸ ಕೃತಿಯಲ್ಲಿ ಈ ವಿಷಯವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಮೇ ೧೮೫೭ ರಲ್ಲಿ ಪ್ರಕಟವಾದ ಇದು ಮಾಡರ್ನ್ ಕುಕರಿಯಂತೆಯೇ ಪಾಕವಿಧಾನ ಪುಸ್ತಕವಾಗಿರಲಿಲ್ಲ, ಆದರೆ ಹಾರ್ಡಿ ಇದನ್ನು "ಗಂಭೀರ, ವೈಜ್ಞಾನಿಕ ಅಧ್ಯಯನ ... ಅವಳ ಹಿಂದಿನ ಕೃತಿಗಿಂತ ಹೆಚ್ಚು ಗಾಢವಾದ ಧ್ವನಿ" ಎಂದು ಹೇಳಿದ್ದಾರೆ.[೩೮] ಇದು ಇಂಗ್ಲೆಂಡ್‌ನಲ್ಲಿ ಬ್ರೆಡ್ ತಯಾರಿಕೆಯ ಇತಿಹಾಸ, ಯುರೋಪ್‌ನಲ್ಲಿ ಬ್ರೆಡ್ ತಯಾರಿಸುವ ಪ್ರಕ್ರಿಯೆಯಲ್ಲಿ ಮಾಡಿದ ಸುಧಾರಣೆಗಳು, ಬಳಸಿದ ಪದಾರ್ಥಗಳ ಪರೀಕ್ಷೆ ಮತ್ತು ವಿವಿಧ ರೀತಿಯ ಬ್ರೆಡ್‌ಗಳ ಪಾಕವಿಧಾನಗಳನ್ನು ಒಳಗೊಂಡಿದೆ. ಇದು ಆ ಕಾಲದ ಹಿಟ್ಟಿನ ಗಿರಣಿದಾರರು ಮತ್ತು ಬೇಕರ್‌ಗಳು ಮಾಡುವ ಬ್ರೆಡ್‌ನ ಕಲಬೆರಕೆಯ ಬಗ್ಗೆಯೂ ಮಾಹಿತಿಯನ್ನು ಒಳಗೊಂಡಿತ್ತು. ಆಹಾರ ಬರಹಗಾರ್ತಿ ಎಲಿಜಬೆತ್ ರೇ ಅವರ ಪ್ರಕಾರ ಈ ಪುಸ್ತಕವು ಮಾಡರ್ನ್ ಕುಕರಿಗಿಂತ ಕಡಿಮೆ ಯಶಸ್ಸನ್ನು ಕಂಡಿತು ಮತ್ತು ೧೯೯೦ ರವರೆಗೆ ಮರುಮುದ್ರಣಗೊಳ್ಳಲಿಲ್ಲ.

ತಮ್ಮ ಜೀವನದ ಬಹುಪಾಲು ಅನಾರೋಗ್ಯದಿಂದ ಬಳಲುತ್ತಿದ್ದ ಆಕ್ಟನ್, ಫೆಬ್ರವರಿ ೧೩, ೧೮೫೯ ರಂದು ತಮ್ಮ ೫೯ ನೇ ವಯಸ್ಸಿನಲ್ಲಿ ಮನೆಯಲ್ಲಿ ನಿಧನರಾದರು.[೩೯] ನಾಲ್ಕು ದಿನಗಳ ನಂತರ ಅವರನ್ನು ಲಂಡನ್‌ನ ಸೇಂಟ್ ಜಾನ್-ಅಟ್-ಹ್ಯಾಂಪ್ಸ್ಟೆಡ್ ಚರ್ಚ್‌ನಲ್ಲಿ ಸಮಾಧಿ ಮಾಡಲಾಯಿತು.

ಪರಂಪರೆ

[ಬದಲಾಯಿಸಿ]
ಕಟ್ಸ್ ಆಫ್ ಗೇಮ್ ಫ್ರಮ್ "ಮಾಡರ್ನ್ ಕುಕರಿ"

ಮಾಡರ್ನ್ ಕುಕರಿ ೧೯೧೮ ರವರೆಗೆ ಮುದ್ರಣದಲ್ಲಿತ್ತು, ಇತರ ಪುಸ್ತಕಗಳ ಸ್ಪರ್ಧೆಯ ಹಿನ್ನೆಲೆಯಲ್ಲಿ ಅದರ ಜನಪ್ರಿಯತೆ ಕ್ಷೀಣಿಸಿತು ಮತ್ತು ಲಾಂಗ್ಮನ್ಸ್ ಮರುಪ್ರಕಟಿಸದಿರುವ ನಿರ್ಧಾರವನ್ನು ತೆಗೆದುಕೊಂಡರು. ಆಕ್ಟನ್ ಅವರ ಕೃತಿಗಳು ೧೯೬೮ರಲ್ಲಿ ಎಲಿಜಬೆತ್ ರೇ ಸಂಪಾದಿಸಿದ ಮತ್ತು ಎಲಿಜಬೆತ್ ಡೇವಿಡ್ ಅವರ ಪರಿಚಯವನ್ನು ಒಳಗೊಂಡಂತೆ ದಿ ಬೆಸ್ಟ್ ಆಫ್ ಎಲಿಜಾ ಆಕ್ಟನ್ ನಲ್ಲಿ ಅವರ ಪಾಕವಿಧಾನಗಳ ಆಯ್ಕೆಯನ್ನು ಸಂಗ್ರಹಿಸುವವರೆಗೂ ಮುದ್ರಣದಲ್ಲಿ ಉಳಿಯಲಿಲ್ಲ.[೪೦] ಮಾಡರ್ನ್ ಕುಕರಿ ೧೯೯೪ ರವರೆಗೆ ಪೂರ್ಣವಾಗಿ ಮರುಮುದ್ರಣಗೊಳ್ಳಲಿಲ್ಲ, ಆದಾಗ್ಯೂ ದಿ ಇಂಗ್ಲಿಷ್ ಬ್ರೆಡ್ ಬುಕ್ ೧೯೯೦ ರಲ್ಲಿ ಮರುಮುದ್ರಣಗೊಂಡಿತು.[೪೧]

೧೮೫೭ ರಲ್ಲಿ, ಇಸಾಬೆಲ್ಲಾ ಬೀಟನ್ ದಿ ಇಂಗ್ಲಿಷ್ ವುಮೆನ್ಸ್ ಡೊಮೆಸ್ಟಿಕ್ ಮ್ಯಾಗಜೀನ್ ಗಾಗಿ ಅಡುಗೆ ಅಂಕಣವನ್ನು ಬರೆಯಲು ಪ್ರಾರಂಭಿಸಿದಾಗ, ಅನೇಕ ಪಾಕವಿಧಾನಗಳನ್ನು ಮಾಡರ್ನ್ ಕುಕರಿಯಿಂದ ಕೃತಿಚೌರ್ಯಗೊಳಿಸಲಾಯಿತು.[೪೨] ೧೮೬೧ ರಲ್ಲಿ ಇಸಾಬೆಲ್ಲಾಳ ಪತಿ ಸ್ಯಾಮ್ಯುಯೆಲ್ ಮಿಸೆಸ್ ಬೀಟನ್ಸ್ ಬುಕ್ ಆಫ್ ಹೌಸ್ ಹೋಲ್ಡ್ ಮ್ಯಾನೇಜ್ ಮೆಂಟ್ ಅನ್ನು ಪ್ರಕಟಿಸಿದನು.[೪೩] ಇದರಲ್ಲಿ ಆಕ್ಟನ್ ನ ಹಲವಾರು ಪಾಕವಿಧಾನಗಳೂ ಇದ್ದವು. ಇಸಾಬೆಲ್ಲಾ ಬೀಟನ್ ಅವರ ಜೀವನಚರಿತ್ರೆಕಾರ ಕ್ಯಾಥರಿನ್ ಹ್ಯೂಸ್ ಬೀಟನ್ ಅವರ ಸೂಪ್ ಭಕ್ಷ್ಯಗಳ ಮೂರನೇ ಒಂದು ಭಾಗ ಮತ್ತು ಅವಳ ಮೀನು ಪಾಕವಿಧಾನಗಳ ಕಾಲು ಭಾಗವನ್ನು ಆಕ್ಟನ್ ನಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಾರೆ. ಇಸಾಬೆಲ್ಲಾ ಬೀಟನ್ ತನ್ನ ಕೃತಿಗಳಲ್ಲಿ, ಆಕ್ಟನ್ ನ ಪಾಕವಿಧಾನಗಳ ಹೊಸ ವಿನ್ಯಾಸವನ್ನು ಭಾಗಶಃ ಅನುಸರಿಸಿದಳು. ಆದಾಗ್ಯೂ ಒಂದು ಪ್ರಮುಖ ಬದಲಾವಣೆಯೊಂದಿಗೆ ಮಾಡರ್ನ್ ಕುಕರಿ ಅಡುಗೆಯ ವಿಧಾನವನ್ನು ಒದಗಿಸುತ್ತದೆ, ನಂತರ ಅಗತ್ಯವಿರುವ ಪದಾರ್ಥಗಳ ಪಟ್ಟಿಯನ್ನು ಒದಗಿಸುತ್ತದೆ, ದಿ ಇಂಗ್ಲಿಷ್ ವುಮೆನ್ಸ್ ಡೊಮೆಸ್ಟಿಕ್ ಮ್ಯಾಗಜೀನ್ ಮತ್ತು ಮಿಸೆಸ್ ಬೀಟನ್ಸ್ ಬುಕ್ ಆಫ್ ಹೌಸ್ ಹೋಲ್ಡ್ ಮ್ಯಾನೇಜ್ ಮೆಂಟ್ ನಲ್ಲಿನ ಪಾಕವಿಧಾನಗಳು ಅಡುಗೆ ಪ್ರಕ್ರಿಯೆಗೆ ಮುಂಚಿತವಾಗಿ ಸಮಯ ಮತ್ತು ಘಟಕಗಳನ್ನು ಪಟ್ಟಿ ಮಾಡುತ್ತವೆ.

ಆಹಾರ ಇತಿಹಾಸಕಾರ ಬೀ ವಿಲ್ಸನ್ ಅನೇಕ ಆಧುನಿಕ ಅಡುಗೆ ಬರಹಗಾರರನ್ನು ಆಕ್ಟನ್ ಮತ್ತು ಅವಳ ಕೆಲಸಕ್ಕೆ ಋಣಿ ಎಂದು ಪರಿಗಣಿಸುತ್ತಾರೆ. ಎಲಿಜಬೆತ್ ಡೇವಿಡ್ ೧೯೭೭ ರಲ್ಲಿ ದಿ ಇಂಗ್ಲಿಷ್ ಬ್ರೆಡ್ ಬುಕ್ ತನ್ನ ಸ್ವಂತ ಇಂಗ್ಲಿಷ್ ಬ್ರೆಡ್ ಮತ್ತು ಯೀಸ್ಟ್ ಕುಕರಿ ಮೇಲೆ ಪ್ರಮುಖ ಪ್ರಭಾವ ಬೀರಿದೆ ಮತ್ತು ಮೂಲವಾಗಿದೆ ಮತ್ತು ಅದಕ್ಕಾಗಿ ತಾನು ಆಕ್ಟನ್ ಗೆ ಋಣಿಯಾಗಿದ್ದೇನೆ ಎಂದು ಬರೆದಳು.[೪೪][೪೫] ಡೇವಿಡ್ ಮಾಡರ್ನ್ ಕುಕರಿಯನ್ನು "ನಮ್ಮ ಭಾಷೆಯ ಶ್ರೇಷ್ಠ ಅಡುಗೆ ಪುಸ್ತಕ" ಎಂದು ವರ್ಣಿಸುತ್ತಾನೆ. ಅಡುಗೆಯವರಾದ ಡೆಲಿಯಾ ಸ್ಮಿತ್ ಕೂಡ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ ಮತ್ತು ಆಕ್ಟನ್ ನನ್ನು "ಇಂಗ್ಲಿಷ್ ಭಾಷೆಯ ಅತ್ಯುತ್ತಮ ಅಡುಗೆ ಬರಹಗಾರ್ತಿ" ಎಂದು ವರ್ಣಿಸುತ್ತಾನೆ. ಅಡುಗೆ ಬರಹಗಾರ್ತಿ ಜೇನ್ ಗ್ರಿಗ್ಸನ್ ಆಕ್ಟನ್ ನಿಂದ ಪ್ರಭಾವಿತರಾದರು, ವಿಶೇಷವಾಗಿ ಅವರು ಇಂಗ್ಲಿಷ್ ಫುಡ್ (೧೯೭೪) ಅನ್ನು ಬರೆದಾಗ, ಬಾಣಸಿಗ ರಿಕ್ ಸ್ಟೈನ್ ತನ್ನ ಅಡುಗೆ ಪುಸ್ತಕ ಸೀಫುಡ್ ಲವರ್ಸ್ ಗೈಡ್ (೨೦೦೦) ನಲ್ಲಿ ಅವಳ "ಸೋಲ್ಸ್ ಸ್ಟೀವ್ಡ್ ಇನ್ ಕ್ರೀಮ್" ಅನ್ನು ಸೇರಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Acton, Eliza (1826). Poems. London: Longman & Co. OCLC 13284872.
