ಉಸ್ತಿಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Solanum virginianum
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. virginianum
Binomial name
Solanum virginianum
L., 1753
Synonyms[೧]
  • Solanum mairei H. Lév.
  • Solanum xanthocarpum Schrad. & H. Wendl.

ಉಸ್ತಿಕಾಯಿ ಸೊಲನೇಸಿ ವಂಶದ ಪೊದೆಸಸ್ಯ[೨]. ಸುಂಡೆಕಾಯಿ ಪರ್ಯಾಯ ನಾಮ. ಕಾಯಿ ಕಹಿ. ಕೆಲವರು ಇದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಸಸ್ಯಕ್ಕೆ ಔಷಧ ಗುಣವಿದೆ. ಆಸ್ತಮಾ, ಕ್ಷಯಗಳಿಗೆ ಆಯುರ್ವೇದೀಯ ಔಷಧಿಗಳನ್ನು ಇದರಿಂದ ತಯಾರು ಮಾಡುತ್ತಾರೆ. ಇದೊಂದು ಬಹುವಾರ್ಷಿಕ ಸಸ್ಯ. ಸುಮಾರು 5'-6' ಎತ್ತರ ಬೆಳೆಯುವುದು. ಎಳೆಯ ಕಾಂಡ ಮತ್ತು ಎಲೆಗಳ ಮೇಲೆ ನಯವಾದ ಬಿಳಿಬಣ್ಣದ ದೂಳಿರುತ್ತದೆ. ಗಿಡ ಬಲಿತಾಗ ದೂಳು ಮಾಯವಾಗುವುದು. ಕಾಂಡ ಮತ್ತು ಎಲೆಗಳ ಮೇಲೆ ಹಿಂದಕ್ಕೆ ಬಾಗಿದ ಮುಳ್ಳುಗಳಿವೆ. ಎಲೆ ರೋಮಪೂರಿತ. ಆಕಾರ ಆಯತ. ತೊಟ್ಟಿದೆ. ತುದಿಯಲ್ಲಿರುವ ಅಂತ್ಯಾರಂಭಿ ಹೂಗೊಂಚಲಿಯಲ್ಲಿ ಅನೇಕ ಹೂಗಳಿರುವುವು. ಇದನ್ನು ಬೀಜಗಳಿಂದ ವೃದ್ಧಿ ಮಾಡಬಹುದು.

ಉಲ್ಲೇಖನಗಳು[ಬದಲಾಯಿಸಿ]

  1. "The Plant List: A Working List of All Plant Species". Archived from the original on 18 ಫೆಬ್ರವರಿ 2020. Retrieved 10 January 2015.
  2. http://www.motherherbs.com/solanum-xanthocarpum.html