ಇರಾನಿನ ಆರ್ಥಿಕ ಚಟುವಟಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃಷಿ : ಇರಾನಿನ ಉತ್ಪಾದನೆಯ ಹೆಚ್ಚಿನ ಅಂಶ ಕೃಷಿ ವಸ್ತುಗಳೇ. ಇಲ್ಲಿನ ಮುಖ್ಯ ಬೆಳೆಯೆಂದರೆ ಗೋದಿ, ಬಾರ್ಲಿ, ಭತ್ತ, ಟೀ, ಅಂಜೂರ, ಹತ್ತಿ, ಹೊಗೆಸೊಪ್ಪು ಮತ್ತು ಅಫೀಮು. ಉತ್ತರ ಇರಾನಿನಲ್ಲಿ ಅಧಿಕ ಮಳೆ ಇದ್ದು ವಿಶೇಷ ಫಸಲನ್ನು ತೆಗೆಯಲಾಗುತ್ತದೆ. ಆದರೆ ದಕ್ಷಿಣದಲ್ಲಿ ಪದೇ ಪದೇ ಕೊರತೆಯಿರುತ್ತದೆ. ಇರಾನಿನಲ್ಲಿ ಅಫೀಮಿನ ಉತ್ಪಾದನೆ ಪ್ರಪಂಚದಲ್ಲಿ ಔಷಧ ತಯಾರಿಕೆಗೆ ಅಗತ್ಯವಾದ ಪ್ರಮಾಣದ 3ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ಅಫೀಮನ್ನು ಸೇವಿಸುವ ಪರಿಪಾಠವನ್ನು ಇರಾನಿನ ಜನ ಬೆಳೆಸಿಕೊಂಡಿದ್ದಾರೆ. ಇಲ್ಲಿನ ಬೇಸಾಯಕ್ರಮ ತೀರ ಹಿಂದುಳಿದಿದೆ. ತಲಾ ಉತ್ಪಾದನೆ ಹಾಗೂ ಎಕರೆಯೊಂದರ ಉತ್ಪಾದನೆ ತೀರ ಹಿಂದಿದ್ದು, ಕೃಷಿ ರಂಗದಲ್ಲಿ ಅದ್ಭುತ ಪ್ರಗತಿಯೇನೂ ಸಾಧಿತವಾಗಿಲ್ಲ. ಇತ್ತೀಚೆಗೆ ಅಮೆರಿಕದ ಸಹಾಯದಿಂದ ಕೃಷಿರಂಗದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಆದರೂ ಪಟ್ಟಣದ ಸಮೀಪದ ಹಳ್ಳಿಗಳನ್ನು ಬಿಟ್ಟರೆ ಉಳಿದ ಕಡೆ ಕೃಷಿಪದ್ಧತಿ ಪುರಾತನಕ್ರಮದಲ್ಲೇ ನಡೆಯುತ್ತಿದೆ.

ಕೈಗಾರಿಕೆ[ಬದಲಾಯಿಸಿ]

ಕೈಗಾರಿಕೆಯ ಕ್ಷೇತ್ರದಲ್ಲೂ ಇರಾನ್ ಹಿಂದುಳಿದಿದೆ. ಇತ್ತೀಚೆಗೆ ಸ್ಥಾಪಿತವಾಗಿರುವ ಉದ್ಯಮಗಳೆಂದರೆ ಸಕ್ಕರೆ, ಜವಳಿವಸ್ತು, ಚರ್ಮ, ಸಿಮೆಂಟ್ ಮತ್ತು ಗಾಜಿನ ಕಾರ್ಖಾನೆಗಳು. ಇವು ಯಾವುವೂ ಇರಾನಿಗೆ ಅಗತ್ಯವಿರುವಷ್ಟು ವಸ್ತುಗಳನ್ನು ಉತ್ಪಾದಿಸುತ್ತಿಲ್ಲ. ಆದರೆ ಕುಶಲ ಕೈಗಾರಿಕೆಗಳು ರಾಷ್ಟ್ರದ ಆದ್ಯಂತ ಹರಡಿವೆ. ಕಂಬಳಿ ತಯಾರಿಕೆ, ಕಸೂತಿ, ನೇಯ್ಗೆ, ಇವು ಮುಖ್ಯವಾದವು. ಇರಾನಿನ ಕೈಕೆಲಸ, ಕಸೂತಿ ಕೆಲಸ ಬಹಳ ಪ್ರಸಿದ್ಧವಾಗಿವೆ.

