ಉದಯನ (ವಿಖ್ಯಾತ ನ್ಯಾಯಾಚಾರ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಯನ': ವಿಖ್ಯಾತ ನ್ಯಾಯಾಚಾರ್ಯ. ಕಾಲ ಸು. 10ನೆಯ ಶತಮಾನ. ನ್ಯಾಯ ಮತ್ತು ವೈಶೇಷಿಕ ದರ್ಶನಗಳಲ್ಲಿ ಅತ್ಯಂತ ವಿಚಾರಪೂರ್ವಕವಾದ ಸಿದ್ಧಾಂತ ಪರಿಷ್ಕಾರಗಳನ್ನು ಮಾಡಿದ. ವಾಚಸ್ಪತಿಮಿಶ್ರನ ನ್ಯಾಯಭಾಷ್ಯವಾರ್ತಿಕ ತಾತ್ಪರ್ಯ ಟೀಕೆಯ ಮೇಲೆ ಪರಿಶುದ್ಧಿ ಎಂಬ ಗ್ರಂಥವನ್ನೂ ವೈಶೇಷಿಕ ಭಾಷ್ಯದ ಮೇಲೆ ಟೀಕೆಯನ್ನೂ ರಚಿಸಿದ್ದಾನೆ. ಹಾಗೆಯೇ ಸ್ವತಂತ್ರ್ಯವಾಗಿ ಅತ್ಯಂತ ಪ್ರಸಿದ್ಧವಾದ ನ್ಯಾಯ ಕುಸುಮಾಂಜಲಿಯಲ್ಲಿ ಈಶ್ವರಾಸ್ತಿತ್ವವನ್ನು ಸಾಧಿಸಿರುವುದಲ್ಲದೆ, ಆತ್ಮತತ್ತ್ವವಿವೇಕದಲ್ಲಿ ಆತ್ಮ ವಿಷಯಕ ವಿಮರ್ಶೆಯನ್ನು ನಡೆಸಿದ್ದಾನೆ. ಅವೈದಿಕ ದರ್ಶನಗಳ ಮತ್ತು ನಿರೀಶ್ವರ ವಾದಗಳ ಖಂಡನೆಯಲ್ಲಿ ಈತ ಎತ್ತಿದ ಕೈ. ಈತನ ನಿರೂಪಣೆಯಲ್ಲಿ ಪ್ರಾಚೀನ ನ್ಯಾಯ ಪೂರ್ಣರೂಪವನ್ನು ಹೊಂದುತ್ತದೆ. ನವೀನ ನ್ಯಾಯದ ಮೂಲಪುರುಷ ಗಂಗೇಶೋಪಾಧ್ಯಾಯ ಉದಯನನಿಗೆ ಅತ್ಯಂತ ಋಣಿ. ತಾರ್ಕಿಕ ಸಂಪ್ರದಾಯದಲ್ಲಿ ಮಹತ್ವವನ್ನು ಗಳಿಸಿದ ದಾರ್ಶನಿಕ.

ಉಲ್ಲೇಖಗಳು[ಬದಲಾಯಿಸಿ]