ವಿಷಯಕ್ಕೆ ಹೋಗು

ಉಪೋಸಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಗುರು ಅನ್ನುವ ಶಬ್ದ ಗು ಮತ್ತು ರು ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ಗು ಅಂದರೆ ಅಂಧಕಾರ ಅಥವಾ ಅಜ್ಞಾನ. ರು ಅಂದರೆ ಕಳೆಯುವ ಅಥವಾ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ. ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಈ ದಿನ ಶೈಕ್ಷಣಿಕ ವೃಂದದವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಮತ್ತು ತಮ್ಮ ಭಾವಿ ಶಿಕ್ಷಕರನ್ನು ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ. ಬೌದ್ಧರು ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಗೌತಮ ಬುದ್ಧನ ಪ್ರಥಮ ಧರ್ಮೋಪದೇಶದ ಅಂಗವಾಗಿ ಆಚರಿಸುತ್ತಾರೆ. ಈ ದಿನ ಗೌತಮ ಬುದ್ಧನು ಉತ್ತರ ಪ್ರದೇಶದ ಸಾರನಾಥದಲ್ಲಿ ತನ್ನ ಪ್ರಥಮ ಧರ್ಮೋಪದೇಶ ನೀಡಿದ. ಯೋಗ ಸಂಪ್ರದಾಯದಲ್ಲಿ ಈ ದಿನವನ್ನು ಶಿವನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಧಾರೆಯೆರೆದು ಪ್ರಥಮ ಗುರು ಆದ ದಿನ ಎಂಬ ನಂಬಿಕೆಯಿಂದ ಆಚರಿಸುತ್ತಾರೆ. ಹಲವಾರು ಹಿಂದೂಗಳು, ಹಿಂದೂ ಪರಂಪರೆಯ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವೇದವ್ಯಾಸ ಮಹರ್ಷಿಗಳ ಜನ್ಮದಿನದ ಅಂಗವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ವೇದವ್ಯಾಸ ಮಹರ್ಷಿಗಳು ಈ ದಿನ ಹುಟ್ಟಿದ್ದಲ್ಲದೇ ಆಷಾಢ ಶುಕ್ಲ ಪಕ್ಷದ ಪ್ರಾರಂಭದಿಂದ ಬ್ರಹ್ಮಸೂತ್ರಗಳ ರಚನೆ ಪ್ರಾರಂಭಿಸಿದರು. ಈ ದಿನ ಆ ಶುಕ್ಲ ಪಕ್ಷ ಕೊನೆಗೊಳ್ಳುತ್ತದೆ. ಇದರ ಸ್ಮರಣಾರ್ಥಕವಾಗಿ ಈ ದಿನದಂದು ಬ್ರಹ್ಮಸೂತ್ರಗಳ ಪಠಣ ಮಾಡಲಾಗುತ್ತದೆ ಹಾಗೂ ಈ ದಿನವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ.[೧][೨][೩] ಹಿಂದೂ ಧರ್ಮದ ಎಲ್ಲ ಅಧ್ಯಾತ್ಮಿಕ ಪರಂಪರೆಗಳಲ್ಲಿಯೂ ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸುತ್ತ ಈ ಹಬ್ಬವನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಆಚರಿಸಲಾಗುತ್ತದೆ. ಮಳೆಗಾಲದ ನಾಲ್ಕು ತಿಂಗಳುಗಳಾದ ಚಾತುರ್ಮಾಸದಲ್ಲಿ ಬರುವ ಈ ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.[೪] ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅದರ ವಿದ್ಯಾರ್ಥಿಗಳು ಈ ಹಬ್ಬವನ್ನು ಆಚರಿಸುತ್ತಾರೆ. ಇದೇ ದಿನ ಮಹಾಭಾರತದ ಕರ್ತೃರಾದ ವೇದವ್ಯಾಸರು, ಪರಾಶರ ಋಷಿಗಳು ಹಾಗೂ ಒಬ್ಬ ಮೀನುಗಾರನ ಮಗಳಾದ ಸತ್ಯವತಿಗೆ ಜನ್ಮಿಸಿದರು.[೨]ವೇದವ್ಯಾಸರು ತಮ್ಮ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಎಲ್ಲ ವೈದಿಕ ಋಕ್ಕುಗಳನ್ನು ಸಂಗ್ರಹಿಸಿ, ಯಜ್ಞ ಯಾಗಾದಿ ಧಾರ್ಮಿಕ ವಿಧಿಗಳಲ್ಲಿ ಅವುಗಳ ಬಳಕೆಯೆ ಆಧಾರದ ಮೇಲೆ ರಿಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂಬ ನಾಲ್ಕು ಭಾಗಗಳನ್ನಾಗಿ ವಿಭಾಗಿಸಿ, ಅವುಗಳನ್ನು ತಮ್ಮ ನಾಲ್ಕು ಮುಖ್ಯ ಶಿಷ್ಯರಾದ ಸುಮಂತು, ವೈಷಂಪಾಯನ, ಜೈಮಿನಿ ಹಾಗೂ ಪೈಲರಿಗೆ ಬೋಧಿಸುವ ಮೂಲಕ ವೈದಿಕ ಅಧ್ಯಯನಗಳ ಉದ್ದೇಶಕ್ಕಾಗಿ ಮಹತ್ತರವಾದ ಸೇವೆಮಾಡಿದರು. ಈ ವಿಭಜನೆ ಮತ್ತು ಸಂಪಾದನೆಯನ್ನು ಮಾಡಿದ್ದಕ್ಕಾಗಿ ಅವರಿಗೆ ವ್ಯಾಸ (ವ್ಯಾಸ = ಸಂಪಾದಿಸು, ವಿಭಾಗಿಸು) ಎಂಬ ಗೌರವ ನಾಮ ದೊರೆಯಿತು.

