ವಿಷಯಕ್ಕೆ ಹೋಗು

ಉರಿಯೂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಫ್ಯಾಕ್ಲರ್‌ಗೆ ಅಲರ್ಜಿಕ ಪ್ರತಿಕ್ರಿಯೆಯು ಪಾದದ ಮೇಲಿನ ಚರ್ಮದ ಉರಿಯೂತಕ್ಕೆ ಕಾರಣವಾಗಿದೆ.

ಉರಿಯೂತವು ದೇಹದ ಅಂಗಾಂಶಗಳ ಜೈವಿಕ ರಕ್ಷಣಾ ಪ್ರತಿಕ್ರಿಯೆಯ ಭಾಗವಾಗಿದೆ. ದೈಹಿಕ ಆಘಾತ, "ಸತ್ತ, ಹಾನಿಗೊಳಗಾದ, ಅಸಮರ್ಪಕವಾಗಿ ಕಾರ್ಯನಿರ್ವಹಿಸುವ ಅಥವಾ ಒತ್ತಡಕ್ಕೊಳಗಾದ ಅಂಗಾಂಶಗಳು", ರೋಗಕಾರಕಗಳು, ಉದ್ರೇಕಕಾರಿಗಳು, ವಿಷಗಳು, ಅತಿಯಾದ ಬಳಕೆ, ಸ್ವಯಂ ನಿರೋಧಕ ಶಕ್ತಿ, ಅಲರ್ಜಿನ್‌ಗಳು ಮತ್ತು ವಿದೇಶಿ ಕಾಯಗಳು (ಉದಾ. ಸಿಲಿಕಾ ಮತ್ತು ಕಲ್ನಾರು) ಸೇರಿದಂತೆ ವ್ಯಾಪಕ ಶ್ರೇಣಿಯ ಪ್ರಚೋದಕಗಳು ಉರಿಯೂತದ ಪ್ರತಿರಕ್ಷಾನಾಳೀಯ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು.[] ಉರಿಯೂತದ ಐದು ಪ್ರಮುಖ ಚಿಹ್ನೆಗಳೆಂದರೆ ಶಾಖ, ನೋವು, ಕೆಂಪುತನ, ಊತ ಮತ್ತು ಕಾರ್ಯದ ನಷ್ಟ (ಲ್ಯಾಟಿನ್‍ನಲ್ಲಿ ಕ್ಯಾಲೋರ್, ಡಾಲರ್, ರೂಬರ್, ಟ್ಯೂಮರ್ ಮತ್ತು ಫಂಕ್ಟಿಯೊ ಲೇಸಾ).

ಉರಿಯೂತವು ಸಾಮಾನ್ಯ ಪ್ರತಿಕ್ರಿಯೆಯಾಗಿದೆ. ಆದ್ದರಿಂದ ಇದನ್ನು ಹೊಂದಾಣಿಕೆಯ ಪ್ರತಿರಕ್ಷೆ ಎಂದು ಪರಿಗಣಿಸದೆ ಸಹಜ ಪ್ರತಿರಕ್ಷೆಯ ಕಾರ್ಯವಿಧಾನವೆಂದು ಪರಿಗಣಿಸಲಾಗುತ್ತದೆ.[] ಇದು ಪ್ರತಿರಕ್ಷಣಾ ಕೋಶಗಳು, ರಕ್ತನಾಳಗಳು ಮತ್ತು ಆಣ್ವಿಕ ಮಧ್ಯವರ್ತಿಗಳನ್ನು ಒಳಗೊಂಡಿರುತ್ತದೆ. ಉರಿಯೂತದ ಕಾರ್ಯವೆಂದರೆ ಜೀವಕೋಶದ ಗಾಯದ ಆರಂಭಿಕ ಕಾರಣವನ್ನು ತೆಗೆದುಹಾಕುವುದು, ಹಾನಿಗೊಳಗಾದ ಜೀವಕೋಶಗಳು ಮತ್ತು ಅಂಗಾಂಶಗಳನ್ನು ತೆರವುಗೊಳಿಸುವುದು ಮತ್ತು ಅಂಗಾಂಶ ದುರಸ್ತಿಯನ್ನು ಪ್ರಾರಂಭಿಸುವುದು. ತುಂಬಾ ಕಡಿಮೆ ಉರಿಯೂತವು ಹಾನಿಕಾರಕ ಪ್ರಚೋದನೆಯಿಂದ (ಉದಾ. ಬ್ಯಾಕ್ಟೀರಿಯಾ) ಒಂದೇ ಸಮನೆ ಹೆಚ್ಚುತ್ತಿರುವ ಅಂಗಾಂಶ ನಾಶಕ್ಕೆ ಕಾರಣವಾಗಬಹುದು ಮತ್ತು ಜೀವಿಯ ಉಳಿವಿಗೆ ಅಪಾಯವನ್ನುಂಟುಮಾಡಬಹುದು. ಆದಾಗ್ಯೂ, ಉರಿಯೂತವು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.[] ಉದಾಹರಣೆಗೆ, ದೀರ್ಘಕಾಲದ ಉರಿಯೂತದ ರೂಪದಲ್ಲಿ ಅತಿ ಉರಿಯೂತವು ಕರಡ ಜ್ವರ, ಹಲ್ಲಿನ ಸುತ್ತಲು ಆಗುವ ಕಾಯಿಲೆ, ಅಪಧಮನಿ ಕಾಠಿಣ್ಯ ಮತ್ತು ಅಸ್ಥಿಸಂಧಿವಾತದಂತಹ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Hannoodee, Sally; Nasuruddin, Dian N. (2024-06-08), "Acute Inflammatory Response", StatPearls [Internet] (in ಇಂಗ್ಲಿಷ್), StatPearls Publishing, PMID 32310543, retrieved 2025-10-30
  2. Abbas AB, Lichtman AH (2009). "Ch.2 Innate Immunity". Basic Immunology. Functions and disorders of the immune system (3rd ed.). Saunders/Elsevier. ISBN 978-1-4160-4688-2.
  3. "Inflammation and Your Health". Cedars-Sinai.
"https://kn.wikipedia.org/w/index.php?title=ಉರಿಯೂತ&oldid=1338521" ಇಂದ ಪಡೆಯಲ್ಪಟ್ಟಿದೆ