ವಿಷಯಕ್ಕೆ ಹೋಗು

ಎರ್ವಿನ್ ಚಾರ್ಗಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎರ್ವಿನ್ ಚಾರ್ಗಾಫ್
ಜನನ೧೧ ಆಗಸ್ಟ್ ೧೯೦೫
ಕ್ಸೆರ್ನೊವಿಟ್ಜ್, ಆಸ್ಟ್ರೋ-ಹಂಗೇರಿಯ
ಮರಣ೨೦ ಜೂನ್ ೨೦೦೨
ಮ್ಯಾನ್ಹ್ಯಾಟನ್,ನ್ಯೂಯಾರ್ಕ್
ರಾಷ್ಟ್ರೀಯತೆಅಮೇರಿಕನ್
ಕಾರ್ಯಕ್ಷೇತ್ರಜೀವರಸಾಯನಶಾಸ್ತ್ರ
ಸಂಸ್ಥೆಗಳುಯೇಲ್ ವಿಶ್ವವಿದ್ಯಾಲಯ (೧೯೨೫–೧೯೩೦), ಕೊಲಂಬಿಯಾ ವಿಶ್ವವಿದ್ಯಾಲಯ (೧೯೩೫–೧೯೭೪), ರೂಸ್ವೆಲ್ಟ್ ಆಸ್ಪತ್ರೆ (೧೯೭೪-೧೯೯೨)
ವಿದ್ಯಾಭ್ಯಾಸಮ್ಯಾಕ್ಸಿಮಿಲಿಯಾನ್ ಜಿಮ್ನಾಷಿಯಂ, ವಿಯೆನ್ನಾ
ಅಭ್ಯಸಿಸಿದ ವಿದ್ಯಾಪೀಠವಿಯೆನ್ನಾ ವಿಶ್ವವಿದ್ಯಾನಿಲಯ (೧೯೨೪–೧೯೨೮)
ಪ್ರಸಿದ್ಧಿಗೆ ಕಾರಣಚಾರ್ಗಾಫ್ ನಿಯಮ
ಗಮನಾರ್ಹ ಪ್ರಶಸ್ತಿಗಳುಪಾಶ್ಚರ್ ಮೆಡಲ್(೧೯೪೯), ನ್ಯಾಷನಲ್ ಮೆಡಲ್ ಆಫ್ ಸೈನ್ಸ್(೧೯೭೪)
ಹಸ್ತಾಕ್ಷರ
Erwin Chargaff signature.png

ಎರ್ವಿನ್ ಚಾರ್ಗಾಫ್ ರವರು ಆಸ್ಟ್ರೋ-ಹಂಗೇರಿಯನ್ ಜೀವರಸಾಯನಶಾಸ್ತ್ರಜ್ಞರಾಗಿದ್ದರು. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಚಾರ್ಗಾಫ್ ರವರ ಎರಡು ನಿಯಮಗಳು ಡಿಎನ್ಎ ಡಬಲ್ ಹೆಲಿಕ್ಸ್ ರಚನೆಯ ಆವಿಷ್ಕಾರಕ್ಕೆ ಕಾರಣವಾಯಿತು. ಅವರ ಮೊದಲ ನಿಯಮ: ಗ್ವಾನಿನ್ ಘಟಕಗಳ ಸಂಖ್ಯೆಯು ಸೈಟೋಸಿನ್ ಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ ಮತ್ತು ಅಡೆನಿನ್ ಘಟಕಗಳ ಸಂಖ್ಯೆಯು ಥೈಮಿನ್ ಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ. ಎರಡನೆಯ ನಿಯಮವೆಂದರೆ ತುಲನಾತ್ಮಕ ಪ್ರಮಾಣದಲ್ಲಿ ಗ್ವಾನಿನ್, ಸೈಟೋಸಿನ್, ಅಡೆನಿನ್ ಮತ್ತು ಥೈಮಿನ್ ತಳಗಳು ಒಂದು ಜಾತಿಯಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇದು ಪ್ರೋಟೀನ್ ಬದಲಿಗೆ ಡಿಎನ್ಎ ಆನುವಂಶಿಕ ವಸ್ತು ಎಂದು ಸುಳಿವು ನೀಡಿತು.[೧]

ಆರಂಭಿಕ ಜೀವನ

[ಬದಲಾಯಿಸಿ]