ಬುದ್ಧನು ತನಗೆ ಜ್ಞಾನೋದಯವಾಗಿ ೫ ವಾರಗಳ ನಂತರ ಬೋಧಗಯಾ ಇಂದ ಸಾರನಾಥಕ್ಕೆ ಹೋದನು. ಜ್ಞಾನೋದಯಕ್ಕಿಂತ ಮುಂಚೆ (ಬುದ್ಧನಾಗಬೇಕಿದ್ದ) ಗೌತಮನು ತಾನು ಮಾಡುತ್ತಿದ್ದ ತೀವ್ರ ತಪಸ್ಸನ್ನು ಒಂದು ದಿನ ಬಿಟ್ಟು ಬಿಟ್ಟ. ಆಗ ಅವನ ಗೆಳೆಯರಾದ ಪಂಚವಗ್ಗೀಯ ಸನ್ಯಾಸಿಗಳು ಗೌತಮನನ್ನು ಬಿಟ್ಟು ಇಸಿಪತನ (ಸಾರನಾಥ್)ಗೆ ಹೋದರು. ಬುದ್ದನಿಗೆ ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಆ ತನ್ನ ಐದು ಸಂಗಾತಿಳು ಧರ್ಮ ಬೋಧನೆಗೆ ಯೋಗ್ಯರಾದವರು ಎಂದು ತಿಳಿದಿದ್ದರಿಂದ ತನಗೆ ಜ್ಞಾನೋದಯವಾದ ನಂತರ ಅವರನ್ನು ಹುಡುಕಿಕೊಂಡು ಉರುವೇಲಾಯಿಂದ ಇಸಿಪತನಕ್ಕೆ ಹೊರಟನು. ಸಾರನಾಥಕ್ಕೆ ಹೋಗುವಾಗ ಗಂಗಾ ನದಿಯನ್ನು ದಾಟಬೇಕಾಯಿತು. ನಾವಿಕರಿಗೆ ಕೊಡಲು ದುಡ್ಡು ಇಲ್ಲದ ಕಾರಣ ಗೌತಮ ಬುದ್ಧನು ಗಂಗಾ ನದಿಯನ್ನು ಗಾಳಿಯಲ್ಲಿಯೇ ದಾಟಿದನು. ಇದನ್ನು ಕೇಳಿದ ಅಲ್ಲಿನ ರಾಜಾ ಬಿಂಬಸಾರನು ನದಿ ದಾಟುವ ಸನ್ಯಾಸಿಗಳಿಗೆ ಯಾವುದೇ ರೀತಿಯ ಹಣ ಕೇಳಬಾರದೆಂದು ಆದೇಶ ಹೊರಡಿಸಿದನು. ಗಂಗಾ ನದಿ ದಾಟಿ ಅವನ ಹಳೆಯ ಸಂಗಾತಿಗಳು ಮತ್ತೆ ಸಿಕ್ಕಾಗ ಗೌತಮ ಬುದ್ಧನು ಅವರಿಗೆ ಧರ್ಮ ಬೋಧನೆ ಮಾಡಿದನು. ಅದನ್ನು ಸ್ವೀಕರಿಸಿ ಅರ್ಥ ಮಾಡಿಕೊಂಡ ಆ ಸಂಗಾತಿಗಳಿಗೂ ಜ್ಞಾನೋದಯವಾಯಿತು. ಅವರಿಂದ ಸಂಘ ಎಂಬ ಜ್ಞಾನೋದಯವಾದವರ ಪಂಗಡ ಶುರುವಾಯಿತು. ಅಂದು ಬುದ್ಧ ನೀಡಿದ ಬೋಧನೆ ಅವನ ಮೊದಲನೇಯ ಬೋಧನೆಯಾಗಿದ್ದು ಅದನ್ನು ಧಮ್ಮಚಕ್ಕಪ್ಪವತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ) ಎಂದು ಕರೆಯಲಾಗುತ್ತದೆ. ಇದು ನಡೆದಿದ್ದು ಆಷಾಢ ಪೂರ್ಣಿಮೆಯ ದಿನ. ಮುಂದೆ ಬುದ್ಧನು ತನ್ನ ಮೊದಲನೇಯ ಮಳೆಗಾಲ, ಅಂದರೆ ವರ್ಷ(ವಸ್ಸ), ಇಲ್ಲೇ ಸಾರನಾಥದಲ್ಲಿನ ಮುಲಗಂಧಕುಟಿಯಲ್ಲಿ ಕಳೆದನು. ಆ ಸಮಯಕ್ಕೆ ಯಾಸ ಮತ್ತು ಅವನ ಸ್ನೇಹಿತರು ಸೇರಿದ್ದರಿಂದ ಸಂಘದಲ್ಲಿ ೬೦ ಸನ್ಯಾಸಿಗಳಿದ್ದರು. ಬುದ್ಧ ಅವರೆಲ್ಲರನ್ನು ಒಬ್ಬೊಬ್ಬರಾಗಿ ಎಲ್ಲ ದಿಕ್ಕುಗಳಲ್ಲಿ ಧರ್ಮದ ಬೋಧನೆ ಮತ್ತು ಪ್ರಚಾರ ಮಾಡಲು ಕಳಿಸಿದನು. ಆ ೬೦ ಜನರನ್ನು ಅರಹಂತರು ಎಂದು ಕರೆಯುತ್ತಾರೆ.

ಈ ದಿನ ಬೌದ್ಧರು ೮ ತತ್ವಗಳನ್ನು ಪಾಲಿಸುವ ಉಪೋಸಥ ಎಂಬ ಪದ್ಧತಿಯನ್ನು ಆತರಿಸುತ್ತಾರೆ. ವಿಪಸ್ಯನಾ ಧ್ಯಾನಿಗಳು ಈ ದಿನ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಧ್ಯಾನ ಮಾಡುತ್ತಾರೆ. ಮಳೆಗಾಲ, ಅಂದರೆ ವರ್ಷ (ವಸ್ಸ) ಇಂದಿನಿಂದಲೇ ಪ್ರಾರಂಭವಾಗುತ್ತದೆ. ಜುಲೈ ಇಂದ ಅಕ್ಟೋಬರ್ ವರೆಗೆ ಚಾಂದ್ರಮಾನ ಪಂಚಾಂಗದ ಮೂರು ತಿಂಗಳುಗಳ ಕಾಲ ಇರುವ ಈ ಮಳೆಗಾಲದಲ್ಲಿ ಬೌದ್ಧ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ಇರುತ್ತಾರೆ, ಅದೂ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಇರುತ್ತಾರೆ. ಕೆಲವೊಂದು ಆಶ್ರಮಗಳಲ್ಲಿ ಸನ್ಯಾಸಿಗಳು ಈ ವಸ್ಸ ಕಾಲದಲ್ಲಿ ತೀವ್ರ ತಪಸ್ಸಿಗೆ ಒಳಗಾಗುತ್ತಾರೆ. ವಸ್ಸ ಕಾಲದಲ್ಲಿ ಹಲವಾರು ಸಾಮಾನ್ಯ ಬೌದ್ಧರು ತಮ್ಮ ಆಧ್ಯಾತ್ಮಿಕ ಅಭ್ಯಾಸ ತೀವ್ರಗೊಳಿಸಿ ಮಾಂಸ, ಮಧ್ಯ ಅಥವಾ ಧೂಮಪಾನವನ್ನು ತ್ಯಾಗ ಮಾಡುವಂತಹ ವಿರಕ್ತ ಪದ್ಧತಿಗಳನ್ನು ಪಾಲಿಸುತ್ತಾರೆ. ಸಾಂಪ್ರದಾಯಿಕವಾಗಿ ಚಾತುರ್ಮಾಸದ ಪದ್ಧತಿಗಳಲ್ಲಿ ಒಂದಾದ ಗುರು ಪೂರ್ಣಿಮೆಯ ಆಂಗವಾಗಿ ವ್ಯಾಸ ಪೂಜೆ ಮಾಡುತ್ತಿರುವ ಸನ್ಯಾಸಿ. ಹಿಂದೂ ಆಧ್ಯಾತ್ಮಿಕ ಗುರುಗಳ ಜೀವನ ಚರಿತ್ರೆ ಹಾಗೂ ಅವರ ಬೋಧನೆಗಳನ್ನು ನೆನೆಸಿಕೊಂಡು ಅವರಿಗೆ ಗೌರವ ಸಲ್ಲಿಸಲಾಗುತ್ತದೆ. ಹಲವಾರು ದೇವಸ್ಥಾನಗಳಲ್ಲಿ ವ್ಯಾಸ ಪೂಜೆ ಎರ್ಪಿಡಿಸಿ, ಹೂವಿನ ಅಲಂಕಾರ ಹಾಗೂ ಹಲವು ಸಾಂಕೇತಿಕ ಕಾಣಿಕೆಗಳು ಅರ್ಪಣೆಯಿಂದ ವೇದವ್ಯಾಸರಿಗೆ ಹಾಗೂ ಬ್ರಹ್ಮಾಂಡದ ಸದ್ಗುರುವಿಗೆ ಗೌರವ ಸಲ್ಲಿಸಲಾಗುತ್ತದೆ. ಪೂಜೆ ಪುನಸ್ಕಾರಗಳ ನಂತರ, ಗುರುಗಳ ಕೃಪೆಯ ರೂಪಿಯಾದ ಗುರುಗಳ ಪಾದಪೂಜೆಯಿಂದ ದೊರೆತ ಚರಣಾಮೃತವನ್ನು ಪ್ರಸಾದದ ಜೊತೆ ಶಿಶ್ಯರಿಗೆ ಹಂಚಲಾಗುತ್ತದೆ.[೫] ಯಾವ ಗುರುವಿನ ಮೂಲಕ ಭಗವಂತನು ಎಲ್ಲ ಶಿಶ್ಯರಿಗೆ ಜ್ಞಾನವನ್ನು ಧಾರೆಯೆರೆಯುತ್ತಾನೋ, ಅಂತಹ ಗುರುವಿನ ಸ್ಮರಣಾರ್ಥಕವಾಗಿ ಈ ದಿನ ವಿಶೇಷ ಮಂತ್ರಗಳಾದಂತಹ ವೇದವ್ಯಾಸರಿಂದಲೇ ರಚಿತವಾದ ೨೧೬ ಶ್ಲೋಕಗಳುಳ್ಳ ಗುರು ಗೀತಾ ಮಂತ್ರದ ಪಠಣ ಇಡೀ ದಿನ ಮಾಡಲಾಗುತ್ತದೆ. ಇದರ ಜೊತೆ ಅನೇಕ ಆಶ್ರಮ, ಮಠ ಅಥವಾ ಗುರು ಪೀಠ ಇರುವಂತಹ ಸ್ಥಳಗಳಲ್ಲಿ ಹಲವಾರು ಭಕ್ತಾದಿಗಳು ಸೇರಿ ವಿಶೇಷ ಭಜನೆ, ಕೀರ್ತನೆ ಮತ್ತು ಹೋಮಗಳನ್ನು ಆಯೋಜಿಸುತ್ತಾರೆ.[೬] ಈ ದಿನ ಗುರುಗಳ ಪಾದಪೂಜೆ ಮಾಡುವ ಮೂಲಕ ಶಿಶ್ಯರು ಮತ್ತೊಮ್ಮೆ ತಮ್ಮನ್ನು ತಾವೇ ಗುರುವಿಗೆ ಸಮರ್ಪಿಸಿಕೊಳ್ಳುತ್ತಾರೆ.[೭] ಎಂದಿನಂತೆ ಬರುವ ವರ್ಷವೂ ಗುರುವಿನ ಮಾರ್ಗದರ್ಶನ ಹಾಗೂ ಬೋಧನೆಗಳಿಗೆ ಬದ್ಧರಾಗಿರುತ್ತೇವೆ ಎಂದು ಶಿಶ್ಯರು ಸಂಕಲ್ಪ ಮಾಡುತ್ತಾರೆ.[೫] ಈ ದಿನದಂದು ವಿಶೇಷವಾಗಿ ಪಠಿಸುವ ಮಂತ್ರ ಇದು ಗುರುರ್ಬ್ರಹ್ಮ, ಗುರುರ್ವಿಷ್ಣು, ಗುರುರ್ದೇವೋ ಮಹೇಶ್ವರಾ । ಗುರು ಸಾಕ್ಷಾತ್ ಪರಬ್ರಹ್ಮ । ತಸ್ಮೈ ಶ್ರೀ ಗುರವೇ ನಮಃ. ಗುರು (ಸಂಸ್ಕೃತ:गुरु,ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ.[೧] ತಂದೆ ತಾಯಂದಿರು, ಶಿಕ್ಷಕರು[೧], ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ.[೨] ಧಾರ್ಮಿಕ ಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಹಿಂದು ಮತ್ತು ಸಿಖ್ಖ್ ಧರ್ಮದಲ್ಲಿ ಹಾಗೂ ಇನ್ನೀತರ ಕೆಲವು ಭಾರತೀಯ ಧರ್ಮಗಳಲ್ಲಿ ಹಾಗೂ ಕೆಲವು ಹೊಸ ಧಾರ್ಮಿಕ ಪಂಥದ ಚಳುವಳಿಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು: "ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ." [೩] ಸಂಸ್ಕೃತದಲ್ಲಿ "ಗುರು" ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ.[clarification needed] ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ Thursday ಬೃಹಸ್ಪತಿವಾರ ಅಥವಾ ಗುರುವಾರ (ವಾರ ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, "ಗುರು" ಎಂಬ ಶಬ್ದವು ವ್ಯಾಪಕವಾಗಿ "ಶಿಕ್ಷಕ" ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ.[೪] ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ 'ಗುರು' ಶಬ್ದವು ಗು ಮತ್ತು ರು ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. "ಗುಕಾರೋಂಧಕಾರತ್ವಾತ್ ರುಕಾರೋ ತನ್ನಿವಾರಕಃ" ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. ಅದ್ವಯಾ-ತಾರಕಾ ಉಪನಿಷದ್ ಪ್ರಕಾರ (ಪದ್ಯಪಾದ 16)[ಸೂಕ್ತ ಉಲ್ಲೇಖನ ಬೇಕು] ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ. ’ಗುರು’ ಎಂಬ ನಾಮಪದದ ಅರ್ಥವು ಸಂಸ್ಕೃತದಲ್ಲಿ ’ಶಿಕ್ಷಕ’ ಅಥವಾ ಆಧ್ಯಾತ್ಮ ಬೋಧಕ ಎಂದಾಗುತ್ತದೆ. ಹಾಗೆಯೇ ಸಂಸ್ಕೃತದಿಂದ ಈ ಶಬ್ದವನ್ನು ತೆಗೆದುಕೊಂಡಿರುವ ಹಿಂದಿ, ಮರಾಠಿ, ಬೆಂಗಾಲಿ, ಗುಜರಾತಿ ಮತ್ತು ನೇಪಾಲಿ ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಅಲ್ಲದೆ ಸಂಸ್ಕೃತದಿಂದ ಪ್ರಭಾವಿತವಾಗಿರುವ ಇಂಡೋನೇಷಿಯನ್ ಮತ್ತು ಮಲಾಯ್ಸ್ ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಒಂದು ನಾಮಪದವಾಗಿ ಈ ಶಬ್ದವು ಅರಿವಿನ (ಜ್ಞಾನ) ವಿತರಕ ಎಂಬ ಅರ್ಥವನ್ನು ನೀಡುತ್ತದೆ. ಒಂದು ಗುಣವಾಚಕದಂತೆ, ಇದು ’ಸಮೃದ್ಧ ವ್ಯಕ್ತಿತ್ವದ’ ಅಥವಾ ’ಪ್ರಭಾವಿ ವ್ಯಕ್ತಿತ್ವದ’ ಅಂದರೆ "ಜ್ಞಾನದಿಂದ ಸಮೃದ್ಧವಾಗಿರುವ’ "[೫] ಸಮೃದ್ಧ ಬುದ್ಧಿವಂತಿಕೆ, [೬]"ಆಧ್ಯಾತ್ಮಿಕ ಜ್ಞಾನದಿಂದ ಸಮೃದ್ಧವಾಗಿರುವ"[೭], "ಪವಿತ್ರಗ್ರಂಥಗಳ ಅರಿತುಕೊಳ್ಳುವಿಕೆ, ಉತ್ತಮ ಬರವಣಿಗೆ ಹಾಗೂ ಉನ್ನತ ಅರಿವು ಇರುವ ಸಮೃದ್ಧ ವ್ಯಕ್ತಿತ್ವದ,"[೮] ಅಥವಾ "ಜ್ಞಾನ ಸಂಪತ್ತಿನ ಸಮೃದ್ಧತೆ ಇರುವ"[೯] ಎಂಬ ಅರ್ಥಗಳನ್ನು ನೀಡುತ್ತದೆ. ಈ ಶಬ್ದವು ತನ್ನ ಮೂಲವನ್ನು ಸಂಸ್ಕೃತದ ಗ್ರಿ ಯಲ್ಲಿ ಹೊಂದಿದೆ ಮತ್ತು ಶಬ್ದ ಗುರ್‌ ಗೆ ಸಂಬಂಧವನ್ನು ಹೊಂದಿದೆ, ಅದರ ಅರ್ಥ "ಮೇಲೇರಿಸು, ಮೇಲಕ್ಕೆ ಎತ್ತು, ಅಥವಾ ಒಂದು ಪ್ರಯತ್ನವನ್ನು ಮಾಡು’ ಎಂಬುದಾಗಿದೆ.[೧೦] ಸಂಸ್ಕೃತದ ಗುರು ಶಬ್ದವು ಲ್ಯಾಟಿನ್‌ನ ಗ್ರೇವಿಸ್ ’ಭಾರ;ಪ್ರಮುಖ, ತೂಕವಾಗಿರುವ, ಗಂಭೀರ [೧೧] ಮತ್ತು ಗ್ರೀಕ್‌ನ ಬ್ಯಾರಸ್ ’ಭಾರ’ ಶಬ್ದಗಳ ಜೊತೆ ಸಜಾತೀಯ ಸಂಬಂಧವನ್ನು ಹೊಂದಿದೆ. ಈ ಮೂರು ಶಬ್ದಗಳು ಪ್ರೋಟೋ-ಇಂಡೋ-ಯುರೋಪಿಯನ್ ಮೂಲದ *gʷerə- ದಿಂದ, ವಿಶಿಷ್ಟವಾಗಿ *gʷr̥ə- ದ ಜೀರೋ-ಗ್ರೇಡ್‌ನಿಂದ ತೆಗೆದುಕೊಳ್ಳಲಾಗಿದೆ.[೧೨] "ಗುರು" ಶಬ್ದದ ಒಂದು ಸಾಂಪ್ರದಾಯಿಕ ಪದ ವ್ಯುತ್ಪತ್ತಿಯು ಅಂಧಕಾರ ಮತ್ತು ಬೆಳಕಿನ ನಡುವಣ ಅನ್ಯೋನ್ಯ ಕ್ರಿಯೆಯಾಗಿದೆ. ಗುರುವನ್ನು "ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುವ ವ್ಯಕ್ತಿ" ಎಂಬುದಾಗಿ ನೋಡಲಾಗುತ್ತದೆ.