ಉಡುಪಿಯ ಅ‌ಷ್ಟಮಠಗಳು

ವಿಕಿಪೀಡಿಯ ಇಂದ
Jump to navigation Jump to search

ದ್ವೈತ ಮತದ ಪ್ರತಿಷ್ಠಾಪನಾಚಾರ್ಯರಾದ ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ಒಂದೊಂದು ಮಠಕ್ಕೆ ಒಬ್ಬೊಬ್ಬ ಸನ್ಯಾಸಿ ಶಿಷ್ಯರನ್ನು ಪೀಠಾಧೀಶರನ್ನಾಗಿಸಿ, ತಾವು ಸ್ಥಾಪಿಸಿದ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ಪೂಜೆಗೆ ನೇಮಿಸಿದರು. ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಬೇಕೆಂದು ಕಲ್ಪಿಸಿಕೊಟ್ಟರು.

ಅಷ್ಟಮಠಗಳು[ಬದಲಾಯಿಸಿ]

ಪರ್ಯಾಯ ವ್ಯವಸ್ಥೆಯ ಅನುಕ್ರಮದಲ್ಲಿ ಈ ಮಠಗಳ ಹೆಸರು ಹೀಗಿವೆ: ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ.

ಮೊದಲ ಪೀಠಾಧೀಶರು[ಬದಲಾಯಿಸಿ]

ಶ್ರೀಮಧ್ವಾಚಾರ್ಯರು ತಮ್ಮ ಈ ಶಿಷ್ಯರನ್ನು ಮಠಗಳಿಗೆ ಪೀಠಾಧೀಶರನ್ನಾಗಿ ನೇಮಿಸಿದರು. ಅವರವರಿಗೆ ಉಪಾಸನೆಗಾಗಿ ದೇವರ ಮೂರ್ತಿಗಳನ್ನೂ ನೀಡಿದರು. ಈ ಮೂರ್ತಿಗಳನ್ನು ಇಂದಿಗೂ ಪೀಠಾಧೀಶರು ತಮ್ಮ ಉಪಾಸನೆಯಲ್ಲಿ ಪೂಜಿಸುತ್ತಾರೆ. ಇವುಗಳಲ್ಲಿ ಕ್ರಮವಾಗಿ ಎರಡೆರಡು ಮಠಗಳ ಗುಂಪನ್ನು ದ್ವಂದ್ವಮಠಗಳೆಂದು ಕರೆಯುತ್ತಾರೆ.

ಕ್ರ. ಸಂ. ಮಠದ ಈಗಿನ ಹೆಸರು ಮೂಲಯತಿಗಳು ಸಂಸ್ಥಾನ ಮೂರ್ತಿಗಳು ಈಗಿನ ಯತಿಗಳು ಉತ್ತರಾಧಿಕಾರಿ
ಫಲಿಮಾರು ಶ್ರೀ ಹೃಷೀಕೇಶ ತೀರ್ಥರು ಸೀತಾಲಕ್ಷ್ಮಣ ಸಹಿತ ಶ್ರೀ ರಾಮಚಂದ್ರ ದೇವರು ಶ್ರೀ ವಿದ್ಯಾಧೀಶ ತೀರ್ಥರು
ಅದಮಾರು ಶ್ರೀ ನರಸಿಂಹ ತೀರ್ಥರು ಕಾಲಿಯಮರ್ದನ ಚತುರ್ಭುಜ ಶ್ರೀಕೃಷ್ಣ ದೇವರು ಶ್ರೀ ವಿಶ್ವಪ್ರಿಯ ತೀರ್ಥರು ಶ್ರೀ ಈಶಪ್ರಿಯ ತೀರ್ಥರು
ಕೃಷ್ಣಾಪುರ ಶ್ರೀ ಜನಾರ್ದನ ತೀರ್ಥರು ಕಾಲಿಯಮರ್ದನ ದ್ವಿರ್ಭುಜ ಶ್ರೀಕೃಷ್ಣ ದೇವರು ಶ್ರೀ ವಿದ್ಯಾಸಾಗರ ತೀರ್ಥರು
ಪುತ್ತಿಗೆ ಶ್ರೀ ಉಪೇಂದ್ರ ತೀರ್ಥರು ಶ್ರೀ ವಿಟ್ಠಲ ದೇವರು ಶ್ರೀ ಸುಗುಣೇಂದ್ರ ತೀರ್ಥರು ಶ್ರೀ ಸುಶ್ರೀಂದ್ರ ತೀರ್ಥರು
ಶಿರೂರು ಶ್ರೀ ವಾಮನ ತೀರ್ಥರು ಶ್ರೀ ವಿಟ್ಠಲ ದೇವರು ಶ್ರೀ ಲಕ್ಷ್ಮೀವರ ತೀರ್ಥರು
ಸೋದೆ ಶ್ರೀ ವಿಷ್ಣು ತೀರ್ಥರು ಶ್ರೀ ವರಾಹ ದೇವರು ಶ್ರೀ ವಿಶ್ವವಲ್ಲಭ ತೀರ್ಥರು
ಕಾಣಿಯೂರು ಶ್ರೀ ರಾಮ ತೀರ್ಥರು ಶ್ರೀ ನರಸಿಂಹ ದೇವರು ಶ್ರೀ ವಿದ್ಯಾವಲ್ಲಭ ತೀರ್ಥರು
ಪೇಜಾವರ ಶ್ರೀ ಅಧೋಕ್ಷಜ ತೀರ್ಥರು ಶ್ರೀ ವಿಟ್ಠಲ ದೇವರು ಶ್ರೀ ವಿಶ್ವೇಶ ತೀರ್ಥರು ಶ್ರೀ ವಿಶ್ವಪ್ರಸನ್ನ ತೀರ್ಥರು

ಈ ಲೇಖನಗಳನ್ನೂ ನೋಡಿ[ಬದಲಾಯಿಸಿ]

ಆಧಾರಗಳು[ಬದಲಾಯಿಸಿ]

  • ಶ್ರೀ ಹೃಷೀಕೇಶ ತೀರ್ಥರು ಬರೆದ ಸಂಪ್ರದಾಯಪದ್ಧತಿ ಎಂಬ ಸಂಸ್ಕೃತ ಕೃತಿ