ಉಪೇಂದ್ರ ಭಾಂಜ
ಕವಿ ಸಾಮ್ರಾಟ್ ಉಪೇಂದ್ರ ಭಾಂಜ ಬೀರಬರ | |
|---|---|
| ಮೂಲ ಹೆಸರು | ଉପେନ୍ଦ୍ର ଭଞ୍ଜ |
| ಜನನ | ೧೬೭೦ (ಅಂದಾಜು) ಕುಲಗಢ (ಪ್ರಸ್ತುತ ಕುಲಡಾ, ಗಂಜಾಂ, ಒಡಿಶಾ, ಭಾರತ) |
| ನಿಧನ | ೧೭೪೦ (ದೃಢಪಟ್ಟಿಲ್ಲ) |
| ಉದ್ಯೋಗ | ರಾಜ ಮತ್ತು ಕವಿ |
| ಭಾಷೆ | ಒಡಿಯಾ |
| ಅವಧಿ | ರೀತಿ ಯುಗ ಅಥವಾ ಭಾಂಜ ಯುಗ |
| ಶೈಲಿ | ಒಡಿಸ್ಸಿ ಸಂಗೀತ |
| ಪ್ರಮುಖ ಕೃತಿಗಳು | ಬೈದೇಹೀಶ ಬಿಲಾಸ |
'"ಕವಿ ಸಾಮ್ರಾಟ್" ಉಪೇಂದ್ರ ಭಾಂಜ ೧೭ನೇ ಶತಮಾನದ ಪ್ರಸಿದ್ಧ ಒಡಿಯಾ ಕವಿ ಮತ್ತು ಶಾಸ್ತ್ರೀಯ ಒಡಿಸ್ಸಿ ಸಂಗೀತದ ಸಂಯೋಜಕರಾಗಿದ್ದರು.[೧] ಇವರು ಒಡಿಯಾ ಭಾಷೆಯಲ್ಲಿ ಬರೆದ ಒಡಿಸ್ಸಿ ಹಾಡುಗಳು ಮತ್ತು ಕಾವ್ಯಗಳಿಗಾಗಿ ಪ್ರಸಿದ್ಧರಾಗಿದ್ದಾರೆ, ಮುಖ್ಯವಾಗಿ ವೈದೇಹೀಶ ವಿಲಾಸ, ಲಾವಣ್ಯವತಿ ಮತ್ತು ಕೋಟಿ ಬ್ರಹ್ಮಾಂಡ ಸುಂದರಿ ಇವರ ಪ್ರಮುಖ ಕೃತಿಗಳು.
ಇವರು ೧೬೭೦ರಲ್ಲಿ (ಅಭಿಪ್ರಾಯಗಳು ೧೬೭೦ ಮತ್ತು ೧೬೮೮ರ ನಡುವೆ ಭಿನ್ನವಾಗಿವೆ) ಘುಮುಸರ್ ಜಮೀನ್ದಾರಿಯ 'ಕುಲಗಢ'ದಲ್ಲಿ (ಪ್ರಸ್ತುತ ಗಂಜಾಂ ಜಿಲ್ಲೆಯ ಭಾಂಜಾನಗರ ಸಮೀಪದ ಕುಲಡಾ) ಜನಿಸಿದರು. ಇವರು ೧೭೪೦ರಲ್ಲಿ ನಿಧನರಾದರು ಎಂದು ನಂಬಲಾಗಿದೆ.
ಉಪೇಂದ್ರ ಭಾಂಜ ಅವರು ರಾಜವಂಶಕ್ಕೆ ಸೇರಿದವರಾಗಿದ್ದರೂ, ಸಿಂಹಾಸನಕ್ಕಿಂತ ಕವಿತೆಗೆ ಹೆಚ್ಚಿನ ಆದ್ಯತೆ ನೀಡಿದರು. ಇವರು ಸಂಸ್ಕೃತ ಶಾಸ್ತ್ರೀಯ ಸಾಹಿತ್ಯದಲ್ಲಿ ತರಬೇತಿ ಪಡೆದಿದ್ದರು ಮತ್ತು ಅಮರಕೋಶ, ತ್ರಿಕಾಂಡ ಕೋಶ ಮತ್ತು ಮೇದಿನಿ ಕೋಶಗಳಂತಹ ಸಂಸ್ಕೃತ ನಿಘಂಟುಗಳಲ್ಲಿ ಪಾಂಡಿತ್ಯ ಹೊಂದಿದ್ದರು. ಕವಿಗಳಿಗೆ ಸಹಾಯವಾಗಲೆಂದು ಇವರು ಒಡಿಯಾ ಭಾಷೆಯಲ್ಲಿ 'ಗೀತಭಿಧಾನ' ಎಂಬ ನಿಘಂಟನ್ನು ಬರೆದಿದ್ದಾರೆ. ಇವರ ಗೌರವಾರ್ಥವಾಗಿ ಒಡಿಶಾದ ಭಾಂಜಾನಗರ ಪಟ್ಟಣಕ್ಕೆ ಇವರ ಹೆಸರನ್ನು ಇಡಲಾಗಿದೆ. ಇವರ ಸಂಗೀತವು ಒಡಿಸ್ಸಿ ಸಂಗೀತದ ಮೂಲಾಧಾರವಾಗಿದೆ.
