ಎಚ್.ವಿ.ರಂಗರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಚ್.ವಿ.ರಂಗರಾಯರು ಇಂದ ಪುನರ್ನಿರ್ದೇಶಿತ)

ಹಳೆ ಮೈಸೂರು ರಾಜ್ಯದ ಚಿತ್ರದುರ್ಗಜಿಲ್ಲೆಯ ಹೊಳಲ್ಕೆರೆ [೧]ಗ್ರಾಮದಲ್ಲಿ ಜನಿಸಿದ,'ಶ್ರೀ. ಎಚ್.ವಿ.ರಂಗರಾವ್', [೨] ಒಬ್ಬ 'ಆಡೀಟರ್' ಆಗಿ ಕೆಲಸ ಮಾಡಿದವರು. ವಂಶ ಪಾರಂಪರ್ಯವಾಗಿ ಶ್ಯಾನುಭೋಗರ ಮನೆಯಲ್ಲಿ ಜನಿಸಿದ ಅವರ ವಂಶದವರು ಆ ಪ್ರದೇಶದ ಸುಂಕವನ್ನೂ ಜನರಿಂದ ವಸೂಲು ಮಾಡಿ ಸರ್ಕಾರದ ಖಜಾನೆಗೆ ಜಮಾ ಮಾಡುತ್ತಿದ್ದರು.[೩] ಹಾಗಾಗಿ ಅವರ ಮನೆತನದವರಿಗೆ 'ಸುಂಕ'ದವರು ಎಂಬ ಅಡ್ಡ ಹೆಸರಿತ್ತು. ಅವರು ೩೦ ರ ದಶಕದಲ್ಲಿ, ಮುಂಬೈನಲ್ಲಿ ಹಲವು ಕಾಲ, ಬ್ರಿಟಿಷ್ ಸಂಸ್ಥೆಗಳಾದ, 'ವೋಲ್ಕಾರ್ಟ್ ಬ್ರದರ್ಸ್ ಮತ್ತು 'ರ‍್ಯಾಲಿ ಬ್ರದರ್ಸ್' ನಲ್ಲಿ ಏಜೆಂಟ್ ಆಗಿ ದುಡಿದವರು.[೪] ರಂಗರಾಯರು 'ಜ್ಯೋತಿಷ ಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರು'. 'ಬೆಂಗಳೂರಿನ ಪ್ರಖ್ಯಾತ ಆಸ್ಟ್ರೊಲಾಜಿಕಲ್ ಮ್ಯಾಗಜೈನ್' '(ಜ್ಯೋತಿಷ ಶಾಸ್ತ್ರದ ಮಾಸಪತ್ರಿಕೆ}' ಯ ಸ್ಥಾಪಕ/ಸಂಪಾದಕರಾದ, 'ಡಾ. ಬಿ. ವಿ. ರಾಮನ್' ರವರ ತಾತ, 'ಶ್ರೀ. ಸೂರ್ಯನಾರಾಯಣರಾವ್ ಬಿ.ಎ;'ಅವರ ಜೊತೆಯಲ್ಲಿ 'ಜ್ಯೋತಿಷ ಶಾಸ್ತ್ರ'ದ ಬಗ್ಗೆ ಚರ್ಚಿಸುತ್ತಿದ್ದರು. ಪ್ರತಿವರ್ಷವೂ ಸೂರ್ಯನಾರಾಯಣರಾಯರ ಹುಟ್ಟುಹಬ್ಬದ ಸಮಾರಂಭಕ್ಕೆ ಹಾಜರಾಗುತ್ತಿದ್ದರು.[೫] ಇವರ ಪೂರ್ವಜರು, ಹಿಂದೆ 'ವಿಜಯನಗರದ ಅರಸರ ಬಳಿ ಸೇವೆ ಸಲ್ಲಿಸುತ್ತಿದ್ದರು'. ಅದರ ಪತನದ ಬಳಿಕ ದಕ್ಷಿಣ ಭಾರತಕ್ಕೆ ವಲಸೆಬಂದು ನೆಲೆಸಿದವರಲ್ಲಿ ಕೆಲವರು ಹೊಳಲ್ಕೆರೆಯಲ್ಲಿ ನೆಲೆಸಿದರು. ಸುಮಾರು ೩೦೦ ವರ್ಷಗಳಿಂತ ಹೆಚ್ಚು ಸಮಯದಿಂದ ಹೊಳಲ್ಕೆರೆ ಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ಇಬ್ಬರು ಮಕ್ಕಳಾದ' ಡಾ.ಎಚ್.ಆರ್.ಚಂದ್ರಶೇಖರ್, ಮತ್ತು 'ಪ್ರೊ.ಎಚ್. ಆರ್. ರಾಮಕೃಷ್ಣ ರಾವ್' ವಿದ್ಯಾಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

