ಎಚ್.ಎಸ್.ಪಾರ್ವತಿ

ವಿಕಿಪೀಡಿಯ ಇಂದ
Jump to navigation Jump to search
ಎಚ್.ಎಸ್.ಪಾರ್ವತಿ
ಜನ್ಮನಾಮ
ಪಾರ್ವತಿ,

೩-೦೨-೧೯೩೪ ರಂದು ಜನಿಸಿದರು
ಬೆಂಗಳೂರಿನಲ್ಲಿ
ವೃತ್ತಿಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿದರು. ಭಾಷಾಂತರ, ಕಾದಂಬರಿ ಕಾರ್ತಿಯಾಗಿ ಈವರೆಗೆ ೫೧ ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಕ್ರಿಯ ವರ್ಷಗಳುಬಾನುಲಿನಿಲಯದಲ್ಲಿ ಕೆಲಸಮಾಡುತ್ತಿದ್ದ, ಎಮ್.ಎಸ್.ಶ್ರೀಹರಿಯವರನ್ನು ವಿವಾಹವಾದರು. ಮೂವತ್ತೆರಡು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ಎಚ್.ಎಸ್.ಪಾರ್ವತಿಯವರು: - ೩-೦೨-೧೯೩೪ ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ಎಚ್.ಶ್ರೀನಿವಾಸ ರಾವ್, ತಾಯಿ ಮಹಾಲಕ್ಷ್ಮಮ್ಮ. ಎಸ್.ಎಸ್.ಎಲ್.ಸಿ ಯವರೆಗೆ ಓದಿದರು.ನಂತರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಕಾಲೇಜಿಗೆ ಹೋಗಲಾಗದೇ ಹೊರವಿದ್ಯಾರ್ಥಿನಿಯಾಗಿ ಬಿ.ಎ ಮತ್ತು ಎಮ್.ಎ (ಹಿಂದಿ) (ಕಾಶಿ ವಿಶ್ವವಿದ್ಯಾನಿಲಯ)ಪದವಿಗಳನ್ನು ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆ. ಹಿಂದಿ ತರಗತಿಗಳ ಮೂಲಕ ಖ್ಯಾತ ಸಾಹಿತಿ ನಿರಂಜನ ಅವರ ಪರಿಚಯ. ಅವರ ಪ್ರೇರಣೆ ಮತ್ತು ಮಾರ್ಗದರ್ಶನದಿಂದಲೇ ಪರಾಜಯ ಎಂಬ ಹಿಂದಿ ಕಾದಂಬರಿಯ ಅನುವಾದ. ಹಲವಾರು ಪತ್ರಿಕೆಗಳಲ್ಲಿ ಸಣ್ಣ ಕಥೆಗಳು ಮತ್ತು ಕಿರುಲೇಖನಗಳ ಪ್ರಕಟಣೆ. ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮೊದಲಿಗರಲ್ಲಿ ಎಚ್.ಎಸ್.ಪಾರ್ವತಿ ಒಬ್ಬರು. ಇವರ ಲೇಖನ ಮತ್ತು ಕಥೆಗಳು ಇದನ್ನೇ ಧ್ವನಿಸುತ್ತವೆ. ಆಕಸ್ಮಿಕವಾಗಿ ಆಕಾಶವಾಣಿಯಲ್ಲಿ ಉದ್ಯೋಗ ಲಭಿಸಿತು. ಅಲ್ಲೇ ಉದ್ಯೋಗಿಗಳಾಗಿದ್ದ ಎಮ್.ಎಸ್.ಶ್ರೀಹರಿಯವರನ್ನು ವಿವಾಹವಾದರು. ಮೂವತ್ತೆರಡು ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ಇವರು ಸಾಹಿತ್ಯ ಕ್ಷೇತ್ರದಲ್ಲಿ ಭಾಷಾಂತರಕಾರ್ತಿಯಾಗಿ ಗುರುತಿಸಲ್ಪಟ್ಟವರು. ಇವರು ಈವರೆಗೆ ೫೧ ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಕಾದಂಬರಿಗಳು[ಬದಲಾಯಿಸಿ]

 • ನೇಸರು ನೆಳಲು
 • ಜೀವನ ಜಾಲ
 • ಜಬಾಲಾ
 • ಗೂಡಿನಿಂದ ಗಗನಕ್ಕೆ
 • ಇದು ಬರಿ ಬೆಳಗಲ್ಲ
 • ಹಾವಿ ಏಣಿ ಆಟ
 • ಒಂದು ಸಂವತ್ಸರ ಚಕ್ರ
 • ಮಡಿಲು
 • ಯುಗಪುರುಷ
 • ನಂದ ನಂದನ

ಕಥಾ ಸಂಕಲನ[ಬದಲಾಯಿಸಿ]

 • ಹೆಣ್ಣು ಹೃದಯ
 • ಬದಲಾದ ಪ್ರತಿಬಿಂಬ
 • ಸ್ವರ ಅಪಸ್ವರ
 • ಒಂಟಿ ಮೋಡ
 • ನೆನಪು ಸಾಯಲಿಲ್ಲ
 • ಸುಳಿ
 • ಮಹಾಭಾರತದ ಉಪಕಥೆಗಳು

ಪ್ರಬಂಧ[ಬದಲಾಯಿಸಿ]

 • ಚಿಂತನ ಮಂಥನ
 • ಸಾಹಿತ್ಯ-ಮಹಿಳಾ ದೃಷ್ಟಿ
 • ಸಾಹಿತ್ಯ ಲಹರಿ
 • ಓದಿನಾ ಒಳಗು

ಭಾಷಾಂತರ[ಬದಲಾಯಿಸಿ]

 • ಪರಾಜಯ
 • ದುರ್ಗೇಶ ನಂದಿನಿ
 • ತ್ಯಾಗಪತ್ರ ಮತ್ತು ಉದಯದೆಡೆಗೆ
 • ಬಿಳಿರಕ್ತ
 • ಮುಚ್ಚಿದ ಬಾಗಿಲು
 • ಮಾಸಿದ ಸೆರಗು
 • ದರ್ಬಾರಿ ರಾಗ
 • ಬಂಟೀ
 • ರಣ ಹದ್ದುಗಳು
 • ಮಂದಹಾಸ
 • ಫಣೇಶ್ವರನಾಥ ನೇಣಿ
 • ಗಂಗೂತಾಯಿ
 • ಪಂಜಾಬಿ ಲೋಕಕಥೆಗಳು
 • ನನಗೆ ಚಂದ್ರ ಬೇಕು.

ಸಂಪಾದನೆ[ಬದಲಾಯಿಸಿ]

 • ಕನಸು-ನನಸು
 • ಭಾರತಿ ತಿರುಮಲೆ ರಾಜಮ್ಮ -ಅಭಿನಂದನಾ ಗ್ರಂಥ
 • ಸುನಂದಾಭಿನಂದನ-ಅಭಿನಂದನಾ ಗ್ರಂಥ
 • ಜಿ.ನಾರಾಯಣ-ವಿಚಾರ
 • ಕಬೀರ್ ಮತ್ತು ಸರ್ವಜ್ಞನ ವಚನಗಳು
 • ಸುರಗಿ
 • ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ
 • ಇಪ್ಪತ್ತನೆ ಶತಮಾನದಲ್ಲಿ ಕರ್ನಾಟಕ ಮಹಿಳೆಯರ ಸಾಧನೆ

ಜೀವನ ಚರಿತ್ರೆ[ಬದಲಾಯಿಸಿ]

 • ತಿರುಮಲೆ ರಾಜಮ್ಮ
 • ಆರ್.ಕಲ್ಯಾಣಮ್ಮ ಜೀವನ

ರೇಡಿಯೋ ನಾಟಕ[ಬದಲಾಯಿಸಿ]

ಕಥಾ ತರಂಗ(ಸಂಗ್ರಹ)

ಎಚ್.ಎಸ್.ಪಾರ್ವತಿಯವರಿಗೆ ಓದಿನಾ ಒಳಗು ಎನ್ನುವ ಪ್ರಬಂಧಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ ದೊರೆತಿದೆ.