ಇರೋಮ್ ಚಾನು ಶರ್ಮಿಳಾ

ವಿಕಿಪೀಡಿಯ ಇಂದ
(ಇರೋಮ್ ಶರ್ಮಿಳಾ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೆಂಪ್ಲೇಟು:Use Indian English

ಇರೊಮ್ ಚಾನು ಶರ್ಮಿಳಾ
ಜನನ (1972-03-14) ೧೪ ಮಾರ್ಚ್ ೧೯೭೨(ವಯಸ್ಸು ೪೪)
Kongpal, Imphal, Manipur, India
ರಾಷ್ಟ್ರೀಯತೆ ಭಾರತೀಯn
ಜನಾಂಗ Meitei
ವೃತ್ತಿ Civil rights activist, political activist, poet
ಇದಕ್ಕೆ ಪ್ರಸಿದ್ಧ ಸೇವಾ ವಿಶೇಷ ಅಧಿಕಾರ ಕಾಯಿದೆಯನ್ನು ರದ್ದುಗೊಳಿಸಲು ೧೬ ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದಳು.Armed Forces (Special Powers) Act
ಹೆತ್ತವರು Irom c Nanda (father)
Irom Ongbi Sakhi (mother)


'ಇರೋಮ್ ಶರ್ಮಿಳಾ,[೧] ೨೦೦೦ ನೆಯ ಇಸವಿಯಲ್ಲಿ ತನ್ನ ೨೮ ನೆಯ ವಯಸ್ಸಿನಲ್ಲಿ ಹೋರಾಟ ಆರಂಭಿಸಿ, ಮಣಿಪುರಕ್ಕೆ ಸಂಬಂಧಿಸಿದ ಸಶಸ್ತ್ರ ದಳದ ವಿಶೇಷಾಧಿಕಾರ ಕಾನೂನನ್ನು ತೆಗೆದುಹಾಕಬೇಕು ಎಂದು ಸರಕಾರದ ವಿರುದ್ಧ ಆಜೀವಪರ್ಯಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು. ಅನೇಕ ಮುಗ್ದಜೀವಿಗಳ ಜೀವಹಾನಿಯಾಗುತ್ತದೆ ಎಂಬುದು 'ಮಣಿಪುರದ ಐರನ್ ಲೇಡಿ', ಎಂದು ಹೆಸರುಪಡೆದ ಶರ್ಮಿಳಾರವರ ವಾದವಾಗಿತ್ತು. ಸರಕಾರ ಅವರನ್ನು ಶಿಕ್ಷೆಗೆ ಒಳಪಡಿಸಿತು. [೨]

ಸರಕಾರದ ನೀತಿಗಳನ್ನು ವಿರೋಧಿಸಿ ಸತ್ಯಾಗ್ರಹ[ಬದಲಾಯಿಸಿ]