'ದಾಸ್ಬೋಧ್,'ಮೆಚ್ಚಿನ ಪುಸ್ತಕಗಳಲ್ಲೊಂದು[ಬದಲಾಯಿಸಿ]

ರಂಗರಾಯರ ಮನೆಯಲ್ಲಿ ಬಹು'ದೊಡ್ಡ ಪುಸ್ತಕ ಭಂಡಾರ'ವಿತ್ತು. ಅದರಲ್ಲಿ ಹಲವಾರು ಪ್ರಕಾರಗಳ ಪುಸ್ತಕಗಳಿದ್ದವು.

  • ಗುರುದೇವ, ರವೀಂದ್ರನಾಥ ಠಾಕೂರರ, 'ರೆಡ್ ಆಲೆಂಡರ್ಸ್', 'ಪೋಸ್ಟ್ ಆಫೀಸ್', 'ಗೀತಾಂಜಲಿ', 'ಗೋರಾ', 'ನೌಕಾಘಾತ', ಮುಂತಾದ ಪುಸ್ತಕಗಳಿದ್ದವು.
  • 'ಗಳಗನಾಥರ ಬಂಗಾಲಿ ಕಾದಂಬರಿಗಳ ಕನ್ನಡ ಭಾಷಾಂತರದ ಪುಸ್ತಕಗಳು', 'ಮಹಾಶ್ವೇತೆ', 'ಕಪಾಲ ಕುಂಡಲಿ',
  • 'ದೇವೀ ಚೌಧುರಾಣಿ, ಆನಂದ ಮಠ,
  • 'ಅನಕೃ'ರವರ 'ತರಾಸು'ರವರ, 'ಹೊಸಹಗಲು', 'ತಿರುಗು ಬಾಣ', 'ರಕ್ತರಾತ್ರಿ', 'ಚಂದವಳ್ಳಿಯ ತೋಟ', ಮುಂತಾದ ಹಲವಾರು ಪುಸ್ತಕಗಳಿದ್ದವು.
  • 'ವಿ.ಸೀ'.ಅವರ 'ಪಂಪಾಯಾತ್ರೆ', ಮುಂತಾದವು.
  • 'ಬಿ.ಎಂ.ಶ್ರೀ'ರವರ, 'ಅಶ್ವತ್ಥಾಮನ್',
  • 'ಟಿ. ಪಿ. ಕೈಲಾಸಂ' ರವರ, 'ತಾಳೀಕಟ್ಟೋದ್ಕೂಲಿನೆ', 'ಸಾತು ತವರ್ಮನೆ', 'ಪಾತು ತವರ್ಮನೆ', 'ಪರ್ಪಸ್', ಮುಂತಾದವು.
  • 'ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು' ಅವರ, 'ಮೂಳೆಯ ಹಂದರ', 'ಸ್ವಯಂವೈದ್ಯ', ಮುಂತಾದವು.
  • 'ಭಕ್ತಿವಿಜಯ', 'ನಮ್ಮ ಊರಿನ ರಸಿಕರು', ದಾಶರಥೀ ದೀಕ್ಷಿತರ, 'ಅಳಿಯ ದೇವರು', ಮುಂತಾದವುಗಳು,
  • 'ಬೃಹದ್ಜಾತಕಂ'
  • 'ಅನುಭವಾಮೃತ' [೬]

