ವಿಷಯಕ್ಕೆ ಹೋಗು

ಎಂ. ಪ್ರಭಾಕರ ಜೋಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಪ್ರಭಾಕರ ಜೋಶಿ
ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ ಪುಸ್ತಕದ ಮುಖಪುಟದ ಚಿತ್ರ
ಪ್ರಗಲ್ಭ ಚಿಂತಕ, ಅರ್ಥವಿಹಾರಿ ಡಾ.ಎಂ. ಪ್ರಭಾಕರ ಜೋಶಿ
ಪುಸ್ತಕದ ಮುಖಪುಟದ ಚಿತ್ರ
ಜನನ೧೯೪೬ (ವಯಸ್ಸು 78–79)
ಮಾಳ, ಕಾರ್ಕಳ
ಉದ್ಯೋಗಲೇಖಕ, ಸಂಶೋದಕ, ಕಲಾವಿದ
ಭಾಷೆತುಳು, ಕನ್ನಡ
ಶಿಕ್ಷಣಎಂ. ಕಾಂ. , ಪಿ.ಎಚ್.ಡಿ (ಯಕ್ಷಗಾನ)
ವಿಷಯಗಳುಯಕ್ಷಗಾನ
ಪ್ರಮುಖ ಕೃತಿಗಳುಜಾಗರ, ಕೇದಗೆ,
ಮಂದಾರ ಕೇಶವ ಬಟ್ರ್ (ಪರಿಚಯ-ತುಳು)


ಡಾ. ಎಂ. ಪ್ರಭಾಕರ ಜೋಶಿ

ಡಾ. ಎಂ. ಪ್ರಭಾಕರ ಜೋಶಿಯವರು (ಜನನ : ೧೯೪೬) ಸಂಶೋಧಕರು, ಕಲಾವಿದರು, ಸಂಘಟಕರು ಹಾಗೂ ಸಲಹೆಗಾರರು[]. ಇವರು ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಜನಿಸಿದರು. ಇವರು ಯಕ್ಷಗಾನ ವಿಮರ್ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ಜೋಶಿಯವರು ಕಾರ್ಕಳ ತಾಲೂಕಿನ ಮಾಳ ಗ್ರಾಮದಲ್ಲಿ ಜನಿಸಿದರು. ಇವರದ್ದು ಕಲೆ ಹಾಗೂ ಸಾಹಿತ್ಯದ ಹಿನ್ನೆಲೆಯಿರುವ ಕುಟುಂಬ. ಇವರ ತಂದೆ ನಾರಾಯಣ ಜೋಶಿಯವರು ವಿದ್ವಾಂಸರು ಮತ್ತು ವಾಗ್ಮಿಯಾಗಿದ್ದರು. ಇವರ ತಾಯಿ ಲಕ್ಷೀಬಾಯಿ. ಮಾತಾಮಹ ಅನಿರುದ್ಧ ಭಟ್ಟರು ಇವರ ಯಕ್ಷಗಾನ ಗುರು. ಇವರು ಯಕ್ಷಗಾನದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.

ಜೋಶಿಯವರು ಬೆಸೆಂಟ್ ಪದವಿ ಪೂರ್ವ ಕಾಲೇಜು, ಮಂಗಳೂರು ಇಲ್ಲಿ ಮೂರು ದಶಕಗಳ ಕಾಲ ವಾಣಿಜ್ಯ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ, ಎರಡು ವರ್ಷ ಪ್ರಾಂಶುಪಾಲರಾಗಿ ನಿವೃತ್ತಿಗೊಂಡರು. ಇವರು ಬೆಸೆಂಟ್ ವಿದ್ಯಾಕೇಂದ್ರ, ಬಲ್ಮಠ ಇನ್‌ಸ್ಟಿಟ್ಯೂಟ್‌ಗಳಲ್ಲೂ ಗೌರವ ಸೇವೆ ಸಲ್ಲಿಸಿದ್ದಾರೆ. ಇವರು ಯಕ್ಷಗಾನ ತಾಳಮದ್ದಳೆ ರಂಗದ ಪ್ರಮುಖ ಅರ್ಥದಾರಿಯಾಗಿದ್ದರು. ಇವರು ಯಕ್ಷಗಾನ ಕಾರ್ಯಕ್ರಮ, ಗೋಷ್ಠಿ, ಆಟ ಕೂಟಗಳ ಸಂಘಟಕ ಹಾಗೂ ನಿರ್ದೇಶಕರಾಗಿದ್ದರು. ಇವರು ಯಕ್ಷಗಾನದ ಪ್ರಪ್ರಥಮ ಆಡಿಯೋ ಸಿ.ಡಿ ನಿರ್ದೇಶನ ಮಾಡಿದವರಾಗಿದ್ದಾರೆ.[]

