ಎಂ. ಎನ್ ಪ್ರತಾಪ್

ವಿಕಿಪೀಡಿಯ ಇಂದ
Jump to navigation Jump to search

ಪ್ರತಾಪ್ ಅವರು ತ್ಯಾಜ್ಯ ವಸ್ತುಗಳಿಂದ ಡ್ರೋನ್ ತಯಾರಿಸಿದ ಯುವ ವಿಜ್ಞಾನಿ. ಅವರು ಡ್ರೋನ್ ಪ್ರತಾಪ್[೧] ಎಂದು ಕರೆಯುತ್ತಾರೆ. ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೂಕು ನೆಟ್ಕಲ್ ಗ್ರಾಮದ 'ಡ್ರೋನ್ ಪ್ರತಾಪ್‌' ಈಗ ವಿಶ್ವ ವಿಜ್ಞಾನಿಗಳಿಂದ ಪ್ರಶಂಸೆಯನ್ನು ಪಡೆದಿದ್ದಾನೆ. ತನ್ನ 22 ವರ್ಷ ವಯಸ್ಸಿನಲ್ಲಿ ಜಪಾನ್‌, ಜರ್ಮನಿ ಹಾಗೂ ಫ್ರಾನ್ಸ್ ದೇಶಗಳ ವಿಜ್ಞಾನಿಗಳ ಮನಗೆದ್ದಿರುವ ಯುವ ವಿಜ್ಞಾನಿ. [೨]

ಬಾಲ್ಯ ಜೀವನ ಮತ್ತು ವಿದ್ಯಾಭ್ಯಾಸ

ಪ್ರತಾಪ್ ಅವರು ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲ್ಲೂಕು ನೆಟ್ಕಲ್ ಗ್ರಾಮದ ರೈತರೋರ್ವರ ಪುತ್ರರಾದ ಎನ್‌.ಎಂ. ಪ್ರತಾಪ್‌ ಅವರು ಮರಿಮಾದಯ್ಯ- ಸವಿತಾ ಎಂಬ ದಂಪತಿಯ ಪುತ್ರ. ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಪಡೆದು, ನಂತರ ಪಿಯುಸಿಯನ್ನು ಭಾರತೀನಗರದ ಜಿ.ಮಾದೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ಬಿಎಸ್‌ಸಿ (ಸಿಬಿಜಡ್) ಪೂರ್ಣಗೊಳಿಸಿದರು.[೩][೪]

ಡ್ರೋನ್ ಅನ್ವೇಷಣೆ

೨೦೧೭, ನವೆಂಬರ್‌ ೨೭ರಿಂದ ಡಿಸೆಂಬರ್‌ ೨ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್‌ ಪ್ರದರ್ಶನದಲ್ಲಿ ಪ್ರತಾಪ್‌ ಅವರು ಭಾಗವಹಿಸಿದ್ದರು.[೫] ೧೦೦ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಈ ಪ್ರದರ್ಶನದಲ್ಲಿ ಪ್ರತಾಪ್ ಅವರು ಚಿನ್ನದ ಪದಕವನ್ನು ಪಡೆದರು. ಅಪಘಾತದ ಸಂದರ್ಭದಲ್ಲಿ ಔಷಧಿ ಪೂರೈಸುವ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಹಲವಾರು ಉದ್ದೇಶಗಳಿಂದ ‘ಈಗಲ್‌' ಹೆಸರಿನ ಡ್ರೋನನ್ನು ಕಂಡುಹಿಡಿದರು.[೬] ಪ್ರತಾಪ್ ರವರು ಸಂದರ್ಶನದಲ್ಲಿ ಹೀಗೆ ಹೇಳಿದ್ದಾರೆ"ಈಗಾಗಲೇ ಡ್ರೋನ್ ನೆಟ್ವರ್ಕ್ ಮಾನವ ರಕ್ಷಣಾ ಕಾರ್ಯಾಚರಣೆಗಳಿಂದ ಹೊರತುಪಡಿಸಿ ಗಡಿ ಭದ್ರತೆ ಮತ್ತು ಸಂಚಾರ ನಿರ್ವಹಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಡ್ರೋನ್ಸ್ ಬಳಕೆ ದೇಶದ ರಕ್ಷಣೆಗಾಗಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಲಿಕಾಪ್ಟರ್ನ ಹಾರುವಿಕೆಯಿಂದ ನಾನು ಪ್ರಭಾವಿತನಾಗಿರುತ್ತಿದ್ದೇನೆ ಮತ್ತು ಡ್ರೋನ್ಸ್ನಲ್ಲಿ ಕೆಲಸ ಮಾಡಲು ನನಗೆ ಆಸಕ್ತಿ ಉಂಟುಮಾಡಿದೆ. ನಾನು ಕೃಷಿ ಕುಟುಂಬದಿಂದ ಬಂದಿದ್ದೇನೆ. ಜೆಎಸ್ಎಸ್ ಕಾಲೇಜಿನ ನನ್ನ ಹೆತ್ತವರು ಮತ್ತು ಸಿಬ್ಬಂದಿ ನನಗೆ ಬಹಳಷ್ಟು ಬೆಂಬಲ ನೀಡಿದ್ದಾರೆ. ರಾಷ್ಟ್ರದ ಸೇವೆಯಲ್ಲಿ ನನ್ನ ಶಕ್ತಿಯನ್ನು ವಿನಿಯೋಗಿಸಲು ನಾನು ಬಯಸುತ್ತೇನೆ".[೭]