[೧೩][೧೪][೧೫] ಕೆಲವು ವಿಷಯಗಳಲ್ಲಿ ಇದು ಈ ಅಂಶಗಳು ( ಗು (गु) ಮತ್ತು ರು (रु) ಅನುಕ್ರಮವಾಗಿ ಅಂಧಕಾರ ಮತ್ತು ಬೆಳಕುಗಳಿಗೆ ಸಮಾನವಾಗಿ ನಿಲ್ಲುತ್ತದೆ.[೧೬] ರೀಂಡರ್ ಕ್ರೆನೊನ್‌ಬೊರ್ಗ್ ಪ್ರಕಾರ‍ ’ಗುರು ’ ಶಬ್ದಕ್ಕೂ ಅಂಧಕಾರ ಬೆಳಕು ಮುಂತಾದವುಗಳಿಗೆ ಏನೂ ಸಂಬಂಧವಿಲ್ಲ. ಅವನು ಇದನ್ನು ಜನಪದೀಯ ಪದವ್ಯುತ್ಪತ್ತಿ ಎಂಬುದಾಗಿ ವರ್ಣಿಸುತ್ತಾನೆ.[೧೭] "ಗುರು" ಶಬ್ದದ ಮತ್ತೊಂದು ಪದವ್ಯುತ್ಪತ್ತಿಯು ’ಗುರು ಗೀತಾ’ದಲ್ಲಿ ಕಂಡುಬಂದಿತು, ಗು ಅನ್ನು "ಗುಣಗಳನ್ನು ಮೀರಿ" ಮತ್ತು ರು ಅನ್ನು "ಆಕಾರ ರಹಿತ" ಎಂಬುದಾಗಿ ಒಳಗೊಂಡಿತು, "ಗುಣಗಳನ್ನು ಅತಿಶಯಿಸುವ ಪೃವೃತ್ತಿಯನ್ನು ಅನುಗ್ರಹಿಸುವವನನ್ನು ಗುರು ಎಂದು ಹೇಳಬಹುದು" ಎಂಬುದಾಗಿ ಅದು ಹೇಳಿತು.[೧೮] "ಗು" ಮತ್ತು "ರು" ಗಳ ಅರ್ಥವನ್ನು ಮರೆಮಾಚುವ ಮತ್ತು ಇದರ ತೊಡೆದುಹಾಕುವಿಕೆಯನ್ನು ಸೂಚಿಸುವ ಸೂತ್ರಗಳಿಗೆ ಗುರುತಿಸಲ್ಪಟ್ಟಿದೆ.[೧೩] ಪಾಶ್ಚಾತ್ಯ ರಹಸ್ಯವಾದ ಮತ್ತು ಧಾರ್ಮಿಕತೆಯ ವಿಜ್ಞಾನ , ಪಿರೆ ರಿಫಾರ್ಡ್‌ನು "ಅತೀಂದ್ರಿಯ" ಮತ್ತು "ವೈಜ್ಞಾನಿಕ" ಪದವ್ಯುತ್ಪತ್ತಿಗಳ ನಡುವೆ ಒಂದು ಭೇದವನ್ನು ಮಾಡುತ್ತಾನೆ, ’ಗುರು’ ಶಬ್ದದ ಮೊದಲಿನ ಪದವ್ಯುತ್ಪತ್ತಿಯ ಉದಾಹರಣೆಯನ್ನು ಎತ್ತಿ ಹೇಳುತ್ತ, ಅದರಲ್ಲಿ ವ್ಯುತ್ಪತ್ತಿಯು ಗು ("ಅಂಧಕಾರ") ಮತ್ತು ರು (’ಹೊರ ಹಾಕು’) ಎಂಬುದಾಗಿ ತೋರಿಸಲ್ಪಟ್ಟಿದೆ; ನಂತರ ಅವನು ’ತೂಕವಾಗಿರುವ’ ಅರ್ಥದ ಜೊತೆ ಗುರುವಿನಿಂದ ನಿದರ್ಶನವನ್ನು ನೀಡುತ್ತಾನೆ.[೧೯] ತರ್ಕಾತೀತ ಜ್ಞಾನವನ್ನು (ವಿದ್ಯಾ ) ತಿಳಿಸಿಕೊಡುವ ಒಬ್ಬ ಗುರುವನ್ನು ಹುಡುಕುವ ಮಹತ್ವಕ್ಕೆ ಹಿಂದೂಮತದಲ್ಲಿ ಪ್ರಾಧಾನ್ಯ ನೀಡಲಾಗಿದೆ. ಮುಖ್ಯ ಹಿಂದೂ ಪಠ್ಯಗಳಲ್ಲಿ ಒಂದಾದ, ಭಗವದ್ಗೀತೆಯು ದೇವರ ರೂಪದಲ್ಲಿ ಕೃಷ್ಣ ಮತ್ತು ಅವನ ಗೆಳೆಯ ಅರ್ಜುನ, ಒಂದು ದೊಡ್ಡ ಯುದ್ಧಕ್ಕೂ ಮುಂಚಿನ ರಣರಂಗದಲ್ಲಿ ಕೃಷ್ಣನನ್ನು ತನ್ನ ಗುರು ಎಂದುಒಪ್ಪಿಕೊಳ್ಳುವ ಒಬ್ಬ ಕ್ಷತ್ರೀಯ ರಾಜಕುಮಾರರ ನಡುವಿನ ಸಂವಾದವಾಗಿದೆ. ಈ ಸಂವಾದವು ಕೇವಲ ಹಿಂದುತ್ವದ ಆದರ್ಶಗಳನ್ನು ಸ್ಥೂಲ ವಿವರಣೆ ನೀಡುವುದು ಮಾತ್ರವಲ್ಲ, ಆದರೆ ಅವುಗಳ ಸಂಬಂಧವು ಗುರು-ಶಿಷ್ಯ ಪರಂಪರೆಯ ಒಂದು ಮಾದರಿ ಎಂದು ಪರಿಗಣಿಸಲ್ಪಟ್ಟಿದೆ. ಗೀತೆಯಲ್ಲಿ, ಕೃಷ್ಣನು ಒಬ್ಬ ಗುರುವನ್ನು ಹುಡುಕುವ ಮಹತ್ವದ ಕುರಿತು ಅರ್ಜುನನ ಬಳಿ ಮಾತನಾಡುತ್ತಾನೆ: ಈ ಮೇಲೆ ನಮೂದಿಸಲ್ಪಟ್ಟ ವಾಕ್ಯದಲ್ಲಿ, ಗುರು ಶಬ್ದವು ಹೆಚ್ಚು ಅಥವಾ ಕಡಿಮೆ ಪರ್ಯಾಯವಾಗಿ ಸದ್ಗುರು (ಪದಶಃ : ನಿಜವಾದ ಶಿಕ್ಷಕ ) ಮತ್ತು ಸತ್ಪುರುಷ ಎಂಬ ಅರ್ಥದ ಜೊತೆ ಬಳಸಲ್ಪಡುತ್ತದೆ. ಸ್ವಾಮಿಯನ್ನೂ ಕೂಡ ಹೋಲಿಸಿ ನೋಡಿ. ಒಬ್ಬ ಗುರುವಿನ ಅನುಯಾಯಿಯನ್ನು ಒಬ್ಬ ಶಿಷ್ಯ ಅಥವಾ ಚೇಲಾ ಎಂದು ಕರೆಯಲಾಗುತ್ತದೆ. ಅನೇಕ ವೆಳೆ ಒಬ್ಬ ಗುರುವು ಆಶ್ರಮದಲ್ಲಿ ಅಥವಾ ಒಂದು ಗುರುಕುಲ ದಲ್ಲಿ (ಗುರುವಿನ ವಾಸಸ್ಥಾನ) ಅವನ ಅನುಯಾಯಿಗಳ ಜೊತೆ ವಾಸಿಸುತ್ತಾನೆ. ಗುರುವಿನ ಸಂದೇಶವನ್ನು ಕೊಂಡೊಯ್ಯುವ ಅನುಯಾಯಿಯಿಂದ ವ್ಯಾಪಿಸಲ್ಪಡುವ ಒಬ್ಬ ಗುರುವಿನ ವಂಶಾವಳಿಯು ಗುರು ಪರಂಪರೆ ಅಥವಾ ಅನುಯಾಯಿಗಳ (ಶಿಷ್ಯರ) ಉತ್ತರಾಧಿಕಾರ ಎಂದು ಕರೆಯಲ್ಪಡುತ್ತದೆ. ಬಿಎಪಿಎಸ್ ಸ್ವಾಮಿನಾರಾಯಣ್ ಸಂಸ್ಥೆಯಂತಹ ಕೆಲವು ಹಿಂದೂ ಧಾರ್ಮಿಕ ಪಂಥಗಳು, ದೇವರ ಸಾಕಾರ ರೂಪದಂತೆ ಬದಲಾಯಿಸಲ್ಪಟ್ಟ ಒಬ್ಬ ಜೀವಂತ ಗುರುವಿನ ಜೊತೆ ಒಂದು ವೈಯುಕ್ತಿಕ ಸಂಬಂಧವು ಮೋಕ್ಷವನ್ನು ಸಾಧಿಸುವುದಕ್ಕೆ ಬಹಳ ಪ್ರಮುಖವಾಗಿದೆ. ಗುರು ಅಂದರೆ ಅವನ ಅಥವಾ ಅವಳ ಅನುಯಾಯಿಗಳನ್ನು ಜೀವನ್ಮುಕ್ತವಾಗುವಂತೆ ಮಾಡಲು ನಿರ್ದೇಶಿಸುವ ಒಬ್ಬ ವ್ಯಕ್ತಿ, ಈ ರೀತಿಯಾಗಿ ವಿಮೋಚನೆಗೊಂಡ ಆತ್ಮವು ಅವನ ಅಥವಾ ಅವಳ ಜೀವಿತಾವಧಿಯಲ್ಲಿ ಮೋಕ್ಷವನ್ನು ಸಾಧಿಸಲು ಸಮರ್ಥವಾಗುತ್ತದೆ. ಗುರುವಿನ ಪಾತ್ರ[ಬದಲಾಯಿಸಿ] ಗುರುವಿನ ಪಾತ್ರವು ವೇದಾಂತ , ಯೋಗ, ತಂತ್ರ ಮತ್ತು ಭಕ್ತಿ ಸ್ಕೂಲ್‌ಗಳಂತಹ ಹಿಂದೂ ಸಂಪ್ರದಾಯದ ಶಬ್ದಗಳ ಮೂಲ ಅರ್ಥದಲ್ಲಿ ಮುಂದುವರೆಯುತ್ತ ಹೋಗುತ್ತದೆ. ವಾಸ್ತವವಾಗಿ, ಭೂಮಿಯ ಮೇಲೆ ಒಬ್ಬ ಗುರುವು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ನಿರ್ದೇಶಕ ಎಂಬುದು ಈಗ ಹಿಂದೂಮತದ ಒಂದು ಸಾಮಾನ್ಯ ಭಾಗವಾಗಿದೆ. ಕೆಲವು ಹೆಚ್ಚು ಮೋಡಿಯ ಸಂಪ್ರದಾಯಗಳಲ್ಲಿ ಗುರುವು ತನ್ನ ವಿದ್ಯಾರ್ಥಿಗಳಲ್ಲಿ ಸುಪ್ತ ಆಧ್ಯಾತ್ಮಿಕ ಜ್ಞಾನಗಳನ್ನು ಜಾಗೃತಗೊಳಿಸುತ್ತಾನೆ ಎಂಬುದಾಗಿ ನಂಬಲಾಗಿದೆ. ಈ ರೀತಿಯಾಗಿ ಮಾಡುವ ಕ್ರಿಯೆಯನ್ನು ಶಕ್ತಿಪಥ ಎಂದು ಕರೆಯುತ್ತಾರೆ. ಹಿಂದೂಮತದಲ್ಲಿ, ಗುರುವು ಸಾಧುವಿನ ಗುಣಗಳನ್ನು ಹೊಂದಿರುವ ಗೌರವಾನ್ವಿತ ವ್ಯಕ್ತಿ, ಅವನ ಅಥವಾ ಅವಳ ಅನುಯಾಯಿಗಳ ಮನಸ್ಸನ್ನು ಬೆಳಗಿಸುವ, ಒಬ್ಬ ವ್ಯಕ್ತಿಯು ಯಾರಿಂದ ಮೊದಲಿನ ಮಂತ್ರವನ್ನು ತೆಗೆದುಕೊಳ್ಳುತ್ತಾನೋ ಅಂತಹ ಶಿಕ್ಷಕ, ಮತ್ತು ವಿಧಿವತ್ತಾದ ನಡವಳಿಕೆ ಮತ್ತು ಧಾರ್ಮಿಕ ಅನುಷ್ಥಾನಗಳಲ್ಲಿ ನಿರ್ದೇಶನವನ್ನು ನೀಡುವ ಒಬ್ಬ ವ್ಯಕ್ತಿ ಎಂಬುದಾಗಿ ಪರಿಗಣಿಸಲಾಗಿದೆ. ವಿಷ್ಣು ಸ್ಮೃತಿ ಮತ್ತು ಮನು ಸ್ಮೃತಿಗಳು ಶಿಕ್ಷಕ, ತಾಯಿ ಮತ್ತು ತಂದೆಯನ್ನು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುವ ಅತಿ ಹೆಚ್ಚು ಪೂಜನೀಯ ವ್ಯಕ್ತಿಗಳು ಎಂಬುದಾಗಿ ಪರಿಗಣಿಸುತ್ತವೆ. ಹಿಂದೂ ಸಂಪ್ರದಾಯದಲ್ಲಿನ ಕೆಲವು ಪ್ರಭಾವಶಾಲಿ ಗುರು ಯಾರೆಂದರೆ ಆದಿ ಶಂಕರಾಚಾರ್ಯ, ಶ್ರೀ ಚೈತನ್ಯ ಮಹಾಪ್ರಭು, ಮತ್ತು ಶ್ರೀ ರಾಮಕೃಷ್ಣ. 20ನೆಯ ಶತಮಾನದಲ್ಲಿ ಯೋಗದ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋದ ಇತರ ಗುರುಗಳ ಹೆಸರುಗಳು ಈ ಕೆಳಗಿನಂತಿವೆ: ಶ್ರೀ ಅರಬಿಂದೋ ಘೋಷ್, ಶ್ರೀ ರಮಣ ಮಹರ್ಷಿ, ಸತ್ಯ ಸಾಯಿ ಬಾಬಾ, ಶ್ರೀ ಚಂದ್ರಶೇಖರೇಂದ್ರ ಸರಸ್ವತಿ (ಕಾಂಚಿಯ ಋಷಿ), ಸ್ವಾಮಿ ಶಿವಾನಂದ, ಪರಮಹಂಸ ಯೋಗಾನಂದ, ಸ್ವಾಮಿ ಚಿನ್ಮಯಾನಂದ, ಸ್ವಾಮಿ ವಿವೇಕಾನಂದ ಮತ್ತು ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ. ಹಿಂದೂ ಗುರುಗಳ ಯಾದಿಯನ್ನೂ ನೋಡಿ. ಭಾರತೀಯ ಸಂಸ್ಕೃತಿಯಲ್ಲಿ, ಗುರು ಅಥವಾ ಒಬ್ಬ ಶಿಕ್ಷಕ (ಆಚಾರ್ಯ)ರ ಜೊತೆಯಿಲ್ಲದ ಒಬ್ಬ ವ್ಯಕ್ತಿಯನ್ನು ಒಮ್ಮೆ ಅನಾಥ ಅಥವಾ ಅದೃಷ್ಟಹೀನ ವ್ಯಕ್ತಿ ಎಂಬಂತೆ ನೋಡಲಾಯಿತು. ಸಂಸ್ಕೃತದಲ್ಲಿ ಅನಾಥ ಎಂಬ ಶಬ್ದವು "ಒಬ್ಬ ಗುರುವನ್ನು ಹೊಂದಿಲ್ಲದ ವ್ಯಕ್ತಿ" ಎಂಬುದನ್ನು ಸೂಚಿಸುತ್ತದೆ. ಆಚಾರ್ಯನು ಜ್ಞಾನ ವನ್ನು (knowledge) ಶಿಕ್ಷಣ ದ (ಬೋಧನೆ,instruction) ಮೂಲಕ ನೀಡುವವನಾಗಿದ್ದಾನೆ. ಒಬ್ಬ ಗುರುವು ದೀಕ್ಷೆ ಯ ವಿಧಿ ಯನ್ನೂ ನೀಡುತ್ತಾನೆ, ದೀಕ್ಷೆ ಅಂದರೆ ಒಬ್ಬ ಗುರುವಿನ ಕೃಪೆಯಿಂದ ಅವನ ಅನುಯಾಯಿಯ ಆಧ್ಯಾತ್ಮಿಕ ಜಾಗೃತಿ ಎಂಬುದಾಗಿದೆ. ದೀಕ್ಷೆಯು ಒಬ್ಬ ಗುರುವಿನ ದೈವಿಕ ಶಕ್ತಿಗಳನ್ನು ಅವನ ಅನುಯಾಯಿಗಳ ಮೇಲೆ ಅನುಗ್ರಹಿಸುವ ಒಂದು ಪದ್ಧತಿ ಎಂಬುದಾಗಿ ಪರಿಗಣಿಸಲಾಗಿದೆ, ಆ ದೀಕ್ಷೆಯ ಮೂಲಕ ಅನುಯಾಯಿಯು ದೈವಿಕತೆಯ ಮಾರ್ಗದಲ್ಲಿ ನಿರಂತರವಾಗಿ ಪ್ರಗತಿಯನ್ನು ಹೊಂದುತ್ತಾನೆ. "ಗುರು" ಎಂಬ ವಿಷಯವು ಅತಿ ಹಳೆಯದಾದ ಉಪನಿಷತ್ತುಗಳ ಕಾಲದಿಂದಲೂ ಇತ್ತು ಎಂಬುದಾಗಿ ಕಂಡುಹಿಡಿಯಲಾಗಿದೆ, ಅಲ್ಲಿ ಭೂಮಿಯ ಮೇಲಿನ ದೈವಿಕತೆಯ ಶಿಕ್ಷಕ ಎಂಬ ಆಲೋಚನೆಯು ಮೊದಲಿನ ಬ್ರಾಹ್ಮಣ ಸಂಘಟನೆಗಳಿಂದ ಅಭಿವ್ಯಕ್ತಿಗೊಳ್ಳಲ್ಪಟ್ಟಿತು. ಗುರು ಎಂಬ ಶಬ್ದವು ಒಬ್ಬ ಸೌಂದರ್ಯದ ಕಲೋಪಾಸಕ ಅಥವಾ ಸೌಂದರ್ಯದ ಬಗೆಗೆ ಶಿಕ್ಷಣವನ್ನು ನೀಡುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನೂ ನೀಡುತ್ತದೆ. ಗುರುಗಳು ತಮ್ಮ ಅಧಿಕರಕ್ಕಾಗಿ ಮೂರ್ತಿಪೂಜೆಗೆ ಮೊರೆಹೋಗುವುದಿಲ್ಲ, ಅಥವಾ ಅವರು ದೇವರ ಇಚ್ಛೆಯನ್ನು ಪ್ರಕಟಿಸುವ ಧರ್ಮೋಪದೇಶಕರೂ ಅಲ್ಲ. ವಾಸ್ತವವಾಗಿ, ಹಿಂದೂಮತದ ಕೆಲವು ಪ್ರಕಾರಗಳಲ್ಲಿ ಒಮ್ದು ತಿಳುವಳಿಕೆಯಿದೆ, ಅದೇನೆಂದರೆ ಭಕ್ತರು ಗುರು ಮತ್ತು ದೇವರ ಜೊತೆ ತೋರಿಸಲ್ಪಟ್ಟರೆ, ಮೊದಲಿಗೆ ಭಕ್ತನು ಗುರುವಿಗೆ ಗೌರವವನ್ನು ತೋರಿಸುತ್ತಾನೆ ಏಕೆಂದರೆ ಗುರುವು ಅವನನ್ನು ದೇವರೆಡೆಗೆ ಕರೆದೊಯ್ಯುವ ಒಂದು ಸಾಧನವಾಗಿದ್ದಾನೆ.[೨೧][೨೨][೨೩] ಕೆಲವು ಸಂಪ್ರದಾಯಗಳು "ಗುರು, ದೇವರು ಮತ್ತು ಸ್ವಯಂ" (ಸ್ವಯಂ ಅಂದರೆ ಆತ್ಮ, ವ್ಯಕ್ತಿಯಲ್ಲ) ಇವು ಒಂದೇ ಎಂಬುದಾಗಿ ಹೇಳುತ್ತವೆ. ಭಾರತದಲ್ಲಿನ ಸಾಧುಗಳು ಮತ್ತು ಕವಿಗಳು ಗುರು ಮತ್ತು ದೇವರ ನಡುವಣ ಸಂಬಂಧದ ಬಗೆಗೆ ಈ ಕೆಳಗಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ: ಗುರು-ಶಿಷ್ಯ ಪರಂಪರೆ[ಬದಲಾಯಿಸಿ] Main article: Guru-shishya tradition ಗುರು-ಶಿಷ್ಯ ಪರಂಪರೆಯಲ್ಲಿ ತತ್ವಬೋಧನೆಗಳ ಪ್ರಸರಣೆ ಗುರು ವಿನಿಂದ (ಅಧ್ಯಾಪಕ, गुरू) ’śiṣya’ನಿಗೆ (ಅನುಯಾಯಿ, िशष्य) ಮಾಡಲಾಗುತ್ತದೆ. ಈ ಸಂಬಂಧದಲ್ಲಿ, ಸೂಕ್ಷ್ಮ ಹಾಗೂ ಆಧೂನಿಕೃತ ಜ್ಞಾನವನ್ನು ವಿಧ್ಯಾರ್ಥಿಗಳು ಗೌರವ, ಬದ್ಧತೆ, ಭಕ್ತಿ ಹಾಗೂ ವಿಧೇಯತೆಗಳಿಂದ ಹಸ್ತಾಂತರಿಸಕೊಳ್ಳುತ್ತಾರೆ ಹಾಗೂ ಪಡೆಯುತ್ತಾರೆ. ಕ್ರಮೇಣ ವಿಧ್ಯಾರ್ಥಿಯು ತನ್ನ ಗುರು ಹೊಂದಿರುವ ಜ್ಞಾನದ ಪ್ರವೀಣನಾಗುತ್ತಾನೆ. ಗುರು