ಕೃತಿಗಳು

[ಬದಲಾಯಿಸಿ]
  • ಜಾಗರ
  • ಕೇದಗೆ
  • ಮಾರುಮಾಲೆ
  • ಪ್ರಸ್ತುತ
  • ಯಕ್ಷಗಾನ ಪದಕೋಶ
  • ಭಾರತೀಯ ತತ್ತ್ವಶಾಸ್ತ್ರ
  • ತಾಳಮದ್ದಳೆ
  • ವಾಗರ್ಥ
  • ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ
  • ಮಂದಾರ ಕೇಶವ ಬಟ್ರ್ (ಪರಿಚಯ-ತುಳು)
  • ಗುರ್ತ (ತುಳು ಕವಿತೆಗಳು)
  • ಪಂಡಿತ ಪೆರ್ಲ ಕೃಷ್ಣಭಟ್ಟ
  • ಯಕ್ಷಗಾನ ಸ್ಥಿತಿ-ಗತಿ
  • ಕೊರಳಾರ
  • ಮುಡಿ
  • ವೀರಗಾಸೆ
  • ತತ್ತ್ವಮನನ
  • ಶ್ರೀ ವೀರೇಂದ್ರ ಹೆಗ್ಗಡೆ : ದೃಷ್ಠಿ ಮತ್ತು ಸೃಷ್ಠಿ (೨೦೨೧)
  • ಕವಿತೆಗಳು, ಅನುವಾದಗಳು, ಹಲವು ನೃತ್ಯ ನಾಟಕಗಳು
  • ಸಂಸ್ಕೃತಿ, ರಾಜಕೀಯ, ಅರ್ಥಶಾಸ್ತ್ರ, ಕ್ರೀಡೆ, ಪ್ರಚಲಿತ ವಿದ್ಯಮಾನ ಮೊದಲಾದ ವಿವಿಧ ವಿಚಾರಗಳಲ್ಲಿ ನೂರಾರು ಬಿಡಿ ಬರಹಗಳು, ಅಂಕಣ ಲೇಖನಗಳು.[]

ಇತರರೊಂದಿಗೆ

[ಬದಲಾಯಿಸಿ]
  • ಮಣೇಲ್ ಶ್ರೀನಿವಾಸ ನಾಯಕರು : ಜೀವನ ಪರಿಚಯ - ಎನ್. ಮಾಧವಾಚಾರ್ಯ[]
  • ಭಾರತೀಯ ತತ್ತ್ವಶಾಸ್ತ್ರ ಪರಿಚಯ, ಭಾರತೀಯ ತತ್ತ್ವಶಾಸ್ತ್ರ ಪ್ರವೇಶ - ಪ್ರೊ. ಎಂ.ಎ. ಹೆಗಡೆ
  • ಕುಮಾರಿಲ ಭಟ್ಟ - ಪ್ರೊ. ಎಂ. ಎ. ಹೆಗಡೆ
  • ದಕ್ಷಿಣ ಕನ್ನಡ - ಗುರುರಾಜ ಮಾರ್ಪಳ್ಳಿ
  • ಹಾಜಿ ಅಬ್ದುಲ್ಲಾ (ಇಂಗ್ಲಿಷ್ ಅನುವಾದ. ಮೂಲ : ಪ್ರೊ. ಮುರಳೀಧರ ಉಪಾಧ್ಯ)
  • ಕೋಗಿಲೆ (ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಂಚಿಕೆ, ೧೯೮೮)

ಸಂಪಾದಿತ

[ಬದಲಾಯಿಸಿ]
  • ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ
  • ಯಕ್ಷಗಾನ ಚಿಂತನ
  • ಕುಕ್ಕಿಲ ಸಂಪುಟ[]

