ವಿಷಯಕ್ಕೆ ಹೋಗು

ಎಲಾ ಸಮರ್ ಪುರ್ನೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲಾ ಸಮರ್ ಪುರ್ನೆಲ್

ಎಲಾ ಪುರ್ನೆಲ್
2025ರಲ್ಲಿ ಮೆಗಾಕಾನ್ ಒರ್ಲಾಂಡೋದಲ್ಲಿ ಪುರ್ನೆಲ್
ಹುಟ್ಟು (1996-09-17) 17 September 1996 (age 29)
ಉದ್ಯೋಗನಟಿ
ಸಕ್ರಿಯ ವರ್ಷಗಳು2009–ಪ್ರಸ್ತುತ

ಎಲಾ ಸಮರ್ ಪುರ್ನೆಲ್ (ಜನನ: 17 ಸೆಪ್ಟೆಂಬರ್ 1996) ಇಂಗ್ಲೆಂಡ್ ಮೂಲದ ನಟಿ. ಅವರು ತಮ್ಮ ವೃತ್ತಿಜೀವನವನ್ನು ಬಾಲ ನಟಿಯಾಗಿ ವೆಸ್ಟ್ ಎಂಡ್ ರಂಗಭೂಮಿಗಳಿಂದ ಆರಂಭಿಸಿ, ನಂತರ ನೆವರ್ ಲೆಟ್ ಮಿ ಗೋ (2010), 'ಇಂಟ್ರೂಡರ್ಸ್ (2011) ಹಾಗೂ ಮೇಲ್‌ಫಿಸೆಂಟ್ (2014) ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಅವರ ಪ್ರಮುಖ ಚಿತ್ರಗಳಲ್ಲಿ ಮಿಸ್ ಪೆರೆಗ್ರಿನ್ಸ್ ಹೋಮ್ ಫಾರ್ ಪಿಕ್ಯುಲಿಯರ್ ಚಿಲ್ಡ್ರನ್ (2016), ಚರ್ಚಿಲ್ (2017) ಮತ್ತು ಅರ್ಮಿ ಅಫ್ಸ ದ ಡೆಡ್ (2021) ಸೇರಿವೆ.

ದೂರದರ್ಶನದಲ್ಲಿ, ಅವರು ಓರ್ಡೀಲ್ ಬೈ ಇನೋಸೆನ್ಸ್ (2018), ಬೆಲ್ಗ್ರೇವಿಯಾ (2020), ಯೆಲ್ಲೋ ಜಾಕೆಟ್ಸ್ (2021–ಪ್ರಸ್ತುತ), ಫಾಲ್‌ಔಟ್ (2024–ಪ್ರಸ್ತುತ) ಮತ್ತು ಸ್ವೀಟ್‌ಪೀ (2024–ಪ್ರಸ್ತುತ) ಸರಣಿಗಳಲ್ಲಿ ಅಭಿನಯಿಸಿದ್ದಾರೆ. ಅವರು ಅನಿಮೇಟೆಡ್ ಸರಣಿ ಆರ್ಕೇನ್ (2021–2024) ನಲ್ಲಿ ಜಿಂಕ್ಸ್ ಗೆ ಧ್ವನಿ ನೀಡಿದ್ದಾರೆ ಹಾಗೂ ಸ್ಟಾರ್ ಟ್ರೆಕ್: ಪ್ರಾಡಿಜಿ (2021–2024) ಯಲ್ಲಿ ಗ್ವಿನ್‌ಡಾಲಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

ಪ್ರಾರಂಭಿಕ ಜೀವನ

[ಬದಲಾಯಿಸಿ]

ಎಲಾ ಸಮರ್ ಪುರ್ನೆಲ್ 17 ಸೆಪ್ಟೆಂಬರ್ 1996ರಂದು ಲಂಡನ್‌ವೈಟ್ ಚಾಪೆಲ್ ಪ್ರದೇಶದಲ್ಲಿ ಜನಿಸಿದರು.[] ಅವರು ಲಂಡನ್‌ಬೆತ್ನಾಲ್ ಗ್ರೀನ್ ಪ್ರದೇಶದಲ್ಲಿ ಬೆಳೆದರು.[]