ಹಾಗೂ ಅನುಯಾಯಿಯ ಮಧ್ಯದ ಸಂವಾದನೆಯು ಹಿಂದುತ್ವದ ಪ್ರಾಥಮಿಕ ಅಂಗ, ಉಪನಿಷತ್ಗಳ ಮೌಖಿಕ ಪರಂಪರೆಗಳಲ್ಲಿ ಇವು ಸ್ಥಾಪಿತವಾಗಿವೆ (c. 2000 BC). ಉಪನಿಷತ್ ಎಂಬ ಪದವು ಸಂಸ್ಕೃತ ಪದಗಳಿಂದ ದೊರಕಿದೆ ಉಪ (ಸಮೀಪ), ನಿ (ಕೆಳಗೆ) ಹಾಗೂ ಷಧ (ಕುಳಿತುಕೊಳ್ಳುವುದು) - "ಸಮೀಪದಲ್ಲಿ ಕೆಳಗೆ ಕುಳಿತುಕೊಳ್ಳುವುದು" ಆಧ್ಯಾತ್ಮಿಕ ಅಧ್ಯಾಪಕರಿಂದ ಬೋಧನೆ ಪಡೆಯಲು. ಈ ಸಂಬಂಧಗಳ ಉದಾಹರಣೆಯಲ್ಲಿ ಮಹಾಭಾರತದ ಕೃಷ್ಣ ಹಾಗೂ ಅರ್ಜುನ (ಭಗವದ್ ಗೀತ) ಮತ್ತು ರಾಮಾಯಣದ ರಾಮಾ ಹಾಗೂ ಹನುಮಾನರ ಸಂಬಂಧ ಒಳಗೊಂಡಿದೆ. ಉಪನಿಷತ್ಗಳಲ್ಲಿ, ಗುರು-ಶಿಷ್ಯ ಸಂಬಂಧ ಹಲವು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ (ಅಮರತೆಯ ಬಗೆಗಿನ ಪ್ರೆಶ್ನೆಗಳ ಉತ್ತರವನ್ನು ಒಬ್ಬ ಗಂಡ ತನ್ನ ಹೆಂಡತಿಯನ್ನು ನೀಡುತ್ತಾನೆ); ಸಾವಿನ ಬಗ್ಗೆ ಏನೆಲ್ಲ ವರ್ಣನೆಗಳನ್ನು ಹೊಂದ ಒಬ್ಬ ಹದಿಹರೆಹದ ಯುವಕನಿಗೆ ಯಮ ಜ್ಞಾನವನ್ನು ನೀಡುವುದು, ಇತ್ಯಾದಿ) ಕೆಲವು ಬಾರಿ ಸನ್ಯಾಸಿಯರು ಸ್ತ್ರೀಯರಾಗಿರುತ್ತಾರೆ ಹಾಗೂ ಕೆಲವು ಬಾರಿ ಬೋಧನೆಗಳನ್ನು ರಾಜರು ಬೇಡಿಕೊಂಡು ಬರುತ್ತಾರೆ. ವೇದಗಳಲ್ಲಿ, ಬ್ರಹ್ಮವಿಧ್ಯ ಅಥವಾ ಬ್ರಾಹ್ಮಣನ ಜ್ಞಾನವನ್ನು ಗುರುವಿನಿಂದ ಶಿಷ್ಯನಿಗೆ ಮೌಖಿಕವಾಗಿ ಪ್ರಸಾರಿಸಲಾಗುತ್ತದೆ. ಸಿಖ್ ಎಂಬ ಪದವು ಸಂಸ್ಕೃತದ ಶಿಷ್ಯ ಎಂಬ ಪದದಿಂದ ಬಂದಿದೆ.[೨೬] ಗುರುಗಳ ವಿಂಗಡನೆ[ಬದಲಾಯಿಸಿ]

ದೆವಲ ಸ್ಮೃತಿಯ ಪ್ರಕಾರ ಹನ್ನೊಂದು ವಿಧಗಳ ಗುರುಗಳಿದ್ದಾರೆ ಮತ್ತು ನಾಮ ಚಿಂತಾಮಣಿಯ ಪ್ರಕಾರ ಹತ್ತು ವಿಧಗಳ ಗುರುಗಳಿದ್ದಾರೆ. ನೆದರ್ಲ್ಯಾಂಡ್‌ನಲ್ಲಿ ನವ-ಹಿಂದು ಚಳುವಳಿಗಳ ಬಗೆಗಿನ ಪುಸ್ತಕದಲ್ಲಿ ಕ್ರೆನನ್‌ಬೊರ್ಗ್ ಭಾರತದಲ್ಲಿ ನಾಲ್ಕು ತರಹದ ಗುರುಗಳ ಬಗೆಗಳನ್ನು ಗುರುತಿಸಿದ್ದಾರೆ:[dubious – discuss][೧೭] ಹಿಂದುಗಳ ಉಚ್ಚ ಜಾತಿಯ ಆಧ್ಯಾತ್ಮಿಕ ಸಲಹೆಗಾರ , ಇವರು ಪಾರಂಪರಿಕ ಅನುಷ್ಠಾನಗಳನ್ನು ನಿರ್ವಹಿಸುತ್ತಾರೆ ಹಾಗೂ ದೇವಸ್ಥಾನಕ್ಕೆ ಕೂಡಿರುವುದಿಲ್ಲ (ಹೀಗಾಗಿ ಸನ್ಯಾಸಿ ಅಲ್ಲ); ಜ್ಞಾನೋದಯವಾದ ಅಧ್ಯಾಪಕರು ತಮ್ಮ ಜ್ಞಾನೋದಯದ ಗಳಿಕೆಯ ಅನುಭವದಿಂದ ಅಧಿಕಾರವನ್ನು ಪಡೆಯುತ್ತಾರೆ. ಈ ತರಹದವರು ಭಕ್ತಿ ಚಳುವಳಿಗಳಲ್ಲಿ ಹಾಗೂ ತಂತ್ರಗಳಲ್ಲಿ ಕಂಡುಬರುತ್ತಾರೆ ಮತ್ತು ಇವರ ಅನುಯಾಯಿಗಳು ಪ್ರೆಶ್ನೆ ಕೇಳದ ವಿಧೆಯತ್ತರಾಗಿರಬೇಕು ಹಾಗೂ ಇವರಿಗೆ ಪಶ್ಚಿಮ ಅನುಯಾಯಿಗಳು ಕೂಡ ಇರಬಹುದು. ಪಶ್ಚಿಮರು ಕೂಡ ಇವರಂತೆ ಗುರುಗಳಾಗಬಲ್ಲರು, ಉದಾ, ಆಂಡ್ರ್ವಿ ಕೊಹೆನ್ ಹಾಗೂ ಐಸಾಕ್ ಶಾಪಿರೊ. ಅವತಾರ , ದೇವರ ಜೀವಂತರೂಪ, ದೇವರ-ಹೋಲಿಕೆಯ ಅಥವಾ ದೇವರ ಒಂದು ವಾದ್ಯ ಎಂದು ತನನ್ನು ಪರಿಗಣಿಸುವ ಗುರು ಅಥವಾ ಇತರರಿಂದ ಹೀಗೆ ಪರಿಗಣಿಸಲ್ಪಟ್ಟ ಗುರು. "ಗುರು" ಪುಸ್ತಕದ ರೂಪದಲ್ಲಿ ಅಂದರೆ ಸಿಖ್ ಧರ್ಮದ ಗುರು ಗ್ರಂಥ ಸಾಹಿಬ್;

"https://kn.wikipedia.org/w/index.php?title=ಉಪೋಸಥ&oldid=1149520" ಇಂದ ಪಡೆಯಲ್ಪಟ್ಟಿದೆ