ಸಂಪಾದಿತ : ಇತರರೊಂದಿಗೆ

[ಬದಲಾಯಿಸಿ]
  • ಯಕ್ಷಗಾನ ಮಕರಂದ (ಪೊಳಲಿ ಶಾಸ್ತ್ರಿ ಸಂಸ್ಮರಣಾ ಗ್ರಂಥ)
  • ಶ್ರೀ ಚಕ್ರ (ಪೊಳಲಿ ಶಾಸ್ತ್ರೀ ಸಮಿತಿ ಸಂಚಿಕೆ)
  • ಯಕ್ಷಗಾನ ವಾಚಸ್ಪತಿ (ಪೊಳಲಿ ಶಾಸ್ತ್ರೀ ಸಮಿತಿ ಸಂಚಿಕೆ)
  • ಯಕ್ಷಕರ್ದಮ (ಪದವೀಧರ ಯಕ್ಷಗಾನ ಸಮಿತಿ, ಮುಂಬೈ, ಸಮ್ಮೇಳನ ಸಂಕಲನ)
  • ಗಾನಕೋಗಿಲೆ (ಭಾಗವತ ದಾಮೋದರ್ ಮಂಡೆಚ್ಚ ಸಂಸ್ಮರಣ ಗ್ರಂಥ)
  • ಸ್ವರ್ಣ ರೇಖೆ (ಕರ್ನಾಟಕ ರಾಜ್ಯ ಸ್ವರ್ಣ ಮಹೋತ್ಸವ ನೆನಪಿನ ಲೇಖನ ಸಂಕಲನಗಳು)
  • ಪೊಲಿ (ಕೆನರಾ ಜಿಲ್ಲೆ ಶತಮಾನ-ಸಂಪುಟ)
  • ಕುಬಣೂರು ಸ್ಮೃತಿ (ಕುಬಣೂರು ಬಾಲಕೃಷ್ಣರಾವ್ ಸ್ಮೃತಿ ಗ್ರಂಥ)
  • ರಂಗವೆಂಕಟ (ಪಣಂಬೂರು ವೆಂಕಟರಾಯ, ಐಕಳ ಸಂಸ್ಮರಣ ಗ್ರಂಥ)
  • ದೀವಾಣ ಸಂಪದ (ದೀವಾಣ ಭೀಮ ಭಟ್ಟ- ಸ್ಮರಣ ಗ್ರಂಥ)
  • ಮೂಡಂಬೈಲು ಶಾಸ್ಥ್ರೀ - ೭೫ (ಅಭಿನಂದನ ಗ್ರಂಥ)
  • ಶ್ರೇಣಿ ಪ್ರಸಂಗ
  • ಶ್ರೀಮಯ ಅಮೃತ ಸಿಂಚನ (ಶ್ರೀ ಇಡಗುಂಜಿ ಮೇಳ - ೭೫, ಸಂಪುಟ)
  • ಶ್ರೀಮಯ ಅಮೃತ ಮಂಥನ (ಶ್ರೀ ಇಡಗುಂಜಿ ಮೇಳ - ೮೦, ಸಂಪುಟ)
  • ಶತಸ್ಮೃತಿ (ಬೆಸೆಂಟ್ ಶಿಕ್ಷಣ ಸಮೂಹದ ಶತಮಾನೋತ್ಸವ ಗ್ರಂಥ) ೨೦೧೯
  • ಕಲಾವಿದ ಹರಿದಾಸ ರಾಮದಾಸ ಸಾಮಗ ಸ್ಮರಣ ಗ್ರಂಥ (ಅಪ್ರಕಟಿತ)