  2. Acton, Eliza (1845). Modern Cookery in all its Branches (2 ed.). London: Longman, Brown, Green and Longmans. OCLC 40747609.
  3. Acton, Eliza (1855). Modern Cookery for Private Families. London: Longman, Brown, Green and Longmans. OCLC 758341567.
  4. Acton, Eliza (1857). The English Bread-Book for Domestic Use. London: Longman, Brown, Green Longmans and Roberts. OCLC 14352867.
  5. Ashley, Bob (2004). Food and Cultural Studies. London: Routledge. ISBN 978-0-4152-7039-7.
  6. Aylett, Mary; Ordish, Olive (1965). First Catch Your Hare. London: Macdonald. OCLC 54053.
  7. Black, Maggie (12 December 1981). "The Englishman's Plum Pudding". History Today. Retrieved 10 January 2018.
  8. Broomfield, Andrea (Summer 2008). "Rushing Dinner to the Table: The Englishwoman's Domestic Magazine and Industrialization's Effects on Middle-Class Food and Cooking, 1852–1860". Victorian Periodicals Review. 41 (2): 101–123. doi:10.1353/vpr.0.0032. JSTOR 20084239. S2CID 161900658.
  9. Brown, Mark (2 June 2006). "Mrs Beeton couldn't cook but she could copy, reveals historian". The Guardian. Archived from the original on 8 December 2015.
  10. Burnett, John (April 1964). "Plenty and Want: The Social History of English Diet". History Today. Retrieved 15 January 2018. (subscription required)
  11. Colquhoun, Kate (2008). Taste: The Story of Britain through Its Cooking. London: Bloomsbury Publishing. ISBN 978-0-7475-9306-5.
  12. Cooke, Rachel (15 March 2015). "Jane Grigson: her life and legacy". The Observer.
  13. David, Elizabeth (1974) [1968]. "Introduction". In Ray, Elizabeth (ed.). The Best of Eliza Acton. London: Penguin. pp. xxv–xxx. ISBN 978-0-14-046205-0.
  14. David, Elizabeth (2001) [1977]. English Bread and Yeast Book. London: Penguin. ISBN 978-0-1402-9974-8.
  15. Davidson, Alan (Winter 1983). "Food: The Natural History of British Cookery Books". The American Scholar. 52 (1): 98–106. JSTOR 41210911.
  16. Davidson, Alan (2014). The Oxford Companion to Food. Oxford: Oxford University Press. ISBN 978-0-1910-4072-6.
  17. Driver, Christopher (1983). The British at Table 1940–1980. London: Chatto & Windus. ISBN 978-0-7011-2582-0.
  18. Freeman, Len (5 February 2011). "How Britain Converted to Decimal Currency". BBC News.
  19. Freeman, Sarah (1977). Isabella and Sam: The Story of Mrs. Beeton. London: Victor Gollancz Ltd. ISBN 978-0-575-01835-8.
  20. Freeman, Sarah (1989). Mutton and Oysters: The Victorians and Their Food. London: Gollancz. ISBN 978-0-575-03151-7.
  21. Hardy, Sheila (2011). The Real Mrs Beeton: The Story of Eliza Acton. Stroud, Gloucestershire: The History Press. ISBN 978-0-7524-6122-9.
  22. Hughes, Kathryn (2006). The Short Life and Long Times of Mrs Beeton. London: HarperCollins Publishers. ISBN 978-0-7524-6122-9.