ಈಗಲ್ ಡ್ರೋನ್

ಪ್ರತಾಪ್ ತಯಾರಿಸಿರುವ ‘ಈಗಲ್‌' ಹೆಸರಿನ ಡ್ರೋನ್ ಮೂಲಕ, ಕೃಷಿ ಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮನ್ಸೂಚನೆ ನೀಡುತ್ತದೆ. ಮೀನುಗಾರರು ಸಮುದ್ರದ ನಡುವೆ ಅಪಾಯಕ್ಕೆ ಸಿಲುಕಿದರೆ ಜಿಪಿಆರ್‌ಎಸ್‌ ತಂತ್ರಜ್ಞಾನದ ಮೂಲಕ ಅವರನ್ನು ತಕ್ಷಣ ಗುರುತಿಸಿ ರಕ್ಷಣೆ ಮಾಡಬಹುದಾಗಿದೆ. ರಸ್ತೆ ಅಪಘಾತ, ರೈಲು ಅಪಘಾತಗಳು ಸಂಭವಿಸಿದಾಗ ಘಟನಾ ಸ್ಥಳಕ್ಕೆ ಔಷಧಿ ಪೂರೈಸುವ, ರಕ್ಷಣಾ ಉಪಕರಣ, ಆಹಾರ ಪೂರೈಸಲು ಇದನ್ನು ಬಳಸಬಹುದಾಗಿದ್ದು, ದೇಶದ ಭದ್ರತೆ ದೃಷ್ಟಿಯಿಂದಲೂ ನೆರವಾಗುತ್ತದೆ.[೮][೯]

ಪ್ರಶಸ್ತಿಗಳು

  • ೨೦೧೭ರಲ್ಲಿ ಜಪಾನ್‌ನಲ್ಲಿ ಚಿನ್ನದ ಪದಕ
  • ೨೦೧೮ರ ಜೂನ್‌ನಲ್ಲಿ ಜರ್ಮನಿಯಲ್ಲಿ ನಡೆದ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರತಾಪ್‌ ಆಲ್ಬರ್ಟ್‌ ಐನ್‌ಸ್ಟಿನ್ ಇನೊವೇಷನ್‌ ಮೆಡಲ್‌
  • ೨೦೧೮ರ ಜುಲೈನಲ್ಲಿ ಜರ್ಮನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಶೋಧನಾ ಪದಕ (ಸಿಇಬಿಐಟಿ-ಅವಾರ್ಡ್)[೧೦]

ಉಲ್ಲೇಖಗಳು