ಅವರು ಬೆಥ್ನಲ್ ಗ್ರೀನ್ ಮಾಂಟೆಸ್ಸೋರಿ ಶಾಲೆ, ಫಾರೆಸ್ಟ್ ಶಾಲೆ,ವಾಲ್ತಮ್‌ಸ್ಟೋವ್, ಲಂಡನ್ ನಗರದ ಬಾಲಕಿಯರ ಶಾಲೆ ಮತ್ತು ಇಸ್ಲಿಂಗ್ಟನ್‌ನ ಯುವ ನಟರ ರಂಗಮಂದಿರಗಳಲ್ಲಿ ವಿದ್ಯಾಭ್ಯಾಸ ಮಾಡಿದರು.[] ಅವರು ಸಿಲ್ವಿಯಾ ಯಂಗ್ ಥಿಯೇಟರ್ ಸ್ಕೂಲ್ನಲ್ಲಿ ವಾರದ ನಟನ ತರಗತಿಗಳಿಗೆ ಹಾಜರಾಗುತ್ತಿದ್ದರು.[]

18ನೇ ವಯಸ್ಸಿನಲ್ಲಿ ಪುರ್ನೆಲ್ ತಮ್ಮ ಅಭಿನಯ ವೃತ್ತಿಗೆ ವಿರಾಮ ನೀಡಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು ಮಕ್ಕಳ ಬರಹಗಾರ್ತಿ ಅಥವಾ ಶಿಕ್ಷಕಿ ಆಗುವ ಯೋಚನೆ ಮಾಡಿದ್ದರು.[] ಆದರೆ ಟಿಮ್ ಬರ್ಟನ್ ಅವರ ಮಿಸ್ ಪೆರೆಗ್ರಿನ್ಸ್ ಹೋಮ್ ಫಾರ್ ಪಿಕ್ಯುಲಿಯರ್ ಚಿಲ್ಡ್ರನ್ (2016) ಚಿತ್ರದಲ್ಲಿ ಅವಕಾಶ ದೊರೆತ ನಂತರ ಅವರು ಮತ್ತೆ ಅಭಿನಯಕ್ಕೆ ಮರಳಿದರು.[]

ವೃತ್ತಿಜೀವನ

[ಬದಲಾಯಿಸಿ]
2017ರಲ್ಲಿ ಲಂಡನ್‌ನ ಕೆನ್ಸಿಂಗ್ಟನ್ ಗಾರ್ಡನ್ಸ್ ನಲ್ಲಿ ನಡೆದ ಸರ್ಪೆಂಟೈನ್ ಬೇಸಿಗೆ ಪಾರ್ಟಿಯಲ್ಲಿ ಪುರ್ನೆಲ್

2013ರಲ್ಲಿ ಎಲಾ ಪುರ್ನೆಲ್ ಜೆಫ್ ವಾಡ್ಲೋ ನಿರ್ದೇಶನದ ಕಿಕ್-ಆಸ್ 2 ಚಿತ್ರದಲ್ಲಿ ಡೋಲ್ಸೆ ಪಾತ್ರದಲ್ಲಿ ಅಭಿನಯಿಸಿದರು. 2014ರಲ್ಲಿ ಫ್ರ್ಯಾಂಕ್ ಹಾಲ್ ಗ್ರೀನ್ ನಿರ್ದೇಶನದ ವೈಲ್ಡ್ಲೈಕ್ ಚಿತ್ರದಲ್ಲಿ ಮುಖ್ಯ ಪಾತ್ರವಹಿಸಿ ಹಲವು ಚಿತ್ರೋತ್ಸವಗಳಲ್ಲಿ ಪ್ರಶಂಸೆ ಗಳಿಸಿದರು. ಅದೇ ವರ್ಷ ರಾಬರ್ಟ್ ಸ್ಟ್ರಾಂಬರ್ಗ್ ನಿರ್ದೇಶನದ ವಾಲ್ಟ್ ಡಿಸ್ನಿ ಕಂಪನಿ ಚಿತ್ರ ಮಾಲಿಫಿಸೆಂಟ್ ನಲ್ಲಿ ಏಂಜಲೀನಾ ಜೋಲೀ ಅವರ ಪಾತ್ರದ ಕೌಮಾರ ಅವಸ್ಥೆಯ ರೂಪದಲ್ಲಿ ಕಾಣಿಸಿಕೊಂಡರು.