ಕೊಡುಗೆಗಳು

[ಬದಲಾಯಿಸಿ]
  • ಯಕ್ಷಗಾನದ ವಿಮರ್ಶೆ ಮತ್ತು ಸಂಶೋಧನೆ: ಡಾ. ಪ್ರಭಾಕರ ಜೋಶಿಯವರು ಯಕ್ಷಗಾನದ ಪ್ರಮುಖ ವಿಮರ್ಶಕರು ಮತ್ತು ಸಂಶೋಧಕರಾಗಿದ್ದು, ಯಕ್ಷಗಾನದ ಬಗ್ಗೆ ಅವರು ಬರೆದ ಲೇಖನಗಳು ಮತ್ತು ಪುಸ್ತಕಗಳು ಯಕ್ಷಗಾನದ ವಿವಿಧತೆಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿವೆ. []
  • ಅರ್ಥಧಾರಿ: ಅವರು ಯಕ್ಷಗಾನ ತಾಳಮದ್ದಳೆಯ ಪ್ರಮುಖ ಅರ್ಥಧಾರಿಗಳಲ್ಲಿ ಒಬ್ಬರು. ಅವರ ಅರ್ಥಗಾರಿಕೆ ಯಕ್ಷಗಾನ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
  • ಯಕ್ಷಗಾನದ ಅಕಾಡೆಮಿಕ್ ಅಧ್ಯಯನ: ಅವರು ಯಕ್ಷಗಾನಕ್ಕೆ ಅಕಾಡೆಮಿಕ್ ಅಧ್ಯಯನದ ಸ್ವರೂಪ ನೀಡಲು ಶ್ರಮಿಸಿದ್ದಾರೆ. ಅವರ ಸಂಶೋಧನಾ ಮಹಾಪ್ರಬಂಧವು ಯಕ್ಷಗಾನದ ತಾಳಮದ್ದಳೆ ಪ್ರಕಾರದ ಮೇಲೆ ಕೇಂದ್ರೀಕೃತವಾಗಿದೆ.
  • ಯಕ್ಷಗಾನದ ಬಗೆಗಿನ ಬರಹಗಳು: ಅವರು ಯಕ್ಷಗಾನದ ಬಗ್ಗೆ ಅನೇಕ ಲೇಖನಗಳು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಬರಹಗಳು ಯಕ್ಷಗಾನದ ಪರಂಪರೆ, ವೇಷಗಳು, ಮತ್ತು ತಾಳಮದ್ದಳೆ ಮುಂತಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ.
  • ಯಕ್ಷಗಾನದ ಪ್ರಚಾರ: ಅವರು ಯಕ್ಷಗಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಶ್ರಮಿಸಿದ್ದಾರೆ ಮತ್ತು ಸಮೂಹ ಮಾಧ್ಯಮಗಳ ಮೂಲಕ ಯಕ್ಷಗಾನವನ್ನು ಪ್ರಚಾರ ಮಾಡಿದ್ದಾರೆ.

ಅಂಕಣಕಾರ

[ಬದಲಾಯಿಸಿ]
  • ಸ್ಪಂದನ - ಹೊಸದಿಗಂತ ದೈನಿಕ
  • ಮಿನಿ ಕಾಲಂ: ನೂತನ ಕಲ್ಪನೆಯ ಅಂಕಣ - ಜನವಾಹಿನಿ ಪತ್ರಿಕೆ
  • ಸಂಸ್ಕೃತಿ ಸ್ಪಂದನ - ಕರಾವಳಿ ಅಲೆ ದೈನಿಕ
  • ಸಂಸ್ಕೃತಿ ಸಮ್ಮುಖ - ಉದಯವಾಣಿ ದೈನಿಕ
  • ಜಿಜ್ಞಾಸೆ: ಸಾಂಸ್ಕೃತಿಕ ವಿಚಾರ ಪ್ರಶ್ನೆಗಳಿಗೆ ಉತ್ತರ ಅಂಕಣ - ಉದಯವಾಣಿ ದೈನಿಕ
  • ಯಕ್ಷಪ್ರಶ್ನೆ: ಸಾಂಸ್ಕೃತಿಕ ಪ್ರಶ್ನೆಗಳಿಗೆ ಉತ್ತರ ಬಲ್ಲಿರೇನಯ್ಯ ಪತ್ರಿಕೆ.[]

ಸಂಘಟನೆಗಳು

[ಬದಲಾಯಿಸಿ]
  • ಸ್ಥಾಪಕ ಕಾರ್ಯದರ್ಶಿ, ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ, ಮಂಗಳೂರು.
  • ಮಾಜಿ ಕಾರ್ಯದರ್ಶಿ, ಕನ್ನಡ ಸಂಘ, ಮಂಗಳೂರು.
  • ಜಿಲ್ಲಾ ಪದವಿಪೂರ್ವ ಅಧ್ಯಾಪಕ ಸಂಘದ ಮಾಜಿ ಅಧ್ಯಕ್ಷ.
  • ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ಅಧ್ಯಯನ ಕೇಂದ್ರದ ಸಲಹೆಗಾರ.
  • ಬಲಿಪ ಭಾಗವತ ೭೫- ಬಲಿಪ ಅಮೃತ ಭವನ ಸಮಿತಿ ಯೋಜನೆ- ಸಮಗ್ರ ಸಂಘಟನಾ ಕಾರ್ಯ ೨೦೧೩-೧೫
  • ಸಲಹೆಗಾರ ಮತ್ತು ಹವ್ಯಾಸಿ ಬಳಗದ ಗೌರವಾಧ್ಯಕ್ಷ - ಯಕ್ಷಧ್ರುವ ಪಟ್ಲ ಫೌಂಡೇಶನ್, ಮಂಗಳೂರು.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು

[ಬದಲಾಯಿಸಿ]
  • ಕರ್ನಾಟಕ ಯಕ್ಷಗಾನ - ಜಾನಪದ ಅಕಾಡೆಮಿ ಗ್ರಂಥ ಪುರಸ್ಕಾರ ೧೯೮೪-೧೯೯೪.[]
  • ಆರ್.ಆರ್.ಸಿ. - ಜಾನಪದ ಅಧ್ಯಯನ ಕೇಂದ್ರದ ಸಂಮಾನ- ೧೯೯೫
  • ಜೀವಮಾನ ಸಾಧನೆಗಾಗಿ - ಜಾನಪದ ಅಕಾಡೆಮಿ ತಜ್ಞ ಪ್ರಶಸ್ತಿ - ೨೦೦೩
  • ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆ - ಬೆಸೆಂಟ್ ವಿದ್ಯಾ ಸಂಸ್ಥೆಗಳ ಸಮೂಹದ ವಿಶೇಷ ಪುರಸ್ಕಾರ - ೨೦೦೩
  • ಹವ್ಯಾಸಿ ಬಳಗ ಕದ್ರಿ-ಶತ ಕಾರ್ಯಕ್ರಮ ಉತ್ಸವ, ವಿಶೇಷ ಪ್ರಸಸ್ತಿ - ೨೦೦೮
  • ಶೇಣಿ ಸುಹೃತ್ ಪ್ರಶಸ್ತಿ ಪುರಸ್ಕಾರ, ಶೇಣಿ ಟ್ರಸ್ಟ್, ಸುರತ್ಕಲ್ - ೨೦೦೯
  • ಯಕ್ಷಗಾನ ಕಲಾರಂಗ ಸಪ್ತಾಹ ದಶಮಾನೋತ್ಸವ ವಿಶೇಷ ಪ್ರಶಸ್ತಿ - ೨೦೦೯
  • ಕಲ್ಕೂರ ಪ್ರತಿಸ್ಠಾನ ತುಳುನಾಡ ಸಿರಿ ಪ್ರಶಸ್ತಿ, ಮಂಗಳೂರು - ೨೦೧೭
  • ಯಕ್ಷಗಾನ ಕಲಾರಂಗ ಉಡುಪಿ, ವಿಶೇಷ ಪ್ರಶಸ್ತಿ - ೨೦೦೯
  • ವಿಕಾಸ ಶಿಕ್ಷಕ ಪ್ರಶಸ್ತಿ, ವಿಕಾಸ ಶೈಕ್ಷಣಿಕ ಸಮೂಹ, ಮಂಗಳೂರು.
  • ಮಣಿಪಾಲ ಅಕಾಡೆಮಿ, ಸಾಧಕರ ಪ್ರಶಸ್ತಿ, ನವ ವರ್ಷ ಸನ್ಮಾನ- ೨೦೧೫
  • ಪ್ರೊ.ಎಂ.ಮರಿಯಪ್ಪ ಭಟ್ಟ ವಿದ್ವತ್ ಪ್ರಶಸ್ತಿ, ೨೦೧೬ (ಮಿತ್ತೂರು ಪ್ರತಿಸ್ಠಾನ)
  • ಕಾಂತಾವರ ಕನ್ನಡ ಸಂಘದ ಮಹೋಪಾಧ್ಯಾಯ ಪ್ರಶಸ್ತಿ ೨೦೧೫
  • ಕಾರ್ಕಳ ಬೊಂಬೆತಡ್ಕ ಪೈ ಕುಟುಂಬದ ಯಕ್ಷಗಾನ ಸೇವಾ ದಶಮಾನ ಪ್ರಶಸ್ತಿ - ೨೦೧೫
  • ಅಮೆರಿಕಾದ ಶಿಕಾಗೋ, ಬೊಸ್ಟಲ್, ಹ್ಯೂಸ್ಟನ್, ಕ್ಯಾಲಿಫೋರ್ನಿಯ, ಸಾನ್‌ಹೊಸೆ, ಸೈಂಟ್ ಲೂಯಿ, ಆಲ್ಬನಿ, ಫ್ಲೊರಿಡಾದ ಕನ್ನಡ ಬಳಗಗಳಿಂದ ಸನ್ಮಾನ.
  • ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ 'ಪಾರ್ತಿಸುಬ್ಬ ಪ್ರಶಸ್ತಿ ೨೦೧೬'.
  • ಶೇಣಿ ಗೋಪಾಲಕೃಷ್ಣ ಭಟ್ಟ - ಶತಮಾನ ಸರಣಿ ಪ್ರಶಸ್ತಿ, ಸುರತ್ಕಲ್.
  • ಜೋಶಿ ವಾಗರ್ಥ ಗೌರವ - ದ್ವಿದಿನ ಗೋಷ್ಠಿ ಸಂಮಾನ, ಮೈಸೂರು, ೨೦೧೭
  • ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ೨೦೨೨[೧೦]
  • ಶಿವರಾಮ ಕಾರಂತ ಪ್ರಶಸ್ತಿ, ಕಲ್ಕೂರ ಪ್ರತಿಸ್ಠಾನ, ಮಂಗಳೂರು ೨೦೨೪
  • ಪೊಳಲಿ ಯಕ್ಷೋತ್ಸವ ಪ್ರಶಸ್ತಿ, ೨೦೨೪ - ಹಾಗೂ ಹಲವು ಸಾರ್ವಜನಿಕ ಮತ್ತು ಖಾಸಗಿ ಸನ್ಮಾನಗಳು ಮತ್ತು ಅಭಿನಂದನೆಗಳು.