ಚಾರ್ಗಾಫ್ ರವರು ೧೧ ಆಗಸ್ಟ್ ೧೯೦೫ರಲ್ಲಿ ಆಸ್ಟ್ರೋ-ಹಂಗೇರಿಯನ್ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿ ಕ್ಸೆರ್ನೊವಿಟ್ಜ್ (ಈಗ ಚೆರ್ನಿವಟ್ಸಿ, ಉಕ್ರೇನ್) ನಲ್ಲಿ ಜನಿಸಿದರು. ಇವರು ಯಹೂದಿ ಕುಟುಂಬಕ್ಕೆ ಸೇರಿದವರು. ಒಂದನೆಯ ಮಹಾಯುದ್ಧ ಆರಂಭವಾದಾಗ, ಅವರ ಕುಟುಂಬ ವಿಯೆನ್ನಾಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಅವರು ಮ್ಯಾಕ್ಸಿಮಿಲಿಯಾನ್ ಜಿಮ್ನಾಷಿಯಂಗೆ (ಈಗ ಜಿಮ್ನಾಷಿಯಂ ವಸಗಾಸ್ಸೆ) ಸೇರಿದರು. ನಂತರ ಅವರು ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ೧೯೨೪ರಿಂದ ೧೯೨೮ರವರೆಗೆ ರಸಾಯನಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಡಾಕ್ಟರೇಟ್ ಪದವಿಯನ್ನು ಪಡೆದರು. ೧೯೨೫ರಿಂದ ೧೯೩೦ರವರೆಗೆ ಚಾರ್ಗಾಫ್ ರವರು ಯೇಲ್ ವಿಶ್ವವಿದ್ಯಾಲಯದಲ್ಲಿ ಸಾವಯವ ರಸಾಯನಶಾಸ್ತ್ರದಲ್ಲಿ ಮಿಲ್ಟನ್ ಕ್ಯಾಂಪ್ಬೆಲ್ ರಿಸರ್ಚ್ ಫೆಲೋ ಆಗಿ ಕಾರ್ಯನಿರ್ವಹಿಸಿದರು.[೨][೩]

ವೃತ್ತಿಜೀವನ

[ಬದಲಾಯಿಸಿ]

ಚಾರ್ಗಾಫ್ ರವರು ೧೯೩೫ರಲ್ಲಿ ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ ಗೆ ವಲಸೆ ಬಂದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸ್ಥಾನ ಪಡೆದರು. ಅವರು ೧೯೩೮ರಲ್ಲಿ ಸಹಾಯಕ ಪ್ರಾಧ್ಯಾಪಕರಾದರು. ೧೯೭೦-೧೯೭೪ ರವರೆಗೆ ಜೀವರಸಾಯನಶಾಸ್ತ್ರ ಇಲಾಖೆಯ ಅಧ್ಯಕ್ಷರಾಗಿದ್ದರು. ನಂತರ ಅವರು ಪ್ರೊಫೆಸರ್ ಎಮಿಟಸ್ ಆಗಿ ನಿವೃತ್ತಿ ಹೊಂದಿದರು. ನಿವೃತ್ತಿ ಹೊಂದಿದ ನಂತರ ಚಾರ್ಗಾಫ್ ತಮ್ಮ ಪ್ರಯೋಗಾಲಯವನ್ನು ರೂಸ್ವೆಲ್ಟ್ ಆಸ್ಪತ್ರೆಗೆ ಸ್ಥಳಾಂತರಿಸಿದರು.[೪][೫]

ಚಾರ್ಗಾಫ್ ನಿಯಮ

[ಬದಲಾಯಿಸಿ]

ಎರ್ವಿನ್ ಚಾರ್ಗಾಫ್ ಎರಡು ನಿಯಮಗಳನ್ನು ಪರಿಚಯಿಸಿದರು. ಅವರ ಮೊದಲ ನಿಯಮ: ಗ್ವಾನಿನ್ ಘಟಕಗಳ ಸಂಖ್ಯೆಯು ಸೈಟೋಸಿನ್ ಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ ಮತ್ತು ಅಡೆನಿನ್ ಘಟಕಗಳ ಸಂಖ್ಯೆಯು ಥೈಮಿನ್ ಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ. ಎರಡನೆಯ ನಿಯಮ: ಡಿಎನ್ಎ ಸಂಯೋಜನೆಯು ಒಂದು ಪ್ರಭೇದದಿಂದ ಇನ್ನೊಂದಕ್ಕೆ ಬದಲಾಗುತ್ತದೆ.[೬][೭]

ಚಾರ್ಗಾಫ್ ರವರು ನ್ಯೂಯಾರ್ಕ್ ನಗರದ ಮ್ಯಾನ್ಹ್ಯಾಟನ್ ನಲ್ಲಿ ೨೦ ಜೂನ್ ೨೦೦೨ರಂದು ನಿಧನರಾದರು.[೮]

ಗೌರವಗಳು

[ಬದಲಾಯಿಸಿ]

ಚಾರ್ಗಾಫ್ ರವರಿಗೆ ೧೯೪೯ರಲ್ಲಿ ಪಾಶ್ಚರ್ ಮೆಡಲ್ ಮತ್ತು ೧೯೭೪ರಲ್ಲಿ ನ್ಯಾಷನಲ್ ಮೆಡಲ್ ಆಫ್ ಸೈನ್ಸ್ ಗೌರವಗಳು ದೊರೆತಿವೆ.

ಉಲ್ಲೇಖಗಳು

[ಬದಲಾಯಿಸಿ]
  1. http://www.bookrags.com/biography/erwin-chargaff-woc/#gsc.tab=0
  2. http://www.macroevolution.net/erwin-chargaff.html
  3. https://www.nytimes.com/2002/06/30/nyregion/erwin-chargaff-96-pioneer-in-dna-chemical-research.html
  4. https://www.encyclopedia.com/science-and-technology/biology-and-genetics/biology-general/erwin-chargaff
  5. https://web.archive.org/web/20050515083436/http://www.amphilsoc.org/library/mole/c/chargaff.htm
  6. https://www.famousscientists.org/erwin-chargaff/
  7. http://www.jbc.org/content/192/1/223.full.pdf
  8. https://www.theguardian.com/news/2002/jul/02/guardianobituaries.obituaries