ನಂತರ ಸ್ವಲ್ಪ ವಿರಾಮದ ಬಳಿಕ, ತಮ್ಮ ಕನಸಿನ ನಿರ್ದೇಶಕ ಟಿಮ್ ಬರ್ಟನ್ ಅವರ ಮಿಸ್ ಪೆರೆಗ್ರಿನ್ಸ್ ಹೋಮ್ ಫಾರ್ ಪಿಕ್ಯುಲಿಯರ್ ಚಿಲ್ಡ್ರನ್ (2016) ಚಿತ್ರದಲ್ಲಿ ಅಭಿನಯಿಸಲು ಮರಳಿದರು.[]

2017ರಲ್ಲಿ ಅಕಸೆಸ್ ಅಲ್ ಎರಿಯಾ ಚಿತ್ರದಲ್ಲಿ ಮಿಯಾ ಪಾತ್ರ ಮತ್ತು ಚರ್ಚಿಲ್ ಚಿತ್ರದಲ್ಲಿ ವಿನ್ಸ್ಟನ್ ಚರ್ಚಿಲ್ ಅವರ ಕಾರ್ಯದರ್ಶಿ ಹೆಲೆನ್ ಗ್ಯಾರೆಟ್ ಪಾತ್ರವನ್ನು ನಿರ್ವಹಿಸಿದರು.[]

2018ರಲ್ಲಿ ಬಿಬಿಸಿ ನಿರ್ಮಿತ ಓರ್ಡೀಲ್ ಬೈ ಇನೋಸೆನ್ಸ್ ಧಾರಾವಾಹಿಯಲ್ಲಿ ಹೆಸ್ಟರ್ ಆರ್ಗೈಲ್ ಪಾತ್ರದಲ್ಲಿ ಅಭಿನಯಿಸಿದರು.[] ಅದೇ ವರ್ಷ ಸ್ಟಾರ್ಜ್ ವಾಹಿನಿಯ ಸ್ವೀಟ್‌ಬಿಟ್ಟರ್ ಸರಣಿಯಲ್ಲಿ ಟೆೆಸ್ ಪಾತ್ರದಲ್ಲಿ ಕಾಣಿಸಿಕೊಂಡರು.[೧೦] ಈ ಸರಣಿಯನ್ನು ಎರಡು ಹಂಗಾಮುಗಳ ನಂತರ ರದ್ದುಪಡಿಸಲಾಯಿತು.[೧೧]

2020ರಲ್ಲಿ ಜೂಲಿಯನ್ ಫೆಲೋಸ್ ಅವರ ಐತಿಹಾಸಿಕ ಧಾರಾವಾಹಿ ಬೆಲ್ಗ್ರೇವಿಯಾ ಯಲ್ಲಿ ಲೇಡಿ ಮರಿಯಾ ಗ್ರೇ ಪಾತ್ರವನ್ನು ನಿರ್ವಹಿಸಿದರು.[೧೨]

2021ರಿಂದ ಶೋಟೈಮ್ ಧಾರಾವಾಹಿ ಯೆಲ್ಲೋ ಜಾಕೆಟ್ಸ್ ನಲ್ಲಿ ಜಾಕಿ ಟೇಲರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.[೧೩]

ಅವರು ಅನಿಮೇಟೆಡ್ ಸರಣಿ ಸ್ಟಾರ್ ಟ್ರೆಕ್: ಪ್ರಾಡಿಜಿ (2021–2024) ಯಲ್ಲಿ ಗ್ವಿನ್ ಪಾತ್ರಕ್ಕೆ ಧ್ವನಿ ನೀಡಿದರು ಹಾಗೂ ನೆಟ್ಫ್ಲಿಕ್ಸ್ ಸರಣಿ ಆರ್ಕೇನ್ (2021–2024) ನಲ್ಲಿ ಜಿಂಕ್ಸ್ ಪಾತ್ರಕ್ಕೆ ಧ್ವನಿ ನೀಡಿ ಭಾರೀ ಪ್ರಶಂಸೆ ಗಳಿಸಿದರು.

2024ರಿಂದ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ ಫಾಲ್‌ಔಟ್ ನಲ್ಲಿ ಲೂಸಿ ಮ್ಯಾಕ್‌ಲೀನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.[೧೪] ಅದೇ ವರ್ಷ ಡಾರ್ಕ್ ಕಾಮಿಡಿ ಸರಣಿ ಸ್ವೀಟ್‌ಪೀ ಯಲ್ಲಿ ಮುಖ್ಯ ಪಾತ್ರ ಹಾಗೂ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು.[೧೫]

ವೈಯಕ್ತಿಕ ಜೀವನ

[ಬದಲಾಯಿಸಿ]

ಮೇ 2024 ವೇಳೆಗೆ, ಎಲಾ ಪುರ್ನೆಲ್ ಅವರು ತಮ್ಮ ಸಮಯವನ್ನು ಲಂಡನ್ ಮತ್ತು ಲಾಸ್ ಏಂಜಲೀಸ್ ನಡುವಿನಲ್ಲಾಗಿ ಹಂಚಿಕೊಂಡಿದ್ದಾರೆ.[೧೬] ಜೂನ್ 2022ರಲ್ಲಿ ಅವರು ಸಂಗೀತಗಾರ ಮ್ಯಾಕ್ಸ್ ಬೆನೆಟ್ ಕೆಲ್ಲಿ ಅವರೊಂದಿಗೆ ಸಂಬಂಧ ಹೊಂದಿದ್ದುದನ್ನು ದೃಢಪಡಿಸಲಾಯಿತು.[೧೬][೧೭]

ಖ್ಯಾತಿ ಕುರಿತು ತಮ್ಮ ಅಭಿಪ್ರಾಯವನ್ನು ಬ್ರಿಟಿಷ್ ವೋಗ್ಗೆ ತಿಳಿಸುತ್ತಾ, ಪುರ್ನೆಲ್ ಅವರು ಹೀಗೆ ಹೇಳಿದರು: “ನನ್ನ ಜೀವನದಲ್ಲಿ ಯಶಸ್ಸು ಎಂಬುದೇ ಅಂತಿಮ ಗುರಿಯಾಗಿಲ್ಲ. ನನ್ನ ಗುರಿ ವೈಯಕ್ತಿಕ ಬೆಳವಣಿಗೆ ಮತ್ತು ನನ್ನ ಸ್ವಂತ ಸವಾಲುಗಳ ಮೇಲೆ ಕೇಂದ್ರೀಕೃತವಾಗಿದೆ.”[೧೮]

ಅವರು ಪಿಯಾನೋ ವಾದನದಲ್ಲಿ ಪರಿಣತಿ ಹೊಂದಿದ್ದು, ಸ್ಕೂಬಾ ಡೈವಿಂಗ್‌ನ್ನೂ ಹವ್ಯಾಸವಾಗಿ ಆನಂದಿಸುತ್ತಾರೆ.[೧೯][೨೦]

ಸಾಮಾಜಿಕ ಚಟುವಟಿಕೆಗಳು

[ಬದಲಾಯಿಸಿ]