== ಕಾವ್ಯಗಳು == ಉಪೇಂದ್ರ ಭಾಂಜ ಅವರು ಸುಮಾರು ೫೨ ಪುಸ್ತಕಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಕೇವಲ ೨೨ ಮಾತ್ರ ಪ್ರಸ್ತುತ ಲಭ್ಯವಿವೆ. ಅಚ್ಚುಕೂಟಗಳಿಲ್ಲದ ಆ ಕಾಲದಲ್ಲಿ, ಕೈಬರಹದ ಅನೇಕ ಪುಸ್ತಕಗಳು ಕಾಲಕ್ರಮೇಣ ನಾಶವಾಗಿವೆ. ಇವರ ಕೆಲವು ಪ್ರಮುಖ ಕಾವ್ಯಗಳೆಂದರೆ:
ಬೈದೇಹೀಶ ಬಿಲಾಸ (ಪ್ರತಿ ಸಾಲು 'ಬ' ಅಕ್ಷರದಿಂದ ಪ್ರಾರಂಭವಾಗುತ್ತದೆ)
ಲಾವಣ್ಯವತಿ
ಕೋಟಿ ಬ್ರಹ್ಮಾಂಡ ಸುಂದರಿ
ಕಲಾ ಕೌತುಕ (ಪ್ರತಿ ಸಾಲು 'ಕ' ಅಕ್ಷರದಿಂದ ಪ್ರಾರಂಭವಾಗುತ್ತದೆ)
ಸುಭದ್ರಾ ಪರಿಣಯ (ಪ್ರತಿ ಸಾಲು 'ಸ' ಅಕ್ಷರದಿಂದ ಪ್ರಾರಂಭವಾಗುತ್ತದೆ)
ಉಪೇಂದ್ರ ಭಾಂಜ ಅವರಿಗೆ ಆರಂಭದಲ್ಲಿ "ಬೀರಬರ" ಎಂಬ ಬಿರುದಿತ್ತು. "ಕವಿ ಸಾಮ್ರಾಟ್" ಎಂಬ ಬಿರುದು ೧೯ನೇ ಶತಮಾನದ ಆರಂಭದಲ್ಲಿ ಮಹೇಂದ್ರ ಪಟ್ನಾಯಕ್ ಅವರ ಪುಸ್ತಕದಲ್ಲಿ ಮೊದಲು ಕಂಡುಬಂದಿದೆ. ಇವರು ಒಡಿಯಾ ಸಾಹಿತ್ಯಕ್ಕೆ ಸುಮಾರು ೩೨,೩೦೦ ಪದಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
== ಸಂಗೀತ == ಉಪೇಂದ್ರ ಭಾಂಜ ಅವರ ಕೃತಿಗಳು ಒಡಿಸ್ಸಿ ಶಾಸ್ತ್ರೀಯ ಸಂಗೀತವನ್ನು ಆಧರಿಸಿವೆ. ಇವರು ಒಡಿಸ್ಸಿ ಸಂಪ್ರದಾಯಕ್ಕೆ ವಿಶಿಷ್ಟವಾದ ರಾಗ ಮತ್ತು ತಾಳಗಳನ್ನು ಬಳಸಿದ್ದಾರೆ. ಇವರ ಸಂಯೋಜನೆಗಳು ಒಡಿಶಾ ರಾಜ್ಯಾದ್ಯಂತ ಪ್ರಸಿದ್ಧವಾಗಿದ್ದು, ಒಡಿಸ್ಸಿ ನೃತ್ಯ, ಗೋಟಿಪುಅ ಮತ್ತು ಪ್ರಹ್ಲಾದ ನಾಟಕಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತವೆ. ಭಾಂಜ ಅವರು ಬಳಸಿದ ಕೆಲವು ಪ್ರಮುಖ ರಾಗಗಳೆಂದರೆ: ಬಂಗಾಳಶ್ರೀ, ವಸಂತ, ಕಾಮೋದೀ, ಶಂಕರಾಭರಣ ಮತ್ತು ರಾಮಕೇರಿ.[೨]
== ಶೈಲಿ == ಉಪೇಂದ್ರ ಭಾಂಜ ಅವರು ಸಂಸ್ಕೃತ ಕಾವ್ಯದ 'ರೀತಿ' ಮತ್ತು 'ದೀನಾ' ಶೈಲಿಯನ್ನು ಪ್ರತಿಪಾದಿಸಿದರು. ಶೃಂಗಾರ, ವಿರಹ, ಭಕ್ತಿ ಅಥವಾ ಕರುಣ ರಸವಿರಲಿ, ಉಪೇಂದ್ರ ಭಾಂಜ ಅವರು ಅಪ್ರತಿಮ ವಾಕ್ಚಾತುರ್ಯವನ್ನು ಪ್ರದರ್ಶಿಸಿದ್ದಾರೆ. ಇವರ ಕಾವ್ಯಗಳಲ್ಲಿ ಅನುಪ್ರಾಸ ಮತ್ತು ಯಮಕಗಳಂತಹ ಅಲಂಕಾರಗಳ ಬಳಕೆ ಅದ್ಭುತವಾಗಿದೆ.
ಇದನ್ನೂ ನೋಡಿ
[ಬದಲಾಯಿಸಿ]== ಉಲ್ಲೇಖಗಳು ==
ಬಾಹ್ಯ ಕೊಂಡಿಗಳು
[ಬದಲಾಯಿಸಿ]orissadiary.com: Upendra Bhanja Archived 17 July 2012[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.