ಡಾ.ಜೋಶಿಯವರ ಸಾಂಸ್ಕೃತಿಕ ಸಾಧನೆಗಳ ಬಗ್ಗೆ ತಜ್ಞರ ಅಭಿಪ್ರಯ:

[ಬದಲಾಯಿಸಿ]

ಡಾ.ಕೆ. ಚಿನ್ನಪ್ಪ ಗೌಡ

[ಬದಲಾಯಿಸಿ]

ಜಾನಪದ ವಿದ್ವಾಂಸರು, ಕುಲಪತಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ[೧೧]

  • ಡಾ.ಎಂ.ಪ್ರಭಾಕರ ಜೋಶಿಯವರು ಯಕ್ಷಗಾನದ ಕೆಲವೇ ವಿಮರ್ಶಕ ಕಲಾವಿದ ತಜ್ಞರಲ್ಲಿ ಒಬ್ಬರಾಗಿದ್ದು, ಆ ವಿಭಾಗದ ಅಗ್ರಗಣ್ಯರಾಗಿದ್ದಾರೆ.
  • ಚಿಕ್ಕವಯಸ್ಸಿನಲ್ಲೆ ಯಕ್ಷಗಾನವನ್ನು ಪ್ರವೇಶಿಸಿ, ಕಳೆದ ನಾಲ್ಕು ದಶಕಗಳಿಗೂ ಮಿಕ್ಕಿ ಅಗ್ರಪಂಕ್ತಿಯ ಅರ್ಥಧಾರಿಯೆನಿಸಿ, ಇಂದಿನ ಅತ್ಯಂತ ಪ್ರತಿಭಾವಂತ ವ್ಯಕ್ತಿಯಾಗಿದ್ದಾರೆ.
  • ಜೋಶಿಯವರ ಗ್ರಾಮೀಣ ಹಿನ್ನಲೆ, ಕನ್ನಡ, ಸಂಸ್ಕೃತ, ಮರಾಠಿ, ತುಳು, ಕೊಂಕಣಿ, ಹಿಂದಿ, ಇಂಗ್ಲೀಷ್ ಭಾಷೆಗಳ ಜ್ಞಾನ, ಹಿರಿಯರ ಒಡನಾಟ, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ, ಸಮಾಜ ಸೇವೆ - ಹೀಗೆ ವಿಶಿಷ್ಟವಾದ ಅವರ ಸಂಯುಕ್ತ ವ್ಯಕ್ತಿತ್ವ ಪ್ರವೃತ್ತಿಗಳು ಅವರ ಕಲೆಗಾರಿಕೆ, ಅಭಿವ್ಯಕ್ತಿ ಮತ್ತು ಬರಹಗಳನ್ನು ರೂಪಿಸಿವೆ.
  • ಯಕ್ಷಗಾನದ ವಸ್ತು, ಪ್ರಸಂಗ, ಭಾಷೆಗಳಲ್ಲಿ ಅವರಿಗೆ ಬಲವಾದ ಹಿಡಿತವಿದ್ದು, ಸಂವಹನ ಸಾಮರ್ಥ್ಯವಿದೆ. ಭಾವ, ಪ್ರತಿಕ್ರಿಯೆ, ತಿಳಿಹಾಸ್ಯದಿಂದ ಕೂಡಿದ ವಿದ್ವತ್ತು ಮತ್ತು ಸಹಜತೆಗಳನ್ನು ಒಗ್ಗೂಡಿಸಿರುವ ಜೋಶಿಯವರ ಮಾತಿನ ರೀತಿ ಅಸಾಧಾರಣವಾಗಿದೆ. ಶ್ರೀಕೃಷ್ಣ, ಶ್ರೀರಾಮ, ಧರ್ಮರಾಜ, ಶೂರ್ಪನಖಿ, ಮಂಡೋದರಿ, ದ್ರೌಪದಿ, ಕರ್ಣ, ದುರ್ಯೋಧನ, ವಾಲಿ, ಭೀಷ್ಮ, ಸುಧನ್ವ, ಅರ್ಜುನ, ವಿಭೀಷಣ, ಆಂಜನೇಯ, ಉತ್ತರ, ವೀರಮಣಿ, ಭೀಮ, ರಾವಣ, ತಾಮ್ರಧ್ವಜ, ಬಲರಾಮ, ನಾರದ, ಭರತ - ಹೀಗೆ ವಿಭಿನ್ನ ರೀತಿಯ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುವ ಕಲಾವಿದ ಹಾಗೂ ಅಗ್ರಗಣ್ಯರಾಗಿದ್ದಾರೆ. ತತ್ವಶಾಸ್ತ್ರದ ಅವರ ಪಾಂಡಿತ್ಯವು ಅದರ ಅರ್ಥಗಾರಿಕೆಗೆ ಆಳವನ್ನು ನೀಡಿದೆ. ತಾಳಮದ್ದಳೆ ಕ್ಷೇತ್ರಕ್ಕೆ ಹೊಸ ಹುರುಪು, ಆಯಾಮಗಳನ್ನು, ಶಿಸ್ತನ್ನು ತರುವಲ್ಲಿ ಜೋಶಿಯವರ ಕೊಡುಗೆ ಅದ್ವಿತೀಯವಾಗಿದೆ.
  • ವಿಮರ್ಶಕರಾಗಿ ಅವರಿಗೆ ಕಲೆಯ ಪ್ರಾಯೋಗಿಕ ಜ್ಞಾನ, ತಾತ್ವಿಕ ಅರಿವು, ಕಲಾ ವಿಮರ್ಶೆಯ ಭದ್ರಬುನಾದಿಗಳಿರುವುದರಿಂದ ಯಕ್ಷಗಾನ ವಿಮರ್ಶೆಗೆ ಅಕಾಡೆಮಿಕ್ ರೂಪವನ್ನು ನೀಡುವಲ್ಲಿ ಅವರ ಪರಿಶ್ರಮವು ವಿಶಿಷ್ಟ ಸಾಧನೆಯೆನಿಸಿದೆ. ಯಕ್ಷಗಾನ ವಿಮರ್ಶೆಯನ್ನು ಒಂದು ವ್ರತವಾಗಿ ಸ್ವೀಕರಿಸಿ ದಶಕಗಳ ಕಾಲ ಅದನ್ನು ಮಾಡುತ್ತ, ಕಲಾವಿದರಲ್ಲೂ ಸಮಾಜದಲ್ಲೂ ಜಾಗೃತಿ ಉಂಟುಮಾಡಿದ್ದಾರೆ.[೧೨]
  • ಜೋಶಿಯವರ ಯಕ್ಷಗಾನ ವಿಮರ್ಶಾ ಗ್ರಂಥಗಳು ಅವರ ಯಕ್ಷಗಾನ ಪದಕೋಶ ಮತ್ತು ಪಿ.ಎಚ್.ಡಿ. ಮಹಾ ಪ್ರಬಂಧಗಳು ಕನ್ನಡದ ವಿಶಿಷ್ಟ ಸಂಶೋಧನಾ ರಚನೆಗಳಾಗಿವೆ.
  • ಕಲಾವಿದರಿಗೆ, ಮೇಳ ಕಲಾ ಸಂಘಟನೆಗಳಿಗೆ, ಅಧ್ಯಯನ ಸಂಸ್ಥೆಗಳಿಗೆ ನಿಕಟವರ್ಥಿಯಾಗಿರುವ ಜೋಶಿಯವರು ಪ್ರಭಾವಿ ಆತ್ಮೀಯ ಮಾರ್ಗದರ್ಶಕರಾಗಿ ಕಲಾಕ್ಷೇತ್ರದಲ್ಲಿ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ ಹಾಗೂ ಕಲಾವಿದರಿಗೆ ನೆರವು, ಮಾರ್ಗದರ್ಶನದ ಸಹಾಯ ಮಾಡಿದ್ದಾರೆ.
  • ಕಲಾವಿದನಿಗಾಗಿ ಅಲ್ಲದೆ - ಕಾರ್ಯಕರ್ತ, ಸಂಘಟಕ, ನೇತಾರರಾಗಿ ಅವರು ಪ್ರಸಿದ್ಧರಾಗಿದ್ದಾರೆ.
  • ಜೋಶಿಯವರ ಉಪನ್ಯಾಸಗಳು, ಪ್ರಬಂಧ ಮಂಡನೆಗಳು, ಆಶಯ ಭಾಷಣಗಳು ಉನ್ನತ ಮೌಲ್ಯದ ಚಿಂತನೆಗಳಾಗಿವೆ.
  • ಜೋಶಿಯವರ ಪ್ರವಚನಗಳು ವಿಶಿಷ್ಟ ತಾತ್ವಿಕ ಚಿಂತನೆಗಳಿಂದ ಜನಪ್ರಿಯವಾಗಿದೆ.
  • ಅಧ್ಯಾಪಕ, ಆಡಳಿತಗಾರರಾಗಿ ಜೋಶಿಯವರ ಪ್ರತಿಭೆ, ಸಾಮರ್ಥ್ಯಗಳು ಶ್ಲಾಘನೆಗೆ ಒಳಗಾಗಿದೆ.