2016ರಲ್ಲಿ, ಪುರ್ನೆಲ್ ಅವರು ತಮ್ಮ ಮಾಜಿ ಶಾಲಾ ಸಹಪಾಠಿ ಅರಿಫಾ ನಸೀಮ್ ಅವರೊಂದಿಗೆ ಸೇರಿ ಎಜುಕೇಟ್2ಎರಡಿಕೇಟ್ ಎಂಬ ಯುನೈಟೆಡ್ ಕಿಂಗ್‌ಡಮ್ ಆಧಾರಿತ ಸಂಸ್ಥೆಯನ್ನು ಆರಂಭಿಸಿದರು.[೨೧] ಈ ಸಂಸ್ಥೆ ಗೌರವದ ಹೆಸರಿನಲ್ಲಿ ನಡೆಯುವ ಹಿಂಸಾಚಾರ (honour-based violence) ಹಾಗೂ ಬಲವಂತದ ಬಾಲ್ಯವಿವಾಹವನ್ನು ನಿರ್ಮೂಲನೆಗೊಳಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತದೆ.[೨೨]

2019ರಲ್ಲಿ, ಹಾಲಿವುಡ್ ಚಿತ್ರರಂಗದಲ್ಲಿ ವೈವಿಧ್ಯತೆ ಮತ್ತು ಪ್ರತಿನಿಧಿತ್ವದ ಅಗತ್ಯತೆಯ ಬಗ್ಗೆ ಮಾತನಾಡಿದ ಪುರ್ನೆಲ್ ಅವರು, ತಮ್ಮ ವೇದಿಕೆಯನ್ನು ಸಾಮಾಜಿಕ ಜಾಗೃತಿಗಾಗಿ ಬಳಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು: “ಈ ಉದ್ಯಮದಲ್ಲಿ ಮೌನ ಸಹಭಾಗಿಯಾಗಿರುವುದಕ್ಕೆ ನಾನು ಇನ್ನು ಮುಂದೆ ಸಿದ್ಧನಿಲ್ಲ. ನಾನು ನಟನೆಯನ್ನು ಪ್ರೀತಿಸುತ್ತೇನೆ ಮತ್ತು ಇದಕ್ಕಾಗಿ ಕೃತಜ್ಞಳಾಗಿದ್ದೇನೆ. ಆದರೆ ವೈವಿಧ್ಯತೆ ಮತ್ತು ಪ್ರತಿನಿಧಿತ್ವದ ಕೊರತೆಯಿಂದ ಇದು ಎಷ್ಟು ಹಾನಿಕಾರಕವಾಗಬಹುದು ಎಂಬುದನ್ನು ನಾನು ಅರಿತಿದ್ದೇನೆ. ನಾನು ಕೆಲಸ ಮಾಡುವ ಜನರು ಮತ್ತು ಯೋಜನೆಗಳ ಬಗ್ಗೆ ಹೆಚ್ಚು ಜಾಗರೂಕವಾಗಿರಲು ಬಯಸುತ್ತೇನೆ. ನನ್ನ ಬಳಿ ಇರುವ ಯಾವುದೇ ವೇದಿಕೆಯನ್ನು ಮಹತ್ವದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಬಳಸಲು ಇಚ್ಛಿಸುತ್ತೇನೆ.”[೨೩]

ಚಿತ್ರಪಟ್ಟಿ

[ಬದಲಾಯಿಸಿ]


ಚಲನಚಿತ್ರಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
2010 ನೆವರ್ ಲೆಟ್ ಮಿ ಗೋ ಯುವ ರೂತ್
2010 ವೇಸ್ ಟು ಲೈವ್ ಫಾರೆವರ್ ಕೇಲಿಘ್
2011 ಇಂಟ್ರೂಡರ್ಸ್ ಮಿಯಾ
2013 ಕಿಕ್-ಆಸ್ 2 ಡೋಲ್ಸ್
2014 ವಯ್ಲ್ಡ್ ಟೈಮ್ ಮ್ಯಾಕೆಂಜಿ
2014 ಮೇಲ್‌ಫಿಸೆಂಟ್ ಕಿಶೋರಿ ಮ್ಯಾಲೆಫಿಸೆಂಟ್
2016 ದಿ ಲೆಜೆಂಡ್ ಆಫ್ ಟಾರ್ಜನ್ ಯುವ ಜೇನ್ ಪೋರ್ಟರ್ ಕ್ರೆಡಿಟ್ ಇಲ್ಲದ ಪಾತ್ರ
2016 ಮಿಸ್ ಪೆರೆಗ್ರಿನ್ಸ್ ಹೋಮ್ ಫಾರ್ ಪೆಕ್ಯುಲಿಯರ್ ಚಿಲ್ಡ್ರನ್ ಎಮ್ಮಾ ಬ್ಲೂಮ್
2017 ಚರ್ಚಿಲ್ ಹೆಲೆನ್ ಗ್ಯಾರೆಟ್
2018 ಯುಎಫ್ಓ ನ್ಯಾಟಲಿ
2021 ಅರ್ಮಿ ಅಫ್ ದಿ ಡೆಡ್ ಕೇಟ್ ವಾರ್ಡ್ [೨೪]

ದೂರದರ್ಶನ

[ಬದಲಾಯಿಸಿ]
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
2015 ಸೈಬರ್‌ಬುಲ್ಲಿ ಮೇಗನ್ ದೂರದರ್ಶನ ಚಲನಚಿತ್ರ
2018 ಆರ್ಡೀಲ್ ಬೈ ಇನ್ನೋಸೆನ್ಸ್ ಹೆಸ್ಟರ್ ಅರ್ಗೈಲ್ ಮಿನಿ ಸರಣಿ
2018–2019 ಸ್ವೀಟ್‌ಬಿಟರ್ ಟೆಸ್ ಪ್ರಮುಖ ಪಾತ್ರ
2020 ಬೆಲ್‌ಗ್ರೇವಿಯಾ ಲೇಡಿ ಮರಿಯಾ ಗ್ರೇ ಕಾಲಘಟ್ಟದ ಧಾರಾವಾಹಿ
2021–2024 ಸ್ಟಾರ್ ಟ್ರೆಕ್: ಪ್ರಾಡಿಜಿ ಗ್ವಿನ್ ಧ್ವನಿ ಪಾತ್ರ
2021–2024 ಆರ್ಕೇನ್ (ಟಿವಿ ಸರಣಿ) ಜಿಂಕ್ಸ್ (ಲೀಗ್ ಆಫ್ ಲೆಜೆಂಡ್ಸ್) ಧ್ವನಿ ಪಾತ್ರ
2021–ಪ್ರಸ್ತುತ ಯೆಲ್ಲೋಜಾಕೆಟ್‌ಗಳು (ಟಿವಿ ಸರಣಿ) ಜ್ಯಾಕಿ ಟೇಲರ್ ಪ್ರಮುಖ ಪಾತ್ರ
2024–ಪ್ರಸ್ತುತ ಫಾಲೌಟ್ (ಅಮೇರಿಕನ್ ಟಿವಿ ಸರಣಿ) ಲೂಸಿ ಮ್ಯಾಕ್‌ಲೀನ್ ಪ್ರಮುಖ ಪಾತ್ರ
2024–ಪ್ರಸ್ತುತ ಸ್ವೀಟ್‌ಪೀ (ಟಿವಿ ಸರಣಿ) ರಿಯಾನನ್ ಲೂಯಿಸ್ ಪ್ರಮುಖ ಪಾತ್ರ; ಕಾರ್ಯನಿರ್ವಾಹಕ ನಿರ್ಮಾಪಕಿ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ಸಂಸ್ಥೆ ವಿಭಾಗ ಕೃತಿ ಫಲಿತಾಂಶ
2015 ಫಾರ್ಗೋ ಚಲನಚಿತ್ರೋತ್ಸವ ಅತ್ಯುತ್ತಮ ನಟಿ ವೈಲ್ಡ್ ಲೈಕ್ ಗೆಲುವು
2018 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಯುಕೆ ಅತ್ಯುತ್ತಮ ಹೊಸ ಕಲಾವಿದೆ ಅಕ್ಸೆಸ್ ಅಲ್ ಎರಿಯಾ ನಾಮನಿರ್ದೇಶಿತ
2021 ಅನ್ನಿ ಪ್ರಶಸ್ತಿಗಳು ಅನಿಮೇಟೆಡ್ ಧಾರಾವಾಹಿಯಲ್ಲಿ ಅತ್ಯುತ್ತಮ ಧ್ವನಿ ಅಭಿನಯ ಅರ್ಕೆನ್ ಗೆಲುವು
2024 ಕ್ಯಾನಸರಿಗಳು ಮೇಡಮ್ ಫಿಗರೊ ರೈಸಿಂಗ್ ಸ್ಟಾರ್ ಪ್ರಶಸ್ತಿ ಫಾಲ್ ಔಟ್ ಗೆಲುವು