ಮಹಾತ್ಮ ಗಾಂಧಿಯವರಂತೆ ಉಪವಾಸ ಸತ್ಯಾಗ್ರಹಮಾಡುವ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳಲು ಹೋರಾಟ ಶುರುಮಾಡಿದರು.[೩] ಸರಕಾರದ ಕೆಲವು ನೀತಿಗಳ ವಿರುದ್ಧದ ಮಣಿಪುರದ ಆಸ್ಪತ್ರೆಯ ಚಿಕ್ಕ ೧೫ ಅಡಿ ಅಗಲ ೧೦ ಅಡಿ ಉದ್ದದ ಕೋಣೆಯಲ್ಲೇ ನ್ಯಾಯಾಂಗ ಬಂಧನದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರೋಮ್ ಶರ್ಮಿಳಾ, ೧೩ ವರ್ಷಗಳ ಕಾಲ ತಮ್ಮ ಹೋರಾಟವನ್ನು ನಡೆಸಿಕೊಂಡು ಬಂದರು.[೪] ಸ್ವತಂತ್ರ್ಯ ಭಾರತದಲ್ಲಿ ಆಂದೋಳನಮಾಡಿದ ಹಲವಾರು ಮಂದಿ ಸಮಾಜಸೇವಕರು ಕಾರಾಗೃಹವಾಸವನ್ನು ಅನುಭವಿಸಿದರು. ಆದರೆ, ಇರೋಮ್ ಸರಕಾರದ ಕೆಲವು ನೀತಿಗಳಿಗೆ ವಿರೋಧ ಒಡ್ಡಿ, ಹಲವು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದರು. ಆಮರಣ ಉಪವಾಸದ ಸತ್ಯಾಗ್ರಹದ ದಾರಿ ಹಿಡಿದರು. ಆದರೆ ಅವರ ಸತ್ಯಾಗ್ರಹಕ್ಕೆ ಆತ್ಮಹತ್ಯೆಯ ಪ್ರಯತ್ನದ ಆರೋಪ ಹೊರಿಸಿ , ಸರಕಾರ ತಮ್ಮ ವಶಕ್ಕೆ ತೆಗೆದುಕೊಂಡು, ಉಪವಾಸ ನಿಲ್ಲಿಸುವ ತನಕ, ಆಕೆಯ ಮೂಗಿಗೆ ಕೊಳವೆ ಹಾಕಿ ಅದರ ಮೂಲಕ ಆಹಾರ ಹಾಕುವ ವ್ಯವಸ್ಥೆ ಮಾಡಲಾಯಿತು. ವರ್ಷಗಳು ಉರುಳಿದಂತೆ ಆಕೆಯ ಶಿಕ್ಷೆಯ ಅವಧಿಯೂ ಹೆಚ್ಚಾಯಿತು. ಭಾರತದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗೆ ಓಟುಮಾಡುವ ಅಧಿಕಾರವಿಲ್ಲ. ಹಾಗಾಗಿ, ಇರೋಮ್ ಶರ್ಮಿಳಾ, ೧೩ ವರ್ಷಗಳಿಂದ ಮತದಾನಮಾಡಿಲ್ಲ.[೫]

ಶರ್ಮಿಳಾ ಈಗ ಬದಲಾಗಿದ್ದಾರೆ[ಬದಲಾಯಿಸಿ]

೪೧ ವರ್ಷ ಪ್ರಾಯದ ಶರ್ಮಿಳಾ, ಈಗ ಮದುವೆಯಾಗಿ ನೆಮ್ಮದಿಯ ಬಾಳನ್ನು ನಡೆಸುವ ಮನಸ್ಸನ್ನು ಹೊಂದಿದ್ದಾರೆ. ಇರೋಮ್ ಶರ್ಮಿಳಾರ ಸತ್ಯಾಗ್ರಹಕ್ಕೆ ನೆರವು ನೀಡುತ್ತಿರುವ 'ಡೆಸ್ಮಂಡ್' ಎಂಬ ಯುವಕನನ್ನು ಅವರು ಪ್ರೀತಿಸುತ್ತಿದ್ದಾರೆ. ಅವನ ಜೊತೆ ಮದುವೆಯಾಗುವ ಆಶೆಯಿದೆ. ಇರೋಮ್ ಚಾನು ಶರ್ಮಿಳಾ, ತಮ್ಮ ೧೬ ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಮುಗಿಸುತ್ತಿದ್ದಾರೆ.[೬]

ಉಲ್ಲೇಖಗಳು[ಬದಲಾಯಿಸಿ]

  1. http://www.thehindu.com/news/national/other-states/irom-sharmila-nsa-detainees-denied-voting-rights-in-manipur/article5921218.ece
  2. http://zeenews.india.com/news/nation/irom-sharmila-rejects-congress-for-aap-continues-fast_918043.html
  3. http://www.tehelka.com/nhrc-team-meets-irom-sharmila-for-the-first-time-in-13-years/
  4. http://www.rediff.com/news/slide-show/slide-show-1-fasting-is-what-irom-sharmila-is-meant-to-do-in-life/20131105.htm
  5. http://www.businessinsider.in/Irom-Chanu-Sharmila-The-Iron-Lady-Of-Manipur-13-Years-On-Her-Activism-Continues-To-Be-A-Legend/articleshow/26403563.cms
  6. bbc.com,09-08-2016, Irom Sharmila: End of world's longest hunger strike