ವಾಣಿಜ್ಯ[ಬದಲಾಯಿಸಿ]

ಇರಾನ್ ತಾನು ಉತ್ಪಾದಿಸುವ ಹೆಚ್ಚಿನ ವಸ್ತುಗಳನ್ನು ತನ್ನ ಅನುಭೋಗಕ್ಕೆ ಉಪಯೋಗಿಸಿಕೊಳ್ಳುತ್ತದೆ. ಈ ದೇಶದ ಮುಖ್ಯ ನಿರ್ಯಾತ ವಸ್ತುಗಳೆಂದರೆ ತೈಲ, ಅಫೀಮು, ಕಚ್ಚಾ ಎಣ್ಣೆ, ಚರ್ಮ, ಒಣಗಿಸಿದ ಹಣ್ಣುಗಳು, ಕಚ್ಚಾ ರೇಷ್ಮೆ ಮತ್ತು ಗೋಂದು. ಇರಾನ್ ಆಯಾತ ಮಾಡಿಕೊಳ್ಳುವ ಮುಖ್ಯ ವಸ್ತುಗಳೆಂದರೆ ಸಕ್ಕರೆ, ಟೀ, ಕಬ್ಬಿಣ ಮತ್ತು ಉಕ್ಕು, ಕಾರುಗಳು, ಯಂತ್ರ ಕಾಗದ, ವಿದ್ಯುತ್ ಸಲಕರಣೆಗಳು. ಎರಡನೆಯ ಮುಹಾಯುದ್ಧಾನಂತರ ಇರಾನಿನ ವಿದೇಶೀ ವ್ಯಾಪಾರಕ್ಕೆ ಧಕ್ಕೆಯುಂಟಾಯಿತು. ರಾಷ್ಟ್ರವನ್ನು ಆವರಿಸಿದ ಹಣದ ಉಬ್ಬರದಿಂದ ವಾಣಿಜ್ಯದ ಮೇಲೆ ತೀವ್ರ ಪರಿಣಾಮ ಉಂಟಾಯಿತು.[೧]

ಬ್ಯಾಂಕ್ ವ್ಯವಸ್ಥೆ[ಬದಲಾಯಿಸಿ]

೧೮೮೯ ರಲ್ಲಿ ಸ್ಥಾಪಿತವಾದ ಇಂಪೀರಿಯಲ್ ಬ್ಯಾಂಕ್ ಆಫ್ ಇರಾನ್ ಎಂಬ ಬ್ರಿಟಿಷ್ ಬ್ಯಾಂಕು ಅನೇಕ ದಶಕಗಳ ವರೆಗೆ ಬ್ಯಾಂಕ್ ಚಟುವಟಿಕೆಗಳನ್ನು ನಡೆಸುತ್ತ ಬಂತು. ಆದರೆ ೧೯೨೭ ರಲ್ಲಿ ಇರಾನ್ ಸರ್ಕಾರದ ನ್ಯಾಷನಲ್ ಬ್ಯಾಂಕಿನ (ಬ್ಯಾಂಕ್-ಇ-ಮಿಲ್ಲಿ) ಅಸ್ತಿತ್ವದ ಅನಂತರ ಇಂಪೀರಿಯಲ್ ಬ್ಯಾಂಕಿನ ವ್ಯವಹಾರ ಸಂಪೂರ್ಣವಾಗಿ ಮಾಯವಾಯಿತು. ಈಗ ನ್ಯಾಷನಲ್ ಬ್ಯಾಂಕು ತೀರ ಪ್ರಭಾವಶಾಲಿಯಾಗಿದೆ. ಅದು ಕೇಂದ್ರಿಯ ಬ್ಯಾಂಕ್ ಮಾತ್ರವೇ ಅಲ್ಲದೆ ಸರ್ಕಾರದ ಬ್ಯಾಂಕ್ ಸಹ ಆಗಿದೆ. ಸರ್ಕಾರದ ಪರವಾಗಿ ನೋಟು ಚಲಾವಣೆ ಮಾಡುವುದು ಈ ಬ್ಯಾಂಕಿನ ಅತಿ ಮುಖ್ಯ ಕಾರ್ಯಗಳಲ್ಲೊಂದು. ಇದಲ್ಲದೆ. ಸರ್ಕಾರದಿಂದ ಸ್ಥಾಪಿತವಾದ ಕೃಷಿ ಬ್ಯಾಂಕ್, ಕೈಗಾರಿಕಾ ಬ್ಯಾಂಕ್ ಮತ್ತು ಅಡಮಾನ ಬ್ಯಾಂಕ್‍ಗಳಿಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯೋನ್ಮುಖವಾಗಿವೆ. ಈ ನಾಲ್ಕು ಬ್ಯಾಂಕುಗಳು ಇರಾನಿನ ಆರ್ಥಿಕ ಪ್ರಗತಿಗಾಗಿ ಶ್ರಮಿಸುತ್ತಿವೆ.[೨]

ಸಾರಿಗೆ[ಬದಲಾಯಿಸಿ]

ಕೇವಲ ೧೯೩೦ ರಿಂದೀಚೆಗೆ ರೈಲ್ವೆ ಮತ್ತು ಆಧುನಿಕ ಸಾರಿಗೆ ವ್ಯವಸ್ಥೆ ಪ್ರಧಾನವಾಗುತ್ತಿದೆ. ಆದರೂ ಹಳ್ಳಿಗಳಲ್ಲಿ ಒಂಟೆ ಕುದುರೆ, ಹೇಸರಗತ್ತೆ ಮತ್ತು ಕತ್ತೆಗಳು ಇನ್ನೂ ಹೆಚ್ಚು ಹೆಚ್ಚು ಬಳಕೆಯಲ್ಲಿವೆ. ಯುದ್ಧಕಾಲದಲ್ಲಿ ಸಾರಿಗೆ ಅನುಕೂಲಕ್ಕಾಗಿ ಪರ್ಷಿಯ ಕೊಲ್ಲಿಯಿಂದ ಕಾಜ್‍ವಿನ್‍ವರೆಗೆ ಒಂದು ಅಂತರ್ದೇಶಿಯ ಹೆದ್ದಾರಿಯ ನಿರ್ಮಾಣವಾಯಿತು. ೧೯೩೭ ರ ಆಗಸ್ಟ್ ೨೮ ರಂದು ಪರ್ಷಿಯನ್ ಕೊಲ್ಲಿಯಿಂದ ಕ್ಯಾಸ್ಟಿಯನ್ ಸಮುದ್ರದ ವರೆಗೆ, ೮೭೫ ಮೈಲಿಗಳ ರೈಲ್ವೆ ಸಂಚಾರ ಪ್ರಾರಂಭವಾಯಿತು. ೧೯೪೬ ರಲ್ಲಿ ವಿಮಾನ ವ್ಯವಸ್ಥೆ ಆರಂಭವಾಯಿತು.

ಪೆಟ್ರೋಲಿಯಂ[ಬದಲಾಯಿಸಿ]

ಪೆಟ್ರೋಲಿಯಂ ಸಂಪತ್ತು ಇರಾನಿನ ವರಪ್ರಸಾದವೆಂದು ಹೇಳಬಹುದು. ಪ್ರತಿಯೊಂದು ತೈಲಕ್ಷೇತ್ರವನ್ನೂ ಒಂದೊಂದು ಘಟಕವಾಗಿ ವ್ಯವಸ್ಥೆಗೊಳಿಸಲಾಗಿದ್ದು, ವೈಜ್ಞಾನಿಕವಾಗಿ ತೈ¯ ತೆಗೆಯಲಾಗುತ್ತಿದೆ. ಇದನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ವಹಿಸಲಾಗುತ್ತಿದೆ. ೧೯೩೦ ರಲ್ಲಿ ಪರಿಷ್ಕøತ ತೈಲದ ಉತ್ಪಾದನೆ ಸುಮಾರು ೫೦,೦೦,೦೦೦ ಮೆಟ್ರಿಕ್ ಟನ್ನುಗಳಷ್ಟಿತ್ತು. ೧೯೩೮ ರಲ್ಲಿ ಅದು ಸುಮಾರು ೧,೦೫,೦೦,೦೦೦ ಮೆಟ್ರಿಕ್ ಟನ್ನುಗಳಿಗೇರಿತು. ೧೯೫೦ ರಲ್ಲಿ ೩,೨೦,೦೦,೦೦೦ ಮೆಟ್ರಿಕ್ ಟನ್‍ಗಳಿಗೇರಿತು. ಹಾಫ್ ಕೇಲ್ ನಫ್-ಇ-ಸಫಿದ್, ಆಗಾಜಾರಿ ಮತ್ತು ಗಾಜ್ ಸರಾನ್‍ನಲ್ಲಿ ಅದ್ಭುತ ಪ್ರಮಾಣದ ತೈಲದ ನಿಕ್ಷೇಪಗಳು ಸಿಕ್ಕಿವೆ. ತೈಲದ ಉತ್ಪಾದನೆ ವೃದ್ಧಿಯಾಗುತ್ತಿವೆ. ಆಗ್ನೇಯ ಮಕ್ರಾನ್ ಮತ್ತು ಮಧ್ಯ ಇರಾನಿನಲ್ಲಿ ತೈಲ ನಿಕ್ಷೇಪಗಳಿವೆ ಎಂದೂ ನಿರೀಕ್ಷಿಸಲಾಗಿದೆ. ವಿದೇಶಿ ಕಂಪನಿಗಳು ಪ್ರಾರಂಭದಿಂದಲೂ ತೈಲ ಉತ್ಪಾದಿಸುವುದರಲ್ಲಿ ತೊಡಗಿವೆ. ೧೯೪೯ ರಿಂದೀಚೆಗೆ ತೈಲ ಉದ್ಯಮವನ್ನು ರಾಷ್ಟ್ರೀಕರಿಸಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಲಾಯಿತು. ಆದರೆ ಆಗಿನ ಪ್ರಧಾನಿ ಅಲಿ ರಾಜ್ಮಾರ ಇದನ್ನು ವಿರೋಧಿಸಿದ. ೧೯೫೧ ರಲ್ಲಿ ಅವನ ಕೊಲೆಯಾಯಿತು. ಮುಂದಿನ ಪ್ರಧಾನಿ ಮಸಾದಿಕ್ ತೈಲ ಉದ್ಯಮವನ್ನು ರಾಷ್ಟೀಕರಿಸಿದ. ಇದರಿಂದಾಗಿ ಬ್ರಿಟಿಷ್ ತೈಲ ಉದ್ಯಮಿಗಳು ಇರಾನಿನಿಂದ ನಿರ್ಗಮಿಸಬೇಕಾಗಿ ಬಂದು ತೈಲೋತ್ಪಾದನೆ ಸ್ಥಗಿತಗೊಂಡಿತು. ೧೯೫೩ ರಲ್ಲಿ ಸರ್ಕಾರ ಬದಲಾಗಿ ಹೊಸ ಪ್ರಧಾನಿ ಬಂದ. ೧೯೫೩ ರಲ್ಲಿ ಮತ್ತೆ ವಿದೇಶಿ ಉದ್ಯಮಿಗಳಿಗೆ ಸ್ವಾಗತ ದೊರಕಿತು. ೧೯೫೪ ರಲ್ಲಿ ಅಂತರರಾಷ್ಟ್ರೀಯ ತೈಲ ಸಂಸ್ಥಾಕೂಟಗಳು ತೈಲೋತ್ಪಾದನೆ ಮಾಡುವಂತೆ ಒಡಂಬಡಿಕೆಯಾಯಿತು. ಈ ಪ್ರದೇಶದ ಇತರ ರಾಷ್ಟ್ರಗಳಲ್ಲಿ ಕೊಡುವ ಲಾಭಾಂಶದ ದರವನ್ನೇ ಇರಾನಿಗೂ ಕೊಡುವ ಏರ್ಪಾಡಾಯಿತು.

ಕಾರ್ಮಿಕ ಚಳವಳಿ[ಬದಲಾಯಿಸಿ]

೧೯೪೬ ರವರೆಗೆ ಇರಾನಿನಲ್ಲಿ ಕಾರ್ಮಿಕ ಸಂಘಗಳಿರಲಿಲ್ಲ. ಅದಕ್ಕೆ, ಮೊದಲು ವೃತ್ತಿಸಂಘಗಳು ಅಸ್ತಿತ್ವದಲ್ಲಿದ್ದವು. ತೈಲಕೇಂದ್ರಗಳು. ರೈಲ್ವೆನಿರ್ಮಾಣ. ಹೊಸ ಕಾರ್ಖಾನಗೆಗಳ ಪ್ರಾರಂಭ - ಇವು ಕಾರ್ಮಿಕ ಚಟುವಟಿಕೆಗಳನ್ನು ವೃದ್ಧಿಗೊಳಿಸಿದವು. ೧೯೪೨ ರಲ್ಲಿ ಕಾರ್ಮಿಕ ಸಂಘಗಳನ್ನು ಪ್ರಾರಂಭಿಸಲಾಯಿತು. ಸೋವಿಯತ್ ಒಕ್ಕೂಟಕ್ಕೆ ಹೋಗಿ ಬಂದವರು ಇವುಗಳ ಸ್ಥಾಪನೆಗೆ ಕಾರಣರು. ಕೇಂದ್ರ ಕಾರ್ಮಿಕ ಸಮಿತಿಯಲ್ಲಿ ಹೆಚ್ಚಾಗಿ ರಾಜಕೀಯ ಪಟುಗಳೇ ತುಂಬಿದ್ದು ಅವರು ಸೋವಿಯತ್ ಒಕ್ಕೂಟದ ರಕ್ಷಣೆಯಿಂದ ಒಂದು ರಾಜಕೀಯ ಪಕ್ಷವನ್ನು ಸಹ ಕಟ್ಟಿದರು. ಆದರೆ ೧೯೪೬ ರಲ್ಲಿ ಸೋವಿಯತ್ ಒಕ್ಕೂಟ ತನ್ನ ಸೇನೆಯನ್ನು ಇರಾನಿನಿಂದ ಹಿಂದೆಗೆದುಕೊಂಡ ಅನಂತರ, ಕಾರ್ಮಿಕ ಸಂಘದ ಬಲಹೀನ ಚಟುವಟಿಕೆಗಳಿಂದಾಗಿ ಅದರ ಪ್ರಭಾವ ಕಡಿಮೆಯಾಯಿತು. ೧೯೪೭ ರ ಅನಂತರ ಕಾರ್ಮಿಕರ ಕೇಂದ್ರ ಸಿಂಡಿಕೇಟನ್ನು ಸರ್ಕಾರವೇ ನಿರ್ದೇಶಿಸಿತು. ಇವಲ್ಲದೆ ಸಣ್ಣ ಸಣ್ಣ ಕಂಪನಿಗಳಲ್ಲಿ ಕಾರ್ಮಿಕ ಸಂಘಗಳಿವೆ. ಆದರೆ ಅವು ಕಾರ್ಮಿಕ ಚಟುವಟಿಕೆಗಳಲ್ಲಿ ಅಷ್ಟು ಪ್ರಮುಖ ಪಾತ್ರ ವಹಿಸುತ್ತಿಲ್ಲ. ಇರಾನಿನ ಕಾರ್ಮಿಕ ಸಂಘಗಳ ಮುಖ್ಯ ಲಕ್ಷಣಗಳೆಂದರೆ. ಇವು ಕಾರ್ಮಿಕರಿಗೆ ಒಳಿತು ಮಾಡುವುದರಲ್ಲಿ ಅಷ್ಟೇನೂ ಸಮರ್ಥವಾಗಿಲ್ಲ. ಕಾರ್ಮಿಕ ಶಾಸನಗಳು ಸಹ ಬಹು ಬಲಹೀನವಾಗಿವೆ.

ಆರ್ಥಿಕ ಯೋಜನೆಗಳು[ಬದಲಾಯಿಸಿ]

ಎರಡನೆಯ ಮಹಾಯುದ್ಧಾನಂತರ, ಇರಾನಿನ ಆರ್ಥಿಕ ಪ್ರಗತಿಗೆ ಯೋಜನೆಯನ್ನು ರೂಪಿಸುವುದು ಅಗತ್ಯವೆಂದು ಮನಗಾಣಲಾಯಿತು. ಅದಕ್ಕಾಗಿ ಸಹಾಯ ಮಾಡಲು ಅಮೆರಿಕದ ಸಂಸ್ಥೆಯೊಂದರ ನೆರವನ್ನು ಪಡೆದುಕೊಳ್ಳಲಾಯಿತು. ಇರಾನಿನ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಯೋಜನೆಯಲ್ಲಿ ಕೃಷಿಗೆ ಪ್ರಧಾನ್ಯ ಕೊಡಬೇಕೆಂದು ಈ ಸಂಸ್ಥೆ ಸಲಹೆ ಮಾಡಿತು. ಹೀಗೆ ಮಾಡಿದಲ್ಲಿ ರಾಷ್ಟ್ರದ ವಿದೇಶಿ ವಿನಿಮಯ ಆಯಾತ ಇತ್ಯಾದಿ ಸಮಸ್ಯೆಗಳು ಬಗೆ ಹರಿಯುವುದೆಂದು ತಿಳಿಸಿತು. ಆದರೆ ಇರಾನ್ ಸರ್ಕಾರದ ಒಲವು ಕೃಷಿಗಿಂತ ಕೈಗಾರಿಕಾ ಪ್ರಗತಿಯ ಕಡೆಗಿದ್ದುದರಿಂದ ಇರಾನಿನ ಪ್ರಥಮ ಯೋಜನೆಯಲ್ಲಿ ಕೈಗಾರಿಕೆಗೆ ಪ್ರಾಧಾನ್ಯ ದೊರೆಯಿತು.

ಪ್ರಥಮ ಯೋಜನೆ[ಬದಲಾಯಿಸಿ]

1949ರಲ್ಲಿ ಪ್ರಥಮ ಸಪ್ತವಾರ್ಷಿಕ ಆರ್ಥಿಕ ಯೋಜನೆಯನ್ನು ಪ್ರಾರಂಭಿಸಲಾಯಿತು. ಇದರ ಒಟ್ಟು ವೆಚ್ಚ ೧೬ ಕೋಟಿ ಪೌಂಡುಗಳಷ್ಟಿತ್ತು. ಇದರಲ್ಲಿ ೨೫% ರಷ್ಟು ಕೃಷಿಗೂ ೨೫% ರಷ್ಟು ಸಾರಿಗೆಗೂ ಉಳಿದದ್ದನ್ನು ಕೈಗಾರಿಕೆ ಹಾಗೂ ಸಮಾಜ ಕಲ್ಯಾಣಕ್ಕೂ ವೆಚ್ಚ ಮಾಡಬೇಕೆಂದು ನಿರ್ಧರಿಸಲಾಯಿತು. ಯೋಜನೆಯ ೧/೩ ರಷ್ಟು ಹಣವನ್ನು ತೈಲ ಉತ್ಪಾದನಾ ರಂಗದಿಂದಲೂ ೧/೩ ರಷ್ಟನ್ನು ರಾಷ್ಟ್ರದ ಉತ್ಪನ್ನದಿಂದಲೂ ಉಳಿದದ್ದನ್ನು ಅಂತರರಾಷ್ಟ್ರೀಯ ಬ್ಯಾಂಕಿನಿಂದಲೂ ಪಡೆದುಕೊಳ್ಳಬೇಕೆಂದು ತೀರ್ಮಾನಿಸಲಾಯಿತು. ಆದರೆ ಅಂತರರಾಷ್ಟ್ರೀಯ ಬ್ಯಾಂಕಿನಿಂದ ಯೋಜನೆಗೆ ಸಹಾಯ ಲಭಿಸಲಿಲ್ಲ. ತೈಲ ಉತ್ಪನ್ನದ ರಾಷ್ಟ್ರೀಕರಣದ ಗೊಂದಲದಿಂದ ಅದರಿಂದಲೂ ಹಣ ಪಡೆದುಕೊಳ್ಳಲಾಗಲಿಲ್ಲ. ಹೀಗಾಗಿ ಮೊದಲನೆಯ ಯೋಜನೆಯ ವೆಚ್ಚ ಕೇವಲ ೫ ಕೋಟಿ ಪೌಂಡುಗಳಲ್ಲೆ ಮುಕ್ತಾಯವಾಯಿತು.

ದ್ವಿತೀಯ ಯೋಜನೆ[ಬದಲಾಯಿಸಿ]

೧೯೫೬ ರಲ್ಲಿ ಎರಡನೆಯ ಸಪ್ತ ವಾರ್ಷಿಕ ಯೋಜನೆಯನ್ನು ರೂಪಿಸಲಾಯಿತು. ಇದರ ವೆಚ್ಚವನ್ನು ೪೦ ಕೋಟಿ ಪೌಂಡುಗಳೆಂದು ನಿಗದಿ ಮಾಡಲಾಯಿತು. ಈ ವೆಚ್ಚದ ಹೆಚ್ಚು ಭಾಗವನ್ನೂ ತೈಲೋತ್ಪಾದನೆಯ ರಂಗದಿಂದ ಪಡೆದುಕೊಳ್ಳಬೇಕೆಂದು ತೀರ್ಮಾನಿಸಲಾಯಿತು. ಎರಡನೆಯ ಸಪ್ತವಾರ್ಷಿಕ ಯೋಜನೆಯಲ್ಲಿ ಸಂಪರ್ಕಕ್ಕೆ ಯೋಜನೆಯಲ್ಲಿ ಸಂಪರ್ಕಕ್ಕೆ ಆದ್ಯತೆ ಕೊಡಲಾಯಿತು. ಒಟ್ಟು ಕೃಷಿ. ಹಾಗೂ ಸಮಾಜಕಲ್ಯಾಣಕ್ಕೆ ತಲಾ ೨೫% ರಷ್ಟನ್ನೂ ಕೈಗಾರಿಕೆಗೆ ೧೫% ರಷ್ಟನ್ನೂ ಪಡೆಯುವುದೆಂದಾಯಿತು. ಆದರೆ ಈ ಯೋಜನೆ ಸಹ ಆರ್ಥಿಕ ಸಂಕಟಕೊಳ್ಳಗಾಗಬೇಕಾಯಿತು. ಆದ್ದರಿಂದ ತೈಲ ಉತ್ಪಾದನಾ ರಂಗದಿಂದ ಸರ್ಕಾರವೇ ಹೆಚ್ಚು ಹಣವನ್ನು ಪಡೆದುಕೊಂಡು ಯೋಜನೆಗೆ ಉತ್ಪಾದನೆಯ ೫೫% ರಷ್ಟನ್ನೂ ಮಾತ್ರ ಬಿಟ್ಟುಕೊಟ್ಟಿತು. ತೈಲೋತ್ಪಾದನೆಯ ರಂಗದಿಂದ ೬೦-೮೦% ರಷ್ಟು ಯೋಜನಾ ವೆಚ್ಚ ದೊರಕುವುದೆಂದು ಯೋಜನೆಯಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಕೊರತೆಯ ಬಹುಪಾಲು ಹಣವನ್ನು ಇರಾನ್ ಅಮೆರಿಕದ ನೆರವಿನಿಂದಲೂ ಅಂತರರಾಷ್ಟ್ರೀಯ ಬ್ಯಾಂಕಿನ ಸಾಲದಿಂದಲೂ ತುಂಬಿಕೊಂಡಿತು. ೧೯೬೦-೬೪ ರ ಅವಧಿಯಲ್ಲಿ ಆರ್ಥಿಕ ಯೋಜನೆ, ಹಣದ ಉಬ್ಬರ ಹಾಗೂ ವಿದೇಶಿ ವಿನಿಮಯ ಕೊರತೆಯ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ಈ ಸಮಸ್ಯೆಗಳನ್ನು ಯೋಜನೆ ಸಮರ್ಥವಾಗಿ ಎದುರಿಸಿತು.

ಮೂರನೆಯ ಯೋಜನೆ[ಬದಲಾಯಿಸಿ]

ಸೆಪ್ಟೆಂಬರ್ ೧೯೬೨-ಮಾರ್ಚ್ ೧೯೬೮. ಇದರಲ್ಲಿ ಖಾಸಗಿ ರಂಗಕ್ಕೆ ಪ್ರಾಧಾನ್ಯ ಕೊಟ್ಟಿದೆ. ಮೊದಲ ಎರಡು ಯೋಜನೆಗಳಲ್ಲಿ ಖಾಸಗಿ ರಂಗದ ಆರ್ಥಿಕ ಚಟುವಟಿಕೆಗಳಲ್ಲಿ ಗಮನ ಕೊಟ್ಟಿರಲಿಲ್ಲ. ಮೊದಲೆರಡು ಯೋಜನೆಯಲ್ಲಿ ಬೃಹತ್ ಯೋಜನೆಗಳನ್ನು ಹಾಕಿಕೊಂಡು ಅದರಲ್ಲಿ ಹಣ ತೊಡಗಿಸಲಾಗಿತ್ತು. ಆದರೆ ಮೂರನೆಯ ಯೋಜನೆಯಲ್ಲಿ ಸಣ್ಣ ಸಣ್ಣ ಆರ್ಥಿಕ ಯೋಜನೆಗಳಿಗೆ ವಿಶೇಷ ಅಧ್ಯಯನ ಕೊಡಲಾಯಿತು. ಉದಾಹರಣೆಗೆ, ಸಣ್ಣ ನೀರಾವರಿ ಯೋಜನೆ. ಹಳ್ಳಿ ಹಳ್ಳಿಗಳಿಂದ ಮುಖ್ಯ ಹೆದ್ದಾರಿಗಳಿಗೆ ರಸ್ತೆಗಳನ್ನು ಕೂಡಿಸುವುದು, ಪ್ರಾದೇಶಿಕವಾಗಿ ದೊರಕುವ ಕೈಗಾರಿಕೆಗಳನ್ನು ಸ್ಥಾಪಿಸುವುದು ಇತ್ಯಾದಿ. ಮೂರನೆಯ ಯೋಜನೆಗೆ ಒಟ್ಟು ವೆಚ್ಚ ೨೬೬೬ ಕೋಟಿ ಡಾಲರುಗಳೆಂದು ನಿಗದಿ ಮಾಡಲಾಯಿತು. ಇದರಲ್ಲಿ ಕೃಷಿರಂಗಕ್ಕೆ ೫೯.೪ ಕೋಟಿ ಡಾಲರುಗಳೂ ಸಾರಿಗೆ ಹಾಗೂ ಸಂಪರ್ಕಕ್ಕೆ ೨೬೬ ಕೋಟಿ ಡಾಲರುಗಳೂ ಕೈಗಾರಿಕೆ ಹಾಗೂ ಗೇಣಿಗೆ ೨೮.೯ ಕೋಟಿ ಡಾಲರುಗಳೂ ದೊರೆತಿದ್ದವು. ಒಟ್ಟು ವೆಚ್ಚದ ೮೦% ರಷ್ಟನ್ನು ತೈಲ ಉತ್ಪಾದನೆಯ ರಂಗದಿಂದ ಪಡೆದುಕೊಳ್ಳಬೇಕೆಂದು ಉದ್ದೇಶಿಸಲಾಗಿತ್ತು. ಮೂರನೆಯ ಯೋಜನೆಯ ಅವಧಿಯಲ್ಲಿ ಇರಾನಿಗೆ ಸಾಕಷ್ಟು ವಿದೇಶಿ ನೆರವು ದೊರೆಯಿತು. ಈ ನೆರವನ್ನು ಸೋವಿಯತ್ ಒಕ್ಕೂಟ, ಹಂಗೆರಿ, ಪೋಲೆಂಡ್, ಪಶ್ಚಿಮ ಜರ್ಮನಿ, ಫ್ರಾನ್ಸ್, ಜಪಾನ್, ಬ್ರಿಟನ್, ವಿಶ್ವಬ್ಯಾಂಕುಗಳಿಂದ ಪಡೆದುಕೊಂಡಿತು. ಈ ವಿದೇಶಿ ನೆರವಿನ ಹೆಚ್ಚಳದಿಂದಾಗಿ ಹಾಗೂ ತೈಲ ಉತ್ಪಾದನೆಯ ರಂಗದಿಂದ ಬಂದ ಹಣದ ಆಧಿಕ್ಯದಿಂದಾಗಿ ಯೋಜನೆಯ ವೆಚ್ಚವನ್ನು ೨೬೬.೫ ಕೋಟಿ ಡಾಲರುಗಳಿಗೆ ಏರಿಸಲಾಯಿತು.

ನಾಲ್ಕನೆಯ ಅಭಿವೃದ್ಧಿ ಯೋಜನೆ[ಬದಲಾಯಿಸಿ]