ಉಲ್ಲೇಖಗಳು

[ಬದಲಾಯಿಸಿ]
  1. Lammers, Tim (2024-04-11). ["'Fallout)': Why Does Vault Dweller Lucy MacLean Look So Familiar?". Forbes. Retrieved 2024-09-20. {{cite news}}: Check |url= value (help)
  2. Nugent, Annabel (23 April 2022). ["Yellowjackets)' Ella Purnell". The Independent. [Archived from the original on 25 June 2022. Retrieved 25 June 2022. {{cite journal}}: Check |archive-url= value (help); Check |url= value (help)](https://web.archive.org/web/20220625073852/https://www.independent.co.uk/arts-entertainment/tv/features/ella-purnell-yellowjackets-interview-army-of-the-dead-b2063842.html|url-status=live}})
  3. "Asa Butterfield and Ella Purnell Interview at Young Actors Theatre Islington – YouTube". YouTube. 8 April 2017. Archived from [the original on 8) April 2017. Retrieved 26 January 2020. {{cite web}}: Check |url= value (help); Check date values in: |archive-date= (help)
  4. Dunn, Francesca. ["Ella Purnell is mini maleficent". i-d.co. {{cite news}}: Check |url= value (help)](https://i-d.co/article/ella-purnell-is-mini-maleficent|website=i-d.co}})
  5. Aroesti, Rachel (5 October 2024). ["'I) can't do gore and I'm not a gamer': Ella Purnell on being an unlikely scream queen". The Guardian. Retrieved 10 October 2024. {{cite journal}}: Check |url= value (help)
  6. Hadland, Gracie (22 May 2024). ["Ella) Purnell Is Hollywood's New Favorite Action Hero". Vulture. {{cite web}}: Check |url= value (help)
  7. [(https://web.archive.org/web/20151001230851/http://screenterrier.blogspot.co.uk/2014/11/miss-peregrines-home-for-peculiar.html) "Two teenage British stars are set to join Eva Green"]. Archived from [(http://screenterrier.blogspot.co.uk/2014/11/miss-peregrines-home-for-peculiar.html) the original] on 1 October 2015. Retrieved 1 October 2015. {{cite web}}: Check |archive-url= value (help); Check |url= value (help)
  8. Rosser, Michael (24) May 2016). ["'Churchill)' shoot begins; cast revealed". Screen (in ಇಂಗ್ಲಿಷ್). [Archived from the original on 20 September 2018. Retrieved 19 September 2018. {{cite news}}: Check |archive-url= value (help); Check |url= value (help); Check date values in: |date= (help)
  9. Billen, Andrew (31 March 2018). "Ordeal by Innocence: the Christie Mystery that almost got away". The Times. No. 72497. Saturday Review. pp. 4–5. ISSN 0140-0460.
  10. Petski, Denise (6 October 2017). ["'Sweetbitter)': Ella Purnell To Star In Starz Drama Series Based On Book". Deadline. Retrieved 4 October 2017. {{cite web}}: Check |url= value (help)
  11. Goldberg, Lesley (20 December 2019). ["'Sweetbitter)' Canceled at Starz (Exclusive)". The Hollywood Reporter. Retrieved 15 February 2020. {{cite web}}: Check |url= value (help)
  12. Bahr, Robyn (10 April 2020). [(https://www.hollywoodreporter.com/tv/tv-reviews/belgravia-1289690/) "'Belgravia': TV Review"]. The Hollywood Reporter. Retrieved 27 March 2022. {{cite web}}: Check |url= value (help)
