ಎಚ್. ಜಿ ಗೋವಿಂದೇಗೌಡರು

ವಿಕಿಪೀಡಿಯ ಇಂದ
Jump to navigation Jump to search


ಎಚ್. ಜಿ ಗೋವಿಂದೇಗೌಡರು
ಜನ್ಮನಾಮಮೇ 25, 1926
ಕಾನೂರು ಗ್ರಾಮದ ಹಿಣಚಿ, ಎನ್.ಆರ್.ಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, ಭಾರತ
ಮರಣಜನವರಿ 6, 2016
ಕೊಪ್ಪ ಪಟ್ಟಣ, ಎನ್.ಆರ್.ಪುರ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ, ಭಾರತ
ವೃತ್ತಿರಾಜಕಾರಣಿ
ಹೆಸರುವಾಸಿಯಾದದ್ದುಶಿಕ್ಷಣ ಮಂತ್ರಿ

'ಮಲೆನಾಡ ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ಎಚ್ ಜಿ ಗೋವಿಂದೇಗೌಡರು ಕರ್ನಾಟಕ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಹೆಸರು ಮಾಡಿದವರು. ಅವರ ಅಧಿಕಾರಾವಧಿಯಲ್ಲಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿದರು. 1999ರಲ್ಲಿ ರಾಜಕೀಯ ನಿವೃತ್ತಿ ಹೊಂದಿದರು.

ಜನನ[ಬದಲಾಯಿಸಿ]

ಎಚ್. ಜಿ. ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕಾನೂರು ಗ್ರಾಮದ ಹಿಣಚಿಯಲ್ಲಿ 1926 ಮೇ 26ರಂದು ಜನಿಸಿದರು. [೧] [೨]

ವೈವಾಹಿಕ ಬದುಕು[ಬದಲಾಯಿಸಿ]

ಅವರಿಗೆ ಐದು ಜನ ಹೆಣ್ಣು ಮಕ್ಕಳೂ, ಓರ್ವ ಪುತ್ರನೂ ಇದ್ದಾರೆ.

ಸಾಧನೆ[ಬದಲಾಯಿಸಿ]

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಗೋವಿಂದೇಗೌಡರು ಕರ್ನಾಟಕದ ಶಿಕ್ಷಣ ಮಂತ್ರಿಯಾಗಿ ಒಂದು ಲಕ್ಷದ ಐದು ಸಾವಿರ ಶಿಕ್ಷಕರನ್ನು ನೇಮಿಸಿ ದಾಖಲೆಗೈದಿದ್ದಾರೆ. ಶಿಕ್ಷಕ ಹುದ್ದೆಯ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಕಲ್ಪಿಸಿದ ಹೆಗ್ಗಳಿಕೆಯೂ ಅವರಿಗಿದೆ.

ಮರಣ[ಬದಲಾಯಿಸಿ]

ಗೋವಿಂದೇಗೌಡರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಕೊಪ್ಪದಲ್ಲಿ 2016 ಜನವರಿ 6ರಂದು ನಿಧನರಾದರು.

  1. https://www.google.co.in/?gfe_rd=cr&ei=nLV4WIKrF9aDuASUzYX4Aw&gws_rd=ssl#q=h+g+govindegowda
  2. http://www.newskarnataka.com/kalasa/former-education-minister-h-g-govinde-gowda-passes-away