  • ಸಾಂಸ್ಖೃತಿಕ ಸಂಘಟನೆ, ಮಾಧ್ಯಮ, ಸಂವಹನ ವಿಚಾರಗಳಲ್ಲಿ ಮಾರ್ಗದರ್ಶಕರಾಗಿ ವಿಶಿಷ್ಟ ಸಾಧನೆಗೈದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Ulithaya, Krishna Prakasha (ಮೇ 30, 2019). "Prabhakar Joshi, a scholar of Yakshagana-Talamaddale". The Hindu – via www.thehindu.com.
  2. https://kanaja.karnataka.gov.in/ಡಾ-ಪ್ರಭಾಕರ-ಜೋಷಿ/
  3. "'Experiments should not affect Yakshagana art form'". Deccan Herald.
  4. "Mangalore Today | Latest main news of mangalore, udupi - Page Yakshagana-should-head-from-noise-culture-towards-voice-culture-M-Prabhakara-Joshi". www.mangaloretoday.com.
  5. "Muddana Prakashana – Nandalike".
  6. "Dr. Prabhakar Joshi Master | Yakshagana". yakshagana.com.
  7. "ಎಂ. ಪ್ರಭಾಕರ ಜೋಷಿ". www.bookbrahma.com.
  8. "Speaking for a form | Yakshagana". yakshagana.com.
  9. "Need Unesco recognition for Yakshagana: Prabhakar Joshi". Deccan Herald.
  10. "ರಾಜ್ಯೋತ್ಸವ 2022 – ಕಣಜ".
  11. https://librarywala.com/authors/7272954386-dr-m-prabhakar-joshi
  12. "ಯಕ್ಷರಂಗದ ಸಂಶೋಧಕ ಡಾ| ಎಂ. ಪ್ರಭಾಕರ ಜೋಶಿ (A Great Scholar of Yakshagana Dr M. Prabhakara Joshi) | Yakshagana". yakshagana.com.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: