ಎಟಿನ್ನೆ ಲೂಯಿ ಮಾಲುಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಟಿನ್ನೆ ಲೂಯಿ ಮಾಲುಸ್
Etienne-Louis Malus.jpg
ಎಟಿನ್ನೆ ಲೂಯಿ ಮಾಲುಸ್
ಜನನ
ಎಟಿನ್ನೆ ಲೂಯಿ ಮಾಲುಸ್

೧೭೭೫ ಜೂನ್ ೨೩
ಫ್ರಾನ್ಸ್
ರಾಷ್ಟ್ರೀಯತೆಫ್ರಾನ್ಸ್

ಫ್ರಾನ್ಸಿನ ಭೌತವಿಜ್ಞಾನಿಯಾಗಿದ್ದ ಎಟಿನ್ನೆ ಲೂಯಿ ಮಾಲುಸ್‌ರವರು ೧೭೭೫ರ ಜೂನ್ ೨೩ರಂದು ಪ್ಯಾರಿಸ್ಸಿನಲ್ಲಿ ಜನಿಸಿದರು. ಮಾಲುಸ್‌ರವರು ಬೆಳಕಿನ ಸ್ವಭಾವಗಳ ಮೇಲೆ ಪ್ರಯೋಗಗಳನ್ನು ನಡೆಸಿದರು. ಹರಳಿನ ಮೂಲಕ ತೂರಿದ ಬೆಳಕು ಹೇಗೆ ದ್ವಿ-ವಕ್ರೀಭವನಕ್ಕೆ (double refraction) ಒಳಗಾಗುತ್ತದೆಯೋ ಹಾಗೆಯೇ ಯಾವುದೇ ಮೇಲ್ಮೈಯಿಂದ ಪ್ರತಿಫಲಿತವಾದ ಬೆಳಕು ಕೂಡ ವರ್ತಿಸುತ್ತದೆ ಎಂಬುದಾಗಿ ಮಾಲುಸ್‌ರವರು ಕಂಡುಹಿಡಿದರು. ಅಲ್ಲದೆ ಪ್ರತಿಫಲಿತವಾದ ಬೆಳಕು ಒಂದು ಸಮತಲದಲ್ಲಿ ಧ್ರುವೀಕರಣಕ್ಕೆ (polarization) ಒಳಗಾದರೆ, ಅದೇ (ಪ್ರತಿಫಲಿತವಾದ) ಮೇಲ್ಮೈ ಮೂಲಕ ತೂರಿ ವಕ್ರೀಭವನಕ್ಕೆ ಒಳಗಾದ ಅದೇ ಬೆಳಕು, ಪ್ರತಿಫಲಿತವಾದ ಬೆಳಕಿನ ಸಮತಲಕ್ಕೆ ಲಂಬವಾದ ಸಮತಲದಲ್ಲಿ ಧ್ರುವೀಕರಣಕ್ಕೆ ಒಳಗಾಗುತ್ತದೆ ಎಂಬುದಾಗಿಯೂ ಮಾಲುಸ್‌ರವರು ಕಂಡುಹಿಡಿದರು. ಅಲ್ಲದೆ ಬೆಳಕಿನ ಧ್ರುವೀಕೃತ ಧೂಲದ (polarized beam) ತೀವ್ರತೆಗೂ ಪ್ರತಿಫಲಿತವಾದ ಕೋನಕ್ಕೂ ಸಂಬಂಧವಿದೆ ಎಂಬ ನಿಯಮವನ್ನು ಮಾಲುಸ್‌ರವರು ಕಂಡುಹಿಡಿದರು.[೧] ಕ್ಷಯರೋಗದಿಂದ ನರಳುತ್ತಿದ್ದ ಮಾಲುಸ್‌ರವರು ತಮ್ಮ ಕೇವಲ ೩೯ನೆಯ ವಯಸ್ಸಿನಲ್ಲಿಯೇ ಅಂದರೆ ೧೮೧೨ರ ಫೆಬ್ರವರಿ ೨೩ರಂದು ಪ್ಯಾರಿಸ್ಸಿನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]