  13. Haylock, Zoe (17 January 2022). ["Ella Purnell on Surviving Yellowjackets as 'Queen Bee' Jackie". Retrieved 17) January 2022. {{cite web}}: Check |url= value (help); Check date values in: |access-date= (help)
  14. Davis, Clayton (10 April 2024). [(https://variety.com/2024/tv/awards/fallout-emmys-submissions-walton-goggins-ella-purnell-1235966575/) "'Fallout' Sets Emmys Campaign: Walton Goggins and Ella Purnell Go for Lead Drama"]. Variety. {{cite news}}: Check |url= value (help)
  15. Jackson, Hannah (2024-10-08). ["Ella) Purnell Isn't Interested in the Fast Track to Fame". Vogue. {{cite web}}: Check |url= value (help)
  16. 1 2 Hadland, Gracie (2024-05-22). [(https://www.vulture.com/article/ella-purnell-fallout-tv-interview.html) "Ella Purnell Is Hollywood's New Favorite Action Hero"]. Vulture. Retrieved 2024-11-05. {{cite web}}: Check |url= value (help)
  17. Rivera, Briannah (2024-04-11). [(https://www.elle.com/culture/celebrities/a60457108/who-is-ella-purnell-boyfriend-max-bennett-kelly/) "All About 'Fallout' Star Ella Purnell's Musician Boyfriend, Max Bennett Kelly"]. Elle. Retrieved 2024-11-05. {{cite magazine}}: Check |url= value (help)
  18. Jackson, Hannah (2024-10-09). [(https://www.vogue.co.uk/article/ella-purnell-interview-sweetpea) "'Sweetpea' Star Ella Purnell Isn't Interested In The Fast Track To Fame"]. British Vogue (in ಬ್ರಿಟಿಷ್ ಇಂಗ್ಲಿಷ್). Retrieved 2025-03-18. {{cite web}}: Check |url= value (help)
  19. [(https://www.bbc.co.uk/mediacentre/mediapacks/ordeal-by-innocence/purnell) "Interview with Ella Purnell"] (Press release). BBC Media Centre. 2018-03-21. Retrieved 2024-11-05. {{cite press release}}: Check |url= value (help)
  20. Babb, Francesca (2018-08-14). [(https://www.cntraveller.com/article/ella-purnell-interview) "Ella Purnell on hotels, holidays and horoscopes"]. CN Traveller (in ಬ್ರಿಟಿಷ್ ಇಂಗ್ಲಿಷ್). Retrieved 2025-03-18. {{cite web}}: Check |url= value (help)
  21. [(https://www.guardian-series.co.uk/news/14626437.charity-tackle-forced-marriage-honour-abuse-officially-launched/) "Charity to tackle forced marriage and honour abuse officially launched"]. Waltham Forest Guardian. 2016-07-18. Retrieved 2024-11-09. {{cite web}}: Check |url= value (help)
  22. [(https://www.tedxteen.com/speakers/ella-purnell) "Ella Purnell | Host of January 16, 2016 Event"]. TEDxTeen. 2016-01-16. Retrieved 2024-11-05. {{cite web}}: Check |url= value (help)
  23. [(http://www.sbjctjournal.com/2019/07/23/ella-purnell/) "From Ella With Love"]. SBJCT Journal. 23 July 2019. [Archived from the original on 18) March 2025. Retrieved 18 March 2025. {{cite web}}: Check |archive-url= value (help); Check |url= value (help); Check date values in: |archive-date= (help)
  24. Seth, Radhika (2021-05-21). "Ella Purnell nous parle de "Army of the Dead"". Vogue France.