  23. Hughes, Kathryn (15 May 2014). "Mrs Beeton and the Art of Household Management". British Library. Archived from the original on 6 January 2016. Retrieved 27 November 2015.
  24. Humble, Nicola (2006). Culinary Pleasures. London: Faber and Faber. ISBN 978-0-571-22871-3.
  25. Jack, Albert (2010). What Caesar Did For My Salad: Not to Mention the Earl's Sandwich, Pavlova's Meringue and Other Curious Stories Behind Our Favourite Food. London: Penguin. ISBN 978-1-84614-254-3.
  26. Lieffers, Caroline (June 2012). "'The Present Time is Eminently Scientific': The Science of Cookery in Nineteenth-Century Britain". Journal of Social History. 45 (4): 936–959. doi:10.1093/jsh/shr106. JSTOR 41678945. S2CID 145735940.
  27. "Literary Memoranda". The Atlas. 25 January 1845. p. 11.
  28. "Literature". Woolmer's Exeter and Plymouth Gazette. 25 January 1845. p. 4.
  29. "Literature". The Morning Post. 17 February 1845. p. 3.
  30. "Literature Received". The Spectator. 18 January 1845. p. 66.
  31. "Modern Cookery". Kentish Gazette. 28 January 1845. p. 3.
  32. Notaker, Henry (2017). A History of Cookbooks: From Kitchen to Page over Seven Centuries. Oakland, CA: University of California Press. ISBN 978-0-520-96728-1.
  33. O'Brien, Lee Christine (2012). The Romance of the Lyric in Nineteenth-Century Women's Poetry: Experiments in Form. Newark, DE: University of Delaware. ISBN 978-1-61149-392-4.
  34. Quayle, Eric (1978). Old Cook Books: an illustrated history. London: Studio Vista. ISBN 978-0-2897-0707-4.
  35. Ray, Elizabeth (1974) [1968]. "Preface". In Ray, Elizabeth (ed.). The Best of Eliza Acton. London: Penguin. pp. xix–xxiii. ISBN 978-0-14-046205-0.
  36. {{cite encyclopedia  |encyclopedia=Oxford Dictionary of National Biography  |edition=online  |publisher=Oxford University Press  |ref=harv  |last    =Ray  |last1    =  |author  =  |author1  =  |authors  =  |first    =Elizabeth  |first1  =  |authorlink  =  |author-link  =  |HIDE_PARAMETER10=  |authorlink1  =    |last2    =  |author2  =  |first2    =  |authorlink2  =  |HIDE_PARAMETER16=  |last3    =  |author3  =  |first3    =  |authorlink3  =  |HIDE_PARAMETER21=  |title    =Acton, Eliza (1799–1859)  |title    =  |url      =http://www.oxforddnb.com/view/article/73  |doi        =10.1093/ref:odnb/73  |origyear    =  |year        =2008  |date        =  |month      =  |HIDE_PARAMETER30=  |HIDE_PARAMETER31=  |separator  =  |mode        =    |HIDE_PARAMETER38= }} (Subscription or UK public library membership required.)
  37. "Resources". The Digest. 10 (2). September 1990.
  38. Smith, Delia (2011). Foreword. The Real Mrs Beeton: The Story of Eliza Acton. By Hardy, Sheila. Stroud, Gloucestershire: The History Press. ISBN 978-0-7524-6122-9.
  39. "Search results for 'Acton The English Bread Book'". WorldCat. Retrieved 22 February 2018.
  40. Snodgrass, Mary Ellen (2004). Encyclopedia of Kitchen History. Abingdon, Oxfordshire: Routledge. ISBN 978-1-135-45572-9.
  41. ಟೆಂಪ್ಲೇಟು:Cite OED
  42. Stein, Rick (29 November 2003). "Let's live a little". The Guardian.
  43. Walker, Julian (2013). Discovering Words in the Kitchen. London: Bloomsbury Publishing. ISBN 978-0-7478-0952-4.
  44. Wilson, Bee (8 May 2011). "Eliza Acton, my heroine". The Sunday Telegraph.
  45. Zlotnick, Susan (1996). "Domesticating Imperialism: Curry and Cookbooks in Victorian England". Frontiers: A Journal of Women Studies. 16 (2/3): 51–68. doi:10.2307/3346803. JSTOR 3346803.