ಎಚ್.ವಿ.ಸಾವಿತ್ರಮ್ಮ

ವಿಕಿಪೀಡಿಯ ಇಂದ
Jump to navigation Jump to search

ಎಚ್.ವಿ.ಸಾವಿತ್ರಮ್ಮ ಕನ್ನಡ ನವೋದಯದ ಸಾಹಿತ್ಯದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ೧೯೧೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದ ಬಿ.ಎ.ಪರೀಕ್ಷೆಯಲ್ಲಿ ಮೂರು ಚಿನ್ನದ ಪದಕಗಳನ್ನು ಹಾಗು ಎರಡು ಬಹುಮಾನಗಳನ್ನು ಪಡೆದ ಹೆಗ್ಗಳಿಕೆ ಇವರದು. ಬಂಗಾಳಿ, ಇಂಗ್ಲೀಷ್, ರಷ್ಯಾ ಭಾಷೆಗಳಿಂದ ಕನ್ನಡಕ್ಕೆ ಹಲುವು ಕೃತಿಗಳನ್ನು ಅನುವಾದ ಮಾಡಿದ್ದಾರೆ.

ಕಾದಂಬರಿಗಳು[ಬದಲಾಯಿಸಿ]

 • ಸೀತೆ ರಾಮ ರಾವಣ
 • ವಿಮುಕ್ತಿ

ಅನುವಾದ ಕೃತಿಗಳು[ಬದಲಾಯಿಸಿ]

 • ಮಧ್ಯಕಾಲೀನ ಭಾರತ
 • ಗೋರಾ
 • ಮನೆಜಗತ್ತು
 • ಚಿನ್ನದ ದೋಣಿ
 • ನೌಕಾಘಾತ (ರವೀಂದ್ರನಾಥ ಠಾಗೋರರ‌ ಕೃತಿಗಳು)
 • ಹಸಿವೋ ಹಸಿವು (ಭವಾನಿ ಭಟ್ಟಾಚಾರ್ಯರ ಕೃತಿ)
 • ಸ್ಮರಭಸ್ಮ
 • ಶಶಿಲೇಖಾ ನೀಲನೇತ್ರ (ಎಫ್.ಡಬ್ಲ್ಯೂ.ಬೈನ್ಸ್ ಕೃತಿಗಳು)
 • ಮದುವಣಗಿತ್ತಿ (ರಷ್ಯಾನ ಚೆಕಾಫನ ಕೃತಿ)
 • ಮಹಾತ್ಮ ಗಾಂಧಿ ಜೀವನ ಚರಿತ್ರೆ (ಇಂಗ್ಲೀಷ್ ನ ಲೂಯಿ ಫಿಷರ್ ಕೃತಿ)

ಕಥಾಸಂಕಲನಗಳು[ಬದಲಾಯಿಸಿ]

 1. ನಿರಾಶ್ರಿತೆ
 2. ಮರುಮದುವೆ
 3. ಸರಿದ ಬೆರಳು
 4. ಹೊಸಜಗತ್ತು
 5. ಪ್ರತೀಕ್ಷೆ

ಪ್ರಶಸ್ತಿಗಳು[ಬದಲಾಯಿಸಿ]

 • ಮದುವಣಗಿತ್ತಿ ಪುಸ್ತಕಕ್ಕೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೬೫)
 • ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೫)
 • ಅನುಪಮಾ ಪ್ರಶಸ್ತಿ (೧೯೯೨)
 • ದೆಜಗೌ ಪ್ರತಿಷ್ಟಾನದ ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ
 • ಸ್ವರಲಿಪಿ ಪ್ರತಿಷ್ಟಾನದ "ಲಿಪಿಪ್ರಾಜ್ಞೆ" (೧೯೭೫)
 • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೭೫)

ಇವರು ೨೭.೧೨.೧೯೯೫ ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]