ಇರುವಂತಿಗೆ

ವಿಕಿಪೀಡಿಯ ಇಂದ
Jump to navigation Jump to search
ಇರುವಂತಿಗೆ ಹೂವಿನ ಸಸ್ಯದ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ಹಿರಿಯ ಕನ್ನಡ ಪತ್ರಕರ್ತರು ಆದ ಹೆಚ್.ಆರ್.ನಾಗೇಶರಾವ್ ಅವರು ೧೯೫೦-೧೯೬೦ರ ದಶಕಗಳಲ್ಲಿ ತಾಯಿನಾಡು ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದಾಗ ಪುಸ್ತಕ ಪ್ರಿಯ ಹೆಸರಿನಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ತಾಯಿನಾಡು ಪತ್ರಿಕೆಯ ದಿನಾಂಕ ೧೭-೦೧-೧೯೫೪ರ ಸಂಚಿಕೆಗೆ ಕೆ.ಎಸ್.ನರಸಿಂಹಸ್ವಾಮಿ ಅವರ ಇರುವಂತಿಗೆ ಕವನ ಸಂಗ್ರಹದ ಬಗ್ಗೆ ಬರೆದ ಲೇಖನವಿದು.

ಇರುವಂತಿಗೆ[ಬದಲಾಯಿಸಿ]

(ಲೇಖಕರು: ಶ್ರೀ ಕೆ.ಎಸ್.ನರಸಿಂಹಸ್ವಾಮಿ, ಪ್ರಕಾಶಕರು: ಶ್ರೀ ಡಿ.ವಿ.ಕೆ.ಮೂರ್ತಿ, ಕೃಷ್ಣಮೂರ್ತಿ ಪುರಂ, ಮೈಸೂರು. ಬೆಲೆ ರೂ.೧-೪-೦) 'ಮೈಸೂರು ಮಲ್ಲಿಗೆ' ಖ್ಯಾತಿಯ ಕವಿ ಶ್ರೀ ನರಸಿಂಹಸ್ವಾಮಿಯವರ ಐದನೆಯ ಕವನ ಸಂಗ್ರಹ - 'ಇರುವಂತಿಗೆ'. ಇದರಲ್ಲಿ ಪ್ರೇಮ ಕವನಗಳಿವೆ, ಶೃಂಗಾರ ವರ್ಣನೆಗಳಿವೆ. ರಾಜಕೀಯ ಕವನಗಳಿವೆ. ಮಹಾದರ್ಶಗಳ ವಿವರಣೆಗಳಿವೆ. ಸಾಹಿತಿಗಳ ಪರಿಚಯವಿದೆ; ಸಾಹಿತ್ಯ ಕೃತಿಗಳ ವಿಮರ್ಶೆಯಿದೆ. ಜೀವನದ ಸಮೀಕ್ಷೆ ಇದೆ. ಘೋರ ಬಾಳಿನ ಚಿತ್ರಣವಿದೆ. ಪ್ರಕೃತಿ ಸೌಂದರ್ಯದ ಮತ್ತು ರುದ್ರ ಗಂಭೀರತೆಯ ಎರಡರ ದೃಶ್ಯವೂ ಇದೆ. ಪುರಾಣವ್ಯಕ್ತಿಗಳಿಗೆ ಆಗಿರುವ ಅನ್ಯಾಯ ಅಗೌರವಗಳ ಕಟು ಖಂಡನೆಯೂ ಇದೆ. ಮನೋಜ್ಞವೂ, ರಸಿಕ ರಂಜಕವೂ ವಿಚಾರಪೂರಿತವೂ ಆದ ಕವನಗಳ ಗುಚ್ಛ ಇದು. ಶ್ರೀ ನರಸಿಂಹಸ್ವಾಮಿಯವರ ಮುಂದಿನ ಸಂಗ್ರಹಕ್ಕಾಗಿ ಕಾತರಿಸುವಂತೆ ಮಾಡುತ್ತದೆ, ಈ ಪುಸ್ತಕ.