ಮಾರ್ಚ್ ೧೯೬೮- ಮಾರ್ಚ್ ೧೯೭೩.ನಾಲ್ಕನೆಯ ಯೋಜನೆಯಲ್ಲಿ 9%ರ ವಾರ್ಷಿಕ ಬೆಳೆವಣಿಗೆಯಾಗುತ್ತದೆ. ಒಂದು ಇದು ಸಿದ್ಧಿಸಿದರೆ ಇರಾನಿನ ಒಟ್ಟು ರಾಷ್ಟ್ರೀಯ ತಲಾ ವಾರ್ಷಿಕ ಉತ್ಪಾದನೆ ಡಾಲರನ್ನು ಮುಟ್ಟುತ್ತದೆ. ಇರಾನಿನಲ್ಲಿ ೬೫-೬೭ ರ ಕೃಷಿರಂಗದ ಪ್ರಗತಿ ಅದ್ಭುತವಿದ್ದು ಈ ಯೋಜನೆಯ ಭವಿಷ್ಯ ಉಜ್ವಲವಿದೆ. ಅದು ಹೆಚ್ಚಿನ ಅಮೆರಿಕನ್ ನೆರವನ್ನು ಈ ಯೋಜನೆಗೆ ಬಯಸುತ್ತಿಲ್ಲ. ಈ ಪಂಚವಾರ್ಷಿಕ ಯೋಜನೆಯ ಒಟ್ಟು ವೆಚ್ಚವನ್ನು ೧,೧೦೦ ಕೋಟಿ ಡಾಲರುಗಳೆಂದು ನಿಗದಿ ಮಾಡಲಾಗಿದೆ. ಇದರಲ್ಲಿ ಸುಮಾರು ೫೯% ರಷ್ಟನ್ನು ತೈಲೋತ್ಪಾದನೆಯ ರಂಗ ಹಾಗೂ ವಿದೇಶಿ ನೆರವಿನಿಂದಲೂ ಉಳಿದದ್ದನ್ನು ಖಾಸಗಿ ರಂಗದಿಂದಲೂ ತೂಗಿಸಬೇಕೆಂದು ನಿಶ್ಚಯಿಸಲಾಗಿದೆ. ಕೈಗಾರಿಕಾರಂಗದಲ್ಲಿ, ೨೬% ರಷ್ಟನ್ನೂ ಕೃಷಿ ಹಾಗೂ ನೀರಾವರಿ ರಂಗದಲ್ಲಿ, ೨೩.೫% ರಷ್ಟನ್ನೂ ವೆಚ್ಚ ಮಾಡಬೇಕೆಂದು ನಿರ್ಧರಿಸಲಾಗಿದೆ. ನಾಲ್ಕನೆಯ ಯೋಜನೆಯಲ್ಲಿ ಕೃಷಿ ಹಾಗೂ ನೀರಾವರಿ ಪ್ರಗತಿಗೆ ಬಹಳ ಗಮನ ಕೊಡಲಾಗಿದೆ. ಸಾರಿಗೆ, ಸಂಪರ್ಕದ ಪ್ರಗತಿಯನ್ನೂ ಮನಗಾಣಲಾಗಿದೆ. ಆದರೆ ಒಂದು ಭಯವೆಂದರೆ, ಇವರು ಮನಗಂಡಿರುವ ಮಟ್ಟದಲ್ಲಿ ತೈಲೋತ್ಪಾದನೆಯಾಗದೆ ಯೋಜನೆಗೆ ಮತ್ತೆ ವಿದೇಶೀ ನೆರವನ್ನು ಪಡದುಕೊಳ್ಳಬೇಕಾದ ಸಂದರ್ಭ ಒದಗಿಬರಬಹುದು. ಇದಕ್ಕೆ ಕಾರಣ, ಯೋಜನೆಯ ಅವಧಿಯಲ್ಲಿ ತೈಲ ಉತ್ಪಾದನೆ ವರ್ಷಕ್ಕೆ, ೨೦% ರಂತೆ ಹೆಚ್ಚುತ್ತದೆ ಎಂದು ಅಂದಾಜುಮಾಡಲಾಗಿದೆ. ಆದರೆ ಈ ನಿರೀಕ್ಷೆ ಅತ್ಯಾಕಾಂಕ್ಷೆಯದೆನ್ನಲಾಗುತ್ತಿದೆ. ನಾಲ್ಕನೆಯ ಅಭಿವೃದ್ಧಿ ಯೋಜನೆಯ ವೆಚ್ಚವನ್ನು, ಬೆಳೆವಣಿಗೆಯ ರೂಪರೇಷೆಗಳನ್ನೂ ಕೆಳಗಿನ ಅಂಕಿ-ಅಂಶಗಳಿಂದ ತಿಳಿಯಬಹುದು.

ಇರಾನಿನ ನಾಲ್ಕನೆಯ ಅಭಿವೃದ್ಧಿ ಯೋಜನೆ[ಬದಲಾಯಿಸಿ]

(ಮಾರ್ಚ್ ೧೯೬೮ -ಮಾರ್ಚ್ ೧೯೭೩)-ಬಿಲಿಯನ್ ರಿಯಾಲುಗಳಲ್ಲಿ ಕ್ರಮಸಂಖ್ಯೆ , ರಂಗ, ಒಟ್ಟು ರಾಷ್ಟ್ರೀಯ, ಉತ್ಪತ್ತಿ ಬೆಳೆವಣಿಗೆ %ರಲ್ಲಿ, ಒಟ್ಟು ವೆಚ್ಚ



೧೯೬೪-೬೮, ೧೯೭೨-೭೩,


ಕೃಷಿ ೧೧೩.೬ ೧೪೫.೦ ೨೭.೬ ೬೬.೧

ಗಣಿ ಮತ್ತು ಕೈಗಾರಿಕೆ

೭೦.೫

೧೨೯.೯ ೮೪.೩ ೨೧೧.೮

ಪಟ್ರೋಲಿಯಂ ಮತ್ತು ಅನಿಲ ೧೧೨.೦ ೧೮೮.೭ ೬೮.೬

೮೫.೦

ವಿದ್ಯುತ್

 ೫.೭
೧೧.೪
೧೦೦.೦

೧೦೦.೯

ಕಟ್ಟಡ ೩೦.೬ ೫೮.೯ ೯೨.೫

೩೪೬.೬

ಇತರ ರಂಗಗಳು

 ೨೦೫.೬

೩೦೩.೩ ೪೭.೫


ಒಟ್ಟು

 ೫೩೮.೦

೮೩೭.೨ ೫೫.೭

 ೧೦.೪

ಉಲ್ಲೇಖಗಳು[ಬದಲಾಯಿಸಿ]

  1. http://kannada.webdunia.com/category/%E0%A4%AE%E0%A4%B0%E0%A4%BE%E0%A4%A0%E0%A5%80+%E0%A4%AC%E0%A4%BE%E0%A4%A4%E0%A4%AE%E0%A5%8D%E0%A4%AF%E0%A4%BE-10101.htm/2529
  2. "ಆರ್ಕೈವ್ ನಕಲು". Archived from the original on 2013-01-01. Retrieved 2016-10-21.