ಈಶ್ವರ ಕಮ್ಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಶ್ವರ ಕಮ್ಮಾರ ಇವರು ಧಾರವಾಡದ ಮಕ್ಕಳ ಸಾಹಿತಿ.ಇವರು ೧೯೩೩ ಜನೆವರಿ ೪ರಂದು ಬೆಳಗಾವಿ ಜಿಲ್ಲೆಯ ಹಿರೇನಂದಿಹಳ್ಳಿ ಗ್ರಾಮದಲ್ಲಿ ಜನಿಸಿದರು. ಎಮ್.ಏ. ಹಾಗು ಹಿಂದಿ ಭಾಷೆಯಲ್ಲಿ ವಿಶಾರದ ಪದವಿ ಪಡೆದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಕಾವ್ಯ[ಬದಲಾಯಿಸಿ]

  • ಪಾಪಾ
  • ಮಕ್ಕಳ ಲೋಕ
  • ಎಡತಾಕಪಟ್ಟಿ

ನಾಟಕ[ಬದಲಾಯಿಸಿ]

  • ಭಾಗೀರಥಿ
  • ಚೂಡಾರತ್ನ
  • ಶಾಲಾರಂಗ
  • ದಾರಿದೀಪ
  • ಮಂಗಳಗೌರಿ
  • ತಿಮ್ಮ ಮಾಡಿದ ತಪಸ್ಸು

ಸಂಪಾದನೆ[ಬದಲಾಯಿಸಿ]

  • ಮಕ್ಕಳ ಸಾಹಿತ್ಯ ಚಿಂತನೆ
  • ಮಕ್ಕಳ ಕವನ ಸಾಹಿತ್ಯ ನಡೆದು ಬಂದ ದಾರಿ
  • ಮಕ್ಕಳ ಆಟ (ನಾಟಕಗಳು)
  • ಮನೆಯ ದೀಪ (ಕತೆಗಳು)
  • ಹೂವಿನ ತೋಟ (ಕವನಗಳು)
  • ಮಕ್ಕಳ ಸಾಹಿತ್ಯ

ಪ್ರಶಸ್ತಿ[ಬದಲಾಯಿಸಿ]

ಮಕ್ಕಳ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ರಚಿಸಿರುವ ಕಮ್ಮಾರರಿಗೆ ೧೯೬೫ರಲ್ಲಿ ಮಕ್ಕಳ ಲೋಕ ಕವನ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಎಡತಾಕಪಟ್ಟಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ ಹಾಗು ತಿಮ್ಮ ಮಾಡಿದ ತಪಸ್ಸು ಕೃತಿಗೆ ಬೆಳಗಾವಿಯ ರುದ್ರಾಕ್ಷಿಮಠವು ಮಕ್ಕಳ ಸಾಹಿತ್ಯ ಕೃತಿಗೆ ಕೊಡಮಾಡುವ ಹರ್ಡೇಕರ ಮಂಜಪ್ಪ ಪ್ರಶಸ್ತಿ ಲಭಿಸಿವೆ.