ಪತ್ರಿಕೆಗಳು[ಬದಲಾಯಿಸಿ]

  • 'ಗುಬ್ಬಿ ಚಿದಂಬರಾಶ್ರಮದ,[೭] 'ಸೇವಾ ಸದನ', 'ಆಸ್ಟ್ರೊಲಾಜಿಕಲ್ ಮ್ಯಾಗಜೈನ್',[೮] 'ಹೊಳೆನರಸೀಪುರದ ಪತ್ರಿಕೆಗಳು',[೯] ಇತ್ಯಾದಿಗಳು. ರಂಗರಾಯರು, ಮರಾಠಿ, ತೆಲುಗು, ಕನ್ನಡ, ಹಾಗೂ ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರು. 'ದಾಸ್ಬೋಧ್,[೧೦] ಶ್ರೀಧರ ಸ್ವಾಮಿಗಳ, 'ಪಾಂಡವ ಪ್ರತಾಪ್'[೧೧] ಗಳನ್ನು ಶ್ರವಣಮಾಡುತ್ತಾ, ಅದರ ಅರ್ಥವನ್ನು ಮನೆಯವರಿಗೆ ವಿವರಿಸುತ್ತಿದ್ದರು. 'ಗೋಂದಾವಲೆಕರ್ ಬ್ರಹ್ಮಚೈತನ್ಯ [೧೨] ಮಹಾರಾಜರ' ಪರಮ ಭಕ್ತರು. [೧೩]

ಉಲ್ಲೇಖಗಳು[ಬದಲಾಯಿಸಿ]

  1. "ಹೊಳಲ್ಕೆರೆಯ ಬಗ್ಗೆ ವಿವರ". Archived from the original on 2018-06-15. Retrieved 2017-10-06.
  2. "Kn.Sciencegraph.net/wiki ಹೊಳಲ್ಕೆರೆಯ ಗಣ್ಯವ್ಯಕ್ತಿಗಳು". Archived from the original on 2016-03-05. Retrieved 2014-07-13.
  3. good-astrologer-auditor-and-shanbhogue
  4. ನಿವೃತ್ತರಾದಾಗ ಬೀಳ್ಕೊಡುಗೆಯ ಪಾರ್ಟಿಯಲ್ಲಿ
  5. www.shorpy.com,Ranga rao and friends
  6. ಶ್ರೀಮಹಲಿಂಗರಂಗ ಕವಿಯ, 'ಅನುಭವಾಮೃತ',(ಪರಿಶೋಧಿತ), ಹೊಸಕೆರೆ ಚಿದಂಬರಯ್ಯ. ಪು.೮[ಶಾಶ್ವತವಾಗಿ ಮಡಿದ ಕೊಂಡಿ]
  7. 'ಚಿದಂಬರಾಶ್ರಮ', ಗುಬ್ಬಿ, ತುಮಕೂರು ತಾಲ್ಲೂಕು Archived 2013-09-21 ವೇಬ್ಯಾಕ್ ಮೆಷಿನ್ ನಲ್ಲಿ.
  8. The Astrological e magazine
  9. 'ಅಧ್ಯಾತ್ಮಪ್ರಕಾಶ ಕಾರ್ಯಾಲಯ, ಹೊಳೆನರಸೀಪುರ'[ಶಾಶ್ವತವಾಗಿ ಮಡಿದ ಕೊಂಡಿ]
  10. 'ಶ್ರೀಮತ್ ಗ್ರಂಥರಾಜ್, ದಾಸ್ಬೋಧ್'
  11. "Pandav pratap(Marathi)". Archived from the original on 2014-09-09. Retrieved 2014-07-16.
  12. power of Ram nam, Gondavalekar maharaj
  13. "Brahmachaitanya maharaj". Archived from the original on 2015-01-15. Retrieved 2014-07-15.